Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಮೀಣ ಮಟ್ಟದಲ್ಲಿ ಮಧ್ಯಸ್ಥಿಕೆ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು

ರೋಣಿಹಾಳ 110 ಕೆವಿ ಮಾರ್ಗ ನಿರ್ವಹಣೆ: ಇಂದು ವಿದ್ಯುತ್ ವ್ಯತ್ಯಯ

ಹೊಸ ತಲೆಮಾರಿನ ಕ್ರಾಂತಿಕಾರಕ ಸಾಹಿತಿ ಪಿ.ಲಂಕೇಶ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅರಕೇರಿ ಅಮೋಘಸಿದ್ದೇಶ್ವರ ಜಾತ್ರೆ:ಭಂಡಾರದಲ್ಲಿ ಮಿಂದೆದ್ದ ಭಕ್ತರು
(ರಾಜ್ಯ ) ಜಿಲ್ಲೆ

ಅರಕೇರಿ ಅಮೋಘಸಿದ್ದೇಶ್ವರ ಜಾತ್ರೆ:ಭಂಡಾರದಲ್ಲಿ ಮಿಂದೆದ್ದ ಭಕ್ತರು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವರದಿ: ಸಿದ್ರಾಮ ಮಾಳಿ
ವಿಜಯಪುರ: ಉತ್ತರ ಕರ್ನಾಟಕದ ಜಾತ್ರೆಗಳು ವಿಶೇಷತೆಯಿಂದ ಕೂಡಿರುತ್ತವೆ. ಅದರಲ್ಲಿ ಛಟ್ಟಿ ಅಮಾವಾಸ್ಯೆಯ ಸಂದರ್ಭದಲ್ಲಿ ನಡೆಯುವ ವಿಜಯಪುರ ಜಿಲ್ಲೆಯ ಅರಕೇರಿ ಜಾಲಗೇರಿ ಭಾಗದ ಮುಮ್ಮಟ್ಟಿಗುಡ್ಡದ ಅಮೋಘಸಿದ್ದೇಶ್ವರನ ಜಾತ್ರೆಗೆ ಉತ್ತರ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟç ಸೇರಿದಂತೆ ವಿವಿಧೆಡೆಯಿಂದ ನೂರಾರ ಪಲ್ಲಕ್ಕಿಗಳ ಭೇಟಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಿತು. ಈ ವೇಳೆ ಭಕ್ತರು ಕ್ವಿಂಟಾಲ್‌ಗಟ್ಟಲೇ ಭಂಡಾರ ಪಲ್ಲಕ್ಕಿಗಳ ಮೇಲೆ ಎರಚಿದ್ದರಿಂದ ಇಡೀ ಅಮೋಘ ಸಿದ್ದೇಶ್ವರ ದೇವಾಸ್ಥಾನದ ೧೦೦ ಎಕರೆ ಪ್ರಾಂಗಣ ಭಂಡಾರಮಯವಾಗಿತ್ತು. ಈ ಜಾತ್ರೆಯನ್ನು ಭಂಡಾರದೊಡೆಯನ ಜಾತ್ರೆ ಎಂದೇ ಕರೆಯಲಾಗುತ್ತದೆ.
ಕೈಲಾಸವಾಸಿಯಾಗಿದ್ದ ಅಮೋಘ ಸಿದ್ದೇಶ್ವರ, ಶಿವ-ಪಾರ್ವತಿಯರ ಸೇವಕರಾಗಿದ್ದರು. ಅಮೋಘ ಸಿದ್ಧೇಶ್ವರನ ಸೇವೆಗೆ ಶಿವ-ಪಾರ್ವತಿಯರು ಮೆಚ್ಚುಗೆ ವ್ಯಕ್ತಪಡಿಸಿ, ವಿಶೇಷ ಭಕ್ತಿ ಕರುಣಿಸಿ ಭೂಲೋಕಕ್ಕೆ ಬಂದ ಅಮೋಘ ಸಿದ್ದೇಶ್ವರ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ್ದರಂತೆ.
