Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವೃಕ್ಷಥಾನ್ ಹೆರಿಟೇಜ್ ರನ್-2024ಕ್ಕೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದ್ದು, ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಹೆಸರು ನೋಂದಣಿ ಅವಧಿಯನ್ನು ಡಿಸೆಂಬರ್ 7ರ ವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024 ಪ್ರೊಮೊಷನ್ ಗಾಗಿ ಇಂದು ರವಿವಾರ ಬೆಳಿಗ್ಗೆ ಭೂತನಾಳ ಕೆರೆಯ ಹಿಂಭಾಗದಲ್ಲಿ ಕರಾಡದೊಡ್ಡಿ ಬಳಿ ಇರುವ ಮಾನವ ನಿರ್ಮಿತ ಅರಣ್ಯ ಪ್ರದೇಶದಲ್ಲಿ ನಡೆದ 5 ಕಿ. ಮೀ. ಓಟ ನಡೆಯಿತು. ಈ ಓಟಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಹಾಗೂ ಸಚಿವ ಎಂ. ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಅವರೊಂದಿಗೆ ಜಂಟಿಯಾಗಿ ಚಾಲನೆ ನೀಡಿದ ಬಳಿಕ ಟಿ. ಭೂಬಾಲನ್ ಅವರು ಮಾತನಾಡಿದರು.ಈ ಬಾರಿಯ ಓಟಕ್ಕೆ ಈಗಾಗಲೇ ಸಾವಿರಾರು ಹೆಸರು ನೋಂದಾಯಿಸಿದ್ದಾರೆ. ಆದರೆ, ಇನ್ನೂ ಹಲವಾರು ಜನರು ಹೆಸರು ನೋಂದಾಯಿಸಲು ಅವಧಿಯನ್ನು ವಿಸ್ತರಿಸುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರ ಬೇಡಿಕೆಗೆ…
ಉದಯರಶ್ಮಿ ದಿನಪತ್ರಿಕೆ ಚಡಚಣ:ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಬೇಕಾದರೆ ದೃಡ ಸಂಕಲ್ಪ ಮಾಡಬೇಕೆಂದು ಇಸ್ರೋ ವಿಜ್ಞಾನಿ ಸಂಜೀವ ಗೌರ ಹೇಳಿದರು.ಚಡಚಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ವಿಜ್ಞಾನಿಗಳಾಗಬೇಕಾದರೆ ಕಷ್ಟ ಪಟ್ಟು ಓದಬೇಕಾಗುತ್ತದೆ. ಸಂಶೋದನೆ ಎಂಬುವದು ಒಂದರೆಡು ದಿನದಲ್ಲಿ ಆಗುವಂತಹದಲ್ಲ ಅದಕ್ಕೆ ನಿರಂತರ ಅಧ್ಯಯನ ಬೇಕಾಗುತ್ತದೆ. ಇಸ್ರೋ ಸಂಸ್ಥೆಯಲ್ಲಿ ಅನೇಕ ವಿಜ್ಞಾನಿಗಳು ಹಳ್ಳಿಯಿಂದಲೆ ಬಂದವರಾಗಿದ್ದಾರೆ. ಸಾಧನೆ ಮಾಡಲು ದೃಡ ಮನಸ್ಸಿದ್ದರೆ ಸಾಕು ಎಂದು ಹೇಳಿದರು.ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಚಂದ್ರಯಾನ-೩ ರಲ್ಲಿ ದೇಶದ ವಿಜ್ಞಾನಿಗಳು ಮಾಡಿದ ಸಾದನೆಯ ಕುರಿತು ಹೇಳಿದರು. ಇದಲ್ಲದೆ ಬಾಹ್ಯಾಕಾಶ ಕೇಂದ್ರದಲ್ಲಿ ವಿಜ್ಞಾನಿಗಳು ಯಾವ ರೀತಿ ಜೀವನ ನಡೆಸುತ್ತಾರೆ ಅಲ್ಲಿ ಅವರು ಎದುರಿಸುವ ಸಮಸ್ಯೆಗಳ ಕುರಿತು ಸವಿಸ್ಥಾರವಾಗಿ ಹೇಳಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಮನೋಜ ಕಟಗೇರಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಎಸ್.