ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇದೇ ಬರುವ ರವಿವಾರ 1.12.2024 ರಂದು ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಂಜೆ ಸರಿಯಾಗಿ 6.30 ಗಂಟೆಗೆ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಬಾರಿ ವಿಜಯಪುರದ ಶಾಸ್ತ್ರೀಯ ಗಾಯನದ ಯುವ ಪ್ರತಿಭೆಗಳು ಕಾರ್ಯಕ್ರಮ ನೀಡುತ್ತಿರುವುದು ವಿಶೇಷವಾಗಿದೆ.
ಆರಂಭದಲ್ಲಿ ಕು. ಶ್ರಾವಣಿ ಪಾಟೀಲ್, ನಂತರ ಶ್ರೀಶಾಲ ಕಟ್ಟಿ, ಕೊನೆಯದಾಗಿ ಕು. ಸಾಕ್ಷಿ ಹಿರೇಮಠ ಅವರು ಗಾಯನ ಪ್ರಸ್ತುತಪಡಿಸಲಿದ್ದಾರೆ. ಅವರಿಗೆ ವಿಜಯಪುರದವರೇ ಆದ ಶ್ರೀನಿಧಿ ಕುಲಕರ್ಣಿ, ಓಂಕಾರ ಅಳ್ಳಗಿ ತಬಲಾ ಸಾಥ್, ಕಾಶೀನಾಥ ಭೋಸಲೆ, ಶ್ರೀಶೈಲ ಬೀಳೂರು, ಪ್ರದೀಪ್ ಪೋದ್ದಾರ್ ಅವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಈ ಬಾರಿ ಗಾಯನ, ತಬಲಾ ಸಾಥ್ ಮತ್ತು ಹಾರ್ಮೋನಿಯಂ ಸಾಥ್ ನೀಡುವ ಎಲ್ಲಾ ಕಲಾವಿದರು ವಿಜಯಪುರದವರೇ ಆಗಿದ್ದು ಕಾರ್ಯಕ್ರಮ ವಿಶೇಷತೆಯಿಂದ ಕೂಡಿದೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ್ತು ತಮ್ಮವರನೆಲ್ಲರನ್ನೂ, ಕಲಾ ಪ್ರಿಯರನ್ನು ಕರೆದುಕೊಂಡು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸುರಸಿಂಗಾರ ಕಾರ್ಯದರ್ಶಿ ಸಂಗಣ್ಣ ಪಾಟೀಲ ಪ್ರಕಟಣೆಯಲ್ಲಿ ಕೋರಿದ್ದಾರೆ.