ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ್ ಪಬ್ಲಿಕ್ ಸಿ.ಬಿ.ಎಸ್.ಇ ಶಾಲೆಯಲ್ಲಿ ವಿದ್ಯಾರ್ಥಿ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಶನಿವಾರ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಜಯಪುರ ನಗರ ಡಿವೈಎಸ್ಪಿ ನಾಗರಾಜ ಜಿ. ಮಾತನಾಡಿ, ಶಾಲಾ ಸಂಸತ್ತು ಒಂದು ಹೊಣೆಗಾರಿಕೆಯ ಪಾಠವನ್ನು ಕಲಿಸುವ ಮಹತ್ವದ ಹೆಜ್ಜೆತಾಗಿದೆ. ಶಾಲೆಯನ್ನು
ಮುನ್ನಡೆಸಿಕೊಂಡು ಹೋಗುವ ಶಾಲಾ ಮುಖ್ಯ ಬಾಲಕ ಮತ್ತು ಬಾಲಕಿಯರು ಭವಿಷ್ಯದಲ್ಲಿ ದೇಶವನ್ನು ಮುನ್ನಡೆಸುವ ವ್ಯಕ್ತಿಗಳಾಗಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಪಾಲಕರಿಗೂ ಗೌರವ ಕೊಡಬೇಕು. ಪ್ರತಿಜ್ಞಾ ವಿಧಿ ಸ್ವೀಕರಿಸಿರುವ ಪದಾಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಅವರು ಹೇಳಿದರು.
ಶಾಲಾ ಮುಖ್ಯ ಬಾಲಕಿಯಾಗಿ ಆಯ್ಕೆಯಾದ ಕಿಂಜಲ್ ಹಜೇರಿ, ಮುಖ್ಯ
ಬಾಲಕನಾಗಿ ಆಯ್ಕೆಯಾದ ಅರ್ಜುನ ಪಾಟೀಲ, ಕ್ರೀಡಾ ಮುಖ್ಯ ವಿಭಾಗದ ಮುಖ್ಯ ಬಾಲಕ ಅಪ್ಪು ಬಬಲೇಶ್ವರ,
ಮುಖ್ಯಬಾಲಕಿ ಛವಿ ರುಣವಾಲ, ಸಾಂಸ್ಕೃತಿಕ ವಿಭಾಗದ ಮುಖ್ಯ ಬಾಲಕ ಕುಮಾರ ತೇಜಸ ನಾಯಕ, ಬಾಲಕಿ ಸಾಮಿಯಾ ಜೈನ್, ಶಾಲಾ ಶಿಸ್ತು ಉಸ್ತುವಾರಿ ವಿಭಾಗದ ಮುಖ್ಯ ಬಾಲಕ ಸಮರ್ಥ ಮದ್ದಾನಿಮಠ, ಮುಖ್ಯ ಬಾಲಕಿ ಶ್ರೇಯಾ ವಂದಾಲ, ಶಾಲಾ ಆವರಣ ಉಸ್ತುವಾರಿ ಮುಖ್ಯ ಬಾಲಕನಾದ ಕುಮಾರ ಫೈಝಲ್ ಬಲವನೆಕರ,
ಮುಖ್ಯ ಬಾಲಕಿಯಾದ ಕುಮಾರಿ ನಿಧಿ ಢವಳಗಿ, ಮಾಧ್ಯಮ ಉಸ್ತುವಾರಿ ಮುಖ್ಯ ಬಾಲಕಿ ಅದ್ವಿಕಾ ಸಾಸನೂರ, ವೈಭವಿ ನಾರ್ವೇಕರ್, ಪ್ರಣವ ಶಹ, ವಿಶ್ವನಾಥ ನಾಗರಾಳ ತಮ್ಮ ತಂಡದೊಂದಿಗೆ ಬಂದು ಅಥಿತಿಗಳಿಂದ ಬ್ಯಾಡ್ಜ್
ಮತ್ತು ಶಾಲಾ ಧ್ವಜವನ್ನು ಸ್ವೀಕರಿಸಿದರು. ಅಥಿಗಳು ಮಕ್ಕಳಿಗೆ ಪ್ರಮಾಣವಚನ ಬೋಧಿಸಿದರು.
ಈ ಸಂದರ್ಭದಲ್ಲಿ
ಶಾಲೆ ಪ್ರಾಚಾರ್ಯೆ ಶ್ರೀಮತಿ ವಸುಧಾ ನಾರ್ವೇಕರ, ಶಾಲಾ ಹಿರಿಯ ಕಾರ್ಯ
ಸಂಯೋಜಕಿ ದೀಪಾ ಜಂಬೂರೆ, ವಿದ್ಯಾರ್ಥಿಗಳು ಹಾಗೂ ಶಾಲೆ ಸಿಬ್ಬಂದಿ ಉಪಸ್ಥಿತರಿದ್ದರು.