ಎಸ್. ಚೋರಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ವಿ.ಸಿ.ಬಾಡನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಪಾರ್ವತಿ ತಂಬಾಕೆ ಅವರು ಸಲ್ಲಿಸಿದ್ದ “ಆ್ಯನ್ ಅನಾಲಿಟಿಕಲ್ ಸ್ಟಡಿ ಆಫ್ ಸೆಲೆಕ್ಟೆಡ್ ಫಿಜಿಕಲ್, ಫಿಜಿಯೋಲಾಜಿಕಲ್, ಸೈಕಲಾಜಿಕಲ್ ಕಾಂಪೊನೆಂಟ್ಸ್ ಆ್ಯಂಡ್ ಡಿಫರೆಂಟ್ ಲೆವೆಲ್ ಆಫ್ ಪರ್ಫಾರ್ಮೆನ್ಸ್ ಆನ್ ನಾರ್ಥ ಕರ್ನಾಟಕ ಸೈಕ್ಲಿಸ್ಟ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಪಾವರ್ತಿ ತಂಬಾಕೆ ಅವರು ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಪ್ರೊ. ಸಕ್ಪಾಲ ಹೂವಣ್ಣ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಪಾವರ್ತಿ ತಂಬಾಕೆ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ.ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಕರ ಅಭಿನಂದಿಸಿದ್ದಾರೆ.
ಕೇರಳದ ಕಾಸರಗೋಡಿನ ಹಿರಿಯ ಸಾಹಿತಿ ರಾಧಾಕೃಷ್ಣಾ ಉಳಿಯತ್ತಡ್ಕ್ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡದ ಕವಿಗಳು ಸೂಕ್ಷ್ಮ ಸಂವೇದನಾ ಶೀಲತ್ವದಿಂದ ಕನ್ನಡ ನಾಡಿನ ಪರಿಸರದ ಪ್ರಭಾವಕ್ಕೆ ಒಳಪಟ್ಟು, ನಾಡು – ನುಡಿ ಮೇಲೆ ಬೆಳಕು ಚೆಲ್ಲುವ ಅಮೂಲ್ಯವಾದ ಕೃತಿಗಳನ್ನು ರಚಿಸುವ ಮೂಲಕ ಸಂಸ್ಕೃತಿಕ ಪರಂಪರೆಯನ್ನು ಕಟ್ಟಿ ಬೆಳಿಸಿದ್ದಾರೆ. ಯುವ ಕವಿ ಕಲ್ಲಪ್ಪ ಶಿವಶರಣ ಅವರು ನಮ್ಮ ಹಿರಿಯ ತಲೆಮಾರಿನ ಕವಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನವ ಕವಿತೆಗಳನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸತನ ಸೃಷ್ಠಿಸುವ ಭರವಸೆಯ ಕವಿಯಾಗಿ ಹೊರಹೊಮ್ಮಿದ್ದಾರೆ ಎಂದು ಚನ್ನಬಸವ ಪಟ್ಟದೇವರು ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ, ನೆರೆಯ ಕೇರಳದ ಕಾಸರಗೋಡಿನ ಹಿರಿಯ ಸಾಹಿತಿ ಡಾ. ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರು ಹೇಳಿದರು.ನಗರದ ಅಷ್ಟಫೈಲ್ ಬಂಗ್ಲೆ ಹತ್ತಿರದ ಶಿವಶರಣ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ವಿವಿದ್ಧೋದ್ದೇಶಗಳ ಸಂಸ್ಥೆಯ ನೂತನ ಕಛೇರಿಯಲ್ಲಿ ಶಿವಶರಣ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ವಿವಿದ್ಧೋದ್ದೇಶಗಳ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಯುವ ಕವಿ ಕಲ್ಲಪ್ಪ ಶಿವಶರಣ ಅವರ ಚೊಚ್ಚಲ ಕವನ ಸಂಕಲನ…
’ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ’ ಲೇಖನ- ವಿವೇಕಾನಂದ. ಎಚ್. ಕೆ.ಬೆಂಗಳೂರು ಮೊ:9844013068 ಉದಯರಶ್ಮಿ ದಿನಪತ್ರಿಕೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಅಜೀವ ಕಾರ್ಯಕರ್ತರು ಅಥವಾ ಸದಸ್ಯರ ಅವಶ್ಯಕತೆ ಇದೆಯೇ..ಪ್ರಜಾಪ್ರಭುತ್ವದ ಕ್ರಮಬದ್ಧ ಮುಂದುವರಿಕೆಗಾಗಿ, ಆಡಳಿತಾತ್ಮಕ ಕೆಲಸಗಳಿಗಾಗಿ, ಚುನಾವಣಾ ವ್ಯವಸ್ಥೆ ಇದೆ. ನಮ್ಮ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಲು ಈ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಒಮ್ಮೆ ಚುನಾವಣೆ ನಡೆದು ಸೇವೆಗಾಗಿಯೋ, ಅಧಿಕಾರಕ್ಕಾಗಿಯೋ ಒಟ್ಟಿನಲ್ಲಿ ಬಹುಮತ ಪಡೆದ ವ್ಯಕ್ತಿಯೊಬ್ಬ ಜನ ಪ್ರತಿನಿಧಿಯಾಗಿ ಆಯ್ಕೆಯಾದ ನಂತರ ಈ ಕಾರ್ಯಕರ್ತರಿಗೆ ಇರುವ ಕೆಲಸವಾದರೂ ಏನು..ನಾವೆಲ್ಲರೂ ಭಾರತೀಯರೇ, ವಿವಿಧ ಪಕ್ಷಗಳ ಬೆಂಬಲವನ್ನು ಆ ಸಂದರ್ಭಕ್ಕೆ ತಕ್ಕಂತೆ ಮಾಡುತ್ತೇವೆ. ಗೆದ್ದ ನಂತರ ಅಭ್ಯರ್ಥಿಗಳು ತಮ್ಮ ತಮ್ಮ ಸಂವಿಧಾನಾತ್ಮಕ ಕೆಲಸಗಳನ್ನು ಕಾನೂನು ಅಡಿಯಲ್ಲಿ ಮಾಡುತ್ತಾರೆ. ಏಕೆಂದರೆ ಗೆದ್ದ ನಂತರ ಆತ ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗಿರುವುಳಿದಿಲ್ಲ. ಎಲ್ಲಾ ಸಾರ್ವಜನಿಕರಿಗೂ ಆತ ಸಮಾನ ಪ್ರತಿನಿಧಿ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ಮಾಡಬಹುದಾದ ಕೆಲಸವಾದರೂ ಏನು..ಸುಮ್ಮನೆ ಅನಾವಶ್ಯಕವಾಗಿ ಎಂದೋ ಬರುವ ಚುನಾವಣೆಗಾಗಿ, ಯಾವುದೋ ಪಕ್ಷದ ಬೆಂಬಲಿಗನಾಗಿ,…
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಜ್ಞಾನ ಜ್ಯೋತಿ ಶ್ರೀ ಸಿದ್ಧೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವಾನಂದ ಗಣೇಶಮಠ ಇವರು ಜಿಲ್ಲಾ ಪಂಚಾಯತ್ ವಿಜಯಪುರ, ಶಾಲಾ ಶಿಕ್ಷಣ ಇಲಾಖೆ, ಶಿಕ್ಷಕರ ಕಲ್ಯಾಣ ನಿಧಿ, ಶಿಕ್ಷಕರ ಸದನ ಬೆಂಗಳೂರು ಇವರ ಸಹಯೋಗದಲ್ಲಿ ಇತ್ತೀಚೆಗೆ ವಿಜಯಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರು.ಈ ವೇಳೆ ಅಧಿಕಾರಿಗಳು ಶಿಕ್ಷಕ ಶಿವಾನಂದ ಗಣೇಶಮಠ ಅವರಿಗೆ ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದನೆ ಸಲ್ಲಿಸಿದರು.
ಶ್ರೀ ಗೌರಿ ಶಂಕರ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ರಕ್ತದಾನ ಶಿಬಿರ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಸಮೀಪದ ಅಸ್ಕಿ ಗ್ರಾಮದಲ್ಲಿ ಶ್ರೀ ಗೌರಿ ಶಂಕರ ಜಾತ್ರಾ ಮಹೋತ್ಸವದ ಪ್ರಯುಕ್ತ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ವಿಜಯಪುರ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂದಗಿ, ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಕಿ, ಶ್ರೀ ಗೌರಿ ಶಂಕರ ಜಾತ್ರಾ ಕಮಿಟಿ ಅಸ್ಕಿ ಮತ್ತು ಗ್ರಾಮ ಪಂಚಾಯತ್ ಕಾರ್ಯಾಲಯ ಹಾಗೂ ಗ್ರಾಮದ ವಿವಿಧ ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.ಕಾರ್ಯಕ್ರಮ ಉದ್ದೇಶಿಸಿ ಎಸ್ ಡಿ ಕುಲಕರ್ಣಿ, ಅನಿಲ್ ಕುಮಾರ್ ಕಿರಣಗಿ, ಎಂ ಡಿ ಮೋತಿಬಾಯಿ ಅವರು ಮಾತನಾಡಿ, ರಕ್ತದಾನ ಶ್ರೇಷ್ಠದಾನವಾಗಿದ್ದು, ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಘೋಷದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಮತ್ತು ರಕ್ತದಾನ ಮಾಡುವುದರ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ, ರಕ್ತದಾನವನ್ನು ೧೮ ವರ್ಷ ಮೇಲ್ಪಟ್ಟ ಎಲ್ಲಾ ಆರೋಗ್ಯವಂತ ಯುವಕ ಯುವತಿಯರು ವರ್ಷದಲ್ಲಿ ಎರಡು ಸಲ ರಕ್ತ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಉತ್ತರ ಕನ್ನಡ ಜಿಲ್ಲೆ ಶಿರಸಿಯ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ೨೦೦೭ ರಿಂದ ನಾಡಿನಾದ್ಯಂತ ಗೀತಾ ಅಭಿಯಾನ ಹಮ್ಮಿಕೊಂಡಿದ್ದು ಈ ಬಾರಿಯು ಗೀತೆಯ ೯ನೇ ಅಧ್ಯಾಯದ ಕಂಠಪಾಠ ಮತ್ತು ಭಾಷಣ ಸ್ಪರ್ಧೆಯನ್ನು ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಡೆಸಲಾಗುವುದು.ಪ್ರಾಥಮಿಕ ವಿಭಾಗ(೫ ರಿಂದ ೭ನೇ ತರಗತಿ), ಪ್ರೌಢ ವಿಭಾಗ (೮ ರಿಂದ ೧೦ನೇ ತರಗತಿ) ಪದವಿ ಪೂರ್ವ ವಿಭಾಗ (೧೧ ಮತ್ತು ೧೨ನೇ ತರಗತಿ) ವಿದ್ಯಾರ್ಥಿಗಳಿಗೆ ಪ್ರತಿ ಸ್ಪರ್ಧೆಗಳಿಗೆ ಒಂದು ಶಾಲೆಯಿಂದ ಒಂದು ವಿದ್ಯಾರ್ಥಿ ಭಾಗವಹಿಸಲು ಅವಕಾಶವಿರುತ್ತದೆ. ಕಂಠಪಾಠ ಸ್ವರ್ಧೆ ೫ನಿಮಿಷಗಳದ್ದಾಗಿರುತ್ತದೆ. ನಿರ್ಣಾಯಕರು ಸೂಚಿಸಿದ ಯಾವುದೆ ೧೦ಶ್ಲೋಕವನ್ನು ಕ್ರಮವಾಗಿ ಪಠಿಸಬೇಕಾಗಿರುತ್ತದೆ. (ಯೂಟ್ಯೂಬ್ ಲಿಂಕ https://youtu.be/nofRgLsyCOs?feature=shared ಇದರಲ್ಲಿ ಲಭ್ಯವಿರುವ ೯ನೇ ಅಧ್ಯಾಯವನ್ನು ಅಭ್ಯಾಸ ಮಾಡಿರಬೇಕು.) ಮೂರು ಹಂತಗಳಲ್ಲಿ ನಡೆಯುವ ೫ ನಿಮಿಷಗಳ ಕಾಲಾವಧಿಯ ಭಾಷಣ ಸ್ಪರ್ಧೆಗೆ ಪ್ರಾಥಮಿಕ ವಿಭಾಗಗಳಿಗೆ ವಿಷಯ ಭಗವದ್ಗೀತೆಯಿಂದ ಸಾಮಾಜಿಕ ಸಾಮರಸ್ಯ, ಪ್ರೌಢ ವಿಭಾಗದ ವಿಷಯ ಭಗವದ್ಗೀತೆಯಿಂದ ದೇಶದ ಸಮಗ್ರತೆ/ರಾಷ್ಟ್ರೀಯ…
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಧ್ಯಾರ್ಥಿನಿ ಮಲ್ಲಿಕಾ ಪಡೇಕನೂರ ಸಿಂದಗಿಯ ಎಚ್ ಜಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ೨೦೨೪-೨೫ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಇಂಗ್ಲೀಷ ಪ್ರಬಂಧ ಸ್ಪರ್ಧೆಯಲ್ಲಿ ಬಾಗವಹಿಸಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ದ್ವಿತೀಯ ಪಿಯುಸಿ ವಿಭಾಗದಿಂದ ಇಂಗ್ಲೀಷ ಪ್ರಬಂಭ ಸ್ಪರ್ಧೆಯಲ್ಲಿ ಬಸಮ್ಮ ವಾಲೀಕಾರ ದ್ವಿತೀಯ ಸ್ಥಾನ ಪಡೆದಿದ್ದು, ದ್ವಿತೀಯ ಪಿಯುಸಿ ಅಶುಭಾಷಣ ಸ್ಪರ್ಧೆಯಲ್ಲಿ ಕುಮಾರಿ ಗುರುಬಾಯಿ ಕರಗಾರ ದ್ವಿತೀಯ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದು, ವಿಧ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯ ಸಿ ಎಸ್ ಹಿರೇಮಠ, ಇಎಲ್‌ಸಿ ಕ್ಲಬ್ ಸಂಚಾಲಕ ಬಸವರಾಜ್ ಕುಂಬಾರ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಮುಖ್ಯ ಬಜಾರನಲ್ಲಿರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಕಟ್ಟಡ ದುರಸ್ತಿ ಕಾಮಗಾರಿ ನಡೆಯಿತ್ತಿದ್ದು, ಅತ್ಯಂತ ಕಳಪೆ ಮಟ್ಟದಲ್ಲಿ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಸರಿ ಪಡಿಸಬೇಕು ಎಂದು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಪಿ.ಎಂ.ನದಾಫ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ಕಾಮಗಾರಿಗೆ ಯಾವುದೇ ವಿವರವುಳ್ಳ ನಾಮಫಲಕ ಅಳವಡಿಸಿಲ್ಲ. ಯಾವ ಅನುದಾನದಡಿ ನಡೆಸಲಾಗುತ್ತಿದೆ ಎಂಬ ಮಾಹಿತಿ ಇಲ್ಲ. ಈ ಬಗ್ಗೆ ಕೆಲಸಗಾರರಿಗೆ ಕೇಳಿದರೆ ಏನೂ ಮಾಹಿತಿ ಸಿಗುತ್ತಿಲ್ಲ. ಗಾಮಗಾರಿ ಮಾತ್ರ ಅತ್ಯಂತ ಕಳಪೆ ಮಟ್ಟದಲ್ಲಿ ನಡೆಸಲಾಗುತ್ತಿದೆ. ಬಾಗಿಲು, ಕಿಟಕಿಗಳಿಗೆ ಕಳಪೆ ಗುಣಮಟ್ಟದ ಕಟ್ಟಿಗೆ ಬಳಸಿ ಬರಿ ಜಾಯಿಂಟ್ ಪಿನ್ ಗಳನ್ನು ಹೊಡೆಯಲಾಗಿದೆ. ಸರಿಯಾಗಿ ನೀರು ಹೊಡೆಯುತ್ತಿಲ್ಲ. ಒಂದು ಕೋಣೆಯ ಟೈಲ್ಸ್ ಮುರಿದಿದ್ದು ಫೆವಿಕ್ವಿಕ್ ಹಾಕಲಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಸರಿಪಡಿಸಬೇಕು ಎಂದರು.
