Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅನ್ನಭಾಗ್ಯ ಯೋಜನೆಯಡಿ ಜುಲೈ ತಿಂಗಳ ಪಡಿತರ ಹಂಚಿಕೆ

​ಜು.೧೭ ರಂದು ರಿಯಾಯಿತಿ ದರದಲ್ಲಿ ಮೀನುಮರಿಗಳ ಮಾರಾಟ

ಎಸ್ಐಆರ್ ಸಾಧನೆ: ಬಬಲೇಶ್ವರ ಮತಗಟ್ಟೆಅಧಿಕಾರಿಗಳಿಗೆ ಸನ್ಮಾನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹಕ್ಕುಗಳನ್ನು ಅನುಭವಿಸಿದರೆ ಸಾಲದು, ಕರ್ತವ್ಯಗಳನ್ನು ಪಾಲಿಸಬೇಕು
(ರಾಜ್ಯ ) ಜಿಲ್ಲೆ

ಹಕ್ಕುಗಳನ್ನು ಅನುಭವಿಸಿದರೆ ಸಾಲದು, ಕರ್ತವ್ಯಗಳನ್ನು ಪಾಲಿಸಬೇಕು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನಾಚರಣೆ | ಪ್ರೊ.ಪ್ರದೀಪಕುಮಾರ.ಇ.ಸಂಕದ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಜಗತ್ತಿನಲ್ಲಿ ಬೃಹತ್ತಾದ ಸಂವಿಧಾನ ನಮ್ಮದು,ಇಂತಹ ಪವಿತ್ರ ಸಂವಿಧಾನಕ್ಕೆ ಗೌರವ ಕೊಡುವಂತಾಗಬೇಕು.ಎಂದು ಅಂಜುಮನ್ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ.ಪ್ರದೀಪಕುಮಾರ.ಇ.ಸಂಕದ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ರಾಜ್ಯಶಾಸ್ತç ವಿಭಾಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಂವಿದಾನ ದಿನಾಚರಣೆ ಹಿನ್ನಲೆ ‘ಸಂವಿಧಾನ ಓದು ಮತ್ತು ಅದರ ಅವಶ್ಯಕತೆಯ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ದಿನ ನಮ್ಮ ಸಂವಿಧಾನ ಅನುಮೋದಿಸಿದ ದಿನ ಇಂದು ಸಂವಿಧಾನ ಓದುವ ಅವಶ್ಯಕತೆ ಇದೆ.ನಮ್ಮ ಒಟ್ಟು ೨೫ ಅಧ್ಯಾಯ ಮತ್ತು ೪೭೦ ಆರ್ಟಿಕಲ್ ಗಳು, ೧೨ ಶೇಡ್ಯೂಲ್ಗಳು, ೫ ಅನುಬಂದಗಳನ್ನು ಒಳಗೊಂಡಿರುವಂಥದ್ದು. ನಮ್ಮ ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ ಮತ್ತು ಸಮಾನ ಹಕ್ಕುಗಳನ್ನು ಕಾತರಿಪಡಿಸುವುದರ ಮೂಲಕ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಮಂತ್ರವನ್ನು ನೀಡುತ್ತದೆ. ಭಾರತ ದೇಶದ ಸಂವಿಧಾನವು ಬೃಹತ್ತ್ ಗಾತ್ರದ ಸಂವಿಧಾನ, ಸಂವಿಧಾನದ ಮೌಲ್ಯಗಳು ಮತ್ತು ಉದ್ದೇಶಗಳನ್ನು ಬಹು ಮುಖ್ಯವಾಗಿದೆ. ಸಂವಿಧಾನವು ಸಾಮಾಜಿಕ ರಾಷ್ಟ್ರ, ಜಾತ್ಯಾತೀತ ರಾಷ್ಟ್ರ, ಗಣರಾಜ್ಯ ಮತ್ತು ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂವಿಧಾನದ ಮೂಲ ಗುರಿ ಜನರಿಗೆ ಆರ್ಥಿಕ,ಸಾಮಾಜಿಕ, ನ್ಯಾಯವನ್ನು ಒದಗಿಸಿಕೊಡುವುದು ಆಗಿದೆ. ಮತ್ತು ಇದು ಎಲ್ಲರಿಗೂ ಸಮಾಜದಲ್ಲಿ ಎಲ್ಲ ರೀತಿಯ ಸ್ಥಾನಮಾನದಲ್ಲಿ ಸಮಾನವಾದ ಅವಕಾಶ ನೀಡುವಲ್ಲಿ ಭ್ರಾತೃತ್ವ ಸೂತ್ರವನ್ನು ಒಳಗೊಂಡಿದೆ. ಇಂದಿನ ದಿನಗಳಲ್ಲಿ ಸಂವಿಧಾನದ ಮಹತ್ವವನ್ನು ಅರಿಯುವುದು ಬಹುಮುಖ್ಯವಾಗಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀನಿವಾಸ ದೊಡ್ಡಮನಿ ಮಾತನಾಡಿ, ಯಾರಿಗೆ ಇತಿಹಾಸ ಗೊತ್ತಿಲ್ಲವೋ ಅವರು ಎಂದಿಗೂ ಇತಿಹಾಸವನ್ನು ಸೃಷ್ಟಿಸಲಾರರು ಎಂದು ಅಂಬೇಡ್ಕರ್ ನೊಂದವರೇ ನೊಂದವರಿಗಾಗಿ ನೊಂದವರಿಗೋಸ್ಕರ ಸೃಷ್ಟಿಸಿರುವ ಕಾನೂನು ಕಟ್ಟಳೆಯೇ ಸಂವಿಧಾನ. ಇದು ಸಂವಿಧಾನದ ದಿನದ ಜೊತೆಗೆ ಸವಿಯಾದ ದಿನ ನೊಂದವರು ದಲಿತರು ಶೋಷಿತರು ಹಾಗೂ ಮಹಿಳೆಯರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವಲ್ಲಿ ನಮ್ಮ ಸಂವಿಧಾನ ಯಶಸ್ವಿಯಾಗಿದೆ. ಅದರಂತೆ ಸಂವಿಧಾನದ ಮೌಲ್ಯವನ್ನು ಅರಿತು ಅದಕ್ಕೆ ಬದ್ದವಾಗಿ ಬದುಕಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ತರನ್ನುಮ್ ಜಬೀನ್ ಖಾನ್ ಅವರು ಸಂವಿಧಾನ ಪ್ರಸ್ತಾವನೆಯನ್ನು ಓದಿದರು.
ಮಹಾವಿದ್ಯಾಲಯದಲ್ಲಿ ಅಯೋಜಿಸಲಾಗಿದ್ದ ಸಂವಿಧಾನದ ದಿನಾಚರಣೆ ಹಿನ್ನೆಲೆ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಆರ್.ಎಂ.ಮಿರ್ದೆ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ತರನ್ನುಮ್ ಜಬೀನ್ ಖಾನ, ಪ್ರೊ.ರೂಪಾ ಮೋಟಗಿ, ಪ್ರೊ.ಎಸ್.ಹೆಚ್.ಹೂಗಾರ, ಎಸ್.ವೈ. ಅಂಗಡಿ, ಭೀಮಸಿ ಮದರಖಂಡಿ, ಅಮೋಗಿ ಯಂಕವಗೋಳ, ಭಾರತಿ ಕಾರಕಲ, ಪ್ರೊ.ಅಮೀನ್.ಲೇನ್, ಪ್ರೊ.ಕಿರಣಕುಮಾರ ಹರಿದಾಸ, ಪ್ರೊ.ಸವಿತಾ ಕನಕರೆಡ್ಡಿ, ಮಲಿಕ್ ಜಮಾದಾರ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕುಮಾರಿ ಮೇಘ ಹಾಗೂ ಸ್ವಪ್ನಾ ಪ್ರಾರ್ಥಿಸಿದರು .ಕುಮಾರಿ ಭಾಗ್ಯ ನಿರೂಪಿಸಿದರು

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅನ್ನಭಾಗ್ಯ ಯೋಜನೆಯಡಿ ಜುಲೈ ತಿಂಗಳ ಪಡಿತರ ಹಂಚಿಕೆ

​ಜು.೧೭ ರಂದು ರಿಯಾಯಿತಿ ದರದಲ್ಲಿ ಮೀನುಮರಿಗಳ ಮಾರಾಟ

ಎಸ್ಐಆರ್ ಸಾಧನೆ: ಬಬಲೇಶ್ವರ ಮತಗಟ್ಟೆಅಧಿಕಾರಿಗಳಿಗೆ ಸನ್ಮಾನ

ತರಬೇತಿಗೆ ಕಾನೂನು ಪದವೀಧರರಿಂದ ಅರ್ಜಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅನ್ನಭಾಗ್ಯ ಯೋಜನೆಯಡಿ ಜುಲೈ ತಿಂಗಳ ಪಡಿತರ ಹಂಚಿಕೆ
    In (ರಾಜ್ಯ ) ಜಿಲ್ಲೆ
  • ​ಜು.೧೭ ರಂದು ರಿಯಾಯಿತಿ ದರದಲ್ಲಿ ಮೀನುಮರಿಗಳ ಮಾರಾಟ
    In (ರಾಜ್ಯ ) ಜಿಲ್ಲೆ
  • ಎಸ್ಐಆರ್ ಸಾಧನೆ: ಬಬಲೇಶ್ವರ ಮತಗಟ್ಟೆಅಧಿಕಾರಿಗಳಿಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ತರಬೇತಿಗೆ ಕಾನೂನು ಪದವೀಧರರಿಂದ ಅರ್ಜಿ
    In (ರಾಜ್ಯ ) ಜಿಲ್ಲೆ
  • ಎಸ್ಐಆರ್ ಗೆ ಅಡ್ಡಿಪಡಿಸಿದರೆ ಕಾನೂನು ಕ್ರಮ :ಮೆಕ್ಕಳಕಿ ಎಚ್ಚರಿಕೆ
    In (ರಾಜ್ಯ ) ಜಿಲ್ಲೆ
  • ೫೬,೨೯,೧೭೧ ರೂ. ದಂಡ ವಿಧಿಸಿದ ಕೋರ್ಟ್
    In (ರಾಜ್ಯ ) ಜಿಲ್ಲೆ
  • ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಂದ ಡಿಕೆಶಿ ಗೆ ಸಹಾಯ
    In (ರಾಜ್ಯ ) ಜಿಲ್ಲೆ
  • ಸಚಿವ ಎಂ.ಬಿ.ಪಾಟೀಲ ಹೆಸರು ತಮ್ಮ ಮನೆಗಿಟ್ಟು ಅಭಿಮಾನ ಮೆರೆದ ಕುಟುಂಬ
    In (ರಾಜ್ಯ ) ಜಿಲ್ಲೆ
  • ದೇಶ-ಸಮಾಜ ಕುರಿತ ಚಿಂತನೆಗಳು ಕಡಿಮೆಯಾಗುತ್ತಿರುವುದು ಕಳವಳಕಾರಿ
    In (ರಾಜ್ಯ ) ಜಿಲ್ಲೆ
  • ಗಡಿ ಗುರುತಿಸದೇ ಅಕ್ರಮ ಲೈನ್‌ಔಟ್ :ರೈತರ ಆರೋಪ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.