ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶ್ರೀ ಕ್ಷೇತ್ರ ಕೆಂಗೆರಿ ಮುರಗೋಡದಲ್ಲಿ ಶ್ರೀ ಶಿವ ಚಿದಂಬರ ಮಹಾಸ್ವಾಮೀಗಳ ೨೬೬ ನೇ ಅವತಾರ ಜಯಂತಿ ಶೈವಾಗಮೋಕ್ಷ ಮಹೋತ್ಸವ ಡಿಸೆಂಬರ್‌೦೭.೧೨.೨೦೨೪ ರಂದು ನಡೆಯಲಿದ್ದು, ಈ ಉತ್ಸವದಲ್ಲಿ ಪಾಲ್ಗೊಳ್ಳಲು ಬಸವ ನಾಡು ವಿಜಯಪುರದಿಂದ ೨೬ ನೇ ವರ್ಷದ ಭಕ್ತರು ಪಾದಯಾತ್ರೆ ಬೆಳೆಸಿದರು.
ಪ್ರತಿವರ್ಷ ಈ ಮಹೋತ್ವಸ ನಡೆಯುತ್ತಿದೆ. ಇದರ ಅಂಗವಾಗಿ ಶ್ರೀ ಚಿದಂಬರೇಶ್ವರ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ವಿಜಯಪುರ ಚಿದಂಬರ ದೇವಸ್ಥಾನದಿಂದ ಶ್ರೀ ಕ್ಷೇತ್ರ ಮುರಗೋಡಕ್ಕೆ ಪಾದಯಾತ್ರೆಯಲ್ಲಿ ಭಕ್ತರು ತೆರಳಿದರು. ವಿಜಯಪುರ ನಗರದಿಂದ ಹಲಗಣಿ, ಮುದೋಳ, ಯರಗಟ್ಟಿ, ಹಲಕಿ ಕ್ರಾಸ್ ಮೂಲಕ ದಿನಾಂಕ ೬.೧೨.೨೦೨೪ ರಂದು ಈ ಯಾತ್ರಿಗಳು ಶ್ರೀ ಕ್ಷೇತ್ರ ತಲುಪಲಿದ್ದಾರೆ.
ಈ ಪಾದಯಾತ್ರೆಯಲ್ಲಿ ಸಂಚಾಲಕ ರಾಘವೇಂದ್ರ ಜೋಶಿ, ಸಹ ಸಂಚಾಲಕ ಸುಧೀಂದ್ರ ಕುಲಕರ್ಣಿ, ವೆಂಕಟೇಶ ಜೋಶಿ, ಸಚಿನ ಆಚಾರ್ಯ, ಕೃಷ್ಣಾ ಜೋಶಿ, ಶೇಷಗಿರಿ, ಚಿದಂಬರ ಜೋಶಿ ರೊಳ್ಳಿ, ವೆಂಕಟೇಶ ಜೋಶಿ ನಂದವಾಡಗಿ, ವಿಜಯ ಜೋಶಿ, ಸಂಜು ಕುಲಕರ್ಣಿ ಬರಡೋಲ, ವೆಂಕಟೇಶ ಕುಲಕರ್ಣಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಚಿದಂಬರ ಸೇವಾ ಸಮಿತಿಯ ಅಧ್ಯಕ್ಷರಾದ ಲಕ್ಮೀಕಾಂತ ಕುಲಕರ್ಣಿ, ರಾಘವೇಂದ್ರ ಜೋಶಿ ಸಚಿನ್ ಜೋಶಿ ವಿಜಯಕುಮಾರ್ ಹುಕ್ಕೇರಿ ಕೃಷ್ಣ ಜೋಶಿ ಸುಧೀರ್ ಕುಲಕರ್ಣಿ ನಾಗರಾಜ್ ಜೋಶಿ ಸಂಜು ಕುಲಕರ್ಣಿ ವೆಂಕಟೇಶ್ ಜೋಶಿ ಲಕ್ಷ್ಮಿಕಾಂತ್ ಕುಲಕರ್ಣಿ ದತ್ತಾತ್ರೇ ಜೋಶಿ ಪ್ರದೀಪ್ ಕುಲಕರ್ಣಿ ಚಿದಂಬರ ಜೋಶಿ ರಾಘವೇಂದ್ರ ಕುಲಕರ್ಣಿ ಕಲ್ಪನಾ ಜೋಶಿ ಜಯಶ್ರೀ ಜೋಶಿ ಜ್ಯೋತಿ ಕುಲಕರ್ಣಿ ಲಕ್ಷ್ಮಿ ಜೋಶಿ ರಾಣಿ ಹುನಗುಂದ ಆರತಿ ಕುಲಕರ್ಣಿ ಅರ್ಚನಾ ಜೋಶಿ ಶೇಷಗಿರಿ ಕುಲಕರ್ಣಿ ಬಿಂದು ರಾವ್ ಪವನ್ ಜೋಶಿ, ವೇದಮೂರ್ತಿ ಶಂಕರ್ ಭಟ್ ಅಗ್ನಿಹೋತ್ರಿ ಚಿದಂಬರ್ ಪಾಟೀಲ್ ರಾಘವೇಂದ್ರ ಕುಲಕರ್ಣಿ (ಸದಬ) ಇದ್ದರು.

