Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ರಾಜ್ಯದ ಗಡಿ ಭಾಗ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಗುಡ್ಡಾಪುರ ದಾನಮ್ಮದೇವಿ ಜಾತ್ರೆಯೂ ಅದ್ದೂರಿಯಾಗಿ ಸಾಗುತ್ತಿದೆ.ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತಾಧಿಗಳು ವಾಹನಗಳ ಮೂಲಕ ಅಲ್ಲದೇ ರಸ್ತೆಯುದ್ದಕ್ಕೂ ಪಾದಯಾತ್ರೆಯ ಮೂಲಕ ಸಾಗುತ್ತಿದ್ದಾರೆ. ರಸ್ತೆಯುದ್ದಕ್ಕೂ ಭಕ್ತರು, ಉದ್ಯಮಿಗಳು, ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಲ್ಪೋಪಹಾರ, ಚಹಾ, ಬಾಳೆಹಣ್ಣು, ಬಿಸ್ಕಿಟ್ ವಿತರಿಸುತ್ತಾ ಪಾದಯಾತ್ರಿಗಳಿಗೆ ಸಹಕರಿಸುತ್ತಾ ಅಲ್ಲಲ್ಲಿ ವೈಧ್ಯಕೀಯ ತಪಾಸಣೆ ಕೂಡಾ ಮಾಡುತ್ತಿದ್ದಾರೆ.ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ಆಗಮಿಸಲು ವಿಶೇಷ ಬಸ್ ಗಳ ಓಡಾಡುತ್ತಿವೆ. ದಾನಮ್ಮದೇವಿ ಜಪ ಮಾಡುತ್ತಾ ಉದ್ಘೋಷ ಹಾಕುತ್ತಾ ಮಹಿಳೆಯರು, ಯುವಕರು ಸಾಗುತ್ತಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ತಾಲೂಕಿನ ಪಡನೂರ ಗ್ರಾಮದ ಜಕ್ಕರಾಯ ಶಿವರಾಯ ಭೊಪಳೆ ಅವರ ಪತ್ರಾಸ್ ಶೆಡ್ ಸುಟ್ಟು ಕರಕಲಾದ ಘಟನೆ ಶನಿವಾರ ನಸುಕಿನ ಜಾವ ನಡೆದಿದೆ.ಶೆಡ್ಡಿನಲ್ಲಿ ಇಟ್ಟಿದ್ದ ಜೋಳ, ಗೋಧಿ, ಅಕ್ಕಿ ಸೇರಿದಂತೆ ದಿನನಿತ್ಯದ ವಸ್ತುಗಳು ಹಾಗೂ ೫೦೦೦೦ ನಗದು ಹಣ ಬಟ್ಟೆಗಳು ಸುಟ್ಟು ಕರಕಲಾಗಿದೆ ಎಂದು ಭೊಪಳೆ ಅವರು ತಿಳಿಸಿದ್ದಾರೆ.ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಮಣಿಕಂಠ ಗೊಂಡಳ್ಳಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದಾರೆ.
ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‍ಕುಮಾರ ಘೋಷ್ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಫಲಿತಾಂಶ ಸುಧಾರಣೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಇಂತಹ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಿ, ಪರಿಹಾರ ಬೋಧನೆ ಮಾಡುವ ಮೂಲಕ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಮುಂದಾಗುವಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‍ಕುಮಾರ ಘೋಷ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶನಿವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ, ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಕ್ರಮ ವಹಿಸಬೇಕು. ಸರ್ಕಾರಿ ಶಾಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಮೂಲಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕು ಎಂದು ಅವರು ಹೇಳಿದರು.