ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ನಮ್ಮ ಬದುಕು ದೀಪದಂತಾಗಬೇಕು. ನಾವು ಬೆಳಗಬೇಕು, ಇತರರಿಗೂ ಬೆಳಕಾಗಬೇಕು ಎಂದು ಉಜ್ಜಯನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಶ್ರೀದಾನಮ್ಮಾದೇವಿ ಕಾರ್ತಿಕ ೫ನೇ ಜಾತ್ರಾ ಮಹೋತ್ಸವದ ಸಂಪನ್ನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ದೀಪಕ್ಕೆ ವಿಶೇಷ ಸ್ಥಾನವಿದೆ. ನಾವು ಜೀವನದುದ್ದಕ್ಕೂ ಇತರರಿಗೆ ಬೆಳಕಾಗಿ ಬಾಳಬೇಕು. ಇಂದು ಎಲ್ಲರ ಬದುಕು ನಾಗಾಲೋಟದಲ್ಲಿದೆ. ಬದುಕು ಭಗವಂತ ನೀಡಿದ ಅತ್ಯಮೂಲ್ಯ ಕ್ಷಣ, ಬೆಲೆ ಕಟ್ಟಲಾಗದ ಸಮಯ. ಬದುಕಿನ ಸಂದರ್ಭಗಳು ಬಂದAತೆ ಸ್ವೀಕರಿಸುವ ಭಾವ ನಮ್ಮದಾದಾಗ ಮಾತ್ರ ನಾವೆಲ್ಲ ಸಂತೋಷ, ನೆಮ್ಮದಿಯಿಂದ ಬಾಳಿ, ಬದುಕಲು ಸಾಧ್ಯ. ನಾವೆಲ್ಲ ಈ ದೇಶದ ಸತ್ಪçಜೆಗಳು ಎಂಬ ಭಾವ ಎಲ್ಲರಲ್ಲಿ ಮೂಡಲಿ. ನಾಡು ಸಮೃದ್ಧಿಯಾಗಲಿ, ಸುಭಿಕ್ಷೆಯಾಗಲಿ, ಅನ್ನದಾತನ ಬದುಕು ಉತ್ತಮಗೊಳ್ಳಲಿ, ವಧುವರರ ಕಲ್ಯಾಣವಾಗಲಿ, ಧರ್ಮನಿಷ್ಠ ಮಕ್ಕಳು ಜನಿಸಲಿ ಎಂದು ಶುಭಕೋರಿದರು.
ಎಮ್ಮಿಗನೂರ ಹಂಪಿಸಾವಿರದೇವರಮಠದ ವಾಮದೇವ ಮಹಾಂತಶ್ರೀಗಳು ಮಾತನಾಡಿ, ಇಂದು ಸಮಾಜದಲ್ಲಿನ ಧಾರ್ಮಿಕ ಆಚರಣೆಗಳು ನಮ್ಮನ್ನು ಎತ್ತರೆತ್ತರಕ್ಕೆ ಬೆಳೆಸುತ್ತವೆ. ಜೊತೆಗೆ ಮುಖ್ಯವಾಗಿ ನೆಮ್ಮದಿಗಾಗಿ ಇಂದು ಆಧ್ಯಾತ್ಮೀಕ ಕಾರ್ಯಕ್ರಮಗಳು ಅತ್ಯಗತ್ಯವಾಗಿವೆ ಎಂದರು.
ಪಂಚಾಚಾರ್ಯ ಕಲ್ಯಾಣ ಮಂಟಪದ ಅಧ್ಯಕ್ಷ ಬಸಯ್ಯ ಮಲ್ಲಿಕಾರ್ಜುನಮಠ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅನ್ನಪ್ರಸಾದ ವ್ಯವಸ್ಥೆ ಮಾಡಿದ ಸಿದ್ಧಯ್ಯ ಮಲ್ಲಿಕಾರ್ಜುನಮಠ ಹಾಗೂ ಸೇವಾ ಸಮಿತಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ಸ್ಥಳೀಯ ಜಡಿಮಠದ ಜಡೇಸಿದ್ಧೇಶ್ವರ ಸ್ವಾಮೀಜಿ, ಪರದೇಶಿಮಠದಶ್ರೀ, ಜಂಗಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಸೋಮಶೇಖರ ಹಿರೇಮಠ, ಪಟ್ಟಣ ಪಂಚಾಯಿತಿ ಸದಸ್ಯ ಶಾಂತಯ್ಯ ಜಡಿಮಠ, ಎಂ.ಆರ್.ಶಿರಸಂಗಿಮಠ, ಶಾಂತಗೌಡ ಬಿರಾದಾರ(ಯರನಾಳ), ಭೀಮರಾಯ ತೆಗನೂರ, ಸಿ.ಕೆ. ಕುದರಿ,ಗೊಲ್ಲಾಳಪ್ಪಗೌಡ ಪಾಟೀಲ, ಉಮಾಕಾಂತ ಸೊನ್ನದ, ಬಂಡೆಪ್ಪ ಬಿರಾದಾರ(ದಿಂಡವಾರ), ಸಿದ್ರಾಮಯ್ಯ ಇಂಡಿಮಠ, ಸತೀಶ ಸರೂರ, ಸಾಹೇಬಗೌಡ ಬೂದಿಹಾಳ, ಉತ್ನಾಳ, ಸಂಗೀತಗಾರ ಶಿವಯ್ಯ ಜೇರಟಗಿ, ತಬಲಾವಾದಕ ಸಾಹೇಬಗೌಡ ಮುಳಸಾವಳಗಿ ಸಹಿತ ಮಹಿಳೆಯರು, ಮಕ್ಕಳು ಇದ್ದರು.

