Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಹಲವು ವರ್ಷಗಳಿಂದ ಅಂಚೆ ಇಲಾಖೆ ಕೇವಲ ಸಂವಹನ ಹಾಗೂ ಪತ್ರ ವ್ಯವಹಾರಗಳ ನಿರ್ವಹಣೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ಅಂಚೆ ಇಲಾಖೆ ಬ್ಯಾಂಕ್‌ಗಳಂತೆ ಭ್ರಷ್ಟಾಚಾರ ರಹಿತ, ಸಾರ್ವಜನಿಕ ಆರ್ಥಿಕತೆ ವ್ಯವಹಾರಗಳ, ಜನಸ್ನೇಹಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಿಂದಗಿ ಅಂಚೆ ವಿಭಾಗದ ಮೇಲ್ವಿಚಾರಕ ಮನೋಹರ ಪೋಳ ಹೇಳಿದರು.ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಅಂಚೆ ಇಲಾಖೆ ವತಿಯಿಂದ ಹಮ್ಮಿಕೊಂಡ ಅಂಚೆ ಇಲಾಖೆ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಅಂಚೆ ಇಲಾಖೆಯ ವಿವಿಧ ಯೋಜನೆಗಳ ಲಾಭ ಪಡದುಕೊಳ್ಳಬೇಕು. ಇಲಾಖೆಯಲ್ಲಿ ಮಕ್ಕಳಿಂದ ವೃದ್ಧರವರೆಗೆ ಅನೇಕ ಉಪಯುಕ್ತ ಯೋಜನೆಗಳಿವೆ. ಇಲಾಖೆ ಒಂದೇ ಸೂರಿನಡಿ ಗ್ರಾಹಕರಿಗೆ ಹಲವು ಸೇವೆಗಳನ್ನು ಒದಗಿಸುತ್ತವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗೋಲಗೇರಿ ಗೋಲ್ಲಾಳೇಶ್ವರ ದೇವಸ್ಥಾನದ ಧರ್ಮದರ್ಶಿ ಸಿದ್ದರಾಮಸಾಹು ದೇವರಮನಿ ಸಾನಿಧ್ಯ ವಹಿಸಿದ್ದರು. ಗೋಲಗೇರಿ ಗ್ರಾಮದ ಮುಖಂಡ ಬಸವರಾಜ ಮಾರಲಭಾವಿ, ಓಂಪ್ರಕಾಶ ಬಿರಾದಾರ, ಬಸನಗೌಡ ಮೇಲಿನಮನಿ, ಗೌಡಣ್ಣ ಬಜಂತ್ರಿ, ಮಡಿವಾಳ ನಾಯ್ಕೋಡಿ, ಕಲ್ಯಾಣಿ ಯಂಕಂಚಿ, ಪತ್ರಕರ್ತ ಮಲ್ಲು ಕೆಂಭಾವಿ, ಗೋಲ್ಲಾಳಪ್ಪ ಕರ್ನಾಳ, ಚನ್ನಬಸು ಪಟ್ಟಣಶೆಟ್ಟಿ, ಹುಸೇನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇ.ಪಿ.ಎಸ್-೯೫ ಪಿಂಚಣೀದಾರರು ಸುಮಾರು ೧೦-೧೨ ವರ್ಷಗಳಿಂಧ ಹೋರಾಟ ಮಾಡುತ್ತಿದ್ದು, ಇದರಲ್ಲಿ ದೇಶದ ಸುಮಾರು ೭೮ ಲಕ್ಷ ಇಪಿ.ಎಸ್. -೯೫ ಪಿಂಚಣಿದಾರರು ಇದ್ದು, ಪಿಂಚಣಿದಾರರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಇಂದು ಎನ್.ಎ.ಸಿ. ವಿಜಯಪುರ ಘಟಕದ ವತಿಯಿಂದ ವೀರಕುಮಾರ ಗಡಾದ ಇವರ ನೇತೃತ್ವದಲ್ಲಿ ಕೇಂದ್ರ ಸರಕಾರದ ವಿರುದ್ದ ಹೋರಾಟ ಕೈಗೊಂಡು ಇ.ಪಿ.ಎಪ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಎನ್.ಎ.ಸಿ. ಸಂಘಟನೆ ರಾಷ್ಟ್ರಾದ್ಯಂತ ೨೭ ಜಿಲ್ಲೆಗಳಲ್ಲಿ ಹಾಗೂ ೪ ಟೇರಿಟೇರಿಗಳಲ್ಲಿ ಸ್ಥಾಪನೆಯಾಗಿದ್ದು ರಾಷ್ಟ್ರಾದ್ಯಂತ ಈಗಲೂ ಬೇಡಿಕೆ ಈಡೇರಿಸದಿದ್ದರೆ ದೇಶಾದ್ಯಂತ ಉಗ್ರ ಹೋರಾಟ ಮಾಡಲು ಸಿದ್ಧವಿದೆ ಎಂದು ಎನ್.