Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 12,2026

ಕೈಯಲ್ಲಿ ಕುಣಿವ ಆ ಹೊನ್ನ ಬಳೆಯ ಘಲ್ ಘಲ್ ತಾಳಕೆ

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೀರಿನ ಬಾಟಲ್ ವಿತರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ರಾಜಕೀಯ ಪಕ್ಷಗಳಿಗೆ ಶಾಶ್ವತ ಕಾರ್ಯಕರ್ತರ ಪಡೆ ಬೇಕೇ?
ವಿಶೇಷ ಲೇಖನ

ರಾಜಕೀಯ ಪಕ್ಷಗಳಿಗೆ ಶಾಶ್ವತ ಕಾರ್ಯಕರ್ತರ ಪಡೆ ಬೇಕೇ?

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

’ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ’

ಲೇಖನ
– ವಿವೇಕಾನಂದ. ಎಚ್. ಕೆ.
ಬೆಂಗಳೂರು ಮೊ:9844013068

ಉದಯರಶ್ಮಿ ದಿನಪತ್ರಿಕೆ

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಅಜೀವ ಕಾರ್ಯಕರ್ತರು ಅಥವಾ ಸದಸ್ಯರ ಅವಶ್ಯಕತೆ ಇದೆಯೇ..
ಪ್ರಜಾಪ್ರಭುತ್ವದ ಕ್ರಮಬದ್ಧ ಮುಂದುವರಿಕೆಗಾಗಿ, ಆಡಳಿತಾತ್ಮಕ ಕೆಲಸಗಳಿಗಾಗಿ, ಚುನಾವಣಾ ವ್ಯವಸ್ಥೆ ಇದೆ. ನಮ್ಮ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಲು ಈ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಒಮ್ಮೆ ಚುನಾವಣೆ ನಡೆದು ಸೇವೆಗಾಗಿಯೋ, ಅಧಿಕಾರಕ್ಕಾಗಿಯೋ ಒಟ್ಟಿನಲ್ಲಿ ಬಹುಮತ ಪಡೆದ ವ್ಯಕ್ತಿಯೊಬ್ಬ ಜನ ಪ್ರತಿನಿಧಿಯಾಗಿ ಆಯ್ಕೆಯಾದ ನಂತರ ಈ ಕಾರ್ಯಕರ್ತರಿಗೆ ಇರುವ ಕೆಲಸವಾದರೂ ಏನು..
