ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ದೈಹಿಕ ಶಿಕ್ಷಣ ವಿಭಾಗ ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಇವರ ನಿರ್ದೇಶನದಂತೆ, 2024-25 ನೇ ಸಾಲಿನ ಅಂತರ ಕಾಲೇಜುಗಳ ಪುರುಷ ಹಾಗೂ ಮಹಿಳೆಯರ ವಿಶ್ವವಿದ್ಯಾಲಯ ಮಟ್ಟದ ಯೋಗ ತಂಡದ ಆಯ್ಕೆಯನ್ನು ಪಟ್ಟಣದ ಮಾತೋಶ್ರೀ ಗಂಗಾಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ಕೆಂಭಾವಿ ಸೇರಿದಂತೆ ವಿವಿಧ ಪದವಿ ಕಾಲೇಜುಗಳಿಂದ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ ನಾಗಪ್ಪ ಚಾವಲ್ಕರ್ ಅಧ್ಯಕ್ಷತೆಯಲ್ಲಿ, ಕಾಲೇಜಿನ ದೈಹಿಕ ನಿರ್ದೇಶಕ ಡಾ ಪ್ರಸಾದ್ ಭಂಡಾರಿ ನೇತೃತ್ವದಲ್ಲಿ ದೈಹಿಕ ನಿರ್ದೇಶಕರಾದ ಡಾ ರಮೇಶ ಶಹಾಪೂರಕರ್, ಡಾ ಮಲ್ಲಿಕಾರ್ಜುನ ಲಿಂಗಸೂಗೂರು, ಡಾ ಭೀಮಾಶಂಕರ ತುರುವಿಹಾಳ, ಯೋಗ ತಂಡದ ಆಯ್ಕೆ ಸಮಿತಿಯ ಸದಸ್ಯರಾಗಿ ಭಾಗವಹಿಸಿದ್ದರು, ಡಾ ಸಿದ್ದಲಿಂಗ ರಾಠೋಡ್, ನಸ್ರೀನ್ ತಾಜ್, ಶಶಿಕುಮಾರ್ ಎತ್ತಿನಮನಿ, ಡಾ ವೈ ಎಸ್ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು