Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವದು ನಮ್ಮೆಲ್ಲರ ಜವಾಬ್ದಾರಿ. ಆ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಬಾಚೂ ತಪ್ಪದೇ ಪಾಲಿಸಿದಲ್ಲಿ ಸುಂದರ ಹಾಗೂ ಆರೋಗ್ಯಯುತ ಸಮಾಜ ನಿರ್ಮಿಸಲು ಸಾಧ್ಯ ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಪುರಸಭೆ ಕಾರ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಕಸ ಗುಡಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಗಾಂಧೀಜಿಯವರ ಸ್ವಚ್ಛ ಭಾರತ ಕಸನಿಗೆ ನಾವೆಲ್ಲರೂ ಕೈಜೋಡಿಸಬೇಕು. ಎಲ್ಲಂದರಲ್ಲಿ ಕಸ ಬಿಸಾಡುವದು, ಪರಿಸರವನ್ನು ಮಲಿನಮಾಡುವದು ಮಾಡಬಾರದು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಯಾವ ರೋಗಗಳೂ ನಮ್ಮ ಬಳಿ ಸುಳಿಯಲಾರವು. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಮೇಲಿಂದ ಮೇಲೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು ಎಂದರು.ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಪಟ್ಟಣದಲ್ಲಿ ಹಲವು ಅಂಗಡಿಯವರು ತಮ್ಮಲ್ಲಿ ಶೇಖರಣೆಯಾಗುವ ತ್ಯಾಜ್ಯವನ್ನು ಕಸದ ವಿಲೇವಾರಿ ವಾಹನಕ್ಕೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ಅಭಿರಕ್ಷಕರ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಉಪ ಕಾನೂನು ಅಭಿರಕ್ಷಕರು ೦೨, ಸಹಾಯಕ ಕಾನೂನು ಅಭಿರಕ್ಷಕರು ೦೫, ಕಚೇರಿ ಸಹಾಯಕರ ೦೨ ಹಾಗೂ ಕಚೇರಿ ಪ್ಯೂನ್ ೦೨ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು, ಅಕ್ಟೋಬರ್ ೦೩ರೊಳಗಾಗಿ ಭರ್ತಿ ಮಾಡಿದ ಅರ್ಜಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎಡಿಆರ್ ಕಟ್ಟಡ, ಜಿಲ್ಲಾ ನ್ಯಾಯಾಲಗಳ ಸಂಕೀರ್ಣ ವಿಜಯಪುರ ಇವರಿಗೆ ಸಲ್ಲಿಸುವಂತೆಯೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯನ್ನು ಸಂಪರ್ಕಿಸುವಂತೆಯೂ ಹಾಗೂ ವೆಬ್‌ಸೈಟ್ https://vijayapura.dcourts.gov.in/dlsa/ವೀಕ್ಷಿಸಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕೇಂದ್ರ ಯುವ ಸಚಿವ ಮನ್ಸುಖ್ ಮಾಂಡವಿಯಾ ರನ್ನು ಭೇಟಿಯಾದ ರಾಷ್ಟ್ರೀಯ ಯುವ ಸಲಹಾ ಸಮಿತಿ ಪದಾಧಿಕಾರಿಗಳ ನಿಯೋಗ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವ ಸಬಲೀಕರಣಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಒದಗಿಸುವುದು, ಯುವ ಸಬಲೀಕರಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ಸೇರಿದಂತೆ ಯುವಕರ ಶ್ರೇಯೋಭಿವೃದ್ದಿಗೆ ಸಂಬಂಧಿಸಿದ ಹಲವಾರು ಯುವಕರ ಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒತ್ತಾಯಿಸಿ ರಾಷ್ಟ್ರೀಯ ಯುವ ಸಲಹಾ ಸಮಿತಿ ಪದಾಧಿಕಾರಿಗಳ ನಿಯೋಗ ಕೇಂದ್ರ ಯುವ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ನವದೆಹಲಿಯಲ್ಲಿರುವ ಶ್ರಮ ಶಕ್ತಿ ಭವನದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.ಯುವಕರ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಮಹತ್ವದ ವಿಷಯಗಳನ್ನು ಇದೇ ಸಂದರ್ಭದಲ್ಲಿ ಚರ್ಚಿಸಲಾಯಿತು.ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರ ಫೆಡರೇಶನ್ ಅಧ್ಯಕ್ಷ ಡಾ.ಜಾವೀದ ಜಮಾದಾರ ನಿಯೋಗದ ನೇತೃತ್ವ ವಹಿಸಿದ್ದರು.ಪ್ರಶಸ್ತಿ ಪುರಸ್ಕೃತರು ತಾವು ಜಿಲ್ಲೆ ಮತ್ತು ರಾಜ್ಯಗಳಲ್ಲಿ ಸ್ವಯಂಪ್ರೇರಿತವಾಗಿ ಅನುಷ್ಠಾನಗೊಳಿಸುತ್ತಿರುವ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ವಿವರಿಸಿದರು. ಈ ಉಪಕ್ರಮಗಳು ಸರ್ಕಾರದ ಯೋಜನೆಗಳನ್ನು ಉತ್ತೇಜಿಸುವಲ್ಲಿ ಮತ್ತು ಜಾಗೃತಿ ಮೂಡಿಸುವಲ್ಲಿ, ವಿಶೇಷವಾಗಿ ಗ್ರಾಮೀಣ ಜನರಲ್ಲಿ ರಾಷ್ಟ್ರದ ಅಭಿವೃದ್ಧಿಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಸುರಿದ ಭಾರಿ ಮಳೆಯಿಂದ ಮನೆಗಳು ಬಿದ್ದು, ಹಾನಿಗೊಳಗಾದ ಪ್ರದೇಶಗಳಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಶನಿವಾರ ಭೇಟಿ ನೀಡಿ, ವೈಯಕ್ತಿಕವಾಗಿ ಪರಿಹಾರ ನೀಡಿದಲ್ಲದೆ, ಸ್ಲಂ ಬೋರ್ಡದಿಂದ ಆದಷ್ಟು ಶೀಘ್ರವಾಗಿ ಪ್ರತಿಯೊಬ್ಬರಿಗೂ ಮನೆಗಳನ್ನು ನಿರ್ಮಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಮೊದಲಿಗೆ ವಾರ್ಡ ನಂ.೨೧ ರಲ್ಲಿ ಬರುವ ಇಬ್ರಾಹಿಂಪುರದ ನೀಲವ್ವ ಭಜಂತ್ರಿ, ಲಲಿತಾ ಮುತ್ತಗಿ ಹಾಗೂ ಶಶಿಕಾಂತ ಹೊಸಮನಿ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಈ ಪ್ರದೇಶದಲ್ಲಿ ಒಟ್ಟು ೧೨ ಮನೆಗಳು ಬಿದ್ದಿವೆ. ಈಗಾಗಲೇ ಈ ಪ್ರದೇಶ ಸ್ಲಂ ಘೋಷಣೆಯಾಗಿದ್ದು, ತಾವು ಪಾವತಿಸಬೇಕಾದ ವಂತಿಗೆ ಹಣದ ಪೈಕಿ ವೈಯಕ್ತಿಕವಾಗಿ ಪ್ರತಿಯೊಬ್ಬರಿಗೂ ತಲಾ ರೂ.೧೦ ಸಾವಿರ ಪಾವತಿಸುವುದಾಗಿ ಭರವಸೆ ನೀಡಿದರು.ನಂತರ ವಾರ್ಡ ನಂ.೩೨ರ ಜೋರಾಪುರಪೇಟ ರಾಘವೇಂದ್ರ ಮಠದ ಹತ್ತಿರ ಹಾಗೂ ಶಾಪೇಟಿ ಓಣಿಯಲ್ಲಿ ಚಿದಂಬರ ಜೋಶಿ, ಮಾರುತಿ ಶಂಕರ ಶಿಂಧೆ, ಸುಶೀಲಾಬಾಯಿ ಬಸಪ್ಪ ಶಾಪೇಟಿ ಅವರ ಮನೆಗಳಿಗೆ ಹಾಗೂ ಭಜಂತ್ರಿ ಗಲ್ಲಿಯ ಮೋಸೋಬಾ ದೇವಸ್ಥಾನಕ್ಕೆ, ಭೇಟಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನ ಕಗ್ಗೋಡ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಸೆ.೨೮ರಂದು ಶನಿವಾರ ವಿಶ್ವ ರೇಬೀಸ್ ದಿನಾಚರಣೆ ಆಚರಿಸಲಾಯಿತು.ಈ ವೇಳೆ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ. ಬಿ.ಎಸ್.ಕನಮಡಿ ಮಾತನಾಡಿ, ನಾಯಿಯು ಸ್ನೇಹಮಯಿ ಮತ್ತು ಆಜ್ಞಾಪಾಲಕ ಪ್ರಾಣಿಯಾಗಿದ್ದರೂ ಸಹ ಅದಕ್ಕೆ ರೇಬೀಸ್ ರೋಗ ತಗುಲಿದರೆ ಅದರಿಂದ ಮಾನವನ ಜೀವಕ್ಕೆ ಅಪಾಯವಿದೆ. ಕಾರಣ ನಾಯಿ ಸಾಕುವವರು ಮತ್ತು ಸಾರ್ವಜನಿಕರು ಈ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.ಈ ವರ್ಷ ಇಲಾಖೆ ವತಿಯಿಂದ ಗ್ರಾಮೀಣ ಪ್ರದೇಶದ ಪ್ರತಿ ಹಳ್ಳಿಗಳಲ್ಲಿ ನಾಯಿಗಳಿಗೆ ಉಚಿತವಾಗಿ ರೇಬೀಸ್ ಲಸಿಕೆ ಹಾಕಲಾಗಿದೆ. ಅಲ್ಲದೇ ಶಾಲಾ ಮಕ್ಕಳಿಗೆ ರೇಬೀಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದು ಡಾ.ಕನಮಡಿ ವಿವರಿಸಿದರು.ಕುಮಟಗಿ ಗ್ರಾಪಂ ಅಧ್ಯಕ್ಷ ರಮೇಶ ಸಜ್ಜನ, ಹಿರಿಯ ಪಶುವೈದ್ಯಾಧಿಕಾರಿ ಡಾ.ಬಾಳಾಸಾಹೇಬ ಬಂಡಿ ಹಾಗೂ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರಿದ್ದರು.ಈ ಸಂದರ್ಭದಲ್ಲಿ ಸುಮಾರು ೩೫ ನಾಯಿಗಳಿಗೆ ಉಚಿತವಾಗಿ ರೇಬೀಸ್ ಲಸಿಕೆ ಹಾಕಲಾಯಿತು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾನತಾ ಚಳುವಳಿಯ ಬಹುಮುಖ್ಯ ಭಾಗವಾಗಿ ಸಮಾಜದಲ್ಲಿ ವೈಚಾರಿಕ ಜಾಗೃತಿ ಮೂಡಿಸುವಲ್ಲಿ ಜನಪರ ಗಾಯಕರು, ಹೋರಾಟದ ಹಾಡುಗಾರರು ಬಹುದೊಡ್ಡ ಕೆಲಸ ಮಾಡುತಿದ್ದಾರೆ ಎಂದು ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ.ಭೀಮಪ್ಪ ಎ. ಹೇಳಿದರು.ಇಲ್ಲಿನ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಮೇ ಸಾಹಿತ್ಯ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಹೋರಾಟ ಹಾಡುಗಳ ತರಬೇತಿ ಶಿಬಿರವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಮೂಢನಂಬಿಕೆಗೆ ಬಲಿಯಾಗಿ ಶೋಷಣೆಗೆ ಒಳಗಾಗುತ್ತಿರುವ ಬಹುಸಂಖ್ಯಾತ ಬಡವರು ಮತ್ತು ಕೆಳವರ್ಗದ ಜನರನ್ನು ಶೋಷಣೆಯಿಂದ ಮುಕ್ತಗೊಳಿಸುವ ಜವಾಬ್ದಾರಿ ಜನಪರ ಚಳವಳಿಗಾರರ ಮೇಲಿದೆ. ಆ ನಿಟ್ಟಿನಲ್ಲಿ ಜನಪರ ಗಾಯಕರು ಮತ್ತಷ್ಟು ಕೆಲಸ ಮಾಡಬೇಕು ಎಂದು ಹೇಳಿದರು.ಬಸವಧರ್ಮ ಚಿಂತಕ ಡಾ. ಜೆ.