ಸಾವಿರಾರು ವರ್ಷಗಳ ಹಿಂದೆ ಅರಕೇರಿ ಜಾಲಗೇರಿ ಗ್ರಾಮದ ಮಧ್ಯೆದ ಮುಮ್ಮಟ್ಟಿಗುಡ್ಡದಲ್ಲಿ ನೆಲೆಸಿರುವ ಅಮೋಘ ಸಿದ್ದೇಶ್ವರ ಹಲವು ಪವಾಡಗಳ ಮೂಲಕ ಭಕ್ತರ ಉದ್ಧಾರ ಮಾಡುತ್ತಿದ್ದಾರೆ. ಭಕ್ತರ ಕಷ್ಟ ಪರಿಹರಿಸೋ ಪವಾಡ ಪುರುಷರಾಗಿದ್ದಾರೆ ಎಂದು ಹೇಳಲಾಗುತ್ತದೆ. ಪ್ರತಿ ವರ್ಷ ಮೂರು ದಿನಗಳ ಕಾಲ ಛಟ್ಟಿ ಅಮಾವಾಸ್ಯೆಯಂದು ಅಮೋಘ ಸಿದ್ಧೇಶ್ವರ ಜಾತ್ರೆ ನಡೆಯುತ್ತದೆ. ಇಲ್ಲಿಯ ಮತ್ತೊಂದು ವಿಶೇಷತೆ ಎಂದರೆ ಜಾತ್ರೆಗೆಂದು ವಿವಿಧ ಗ್ರಾಮಗಳಿಂದ ಭಕ್ತರು ಪಲ್ಲಕ್ಕಿಗಳನ್ನು ಹೊತ್ತುತರುತ್ತಾರೆ.
ಏಕಕಾಲದಲ್ಲಿ ಲಕ್ಷಾಂತರ ಜನರು ಹಾಗೂ ಇನ್ನೂರಕ್ಕೂ ಹೆಚ್ಚು ಪಲ್ಲಕ್ಕಿಗಳು ಒಂದೆಡೆ ಸೇರುವ ಏಕೈಕ ಜಾತ್ರೆ ಇದಾಗಿದೆ. ಜಾತ್ರೆಗೆ ಆಗಮಿಸೋ ಪಲ್ಲಕ್ಕಿಗಳು ಭಂಡಾರಮಯವಾಗಿ ಭಕ್ತರ ಹರ್ಷೋದ್ಗಾರದ ಮಧ್ಯೆ ಅಮೋಘ ಸಿದ್ದೇಶ್ವರ ಗದ್ದುಗೆಯ ದರ್ಶನ ಮಾಡಿಸಲಾಗುತ್ತದೆ. ಬಳಿಕ ದೇಗುಲದ ಮುಂಭಾಗದಲ್ಲಿ ಪಲ್ಲಕ್ಕಿಗಳ ನೃತ್ಯ ನೆರವೇರಿಸಲಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಲಕ್ಷಾಂತರ ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ಇಡೀ ಜಾತ್ರೆ ಭಂಡಾರಮಯವಾಗಿರುತ್ತದೆ. ಹರಕೆ ಹೊತ್ತ ಭಕ್ತರು ಪಲ್ಲಕ್ಕಿಗಳಿಗೆ ಭಂಡಾರವನ್ನು ಎರಚುತ್ತಾರೆ. ಭಂಡಾರ ಜಾತ್ರೆ, ಬಂಗಾರ ಜಾತ್ರೆ ಎಂದು ಭಕ್ತರು ಮೂರು ದಿನಗಳ ಕಾಲ ಸಂಭ್ರಮದಿಂದ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.
ಮಧ್ಯಾಹ್ನ ೨.೩೦ಕ್ಕೆ ಆರಂಭವಾಗುವ ಪಲ್ಲಕ್ಕಿಗಳ ಉತ್ಸವ ಸಂಜೆ ೭ರವರೆಗೆ ನಡೆಯುತ್ತದೆ. ವೇಳೆ ಅಮೋಘಸಿದ್ದ ಮಹಾರಾಜರ ಬಳಿ ಬೇಡಿಕೊಂಡ ಹರಕೆ ತೀರಿದ ಭಕ್ತರು ಭಂಡಾರ, ಖಾರೀಕ್ ಹಾಗೂ ಕುರಿ ಉಣ್ಣೆಯನ್ನು ನಡರೆದ ನೂರಾರು ಪಲ್ಲಕ್ಕಿಗಳ ಮೇಲೆ ಹಾರಿಸುವುದು ವಾಡಿಕೆ.
ಯಾವುದೇ ಜಾತಿ ಮತ, ಪಂಥ ಭೇದವಿಲ್ಲದೇ ಎಲ್ಲರೂ ಈ ಜಾತ್ರೆಯಲಾಗುವುದು ವಿಶೇಷ. ಈ ವರ್ಷದ ಗುಡ್ಡಾಪುರದ ದಾನಮ್ಮದೇವಿ ಜಾತ್ರೆ ಮತ್ತು ಅರಕೇರಿಯಲ್ಲಿನ ಅಮೋಘಸಿದ್ದೇಶ್ವರನ ಜಾತ್ರೆಗಳನ್ನು ಒಟ್ಟಿಗೆ ಮೂರು ದಿನಗಳ ಕಾಲ ಆಚರಿಸಲಾಗುತ್ತಿದೆ. ಮಹಾರಾಷ್ಟç ಕರ್ನಾಟಕ ಗಡಿಭಾಗದ ಅರಕೇರಿ, ಜಾಲಗೇರಿ ಗ್ರಾಮದ ಅಮೋಘ ಸಿದ್ದೇಶ್ವರ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಮೀಣ ಮಟ್ಟದಲ್ಲಿ ಮಧ್ಯಸ್ಥಿಕೆ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು

ರೋಣಿಹಾಳ 110 ಕೆವಿ ಮಾರ್ಗ ನಿರ್ವಹಣೆ: ಇಂದು ವಿದ್ಯುತ್ ವ್ಯತ್ಯಯ

ಹೊಸ ತಲೆಮಾರಿನ ಕ್ರಾಂತಿಕಾರಕ ಸಾಹಿತಿ ಪಿ.ಲಂಕೇಶ

ಗಡಿ ರಕ್ಷಿಸುತ್ತಿರುವ ಸೈನಿಕರು ನಿಜ ಹೀರೋಗಳು :ಹಂಚಲಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಮೀಣ ಮಟ್ಟದಲ್ಲಿ ಮಧ್ಯಸ್ಥಿಕೆ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು
    In (ರಾಜ್ಯ ) ಜಿಲ್ಲೆ
  • ರೋಣಿಹಾಳ 110 ಕೆವಿ ಮಾರ್ಗ ನಿರ್ವಹಣೆ: ಇಂದು ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಹೊಸ ತಲೆಮಾರಿನ ಕ್ರಾಂತಿಕಾರಕ ಸಾಹಿತಿ ಪಿ.ಲಂಕೇಶ
    In ವಿಶೇಷ ಲೇಖನ
  • ಗಡಿ ರಕ್ಷಿಸುತ್ತಿರುವ ಸೈನಿಕರು ನಿಜ ಹೀರೋಗಳು :ಹಂಚಲಿ
    In (ರಾಜ್ಯ ) ಜಿಲ್ಲೆ
  • ವಿಧಾನಸಭೆಯಲ್ಲಿ ಡಿಸಿಎಂ ಡಿಕೆಶಿ ವರ್ತನೆ ಸರಿಯಲ್ಲ :ಯತ್ನಾಳ
    In (ರಾಜ್ಯ ) ಜಿಲ್ಲೆ
  • ಒಲವಿನ ಪೂಜೆಯಲಿ ಒಂದಾಗೋಣ
    In ವಿಶೇಷ ಲೇಖನ
  • ಮಾ.29ರಿಂದ ಕೊಲ್ಹಾರದಲ್ಲಿ ವಿಶೇಷ ಪ್ರಶಿಕ್ಷಣ ವರ್ಗ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 28, 2026
    In ದಿನಪತ್ರಿಕೆ
  • ಮಕ್ಕಳ ಬದುಕಿನಲ್ಲಿ ಪಾಲಕರ ಆಕರ್ಷಣೆ
    In ವಿಶೇಷ ಲೇಖನ
  • ಮಹಿಳೆಯರಿಂದ ನಂಜಿಕೆ ತಿನಿಸು ತಯಾರಿಕೆ ಈಗ ಬಲು ಜೋರು
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.