ಉದಯರಶ್ಮಿ ದಿನಪತ್ರಿಕೆ.
ದೇವರಹಿಪ್ಪರಗಿ: ಟಿಪ್ಪರ್ ಬೈಕ್‌ಗೆ ಗುದ್ದಿ ಸವಾರನ ತಲೆಯ ಮೇಲೆ ಹಾಯ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಹಿಂಬದಿ ಸವಾರ ಗಾಯಗೊಂಡ ಘಟನೆ ಪಟ್ಟಣದಲ್ಲಿ ಭಾನುವಾರ ಜರುಗಿದೆ.
ಪಟ್ಟಣದ ವಿಜಯಪುರ-ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ ೫೦ ರ ಮೇಲೆ ಭವಾನಿ ಭಾಂಡೆ ಅಂಗಡಿ ಹತ್ತಿರ ಈ ಘಟನೆ ಜರುಗಿದೆ. ಘಟನೆಯಲ್ಲಿ ಆಲಮೇಲ ತಾಲ್ಲೂಕಿನ ಕಕ್ಕಳಮೇಲಿ ಗ್ರಾಮದ ಸಂಗಮೇಶ ಸಾಹೇಬಣ್ಣ ಮಾಲಿಪಾಟೀಲ(೨೮) ಎಂಬ ವ್ಯಕ್ತಿ ಬೈಕ್ ಸವಾರನಾಗಿದ್ದು, ಟಿಪ್ಪರ ಗಾಲಿಯಡಿ ಸಿಕ್ಕು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ಧರೆಪ್ಪ ಜಗದೇವಪ್ಪ ಮಾಲಿಪಾಟೀಲ ಗಾಯಗೊಂಡಿದ್ದಾನೆ.
ಘಟನಾ ಸ್ಥಳಕ್ಕೆ ದೇವರಹಿಪ್ಪರಗಿ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