ಎಸ್. ಪಾಟೀಲ್ ಮಾತನಾಡಿ, ಬುದ್ಧ-ಬಸವ-ಅಂಬೇಡ್ಕರ್ ಅವರು ಸಮಾನತೆಗಾಗಿ ಸಂಘರ್ಷ ಮಾಡಿದ್ದಾರೆ. ಸಂವಿಧಾನ ಜಾರಿಯಾಗಿ ೭೫ ವರ್ಷಗಳ ನಂತರವೂ ಲಿಂಗ ತಾರತಮ್ಯ, ಅಸ್ಪೃಶ್ಯತೆ ಆಚರಣೆ ಅಬಾಧಿತವಾಗಿ ನಡೆದಿದೆ. ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಶೋಷಣೆಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಪರ ಹೋರಾಟಗಾರರು, ಹಾಡುಗಾರರು ಹೆಚ್ಚು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಡಾವಣೆ ಸುಕೂನ್ ಹಾಗೂ sancity ಬಡಾವಣೆಯಲ್ಲಿ ಶನಿವಾರ ಅಪ್ರತಿಮ ರಾಷ್ಟ್ರಪುರುಷ, ಸ್ವತಂತ್ರ ಹೋರಾಟಗಾರ, ಶಹೀದ್ ಭಗತ್ ಸಿಂಗ್ ಅವರ ಜನ್ಮದಿನ ಆಚರಿಸಲಾಯಿತು.ಈ ಸಂದರ್ಭದಲ್ಲಿ ಶರಣು ಮಸೂತಿ, ದಯಾನಂದ ಕೇಲೂರ್, ವಿಜಯಕುಮಾರ, ರಾಘವ ಅಣ್ಣಿಗೇರಿ, ರಾಜಶೇಖರ್ ಕವಲಗಿ, ರಾಜು ಚವಾನ, ಅಶೋಕ್ ಮನಳ್ಳಿ, ಶೆಟ್ಟಿ, ಬಸು ಬೈಚಬಾಳ, ಪ್ರವೀಣ್ ಕೂಡಗಿ, ಪ್ರಕಾಶ್ ಸಿದ್ದಾಪುರ, ಸಿದ್ದು ಕುಂಬಾರ್, ಸಿ ವಿ ಪಾಟೀಲ್, ಹಾಗೂ ಅನೇಕ ಹಿರಿಯರು ಉಪಸ್ಥಿತರಿದ್ದರು.

Read More

ನೀಟ್’ ಸೀಟು ಪಡೆಯುವಲ್ಲಿ ಶತಕ ದಾಟಿದ ಎಕ್ಸಲೆಂಟ್ ವಿಜ್ಞಾನ ಪ.ಪೂ ಕಾಲೇಜ್ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗುಣಮಟ್ಟದ ಶಿಕ್ಷಣವನ್ನು ನೀಡಿದರೆ ಅತ್ಯುತ್ತಮವಾದ ಫಲಿತಾಂಶ ದೊರೆಯುತ್ತದೆ. ಅತ್ಯುತ್ತಮ ಫಲಿತಾಂಶವು ಸಮಾಜದ ವ್ಯವಸ್ಥೆಯನ್ನು ಮತ್ತಷ್ಟು ಅತ್ಯುತ್ತಮಗೊಳಿಸುವುದಕ್ಕೆ ಸಾಧ್ಯವಾಗಿಸುತ್ತದೆ. ಆ ನಿಟ್ಟಿನಲ್ಲಿ ಸದಾ ಉತ್ತಮ ಫಲಿತಾಂಶವನ್ನು ನೀಡುವುದರ ಮೂಲಕವೇ ಜನಮಾನಸದಲ್ಲಿ ಉಳಿದಿರುವ ಎಕ್ಸಲೆಂಟ್ ವಿಜ್ಞಾನ ಪದವಿಪೂರ್ವ ಕಾಲೇಜು ಎನ್‌ಇಇಟಿ (ನೀಟ್) ಪರೀಕ್ಷೆಯಲ್ಲಿ ತನ್ನ ಸಾಧನೆಯ ಪಥವನ್ನು ವಿಸ್ತಿರಿಸಿಕೊಂಡಿದ್ದು, ೨೦೨೪ ನೇ ಸಾಲಿನಲ್ಲಿ ೧೦೯ ವೈದ್ಯಕೀಯ ಸೀಟುಗಳನ್ನು ಪಡೆದುಕೊಳ್ಳುವ ಮೂಲಕ ಮತ್ತೊಮ್ಮೆ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ ಒದಗಿಸಿದೆ ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ತಿಳಿಸಿದರು.ನೀಟ್ ಪರೀಕ್ಷೆಯ ಸೀಟು ಹಂಚಿಕೆಯ ಕೊನೆಯ ಸುತ್ತಿನ ಫಲಿತಾಂಶ ಪ್ರಕಟವಾದ ಬಳಿಕ ಮಾತನಾಡಿದ ಅವರು, ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಪ್ರಾರಂಭಗೊಂಡಾಗಿನಿಂದ ಪ್ರಗತಿ ಪಥದತ್ತ ಹೆಜ್ಜೆ ಹಾಕಿದೆ. ಅದರಲ್ಲೂ ವೈದ್ಯಕೀಯ ಸೀಟುಗಳನ್ನು ಪಡೆದುಕೊಳ್ಳುವಲ್ಲಿ ನಮ್ಮ ಸಂಸ್ಥೆ ಒಂದು ಹೆಜ್ಜೆ ಮುಂದಿಡುತ್ತಿದೆ. ಈ ಕಾರಣದಿಂದಾಗಿ ಪ್ರತಿ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ನೂರಾರು ವಿಕಲಚೇತನರಿಗೆ ಸಂಗೀತ, ಪುರಾಣ-ಪ್ರವಚನ ಕಲೆಗಳನ್ನು ಕಲಿಸಿ ಸ್ವತಂತ್ರವಾಗಿ ಬದುಕು ಸಾಗಿಸಲು ಆತ್ಮವಿಶ್ವಾಸ ತುಂಬಿದ್ದ ಗಾನಯೋಗಿ ಪುಟ್ಟರಾಜ ಗವಾಯಿಗಳ ಶರೀರ ಮಾತ್ರ ನಮ್ಮನ್ನ ಅಗಲಿದೆ. ಆದರೆ ಅವರ ಆದರ್ಶ ತತ್ವಗಳು ಸದಾ ಜೀವಂತವಾಗಿವೆ ಎಂದು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.