ಜೆಜೆಎಂ ಯೋಜನೆಯ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನ ನಿಗದಿತ ಅವಧಿಯಲ್ಲಿ ಸಾಧಿಸಬೇಕು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇದೇ ಬರುವ ರವಿವಾರ 1.12.2024 ರಂದು ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಂಜೆ ಸರಿಯಾಗಿ 6.30 ಗಂಟೆಗೆ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.ಈ ಬಾರಿ ವಿಜಯಪುರದ ಶಾಸ್ತ್ರೀಯ ಗಾಯನದ ಯುವ ಪ್ರತಿಭೆಗಳು ಕಾರ್ಯಕ್ರಮ ನೀಡುತ್ತಿರುವುದು ವಿಶೇಷವಾಗಿದೆ.ಆರಂಭದಲ್ಲಿ ಕು. ಶ್ರಾವಣಿ ಪಾಟೀಲ್, ನಂತರ ಶ್ರೀಶಾಲ ಕಟ್ಟಿ, ಕೊನೆಯದಾಗಿ ಕು. ಸಾಕ್ಷಿ ಹಿರೇಮಠ ಅವರು ಗಾಯನ ಪ್ರಸ್ತುತಪಡಿಸಲಿದ್ದಾರೆ. ಅವರಿಗೆ ವಿಜಯಪುರದವರೇ ಆದ ಶ್ರೀನಿಧಿ ಕುಲಕರ್ಣಿ, ಓಂಕಾರ ಅಳ್ಳಗಿ ತಬಲಾ ಸಾಥ್, ಕಾಶೀನಾಥ ಭೋಸಲೆ, ಶ್ರೀಶೈಲ ಬೀಳೂರು, ಪ್ರದೀಪ್ ಪೋದ್ದಾರ್ ಅವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಈ ಬಾರಿ ಗಾಯನ, ತಬಲಾ ಸಾಥ್ ಮತ್ತು ಹಾರ್ಮೋನಿಯಂ ಸಾಥ್ ನೀಡುವ ಎಲ್ಲಾ ಕಲಾವಿದರು ವಿಜಯಪುರದವರೇ ಆಗಿದ್ದು ಕಾರ್ಯಕ್ರಮ ವಿಶೇಷತೆಯಿಂದ ಕೂಡಿದೆ.ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ್ತು ತಮ್ಮವರನೆಲ್ಲರನ್ನೂ, ಕಲಾ ಪ್ರಿಯರನ್ನು ಕರೆದುಕೊಂಡು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸುರಸಿಂಗಾರ ಕಾರ್ಯದರ್ಶಿ ಸಂಗಣ್ಣ ಪಾಟೀಲ ಪ್ರಕಟಣೆಯಲ್ಲಿ ಕೋರಿದ್ದಾರೆ.
ವೃಕ್ಷಥಾನ್ ಹೆರಿಟೇಜ್ ರನ್-2024ರ ಕೋರ್ ಕಮಿಟಿ ಪೂರ್ವಭಾವಿ ಸಭೆಯಲ್ಲಿ ಡಾ.ಮಹಾಂತೇಶ ಬಿರಾದಾರ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024ರ ಕೋರ್ ಕಮಿಟಿ ಪೂರ್ವಭಾವಿ ಸಭೆ ನಗರದಲ್ಲಿ ಶುಕ್ರವಾರ ಮುಸ್ಸಂಜೆ ನಡೆಯಿತು.ಸಚಿವ ಎಂ. ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಸಭೆಯಲ್ಲಿ ಕೋರ್ ಕಮಿಟಿ ನಾನಾ ವಿಭಾಗಗಳ ಪದಾಧಿಕಾರಿಗಳು ಈವರೆಗೆ ಕೈಗೊಳ್ಳಲಾಗಿರುವ ಕ್ರಮಗಳು ಮತ್ತು ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ವೃಕ್ಷಥಾನ್ ಹೆರಿಟೇಜ್ ರನ್ ಗೆ ದಿನಗಣನೆ ಆರಂಭವಾಗಿದ್ದು, ಸಾಕಷ್ಟು ಮುಂಚಿತವಾಗಿ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು. ಬಡ ಮತ್ತು ಪ್ರತಿಭಾವಂತ ಯುವಕರು 21 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳಲು ಆಸಕ್ತಿ ಹೊಂದಿದ್ದರೆ ಅವರಿಗೆ ನೋಂದಣಿ ಶುಲ್ಕವನ್ನು ಪ್ರಾಯೋಜಕರು ಭರಿಸಲಿದ್ದಾರೆ ಎಂದು ತಿಳಿಸಿದರು.ಕಳೆದ ಬಾರಿಗಿಂತ ಈ ಬಾರಿ ಇನ್ನೂ ಚೆನ್ನಾಗಿ ಈ ಓಟ ಆಯೋಜನೆಯಾಗಬೇಕು. ಈ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ದೈಹಿಕ ಶಿಕ್ಷಣ ವಿಭಾಗ ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಇವರ ನಿರ್ದೇಶನದಂತೆ, 2024-25 ನೇ ಸಾಲಿನ ಅಂತರ ಕಾಲೇಜುಗಳ ಪುರುಷ ಹಾಗೂ ಮಹಿಳೆಯರ ವಿಶ್ವವಿದ್ಯಾಲಯ ಮಟ್ಟದ ಯೋಗ ತಂಡದ ಆಯ್ಕೆಯನ್ನು ಪಟ್ಟಣದ ಮಾತೋಶ್ರೀ ಗಂಗಾಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ಕೆಂಭಾವಿ ಸೇರಿದಂತೆ ವಿವಿಧ ಪದವಿ ಕಾಲೇಜುಗಳಿಂದ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ ನಾಗಪ್ಪ ಚಾವಲ್ಕರ್ ಅಧ್ಯಕ್ಷತೆಯಲ್ಲಿ, ಕಾಲೇಜಿನ ದೈಹಿಕ ನಿರ್ದೇಶಕ ಡಾ ಪ್ರಸಾದ್ ಭಂಡಾರಿ ನೇತೃತ್ವದಲ್ಲಿ ದೈಹಿಕ ನಿರ್ದೇಶಕರಾದ ಡಾ ರಮೇಶ ಶಹಾಪೂರಕರ್, ಡಾ ಮಲ್ಲಿಕಾರ್ಜುನ ಲಿಂಗಸೂಗೂರು, ಡಾ ಭೀಮಾಶಂಕರ ತುರುವಿಹಾಳ, ಯೋಗ ತಂಡದ ಆಯ್ಕೆ ಸಮಿತಿಯ ಸದಸ್ಯರಾಗಿ ಭಾಗವಹಿಸಿದ್ದರು, ಡಾ ಸಿದ್ದಲಿಂಗ ರಾಠೋಡ್, ನಸ್ರೀನ್ ತಾಜ್, ಶಶಿಕುಮಾರ್ ಎತ್ತಿನಮನಿ, ಡಾ ವೈ ಎಸ್ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಹಾಗೂ ಪಿಂಚಣಿದಾರರ ಅಹವಾಲು ಆಲಿಕೆ ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡಲು ಡಿ.7 ರಂದು ಜಿಲ್ಲೆಯ 13 ಗ್ರಾಮಗಳಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ಡಿ.7ರಂದು ಬೆಳಿಗ್ಗೆ 11 ಗಂಟೆಗೆ ತಾಳಿಕೋಟೆ ತಾಲೂಕಿನ ನೀರಲಗಿ ಗ್ರಾಮದ ಹೊಳೇ ಹುಚ್ಚೇಶ್ವರ ದೇವಸ್ಥಾನದಲ್ಲಿ ವಿಜಯಪುರ ಉಪವಿಭಾಗಾಧಿಕಾರಿಗಳು, ಸಿಂದಗಿ ತಾಲೂಕಿನ ಸುಂಗಠಾಣ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇಂಡಿ ಉಪವಿಭಾಗಾಧಿಕಾರಿಗಳು ಪಿಂಚಣಿ ಅದಾಲತ್ ನಡೆಸಲಿದ್ದಾರೆ.