ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ರಾಜ್ಯದ ಗಡಿ ಭಾಗ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಗುಡ್ಡಾಪುರ ದಾನಮ್ಮದೇವಿ ಜಾತ್ರೆಯೂ ಅದ್ದೂರಿಯಾಗಿ ಸಾಗುತ್ತಿದೆ.
ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತಾಧಿಗಳು ವಾಹನಗಳ ಮೂಲಕ ಅಲ್ಲದೇ ರಸ್ತೆಯುದ್ದಕ್ಕೂ ಪಾದಯಾತ್ರೆಯ ಮೂಲಕ ಸಾಗುತ್ತಿದ್ದಾರೆ. ರಸ್ತೆಯುದ್ದಕ್ಕೂ ಭಕ್ತರು, ಉದ್ಯಮಿಗಳು, ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಲ್ಪೋಪಹಾರ, ಚಹಾ, ಬಾಳೆಹಣ್ಣು, ಬಿಸ್ಕಿಟ್ ವಿತರಿಸುತ್ತಾ ಪಾದಯಾತ್ರಿಗಳಿಗೆ ಸಹಕರಿಸುತ್ತಾ ಅಲ್ಲಲ್ಲಿ ವೈಧ್ಯಕೀಯ ತಪಾಸಣೆ ಕೂಡಾ ಮಾಡುತ್ತಿದ್ದಾರೆ.
ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ಆಗಮಿಸಲು ವಿಶೇಷ ಬಸ್ ಗಳ ಓಡಾಡುತ್ತಿವೆ. ದಾನಮ್ಮದೇವಿ ಜಪ ಮಾಡುತ್ತಾ ಉದ್ಘೋಷ ಹಾಕುತ್ತಾ ಮಹಿಳೆಯರು, ಯುವಕರು ಸಾಗುತ್ತಿದ್ದಾರೆ.