Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಮೀಣ ಮಟ್ಟದಲ್ಲಿ ಮಧ್ಯಸ್ಥಿಕೆ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು

ರೋಣಿಹಾಳ 110 ಕೆವಿ ಮಾರ್ಗ ನಿರ್ವಹಣೆ: ಇಂದು ವಿದ್ಯುತ್ ವ್ಯತ್ಯಯ

ಹೊಸ ತಲೆಮಾರಿನ ಕ್ರಾಂತಿಕಾರಕ ಸಾಹಿತಿ ಪಿ.ಲಂಕೇಶ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿ ಬೆಳೆಸಿದ ಕವಿಗಳು
(ರಾಜ್ಯ ) ಜಿಲ್ಲೆ

ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿ ಬೆಳೆಸಿದ ಕವಿಗಳು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕೇರಳದ ಕಾಸರಗೋಡಿನ ಹಿರಿಯ ಸಾಹಿತಿ ರಾಧಾಕೃಷ್ಣಾ ಉಳಿಯತ್ತಡ್ಕ್ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕನ್ನಡದ ಕವಿಗಳು ಸೂಕ್ಷ್ಮ ಸಂವೇದನಾ ಶೀಲತ್ವದಿಂದ ಕನ್ನಡ ನಾಡಿನ ಪರಿಸರದ ಪ್ರಭಾವಕ್ಕೆ ಒಳಪಟ್ಟು, ನಾಡು – ನುಡಿ ಮೇಲೆ ಬೆಳಕು ಚೆಲ್ಲುವ ಅಮೂಲ್ಯವಾದ ಕೃತಿಗಳನ್ನು ರಚಿಸುವ ಮೂಲಕ ಸಂಸ್ಕೃತಿಕ ಪರಂಪರೆಯನ್ನು ಕಟ್ಟಿ ಬೆಳಿಸಿದ್ದಾರೆ. ಯುವ ಕವಿ ಕಲ್ಲಪ್ಪ ಶಿವಶರಣ ಅವರು ನಮ್ಮ ಹಿರಿಯ ತಲೆಮಾರಿನ ಕವಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನವ ಕವಿತೆಗಳನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸತನ ಸೃಷ್ಠಿಸುವ ಭರವಸೆಯ ಕವಿಯಾಗಿ ಹೊರಹೊಮ್ಮಿದ್ದಾರೆ ಎಂದು ಚನ್ನಬಸವ ಪಟ್ಟದೇವರು ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ, ನೆರೆಯ ಕೇರಳದ ಕಾಸರಗೋಡಿನ ಹಿರಿಯ ಸಾಹಿತಿ ಡಾ. ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರು ಹೇಳಿದರು.
ನಗರದ ಅಷ್ಟಫೈಲ್ ಬಂಗ್ಲೆ ಹತ್ತಿರದ ಶಿವಶರಣ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ವಿವಿದ್ಧೋದ್ದೇಶಗಳ ಸಂಸ್ಥೆಯ ನೂತನ ಕಛೇರಿಯಲ್ಲಿ ಶಿವಶರಣ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ವಿವಿದ್ಧೋದ್ದೇಶಗಳ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಯುವ ಕವಿ ಕಲ್ಲಪ್ಪ ಶಿವಶರಣ ಅವರ ಚೊಚ್ಚಲ ಕವನ ಸಂಕಲನ “ಕಲ್ಲು ಮನಸ್ಸು” ಕೃತಿಯ ವಿಮರ್ಶೆ ಹಾಗೂ ಕವಿಗೋಷ್ಠಿಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದ ಪ್ರತಿಯೊಬ್ಬ ಕವಿಗಳು ತಮ್ಮ ಕವಿತೆಗಳಲ್ಲಿ ತಾಯಿ ತಮ್ಮ ಮೇಲೆ ಬೀರಿದ ಪ್ರಭಾವನ್ನು ಅಕ್ಷರಗಳಲ್ಲಿ ಹಿಡಿದಿಟ್ಟಿದ್ದಾರೆ. ಅದೇ ರೀತಿ ಕವಿ ಕಲ್ಲು ಶಿವಶರಣ ಅವರು ತಮ್ಮ ತಾಯಿ ತಮ್ಮ ಜೀವನದಲ್ಲಿ ಬೀರಿದ ಪ್ರಭಾವನ್ನು ಅಮ್ಮ ಎಂಬ ಕವಿತೆಯಲ್ಲಿ ಹಿಡಿದಿಡುವ ಮೂಲಕ ತಮ್ಮ ತಾಯಿಯ ಮಮತೆ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದ್ದಾರೆ. ಕಲ್ಲು ಮನಸ್ಸುಗಳನ್ನು ಕರಗಿಸುವ ಶಕ್ತಿ ಈ ಕಲ್ಲು ಮನಸ್ಸು ಕೃತಿಯಲ್ಲಿದೆ ಎಂದು ಹೇಳಿದರು.
ಕೃತಿ ವಿಮರ್ಶೆ ಮಾಡಿ ಯುವ ಸಾಹಿತಿ ಸೋಮನಿಂಗ ಎಚ್. ಹಿಪ್ಪರಗಿಯವರು ಮಾತನಾಡಿ, ವಿಜಯಪುರ ಜಿಲ್ಲೆಯು ರನ್ನ, ಅಭಿನವ, ಪಂಪ ನಾಗಚಂದ್ರ ಬಸವಾದಿ ಶರಣರು ಸೇರಿದಂತೆ ಅನೇಕಾನೇಕ ಸಾಂಸ್ಕೃತಿಕ ದಿಗ್ಗಜ್ಜರನ್ನು ಕನ್ನಡ ನಾಡಿಗೆ ಕೊಟ್ಟಿದೆ. ಜಿಲ್ಲೆಯಲ್ಲಿ ಹೊಸ ತಲೆಮಾರಿನ ಅನೇಕರು ಸಾಹಿತಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಗಟ್ಟಿತನದಲ್ಲಿ ಹೇಳುವ ಧೈರ್ಯ ತೋರಿದವರಲ್ಲಿ ಕಲ್ಲು ಶಿವಶರಣ ಅವರು ಒಬ್ಬರಾಗಿದ್ದಾರೆ. ಅವರ ಕವನದ ಪ್ರತಿ ಪದವು ಕೂಡಾ ಈ ನಾಡಿನ ಜನರ ನಾಡಿಮಿಡಿತವನ್ನು ರಿಂಗಣಿಸುವಂತಿವೆ ಎಂದರು.
ಕವಿಗೋಷ್ಠಿಯಲ್ಲಿ ಕವಿಗಳಾದ ಪರಶುರಾಮ ಶಿವಶರಣ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವಿತೆ, ಸಾಹಿತ್ಯ ಅಂತರಾಳದ ಅಭಿವ್ಯಕ್ತಿಯನ್ನು ವ್ಯಕ್ತಪಡಿಸುವ ಸಾಧನವಾಗಿದೆ. ಸಾಹಿತ್ಯದಿಂದ ಮನಸ್ಸು ಅರಳುವುದರ ಜೊತೆಗೆ ಸಮಾಜ ತಿದ್ದಲು ಸಾಧ್ಯ. ಪ್ರತಿಯೊಬ್ಬರು ಸಾಹಿತ್ಯದ ಅಭಿರುಚಿಯನ್ನು ಹೊಂದಬೇಕು. ಸಾಹಿತ್ಯ ಅಧ್ಯಯನಶೀಲರಾಗಿ ಉತ್ತಮ ವ್ಯಕ್ತಿತ್ವ ಪಡೆಯಬೇಕು ಎಂದರು.
ಸಿಂದಗಿ ಕಸಾಪ ಅಧ್ಯಕ್ಷ ಶಿವಾನಂದ ಬಡಾನೂರು ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಯುವ ಸಾಹಿತಿ ಲಾಯಪ್ಪ ಇಂಗಳೆ, ಸೋಮಲಿಂಗ ಹಿಪ್ಪರಗಿ, ಭೀಮರಾಯ ಕುಂಟೋಜಿ, ಪ್ರತಾಪ ಚಿಕ್ಕಲಕಿ ಕವನ ವಾಚಿಸಿದರು.
ಈ ಸಂದರ್ಭದಲ್ಲಿ ಚಲನಚಿತ್ರ ನಿರ್ದೇಶಕ ಸುನೀಲಕುಮಾರ ಸುಧಾಕರ, ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ, ಹೋರಾಟಗಾರ ಬಸವರಾಜ ಕುಬಕಡ್ಡಿ, ಬಸವಕುಮಾರ ಕಾಂಬಳೆ, ಕಲ್ಲಪ್ಪ ಬಬಲಾದ, ಚೀಮಾಜಿ ರಾಠೋಡ, ಅರ್ಜುನ ಬಂಡಿ, ಸಂಜೀವ ರಾಠೋಡ, ಕಾಶೀನಾಥ ಪವಾರ, ಪತ್ರಕರ್ತರಾದ ಉಮೇಶ ಶಿವಶರಣ, ಮಹಾಂತೇಶ ನೂಲಾನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕಮವನ್ನು ಸೋಮನಿಂಗ ಹಿಪ್ಪರಗಿ ಸ್ವಾಗತಿಸಿದರು. ಲಾಯಪ್ಪ ಇಂಗಳೆ ನಿರೂಪಿಸಿ, ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಮೀಣ ಮಟ್ಟದಲ್ಲಿ ಮಧ್ಯಸ್ಥಿಕೆ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು

ರೋಣಿಹಾಳ 110 ಕೆವಿ ಮಾರ್ಗ ನಿರ್ವಹಣೆ: ಇಂದು ವಿದ್ಯುತ್ ವ್ಯತ್ಯಯ

ಹೊಸ ತಲೆಮಾರಿನ ಕ್ರಾಂತಿಕಾರಕ ಸಾಹಿತಿ ಪಿ.ಲಂಕೇಶ

ಗಡಿ ರಕ್ಷಿಸುತ್ತಿರುವ ಸೈನಿಕರು ನಿಜ ಹೀರೋಗಳು :ಹಂಚಲಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಮೀಣ ಮಟ್ಟದಲ್ಲಿ ಮಧ್ಯಸ್ಥಿಕೆ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು
    In (ರಾಜ್ಯ ) ಜಿಲ್ಲೆ
  • ರೋಣಿಹಾಳ 110 ಕೆವಿ ಮಾರ್ಗ ನಿರ್ವಹಣೆ: ಇಂದು ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಹೊಸ ತಲೆಮಾರಿನ ಕ್ರಾಂತಿಕಾರಕ ಸಾಹಿತಿ ಪಿ.ಲಂಕೇಶ
    In ವಿಶೇಷ ಲೇಖನ
  • ಗಡಿ ರಕ್ಷಿಸುತ್ತಿರುವ ಸೈನಿಕರು ನಿಜ ಹೀರೋಗಳು :ಹಂಚಲಿ
    In (ರಾಜ್ಯ ) ಜಿಲ್ಲೆ
  • ವಿಧಾನಸಭೆಯಲ್ಲಿ ಡಿಸಿಎಂ ಡಿಕೆಶಿ ವರ್ತನೆ ಸರಿಯಲ್ಲ :ಯತ್ನಾಳ
    In (ರಾಜ್ಯ ) ಜಿಲ್ಲೆ
  • ಒಲವಿನ ಪೂಜೆಯಲಿ ಒಂದಾಗೋಣ
    In ವಿಶೇಷ ಲೇಖನ
  • ಮಾ.29ರಿಂದ ಕೊಲ್ಹಾರದಲ್ಲಿ ವಿಶೇಷ ಪ್ರಶಿಕ್ಷಣ ವರ್ಗ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 28, 2026
    In ದಿನಪತ್ರಿಕೆ
  • ಮಕ್ಕಳ ಬದುಕಿನಲ್ಲಿ ಪಾಲಕರ ಆಕರ್ಷಣೆ
    In ವಿಶೇಷ ಲೇಖನ
  • ಮಹಿಳೆಯರಿಂದ ನಂಜಿಕೆ ತಿನಿಸು ತಯಾರಿಕೆ ಈಗ ಬಲು ಜೋರು
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.