Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದಲ್ಲಿ ಡಿ.೨ ರಂದು ನಡೆಯಲಿರುವ ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಜಾಗೃತಿ ಮೂಡಿಸುವ ಬರಹವನ್ನು ಕಲಾ ಶಿಕ್ಷಕ ಗುರಲಿಂಗ ಸಬರದ ಅವರು ಬರೆಯುವ ಕಾರ್ಯದಲ್ಲಿ ಮಂಗಳವಾರ ತೊಡಗಿರುವದು ಕಂಡುಬಂದಿತ್ತು.ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಕೊಟ್ರೇಶ ಹೆಗ್ಡಾಳ, ಸಿದ್ದಪ್ಪ ಅವಜಿ, ಎ.ಎಂ.ಉಪಾಧ್ಯೆ, ಎಸ್.ಆರ್.ಮಠ, ಬಿ.ವ್ಹಿ.ಚಕ್ರಮನಿ ಇತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದಲ್ಲಿ ಡಿ.೨ ರಂದು ನಡೆಯಲಿರುವ ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಜಾಗೃತಿ ಮೂಡಿಸುವ ಬರಹವನ್ನು ಕಲಾ ಶಿಕ್ಷಕ ಗುರಲಿಂಗ ಸಬರದ ಅವರು ಬರೆಯುವ ಕಾರ್ಯದಲ್ಲಿ ಮಂಗಳವಾರ ತೊಡಗಿರುವದು ಕಂಡುಬಂದಿತ್ತು.ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಕೊಟ್ರೇಶ ಹೆಗ್ಡಾಳ, ಸಿದ್ದಪ್ಪ ಅವಜಿ, ಎ.ಎಂ.ಉಪಾಧ್ಯೆ, ಎಸ್.ಆರ್.ಮಠ, ಬಿ.ವ್ಹಿ.ಚಕ್ರಮನಿ ಇತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದಲ್ಲಿ ಡಿ.೨ ರಂದು ನಡೆಯಲಿರುವ ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಭಾಗಿಯಾಗುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿ ಕನ್ನಡ ಅಕ್ಷರದ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.ತಾಲೂಕಿನ ಇವಣಗಿ ಗ್ರಾಮದ ಆರಾಧ್ಯದೈವ ವರದಾನಿ ಲಕ್ಕಮ್ಮದೇವಿ ದೇವಸ್ಥಾನ ಆವರಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಅನಾವರಣಗೊಳಿಸಿ ಮಾತನಾಡಿದ ಅವರು, ಕನ್ನಡ ನಮ್ಮೆಲ್ಲರ ಅನ್ನದ ಭಾಷೆಯಾಗಿರುವದರಿಂದಾಗಿ ಕನ್ನಡ ಜಾತ್ರೆಯನ್ನು ವೈವಿಧ್ಯಮಯವಾಗಿ ಆಚರಿಸುವ ಮೂಲಕ ಮಾದರಿ ಸಮ್ಮೇಳನಕ್ಕೆ ಎಲ್ಲರೂ ಸಾಕ್ಷಿಯಾಗಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜರುಗುವ ಇವಣಗಿ ಗ್ರಾಮವು ಭಕ್ತಿ, ಸಹಕಾರಕ್ಕೆ ಹೆಸರುವಾಸಿಯಾಗಿದೆ. ನಾಡು-ನುಡಿ-ನೆಲ-ಜಲ-ಸಂಸ್ಕ್ರತಿ-ಪರಂಪರೆಯಿಂದ ನಮ್ಮ ನಾಡು ಸಂಪದ್ಭರಿತವಾಗಿದೆ. ಈ ಸಮ್ಮೇಳನದಲ್ಲಿ ವಿವಿಧ ವಿದ್ವಾಂಸರಿಂದ ವಿಶೇಷ ಉಪನ್ಯಾಸ ಗೋಷ್ಠಿ ಹಮ್ಮಿಕೊಳ್ಳಲಾಗುವದು. ನಾಡಿನ ಖ್ಯಾತ ಕಲಾವಿದರಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವದು. ಈ ಸಮ್ಮೇಳನಕ್ಕೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಭಾರತದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯ ಮತ್ತು ಸಮಾನತೆಯಿಂದ ಬದುಕುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಅದರ ಜೊತೆಗೆ ಕೆಲವು ಕರ್ತವ್ಯಗಳನ್ನೂ ನೀಡಿದ್ದು ಅವುಗಳ ಪರಿಪಾಲನೆ ಮಾಡುವದು ಪ್ರತಿಯೊಬ್ಬರ ಕರ್ತವ್ಯ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಕ್ಷಣ ಇಲಾಖೆ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾವೆಲ್ಲ ಮೂಲಭೂತ ಹಕ್ಕುಗಳಿಗಾಗಿ ಬಡಿದಾಡುತ್ತೇವೆ ವಿನಃ ಮೂಲಭೂತ ಕರ್ತವ್ಯಗಳನ್ನು ಪರಿಪಾಲಿಸುವದಿಲ್ಲ. ಪ್ರತಿಯೊಬ್ಬರೂ ಮೂಲಭೂತ ಕರ್ತವ್ಯಗಳನ್ನು ಚಾಚೂ ತಪ್ಪದೇ ಪರಿಪಾಲಿಸಬೇಕು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಯಾರೊಬ್ಬರೂ ನಡೆದುಕೊಳ್ಳಬಾರದು ಎಂದರು.ವಿಶೇಷ ಉಪನ್ಯಾಸ ನೀಡಿದ ಹಿರಿಯ ನ್ಯಾಯವಾದಿ ಎಂ.ಎಚ್.ಹಾಲಣ್ಣವರ ಮಾತನಾಡಿ, ಸಂವಿಧಾನ ಇಲ್ಲದಿದ್ದರೆ ದೇಶವಾಸಿಗಳು ಒಬ್ಬರಿಗೊಬ್ಬರು ಬಡಿದಾಡಿಕೊಂಡು ರಕ್ತದ ಕಾವಲಿ ಹರಿಯುತ್ತಿತ್ತು. ಇಷ್ಟೊಂದು ಪ್ರೀತಿಯಿಂದ ವಾಸಿಸಲು ಸಾಧ್ಯವಾಗುತ್ತಿರಲಿಲ್ಲ. ಇಂತಹ…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನಾಚರಣೆ | ಪ್ರೊ.ಪ್ರದೀಪಕುಮಾರ.ಇ.ಸಂಕದ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಗತ್ತಿನಲ್ಲಿ ಬೃಹತ್ತಾದ ಸಂವಿಧಾನ ನಮ್ಮದು,ಇಂತಹ ಪವಿತ್ರ ಸಂವಿಧಾನಕ್ಕೆ ಗೌರವ ಕೊಡುವಂತಾಗಬೇಕು.ಎಂದು ಅಂಜುಮನ್ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ.ಪ್ರದೀಪಕುಮಾರ.ಇ.ಸಂಕದ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ರಾಜ್ಯಶಾಸ್ತç ವಿಭಾಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಂವಿದಾನ ದಿನಾಚರಣೆ ಹಿನ್ನಲೆ ‘ಸಂವಿಧಾನ ಓದು ಮತ್ತು ಅದರ ಅವಶ್ಯಕತೆಯ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ದಿನ ನಮ್ಮ ಸಂವಿಧಾನ ಅನುಮೋದಿಸಿದ ದಿನ ಇಂದು ಸಂವಿಧಾನ ಓದುವ ಅವಶ್ಯಕತೆ ಇದೆ.