ಪಟ್ಟಣದ ಪುರಸಭೆ ಎದುರಿಗೆ ಪುಟ್ಟರಾಜ ಗವಾಯಿಗಳ ಕನ್ನಡ ಸಾಂಸ್ಕೃತಿಕ ಕಲಾ ಬಳಗ, ವಿಕಲಚೇತನರ ಕಲಾಬಳಗ, ಡಾ.ಪುನೀತ್ ರಾಜಕುಮಾರ ಮೆಲೋಡೀಸ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಂಡಿತ ಪುಟ್ಟರಾಜ ಗವಾಯಿಗಳ ೧೪ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಕ್ತರ ಸಂತಸದಲ್ಲಿ ತೃಪ್ತಿ ಕಾಣುತ್ತಿದ್ದ ಗವಾಯಿಗಳು ಸಂಗೀತ, ಸಾಹಿತ್ಯ, ಆಧ್ಯಾತ್ಮದಲ್ಲಿ ಅವರು ತೋರಿದ ಶ್ರದ್ಧೆ ಅನನ್ಯವಾದದ್ದು. ಕಲಾವಿದರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವಂತಾಗಬೇಕು ಎಂದರು.ಸಾನಿಧ್ಯ ವಹಿಸಿದ್ದ ಶರಣ ಸೋಮನಾಳದ ಮಹಾದೇವ ಶಾಸ್ತ್ರಿಗಳು ಆಶೀರ್ವಚನ ನೀಡಿದರು.ಸಮಾಜ ಸೇವಕ ಸಿಬಿ ಅಸ್ಕಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಮಾತನಾಡಿದರು.…

Read More

ಇವಣಗಿ ಗ್ರಾಮದಲ್ಲಿ ತಾಲೂಕು ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ಆರಾಧ್ಯದೈವ ಲಕ್ಕಮ್ಮದೇವಿ ದೇವಸ್ಥಾನ ಆವರಣದಲ್ಲಿ ಗುರುವಾರ ಸಂಜೆ ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆ, ಸಿದ್ಧತೆ ಕುರಿತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ, ಗ್ರಾಮದ ಮುಖಂಡರ, ಗ್ರಾಮಸ್ಥರ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವೆಂಬರ್ ೧೩ ರಂದು ನಡೆಸಲು ತೀರ್ಮಾನಿಸಲಾಯಿತು.ಸಭೆಯ ಉದ್ದೇಶಿಸಿ ಗ್ರಾಮದ ವಕೀಲ ಚಂದ್ರಶೇಖರ ಸುಭಾನಪ್ಪನವರ ಮಾತನಾಡಿ, ಬರುವ ನವೆಂಬರ್ ೧೩ ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ನಮ್ಮ ಗ್ರಾಮದಲ್ಲಿ ನಡೆಯುತ್ತಿರುವದು ಈ ಭಾಗದ ಜನರಿಗೆ ತುಂಬಾ ಸಂತಸ ಉಂಟು ಮಾಡಿದೆ. ಈ ಸಮ್ಮೇಳನದ ಯಶಸ್ವಿಗೆ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸಹಕಾರ ನೀಡುತ್ತಾರೆ. ಕನ್ನಡ ಭುವನೇಶ್ವರಿ ತೇರು ನಮ್ಮ ಗ್ರಾಮದಲ್ಲಿ ಎಳೆದರೆ ಅದು ನಮ್ಮ ಗ್ರಾಮದ ಆರಾಧ್ಯದೈವ ಲಕ್ಕಮ್ಮದೇವಿಯ ತೇರು ಎಳೆದಂತೆ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ…

Read More