ಉದಯರಶ್ಮಿ ದಿನಪತ್ರಿಕೆ
ಇಂಡಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ತಾಲೂಕಿನ ಪಡನೂರ ಗ್ರಾಮದ ಜಕ್ಕರಾಯ ಶಿವರಾಯ ಭೊಪಳೆ ಅವರ ಪತ್ರಾಸ್ ಶೆಡ್ ಸುಟ್ಟು ಕರಕಲಾದ ಘಟನೆ ಶನಿವಾರ ನಸುಕಿನ ಜಾವ ನಡೆದಿದೆ.
ಶೆಡ್ಡಿನಲ್ಲಿ ಇಟ್ಟಿದ್ದ ಜೋಳ, ಗೋಧಿ, ಅಕ್ಕಿ ಸೇರಿದಂತೆ ದಿನನಿತ್ಯದ ವಸ್ತುಗಳು ಹಾಗೂ ೫೦೦೦೦ ನಗದು ಹಣ ಬಟ್ಟೆಗಳು ಸುಟ್ಟು ಕರಕಲಾಗಿದೆ ಎಂದು ಭೊಪಳೆ ಅವರು ತಿಳಿಸಿದ್ದಾರೆ.
ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಮಣಿಕಂಠ ಗೊಂಡಳ್ಳಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದಾರೆ.