ಉದಯರಶ್ಮಿ ದಿನಪತ್ರಿಕೆ
ಇಂಡಿ: ಸಮಾನ ಆಸಕ್ತಿ ಸಹಕಾರ ಮನೋಭಾವಗಳು ಸಂಘ ಸ್ಥಾಪನೆಯ ಪ್ರಧಾನ ಅಂಶ. ಇದರ ಕಾರ್ಯ ನಿರ್ವಹಣೆಯಲ್ಲಿ ನಿರ್ದೀಷ್ಟ ಪಾತ್ರಗಳ ಹಾಗೂ ಸ್ಥಾನಮಾನಗಳ ಹಂಚಿಕೆಯ ಮೂಲಕ ಮಾಡುವ ಪ್ರಕ್ರಿಯೆ ಎಂದು ಭೀಮ ಸರಕಾರ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮತ್ತು ರಾಜ್ಯಾಧ್ಯಕ್ಷ ಪರಸುರಾಮ ಚಲವಾದಿ ಹೇಳಿದರು.
ಪಟ್ಟಣದಲ್ಲಿ ನಡೆದ ಭೀಮ ಸರಕಾರ ಸಂಘಟನೆಯ ಪದಾಧಿಕಾರಿಗಳ ಆಯ್ಕೆಯ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಬಾಬಾಸಾಹೇಬ ಅಂಬೇಡಕರರವರು ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮೂಲಕ ಜನರಿಗೆ ಪ್ರೇರಣೆ ನೀಡಿದರು. ಸಂವಿಧಾನ ನೀಡಿ ಬಡವರನ್ನು ಮೇಲೆ ಎತ್ತುವ ಕಾರ್ಯ ಮಾಡಿದರು. ಅವರ ಮಾರ್ಗದಲ್ಲಿ ನಾವೆಲ್ಲರೂ ಸಾಗಿ ಅವರ ಕನಸು ನನಸಾಗಬೇಕಿದೆ ಎಂದರು.
ಪ್ರೊ ಎಂ.ಆರ್.ದೊಡಮನಿ ಮಾತನಾಡಿ ಗ್ರಾಮ ಮತ್ತು ತಾಲೂಕಿನಲ್ಲಿ ಇರುವ ಸಮಸ್ಯೆಗೆ ಸ್ಪಂದಿಸಬೇಕಾಗಿದೆ. ಸಮಾಜ ಸುಧಾರಣೆ ಮತ್ತು ಸರಕಾರದಿಂದ ಬರುವ ಸವಲತ್ತುಗಳನ್ನು ಬಡವರಿಗೆ ತಲುಪಿಸುವ ಕಾರ್ಯ ಮಾಡಬೇಕಾಗಿದೆ. ಅಂಬೇಡಕರರವರು ತಮ್ಮ ಜೀವನ ಅನೇಕ ಕಷ್ಟ ಅನುಭವಿಸಿ ಸಂವಿಧಾನ ರಚಿಸಿದ್ದು ಅದರ ಸವಲತ್ತು ಎಲ್ಲರಿಗೂ ತಲುಪಿಸಬೇಕಾಗಿದೆ ಎಂದರು.
ನಗರ ಘಟಕದ ಅಧ್ಯಕ್ಷ ಸೋಮಶೇಖರ ಶಹಾಪುರ ಮಾತನಾಡಿ ಔಪಚಾರಿಕ ಸದಸ್ಯತ್ವದ ಮೂಲಕ ಸಂಘಟನೆ ಗೊಳ್ಳುವದರಿಂದ ಸಂಘಟನೆ ಸ್ವರೂಪ ಪಡೆಯುತ್ತದೆ. ಈ ದಿಶೆಯಲ್ಲಿ ಬಡವರಿಗೆ ಆಗುವ ತೊಂದರೆಗಳಿಗೆ ಸ್ಪಂದಿಸಿ ಶಿಕ್ಷಣಕ್ಕೆ ಮಹತ್ವ ನೀಡಿ ಅಂಬೇಡಕರ ತತ್ವದ ಅಡಿಯಲ್ಲಿ ಎಲ್ಲರೂ ಶಿಕ್ಷಣವಂತರನ್ನಾಗಿ ಮಾಡುವ ಮೂಲಕ ಸಮಾಜ ಜಾಗೃತಿಗೊಳಿಸಬೇಕಾಗಿದೆ ಎಂದರು.
ಶಿಕ್ಷಕ ಎಸ್.ಎಂ.ಬಿರಾದಾರ ಮಾತನಾಡಿದರು.
ಇಂಡಿ ತಾಲೂಕಾ ಭೀಮ ಸರಕಾರ ಸಂಘಟನೆ ಅಧ್ಯಕ್ಷರಾಗಿ ಆನಂದ ಅಗರಖೇಡ, ಉಪಾಧ್ಯಕ್ಷ ನಿಂಗರಾಜ ಭಾವಿಮನಿ, ಪ್ರಧಾನ ಕಾರ್ಯದರ್ಶಿ ಅಶೋಕ ನಾಯ್ಕೋಡಿ, ಸಂಘಟನಾ ಕಾರ್ಯದರ್ಶಿಯಾಗಿ ರಾಹುಲ ಮನಗೂಳಿ, ಖಂಜಾಚಿಯಾಗಿ ಆಕಾಶ ದೊಡಮನಿ, ಗೌರವ ಕಾರ್ಯದರ್ಶಿಯಾಗಿ ಬಸಲಿಂಗಪ್ಪ ಹಳ್ಳದಮನಿ, ಸದಸ್ಯರಾಗಿ ನಾಮದೇವ ಮಾವಿನಹಳ್ಳಿ, ರಾಜಶೇಖರ ಶಿಂಧೆ,ತ್ರಿಶೂಲ ಸಾಗರ, ಶಶಿಕುಮಾರ ಹರಿಜನ,ರಮೇಶ ಹೊಸಮನಿ, ಪ್ರವೀಣ ದೇವಧರ ಆಯ್ಕೆ ಯಾದರು.
ವೇದಿಕೆಯ ಮೇಲೆ ಭೀಮ ಸರಕಾರದ ರಾಜ್ಯ ಕಾರ್ಯದರ್ಶಿ ವಿನಾಯಕ ಸಂಡೂರ, ಶಿವಾನಂದ ಮೂಡಲಗಿ,ಬಿ.ಎಲ್ ಲೋಕುರ, ಎಂ.ವಾಯ್.ಶರ್ಮಾ ಮತ್ತಿತರಿದ್ದರು.