ಎ.ಸಿ. ರಾಷ್ಟ್ರೀಯ ಸಂಚಾಲಕ ರಮಾಕಾಂತ ನರಗುಂದ ಅವರು ತಿಳಿಸಿದ್ದಾರೆ.ಪ್ರಸ್ತುತ ಡಿಸೆಂಬರ್-೧ ರಂದು ದೇಶದ ಎಲ್ಲ ಸಂಸತ್ ಸದಸ್ಯರ ಮನೆ/ಕಛೇರಿ ಮುಂದೆ ಶಾಂತಿಯುತ ಮೌನ ಧರಣಿ ಸತ್ಯಾಗ್ರಹ ಕೈಕೊಳ್ಳಲಾಗುತ್ತಿದೆ ನಂತರ ಡಿಸೆಂಬರ್-೧೦, ೧೧ರಂದು ದೆಹಲಿ ಜಂತರ್ ಮಂತರದಲ್ಲಿ ಉಪವಾಸ ಕೈಕೊಳ್ಳಲಾಗುವದು ಎಂದರು.ಈ ಧರಣಿಯಲ್ಲಿ ಎನ್.ಎ.ಸಿ. ಉಪಾಧ್ಯಕ್ಷರಾದ ವೀರಕುಮಾರ ಗಡಾದ, ಎನ್.ಎ.ಸಿ. ಸಂಚಾಲಕರಾದ ಜಿ.ಎಸ್. ದೇಗಿನಾಳ, ಎನ್.ಎ.ಸಿ. ಜಂಟಿ ಕಾರ್ಯದರ್ಶಿ…
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸವನಬಾಗೇವಾಡಿಯಿಂದ ಬ್ಯಾಲ್ಯಾಳದವರೆಗೂ ಬಸ್ ಸೌಕರ್ಯಕ್ಕೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದಿಂದ ನಿಡಗುಂದಿ ತಾಲೂಕಿನ ಬ್ಯಾಲ್ಯಾಳ ಗ್ರಾಮದವರೆಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಸ್ಥಳೀಯ ಬಸ್ ಡಿಪೋ ವ್ಯವಸ್ಥಾಪಕ ಬಿ.ಬಿ.ಚಿತ್ತವಾಡಗಿ ಅವರಿಗೆ ಮನವಿ ಸಲ್ಲಿಸಿದರು.ಅವರು ಸಲ್ಲಿಸಿದ ಮನವಿಯಲ್ಲಿ ಪಟ್ಟಣದಿಂದ ತಾಲೂಕಿನ ಇವಣಗಿ, ಹಂಚಿನಾಳ, ನರಸಲಗಿ, ನರಸಲಗಿ ತಾಂಡಾ, ಅಂಬಳನೂರ, ಅಂಬಳನೂರ ತಾಂಡಾ, ಕಣಕಾಲ ಮಾರ್ಗವಾಗಿ ನಿಡಗುಂದಿ ತಾಲೂಕಿನ ಬ್ಯಾಲ್ಯಾಳ ಗ್ರಾಮದವರೆಗೂ ಸರಿಯಾದ ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಈ ಗ್ರಾಮಗಳಿಂದ ಬಸವನಬಾಗೇವಾಡಿಯ ವಿವಿಧ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ಬಾರದಂತಾಗಿದೆ. ಇದರಿಂದಾಗಿ ಅವರೆಲ್ಲರೂ ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ಇದೆ. ಅದರಲ್ಲೂ ವಿದ್ಯಾರ್ಥಿನಿಯರಿಗೆ ತುಂಬಾ ತೊಂದರೆಯಾಗುತ್ತಿದೆ. ಬಸ್ ಘಟಕ ವ್ಯವಸ್ಥಾಪಕರು ಈ ಮಾರ್ಗವಾಗಿ ಬೆಳಗ್ಗೆ ಎಂಟು ಗಂಟೆಗೆ, ಮಧ್ಯಾನ್ಹ ಎರಡು ಗಂಟೆಗೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಗ್ರಾಮಸ್ಥರು ಮನೆ, ನಿವೇಶನ, ನೀರಿನ ಸೇರಿದಂತೆ ವಿವಿಧ ಆಸ್ತಿಗಳ ತೆರಿಗೆ ಪಾವತಿಗಳನ್ನು ಕಡ್ಡಾಯವಾಗಿ ನಿಗಧಿತ ಅವಧಿಯ ಒಳಗಾಗಿ ಪಾವತಿಸಿ ಇಲಾಖೆಗೆ ಸಹಕರಿಸುವಂತೆ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ ವಿನಂತಿಸಿದರು.ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊಕ್ರಾಣಿ ಗ್ರಾಮದಲ್ಲಿ ಕರ ವಸೂಲಾತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಎಲ್ಲ ಕರಗಳನ್ನು ಸರಿಯಾಗಿ ಪಾವತಿಸಿದೇ ಬಾಕಿ ಉಳಿಸಿದಲ್ಲಿ ಇಲಾಖೆಯಿಂದ ನೀರಿನ ಸಂಪರ್ಕ ಕಡಿತಗೊಳಿಸುವ ಮತ್ತು ದಂಡ ವಿಧಿಸಿ ಬಡ್ಡಿ ಸಮೇತ ವಸೂಲಿ ಮಾಡುವ ಅಧಿಕಾರ ಇಲಾಖೆಗೆ ಇದೆ ಎಂದರು.ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಎಸ್.ನಾಯ್ಕೋಡಿ ಅವರ ನೇತೃತ್ವದ ತಂಡ ಹೊಕ್ರಾಣಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಲಕ್ಷಕ್ಕೂ ಅಧಿಕ ಕರ ವಸೂಲಿ ಮಾಡಿಕೊಂಡರು.ಈ ವೇಳೆ ಕಾರ್ಯದರ್ಶಿ ಗಿರೀಶ ಬಿರಾದಾರ, ಕರವಸೂಲಿಗಾರರಾದ ಬಿ.ಕೆ.ಜಗಲಿ ಮತ್ತು ಎನ್.ಡಿ.ಮಾದರ ಸೇರಿದಂತೆ ಗ್ರಾ.ಪಂ.ಸಿಬ್ಬಂದಿ ಇದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯವು ಟರ್ಮ್ ಎಂಡ್ ಪರೀಕ್ಷೆಗಳನ್ನು ಡಿ.೨ ರಿಂದ ಜನವರಿ ೯ರವರೆಗೆ ಬಿಜಾಪುರ ಪ್ರಾದೇಶಿಕ ಕೇಂದ್ರದ ೬ ಇಗ್ನೋ ಪರೀಕ್ಷಾ ಕೇಂದ್ರಗಳಲ್ಲಿ ನಡೆಸುತ್ತಿದ್ದು, ನೊಂದಾಯಿಸಿ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರಗಳನ್ನುwww.ignou.ac.in ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : ೦೮೩೫೨-೨೫೨೦೦೬, ಮೊ: ೯೪೮೨೩೧೧೦೦೬ ಹಾಗೂ ಇಮೇಲ್ : rcbijapur@ignou.ac.inವಿಳಾಸಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡ್ರೋನ್ ಕ್ಯಾಮರಾ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗ ಪಡೆಯಲು ಪರಿಶಿಷ್ಟ ಪಂಗಡದ ಯುವಕ-ಯುವತಿಯರಿಗೆ ತರಬೇತಿ ನೀಡಲಾಗುತ್ತಿದ್ದು, ಆಸಕ್ತ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.ಪರಿಶಿಷ್ಟ ಪಂಗಡಕ್ಕೆ ಸೇರಿದ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ೩೫ ರಿಂದ ೪೦ ವರ್ಷ ವಯೋಮಾನದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ನಿಗದಿತ ಅರ್ಜಿ ನಮೂನೆ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಾಗೂ ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಕೇಂದ್ರ ಕಾರಾಗೃಹ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ನ.೨೬ರಂದು ಸಂವಿಧಾನ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವ್ಹಿಲ್ ನ್ಯಾಯಾಧೀಶ ಅರವಿಂದ ಹಾಗರಗಿ ಅವರು ಸಂವಿಧಾನ ಪ್ರಮಾಣ ವಚನ ಬೋಧಿಸಿ, ಬಂಧಿಗಳಿಗಿರುವ ಉಚಿತ ಕಾನೂನು ಸೇವೆಗಳ ಕುರಿತು ಮಾತನಾಡಿದರು.ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಬಿ.ಎಂ.ಕೊಟ್ರೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರಾಗೃಹದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಅಶೋಕ ರಾಠೋಡ ನಿರೂಪಿಸಿ, ವಂದಿಸಿದರು.
ಬಸವನಬಾಗೇವಾಡಿ ತಾಲೂಕಿನ ವಿವಿಧ ಗ್ರಾಪಂಗಳಿಗೆ ಭೇಟಿ ನೀಡಿದ ಜಿ.ಪಂ.ಸಿಇಓ ರಿಷಿ ಆನಂದ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಬುಧವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಸವನ ಬಾಗೇವಾಡಿ ತಾಲೂಕು ಪಂಚಾಯಿತಿ ಮತ್ತು ನರಸಲಗಿ ಗ್ರಾಮ ಪಂಚಾಯಿತಿಗೆ ದಿಢೀರ್ ಭೇಟಿ ನೀಡಿ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲನೆ, ತಾಲೂಕು ಪಂಚಾಯಿತಿ ಕಛೇರಿ ಸಿಬ್ಬಂದಿ ಹಾಜರಾತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಛೇರಿ ಒಳಾಂಗಣ ಹಾಗೂ ಹೊರಾಂಗಣ ಆವರಣಗಳನ್ನು ಪ್ರತಿದಿನ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಮತ್ತು ಪ್ರತಿ ಮಾಹೆಯ ಮೊದಲನೇ ಶನಿವಾರ ಸ್ವಚ್ಛ ಶನಿವಾರ ಆಚರಣೆ ಮಾಡುವಂತೆ ಅವರು ಸೂಚನೆ ನೀಡಿದರು.ನರಸಲಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಚಿನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿಗೆ ಭೇಟಿ ನೀಡಿ, ಮಕ್ಕಳ ಹಾಜರಾತಿ, ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ, ಬಿಸಿಯೂಟ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಶ್ರೀ ದಾನಮ್ಮದೇವಿ ದೇವಸ್ಥಾನದಲ್ಲಿ ದಾನಮ್ಮ ದೇವಿಯ ತೃತೀಯ ವರ್ಷದ ಜಾತ್ರಾ ಮಹೋತ್ಸವವನ್ನು ಡಿ.೧ ರ ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಟ್ರಸ್ಟ ಕಮೀಟಿ ಅಧ್ಯಕ್ಷ ಅನೀಲಪ್ರಸಾದ ಏಳಗಿ ಹೇಳಿದರು.ಅವರು ಗುರುವಾರ ದಾನಮ್ಮದೇವಿ ದೇವಸ್ಥಾನದ ಆವರಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಗುಡ್ಡಾಪುರ ದಾನಮ್ಮದೇವಿಗೆ ಇಂಡಿ ತಾಲೂಕಿನಲ್ಲಿ ಅತಿ ಹೆಚ್ಚು ಭಕ್ತರಿದ್ದು, ಎಲ್ಲ ಭಕ್ತರ ಅಪೇಕ್ಷೆ ಮೇರೆಗೆ ಇಂಡಿ ನಗರದಲ್ಲಿ ದಾನಮ್ಮದೇವಿ ದೇವಸ್ಥಾನ ನಿರ್ಮಿಸಲಾಗಿದೆ. ಪ್ರತಿ ವರ್ಷವೂ ಸಹ ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಡಿಸೆಂಬರ್ ೧ ರಂದು ಜಾತ್ರಾ ನಿಮಿತ್ಯವಾಗಿ ದಾನಮ್ಮ ದೇವಿ ಮೂರ್ತಿಗೆ ಬೆಳಿಗ್ಗೆ ೬:೦೦ಗೆ ರುದ್ರಾಭಿಷೇಕ, ತದನಂತರ ೧೦:೦೦ಗೆ ಪಲ್ಲಕ್ಕಿ ಉತ್ಸವ ನಡೆಯಲಿದ್ದು ಸಿಂದಗಿ ರಸ್ತೆಯಿಂದ ಸಕಲ ವಾದ್ಯ ವೈಭವಗಳೊಂದಿಗೆ ದಾನಮ್ಮ ದೇವಿ ದೇವಸ್ಥಾನಕ್ಕೆ ತಲುಪಲಿದೆ.ಅದೆ ದಿನ ಸಾಯಂಕಾಲ ೬:೦೦ಗೆ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಜರುಗಲಿದ್ದು, ಅಂದು ನಿರಂತರ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಸಾಯಂಕಾಲ ೫:೦೦ ಗಂಟೆಗೆ ಧರ್ಮಸಭೆ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಗುಡ್ಡಾಪೂರ ದಾನಮ್ಮ ದೇವಿ ದರ್ಶನಕ್ಕಾಗಿ ತೆರಳುವ ಅಸಂಖ್ಯಾತ ಪಾದಯಾತ್ರಿಕರಿಗಾಗಿ ಪಟ್ಟಣದ ಸಿದ್ಧಯ್ಯ ಮಲ್ಲಿಕಾರ್ಜುನಮಠ ಸತತ ೨೪ ನೇ ವರ್ಷ ಪ್ರಸಾದ ವ್ಯವಸ್ಥೆ ಕಲ್ಪಿಸುವುದರ ಮೂಲಕ ಹಾಗೂ ಪ್ರಭುದೇವ ಹಿರೇಮಠ (ಹಂದಿಗನೂರ) ಕಳೆದ ೬ ವರ್ಷಗಳಿಂದ ಪ್ರಸಾದ ವ್ಯವಸ್ಥೆ ಕಲ್ಪಿಸುವುದರ ಮೂಲಕ ತಮ್ಮ ಭಕ್ತಿ, ಭಾವ ತೋರುತ್ತಿದ್ದಾರೆ.ಪಟ್ಟಣದ ಮೂಲಕ ಗುಡ್ಡಾಪೂರಕ್ಕೆ ತೆರಳುವ ಪಾದಯಾತ್ರಿಕರಿಗೆ ಕಳೆದ ೨೪ ವರ್ಷಗಳಿಂದ ಸಾರ್ವಜನಿಕರ ಸಹಕಾರದೊಂದಿಗೆ ಯುವಕ ಸಿದ್ಧಯ್ಯ , ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ನಾಡಗೌಡ ಪೆಟ್ರೋಲ್ ಪಂಪ್ ಮುಂದೆ ಈ ಪ್ರಸಾದ ವ್ಯವಸ್ಥೆ ನಡೆಸಿಕೊಂಡು ಬಂದಿದ್ದು, ಈ ಬಾರಿಯು ಛಟ್ಟಿ ಅಮವಾಸ್ಯೆಯಂದು ಜರುಗುವ ಗುಡ್ಡಾಪೂರ ದಾನಮ್ಮದೇವಿ ಜಾತ್ರೆಗೆ ಪಾಲ್ಗೊಳ್ಳಲು ತೆರಳುತ್ತಿರುವ ಪಾದಯಾತ್ರಿಕರಿಗೆ ಪ್ರಸಾದ ವ್ಯವಸ್ಥೆ ಆರಂಭಿಸಿದರು.ಬೆಳಿಗ್ಗೆಯಿಂದ ರಾತ್ರಿಯವರೆಗೆ ನಿರಂತರವಾಗಿ ಉಪ್ಪಿಟ್ಟು, ಪಲಾವ್, ಬಾಳೆಹಣ್ಣು, ಬಿಸ್ಕೆಟ್, ಚಹಾ. ಬಿಸಿನೀರು ಹಾಗೂ ಔಷಧಿಗಳ ವ್ಯವಸ್ಥೆ ಮಾಡಿದ್ದು, ವಿಶ್ರಾಂತಿ ಪಡೆದುಕೊಳ್ಳುವವರೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ.ಈ ಕಾರ್ಯದಲ್ಲಿ ಎ.ಕೆ.ನಾಡಗೌಡ ಪೆಟ್ರೋಲ್ ಪಂಪ್‌ನವರು ಸಹ ಪ್ರತಿವರ್ಷ ಸ್ಥಳಾವಕಾಶ ನೀಡಿ ಔದಾರ್ಯ ಮೆರೆದಿದ್ದಾರೆ.ಸಿದ್ದಯ್ಯ…