ವಿಜಯಪುರ ತಾಲೂಕಿನ ಜಂಬಗಿ ಗ್ರಾಮದ ಧ್ಯಾವತರಾಯ ಮುತ್ಯಾ ದೇವಸ್ಥಾನದಲ್ಲಿ ವಿಜಯಪುರ ಗ್ರೇಡ್-2 ತಹಶೀಲ್ದಾರ, ಅಳಗಿನಾಳ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ ತಿಕೋಟಾ ಗ್ರೇಡ್-2 ತಹಶೀಲ್ದಾರ, ಕಾಖಂಡಕಿ ಗ್ರಾಮ ಪಂಚಾಯತಿಯಲ್ಲಿ ಬಬಲೇಶ್ವರ ಗ್ರೇಡ್-2 ತಹಶೀಲ್ದಾರ, ರೆಬಿನಾಳ ಗ್ರಾಮದ ಶ್ರೀಹನುಮಾನ ದೇವಸ್ಥಾನದಲ್ಲಿ ಬಸವನಬಾಗೇವಾಡಿ ಗ್ರೇಡ್-2 ತಹಶೀಲ್ದಾರ ಅವರು ಹಾಗೂ ಶೀಕಳವಾಡಿಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಿಡಗುಂದಿ ಗ್ರೇಡ್-2 ತಹಶೀಲ್ದಾರ ಅವರು ಪಿಂಚಣಿ…
’ವೀಣಾಂತರಂಗ’ ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ, ಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ’ಪ್ರಕಾರಗಳು’ ಹಾಗೆಂದರೇನು?ಸಾಹಿತ್ಯ ಸಂಗೀತ ಮತ್ತು ಕಲೆಗಳ ವಿಧಗಳನ್ನು ಪ್ರಕಾರ ಎಂದು ಕರೆಯುತ್ತೇವೆ.ಉದಾಹರಣೆಗೆ ಸಂಗೀತದಲ್ಲಿ ಒಂದು ವಿಶೇಷವಾದ ಶೈಲಿ, ವಿಷಯ, ವಸ್ತುಗಳನ್ನು ಒಳಗೊಂಡ ವಿಧವನ್ನು ಪ್ರಕಾರ ಎಂದು ಕರೆಯುತ್ತೇವೆ. ಭಾವಗೀತೆ, ಜಾನಪದ ಗೀತೆ, ದೇಶಭಕ್ತಿ ಗೀತೆ, ವಿಷಾದ ಗೀತೆ, ಯುಗಳ ಗೀತೆ ಎಂಬುದನ್ನು ಸ್ಥೂಲವಾಗಿ ಹೇಳಿದರೆಹಿಂದುಸ್ತಾನಿ ಶಾಸ್ತ್ರೀಯ ಸಂಗೀತ,ಕರ್ನಾಟಕ ಶಾಸ್ತ್ರೀಯ ಸಂಗೀತ, ಕೀರ್ತನೆಗಳು, ಸುಗಮ ಸಂಗೀತ ವಾದ್ಯ ಸಂಗೀತ ಎಂದು ಮತ್ತೆ ಕೆಲ ವಿಧಗಳನ್ನು ಗುರುತಿಸುತ್ತೇವೆ.ಅದೇ ರೀತಿ ಸಾಹಿತ್ಯದಲ್ಲಿ ಕಾವ್ಯ ನಾಟಕ, ಗದ್ಯ, ಕಾಲ್ಪನಿಕ ಮತ್ತು ಕಾಲ್ಪನಿಕವಲ್ಲದ ಎಂಬ ಐದು ಪ್ರಕಾರಗಳಿವೆ.ಈ ಎಲ್ಲ ಪ್ರಕಾರಗಳಿಗೂ ಅವುಗಳದ್ದೇ ಆದ ರೀತಿಯ ಶೈಲಿಗಳಿದ್ದು ಅವು ಒಂದು ಪ್ರಕಾರದಿಂದ ಮತ್ತೊಂದು ಪ್ರಕಾರವನ್ನು ವಿಭಿನ್ನವಾಗಿ ಗುರುತಿಸಬಹುದು. ಓದುಗರಿಗೂ ಕೂಡ ತಾವು ಯಾವ ಪ್ರಕಾರದ ಸಾಹಿತ್ಯವನ್ನು ಓದುತ್ತಿದ್ದೇವೆ ಎಂಬುದನ್ನು ತಿಳಿಯಲು ಇದು ಸಹಾಯಕವಾಗುವುದಲ್ಲದೆ ತಾವು ಓದುತ್ತಿರುವ ವಿಷಯದ ಅರಿವನ್ನು ಉಂಟು ಮಾಡುತ್ತದೆ. ಆ ಮೂಲಕ ಓದುಗರಿಗೆ…
Udayarashmi kannada daily newspaper
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ವಿಜಯಪುರ 2024-29ನೇ ಸಾಲಿಗೆ ನಡೆದ ಜಿಲ್ಲಾ ಅಧ್ಯಕ್ಷರು, ಖಜಾoಚಿ, ರಾಜ್ಯ ಪರಿಷತ್ ಸದಸ್ಯರ ಚುನಾವಣೆಯಲ್ಲಿ ಜಿಲ್ಲಾ ಅಧ್ಯಕ್ಷ ರಾಗಿ ಸುರೇಶ ಶಡ ಸ್ಯಾಳ, ಖಜಾoಚಿಯಾಗಿ ಜೂಬೇರ ಎಸ್. ಕೆರೂರ್, ರಾಜ್ಯ ಪರಿಷತ್ ಸದಸ್ಯ ರಾಗಿ ವಿಜಯಕುಮಾರ ಹತ್ತಿ ಅವರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆಂದು, ಭೂ ಮಾಪನ ಇಲಾಖೆಯ ನೂತನ ನಿರ್ದೇಶಕರಾದ ಶಿವಾನಂದ ಮಗ್ಗದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