ನಮ್ಮ ಒಟ್ಟು ೨೫ ಅಧ್ಯಾಯ ಮತ್ತು ೪೭೦ ಆರ್ಟಿಕಲ್ ಗಳು, ೧೨ ಶೇಡ್ಯೂಲ್ಗಳು, ೫ ಅನುಬಂದಗಳನ್ನು ಒಳಗೊಂಡಿರುವಂಥದ್ದು. ನಮ್ಮ ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ ಮತ್ತು ಸಮಾನ ಹಕ್ಕುಗಳನ್ನು ಕಾತರಿಪಡಿಸುವುದರ ಮೂಲಕ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಮಂತ್ರವನ್ನು ನೀಡುತ್ತದೆ. ಭಾರತ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ನಮ್ಮ ದೇಶ ಸಂವಿಧಾನವು ಶಾಶ್ವತ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಅದು ನಮ್ಮ ಮಾರ್ಗದರ್ಶಿ ತತ್ವಗಳಾಗಿ ಕಾರ್ಯನಿರ್ವಹಿಸುತ್ತದೆ. ಸಂವಿಧಾನ ಅಂಗೀಕಾರವಾದ ನ.೨೬ ರಂದು ದೇಶದಲ್ಲಿ ಸಂವಿಧಾನ ದಿನಾಚರಣೆ ಆಚರಿಸುವ ಮೂಲಕ ಸಂವಿಧಾನದ ಆಶಯ, ಮೂಲ ತತ್ವಗಳನ್ನು ಅರಿತುಕೊಂಡು ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆದುಕೊಳ್ಳಬೇಕೆಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.ಪಟ್ಟಣದ ತೆಲಗಿ ರಸ್ತೆಯಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ತಾಲೂಕಾಡಳಿತವು ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದಡಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ದೇಶದ ಸಂವಿಧಾನ ರಚಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪಾತ್ರ ಅಗ್ರಗಣ್ಯವಾಗಿದೆ. ಡಾ.ಅಂಬೇಡ್ಕರ ಅವರು ಓದಿನ ಮೂಲಕ ವೈರಿಗಳನ್ನು ಎದುರಿಸಬಹುದು ಎಂಬುದನ್ನು ಜಗತ್ತಿಗೆ ತಿಳಿಸಿಕೊಟ್ಟ ಮಹಾನ್ ನಾಯಕ. ಇಂತಹ ನಾಯಕ ರಚಿಸಿರುವ ಸಂವಿಧಾನದ ಆಧಾರದ ಮೇಲೆ ದೇಶ ನಿಂತಿದೆ. ಸಂವಿಧಾನದ ಪೀಠಿಕೆ ಓದುವ ಮೂಲಕ ಸಂವಿಧಾನದ ಆಶಯವನ್ನು ಜಗತ್ತಿಗೆ ತಿಳಿಸುವ ಮಹಾನ್ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣವೆಂದರು.ಡಿಎಸ್ಎಸ್ ಮುಖಂಡ ಪರಶುರಾಮ ದಿಂಡವಾರ ಮಾತನಾಡಿ, ದೇಶದಲ್ಲಿರುವ ಎಲ್ಲ ಜಾತಿ, ಧರ್ಮ, ಎಲ್ಲ…
ಕುತೂಹಲ ಮೂಡಿಸಿದ ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ಉದಯರಶ್ಮಿ ದಿನಪತ್ರಿಕೆ ವರದಿ: ಬಸವರಾಜ ನಂದಿಹಾಳಬಸವನಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಇವಣಗಿ ಗ್ರಾಮದಲ್ಲಿ ಡಿ.೨ ರಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದೆ.ತಾಲೂಕಿನಲ್ಲಿ ಇದುವರೆಗೂ ಒಂಭತ್ತು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗಿದರೂ ಯಾವ ಸಮ್ಮೇಳನದ ಸರ್ವಾಧ್ಯಕ್ಷರ ಹುದ್ದೆಗೆ ಅರ್ಜಿ ಆಹ್ವಾನ ಮಾಡದೇ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯಕ್ಕೆ ಅನುಪಮ ಸೇವೆ ಸಲ್ಲಿಸಿದ ಧೀಮಂತ ಸಾಹಿತಿಗಳನ್ನು ಗುರುತಿಸಿ ಸರ್ವಾಧ್ಯಕ್ಷ ಹುದ್ದೆಗೆ ಸರ್ವಾನುಮತದಿಂದ ಆಯ್ಕೆ ಮಾಡುವ ಪರಿಪಾಠ ಇಟ್ಟುಕೊಂಡಿತ್ತು. ಇದೇ ಪ್ರಥಮ ಬಾರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷರಾಗಲು ಸಾಹಿತಿಗಳಿಂದ ಅರ್ಜಿ ಆಹ್ವಾನಿಸಿದೆ. ಇದು ಜಿಲ್ಲೆಯಲ್ಲಿಯೇ ಪ್ರಥಮವಾಗಿದೆ. ಸರ್ವಾಧ್ಯಕ್ಷರಾಗುವವರೂ ತಾಲೂಕಿಗೆ ಸೀಮಿತವಾಗಿರಬೇಕೆಂಬ ನಿಯಮದ ಜೊತೆಗೆ ಆಧಾರ ಕಾರ್ಡ್ ಲಗತ್ತಿಸಿರಬೇಕು ಎಂಬ ನಿಯಮವನ್ನು ತಾಲೂಕು ಕಸಾಪ ಅಧ್ಯಕ್ಷರು ತಿಳಿಸಿದ್ದಾರೆ. ತಾಲೂಕು ಹತ್ತನೇ ಕನ್ನಡ ಸಾಹಿತ್ಯ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ನಮ್ಮ ಬದುಕು ದೀಪದಂತಾಗಬೇಕು. ನಾವು ಬೆಳಗಬೇಕು, ಇತರರಿಗೂ ಬೆಳಕಾಗಬೇಕು ಎಂದು ಉಜ್ಜಯನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಶ್ರೀದಾನಮ್ಮಾದೇವಿ ಕಾರ್ತಿಕ ೫ನೇ ಜಾತ್ರಾ ಮಹೋತ್ಸವದ ಸಂಪನ್ನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ದೀಪಕ್ಕೆ ವಿಶೇಷ ಸ್ಥಾನವಿದೆ. ನಾವು ಜೀವನದುದ್ದಕ್ಕೂ ಇತರರಿಗೆ ಬೆಳಕಾಗಿ ಬಾಳಬೇಕು. ಇಂದು ಎಲ್ಲರ ಬದುಕು ನಾಗಾಲೋಟದಲ್ಲಿದೆ. ಬದುಕು ಭಗವಂತ ನೀಡಿದ ಅತ್ಯಮೂಲ್ಯ ಕ್ಷಣ, ಬೆಲೆ ಕಟ್ಟಲಾಗದ ಸಮಯ. ಬದುಕಿನ ಸಂದರ್ಭಗಳು ಬಂದAತೆ ಸ್ವೀಕರಿಸುವ ಭಾವ ನಮ್ಮದಾದಾಗ ಮಾತ್ರ ನಾವೆಲ್ಲ ಸಂತೋಷ, ನೆಮ್ಮದಿಯಿಂದ ಬಾಳಿ, ಬದುಕಲು ಸಾಧ್ಯ. ನಾವೆಲ್ಲ ಈ ದೇಶದ ಸತ್ಪçಜೆಗಳು ಎಂಬ ಭಾವ ಎಲ್ಲರಲ್ಲಿ ಮೂಡಲಿ. ನಾಡು ಸಮೃದ್ಧಿಯಾಗಲಿ, ಸುಭಿಕ್ಷೆಯಾಗಲಿ, ಅನ್ನದಾತನ ಬದುಕು ಉತ್ತಮಗೊಳ್ಳಲಿ, ವಧುವರರ ಕಲ್ಯಾಣವಾಗಲಿ, ಧರ್ಮನಿಷ್ಠ ಮಕ್ಕಳು ಜನಿಸಲಿ ಎಂದು ಶುಭಕೋರಿದರು.ಎಮ್ಮಿಗನೂರ ಹಂಪಿಸಾವಿರದೇವರಮಠದ ವಾಮದೇವ ಮಹಾಂತಶ್ರೀಗಳು ಮಾತನಾಡಿ, ಇಂದು ಸಮಾಜದಲ್ಲಿನ ಧಾರ್ಮಿಕ ಆಚರಣೆಗಳು ನಮ್ಮನ್ನು ಎತ್ತರೆತ್ತರಕ್ಕೆ ಬೆಳೆಸುತ್ತವೆ. ಜೊತೆಗೆ ಮುಖ್ಯವಾಗಿ ನೆಮ್ಮದಿಗಾಗಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಭಾರತೀಯ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಅರಿವು ಮೂಡಿಸುವ ಉದ್ದೇಶವೇ ಸಂವಿಧಾನ ದಿನಾಚರಣೆಯ ಉದ್ದೇಶವಾಗಿದೆ ಎಂದು ಸಿಂದಗಿಯ ಹಿರಿಯ ಸಿವ್ಹಿಲ್ ನ್ಯಾಯಾಧೀಶ ನಾಗೇಶ ಮೋಗೇರ ಹೇಳಿದರು.ಪಟ್ಟಣದ ಎಚ್.ಜಿ.ಕಾಲೇಜಿನಲ್ಲಿ ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ ಸಿಂದಗಿ, ವಕೀಲರ ಸಂಘ ಸಿಂದಗಿ ಹಾಗೂ ಎಚ್.ಜಿ.ಪದವಿಪೂರ್ವ ಮಹಾವಿದ್ಯಾಲಯ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ಭಾರತೀಯ ಸಂವಿಧಾನ ದಿನಾಚರಣೆ ಕುರಿತಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇಂದು ಭಾರತದ ಸಂವಿಧಾನ ದಿನವಾಗಿದ್ದು, ದೇಶದ ಯುವಜನರಿಗೆ ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರು ಭಾರತೀಯ ನಾಗರಿಕರಿಗೆ ಸಂಬಂಧಿಸಿದ ಹಕ್ಕುಗಳು ಹಾಗೂ ಕಾನೂನುಗಳನ್ನು ವಿವರಿಸುವ ಕಾನೂನು ದಾಖಲೆಯ ತಯಾರಿಸುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಅಂಬೇಡ್ಕರ್ ಸೇರಿದಂತೆ ಅಂತಹ ಮಹಾನ್ ವ್ಯಕ್ತಿಗಳ ಶ್ರಮವನ್ನು ಈ ದಿನದಂದು ನಾವೆಲ್ಲ ನೆನಪಿಸಿಕೊಳ್ಳಬೇಕು ಎಂದರು.ಈ ವೇಳೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎ.ಎ.ಮುಲ್ಲಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹರೀಶ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಶ್ವಾಸ ನಂಬಿಕೆಯೇ ಜೀವಮಾನದ ಸಾಧನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಶ್ರೀ ಗಜಾನನ ಸೌಹಾರ್ದ ಬ್ಯಾಂಕಿನ ಸಿಇಒ ಅವಧೂತ ಜೋಶಿ ಹೇಳಿದರು.ಪಟ್ಟಣದ ರಾಂಪೂರ ಪಿಎ ರಸ್ತೆಯಲ್ಲಿರುವ ಶ್ರೀಸಮರ್ಥ ವಿದ್ಯಾ ವಿಕಾಸ ವಿವಿದೊದ್ದೇಶಗಳ ಸಂಸ್ಥೆಯ ಪ್ರೇರಣಾ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾನಿಕೇತನ ಪ್ರಾಥಮಿಕ ಶಾಲೆಗಳ ಶಿಕ್ಷಕರ ಬಳಗದ ಸಹಯೋಗದಲ್ಲಿ ಬೆಳಗಾವಿಯಲ್ಲಿ ನಡೆದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹದ ನಿಮಿತ್ತ ಸಿಂದಗಿ ನಗರದಲ್ಲಿ ಹ್ಮಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಶ್ರೇಷ್ಠ ಸಹಕಾರಿ ರಾಜ್ಯ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ಆರ್.ಡಿ.ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು.ಶಿಕ್ಷಕ ವೃತ್ತಿಯಿಂದ ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೀತಿ ಅಮೋಘ. ವಿದ್ಯಾರ್ಥಿಗಳಲ್ಲಿ ಶಿಸ್ತು ಇದ್ದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಾಧ್ಯ. ಅದರಂತೆ ಸಹಕಾರಿ ಕ್ಷೇತ್ರದಲ್ಲಿ ಯಶಸ್ವಿಯಾದವರು ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯ. ಅದಕ್ಕೆ ನಿದರ್ಶನವೆಂದರೆ ಕುಲಕರ್ಣಿಯವರು ಎಂದರು.ಕಾರ್ಯಕ್ರಮದಲ್ಲಿ ಪತ್ರಕರ್ತ ಶಾಂತು ಹಿರೇಮಠ, ಸಂಸ್ಥೆಯ ನಿದೇಶಕರಾದ ಪಿ.ಡಿ.ಕುಲಕರ್ಣಿ, ಕ್ಷೇತ್ರ…
