ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ವಿಜಯಪುರ 2024-29ನೇ ಸಾಲಿಗೆ ನಡೆದ ಜಿಲ್ಲಾ ಅಧ್ಯಕ್ಷರು, ಖಜಾoಚಿ, ರಾಜ್ಯ ಪರಿಷತ್ ಸದಸ್ಯರ ಚುನಾವಣೆಯಲ್ಲಿ ಜಿಲ್ಲಾ ಅಧ್ಯಕ್ಷ ರಾಗಿ ಸುರೇಶ ಶಡ ಸ್ಯಾಳ, ಖಜಾoಚಿಯಾಗಿ ಜೂಬೇರ ಎಸ್. ಕೆರೂರ್, ರಾಜ್ಯ ಪರಿಷತ್ ಸದಸ್ಯ ರಾಗಿ ವಿಜಯಕುಮಾರ ಹತ್ತಿ ಅವರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆಂದು, ಭೂ ಮಾಪನ ಇಲಾಖೆಯ ನೂತನ ನಿರ್ದೇಶಕರಾದ ಶಿವಾನಂದ ಮಗ್ಗದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