ನಾವೆಲ್ಲರೂ ಭಾರತೀಯರೇ, ವಿವಿಧ ಪಕ್ಷಗಳ ಬೆಂಬಲವನ್ನು ಆ ಸಂದರ್ಭಕ್ಕೆ ತಕ್ಕಂತೆ ಮಾಡುತ್ತೇವೆ. ಗೆದ್ದ ನಂತರ ಅಭ್ಯರ್ಥಿಗಳು ತಮ್ಮ ತಮ್ಮ ಸಂವಿಧಾನಾತ್ಮಕ ಕೆಲಸಗಳನ್ನು ಕಾನೂನು ಅಡಿಯಲ್ಲಿ ಮಾಡುತ್ತಾರೆ. ಏಕೆಂದರೆ ಗೆದ್ದ ನಂತರ ಆತ ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗಿರುವುಳಿದಿಲ್ಲ. ಎಲ್ಲಾ ಸಾರ್ವಜನಿಕರಿಗೂ ಆತ ಸಮಾನ ಪ್ರತಿನಿಧಿ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ಮಾಡಬಹುದಾದ ಕೆಲಸವಾದರೂ ಏನು..
ಸುಮ್ಮನೆ ಅನಾವಶ್ಯಕವಾಗಿ ಎಂದೋ ಬರುವ ಚುನಾವಣೆಗಾಗಿ, ಯಾವುದೋ ಪಕ್ಷದ ಬೆಂಬಲಿಗನಾಗಿ, ಸದಸ್ಯತ್ವಗಳನ್ನು ಮಾಡಿಸುತ್ತಾ, ಸುಮ್ಮನೆ ಖಾಲಿ ಪೋಲಿ ಸುತ್ತಾಡುತ್ತಾ, ಜನರಲ್ಲಿ ತಮ್ಮ ಪಕ್ಷದ ಬಗ್ಗೆ ಇರುವ, ಇಲ್ಲದಿರುವ ಎಲ್ಲವನ್ನೂ ಹೇಳುತ್ತಾ, ಇನ್ನೊಂದು ಪಕ್ಷವನ್ನು ಟೀಕಿಸುತ್ತಾ, ತಮ್ಮ ಪಕ್ಷ ಏನೇ ತಪ್ಪು ಮಾಡಿದರೂ ಅದನ್ನು ಸಮರ್ಥಿಸುತ್ತಾ, ಸಾಮಾನ್ಯ ಜನರಲ್ಲಿ ದ್ವೇಷ, ಅಸೂಯೆ ಹುಟ್ಟಿಸುತ್ತಾ ಇರುವ ಈ ಅಜೀವ ಕಾರ್ಯಕರ್ತರ ಅವಶ್ಯಕತೆ ಇದೆಯೇ..
ಚುನಾವಣೆ ಸಂದರ್ಭದಲ್ಲಿ ಮಾತ್ರ, ಆ ಸಮಯದ ಸ್ವಲ್ಪ ದಿನಗಳ ಕಾಲ, ತಮ್ಮ ಪಕ್ಷದ ಸಿದ್ಧಾಂತ, ಸೇವಾ ಮನೋಭಾವ, ಭರವಸೆ, ದೃಷ್ಟಿಕೋನವನ್ನು ಹೇಳುವುದು ಹೊರತುಪಡಿಸಿ ಇವರಿಗೆ ಇನ್ಯಾವ ಕೆಲಸ ಇರುತ್ತದೆ. ಸುಮ್ಮನೆ ಯಾವುದೋ ರಾಜಕೀಯ ವ್ಯಕ್ತಿಗಳ ಹಿಂದೆ ಪುಡಾರಿಯಂತೆ ಜೀವನಪೂರ್ತಿ ಅಲೆದಾಡುವುದು, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ ಕೊಡುವುದು, ಭ್ರಷ್ಟಾಚಾರ, ಸ್ವಜನಪಕ್ಷಪಾತ ಹೆಚ್ಚು ಮಾಡುವುದು ಇವರ ಅನಧಿಕೃತ ಕೆಲಸವಾಗಿರುತ್ತದೆ.


ಜನ ಪ್ರತಿನಿಧಿಗಳಿಗಿಂತ ಇವರದೇ ಹಾವಳಿ ಜಾಸ್ತಿ..
ಇದೊಂದು ರಾಷ್ಟ್ರೀಯ ಸಂಪನ್ಮೂಲದ ನಷ್ಟ ಅಥವಾ ದುರುಪಯೋಗವಲ್ಲವೇ,
ಐದು ವರ್ಷಕ್ಕೋ, ಎರಡು ವರ್ಷಕ್ಕೋ ಇರುವ ಚುನಾವಣೆಗಾಗಿ ಎಲ್ಲ ಕೆಲಸ ಬಿಟ್ಟು ಒಂದು ಪಕ್ಷದ ಪರವಾಗಿ ಜೀವನ ಕಳೆಯುವುದು ಅವಮಾನಕರವಲ್ಲವೇ. ಪ್ರಜಾಪ್ರಭುತ್ವ ಎಂಬ ಕಾರಣದಿಂದ ಸುಮ್ಮನೆ ಪಕ್ಷಗಳಿಗೆ ಜೀತ ಮಾಡುವುದಕ್ಕಿಂತ ಬೇರೆ ಏನಾದರೂ ಒಳ್ಳೆಯ ಕೆಲಸ, ಸಾಧನೆ ಮಾಡಬಹುದಲ್ಲವೇ..
ಕೆಲವರಿಗೆ ಎಂದೋ ಒಂದು ದಿನ, ಯಾವುದೋ ಒಂದು ಅಧಿಕಾರ ದೊರೆಯಬಹುದು ಎಂಬ ಆಸೆಯಿಂದ ಎಷ್ಟೆಲ್ಲಾ ದೇಶ ವಿರೋಧಿ, ಸಂವಿಧಾನ ವಿರೋಧಿ, ಗುಲಾಮಿತನದ ಕೆಲಸ ಮಾಡಿಕೊಂಡು ಯಾಕೆ ಇರಬೇಕು. ದೇಶ ಮುಖ್ಯವೇ ಹೊರತು ಪಕ್ಷ ಮುಖ್ಯವಲ್ಲ. ಹಾಗಿದ್ದ ಮೇಲೆ ಆ ಪಕ್ಷಕ್ಕಾಗಿ ಏಕೆ ಜೀವನವನ್ನು ವ್ಯರ್ಥ ಮಾಡಿಕೊಳ್ಳಬೇಕು..
ಯಾರೋ ಒಬ್ಬರು ಗೆಲ್ಲಲಿ. ಚುನಾವಣೆ ಸಂದರ್ಭದಲ್ಲಿ ಮೂರು ತಿಂಗಳು ಮಾತ್ರ ಈ ರೀತಿಯ ಚಟುವಟಿಕೆಯಲ್ಲಿ ಭಾಗವಹಿಸಿ ಉಳಿದಂತೆ ಬೇರೆ ಕೆಲಸ ಮಾಡಬಹುದಲ್ಲವೇ. ನಾಯಕನ ಹಿಂದೆ ನಾಯಿಯಂತೆ ಹಿಂಬಾಲಿಸುತ್ತಾ, ಅವನ ಸುಖ ದುಃಖಗಳಲ್ಲಿ ಭಾಗಿಯಾಗಿ, ನಮ್ಮ ಬದುಕನ್ನು ವ್ಯರ್ಥ ಮಾಡಿಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ..
ಆ ಕಾರಣದಿಂದ ರಾಜಕೀಯ ಪಕ್ಷಗಳಿಗೆ ನಿಜಕ್ಕೂ ಶಾಶ್ವತ ಕಾರ್ಯಕರ್ತರ ಅವಶ್ಯಕತೆ ಇರುವುದಿಲ್ಲ. ಅದು ಇದ್ದರೂ ಚುನಾವಣೆ ಸಂದರ್ಭದಲ್ಲಿ ಎರಡು ಮೂರು ತಿಂಗಳುಗಳಿಗೆ ಮಾತ್ರ ಸೀಮಿತವಾಗಿರಬೇಕು. ಅನಂತರ ನಾವೆಲ್ಲರೂ ಒಂದೇ. ಈ ಮನೋಭಾವ ಇದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೆ ಅಂದಾಜು ದೇಶದ ಒಟ್ಟು ಜನಸಂಖ್ಯೆಯ ಸುಮಾರು ಶೇಕಡಾ 10% ಕ್ಕೂ ಹೆಚ್ಚು ಜನ ಕೇವಲ ಈ ರೀತಿಯ ಕೆಟ್ಟ ರಾಜಕೀಯದಲ್ಲಿಯೇ ಒಬ್ಬರು ಇನ್ನೊಬ್ಬರ ಮೇಲೆ ದ್ವೇಷ ಕಾರುತ್ತಾ ಸುಮ್ಮನೆ ಕೆಲಸವಿಲ್ಲದೆ ಪ್ರಚಾರ ಮಾತ್ರ ಮಾಡಿಕೊಂಡು ಸಾಗುವುದು ಖಂಡಿತಾ ಅಭಿವೃದ್ಧಿಗೆ ಮಾರಕ. ಈ ಬಗ್ಗೆ ಎಲ್ಲರೂ ಗಂಭೀರವಾಗಿ ಯೋಚಿಸಬೇಕು. ಏನಾದರೂ ಸರಿಯಾದ ವಾಸ್ತವಿಕ ಬದಲಾವಣೆ ಅಥವಾ ಪರಿವರ್ತನೆ ಮಾಡಬೇಕು..
ಇತ್ತೀಚೆಗೆ ಆಡಳಿತ ಮತ್ತು ವಿರೋಧ ಪಕ್ಷಗಳು ಅನಾವಶ್ಯಕವಾಗಿ ಸಮ್ಮೇಳನಗಳು, ಪ್ರದರ್ಶನಗಳು, ಕಾಲ್ನಡಿಗೆ, ಪ್ರತಿಭಟನೆ, ವಿಜಯೋತ್ಸವ ಹೀಗೆ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಿವೆ. ಅದಕ್ಕೆ ಪಕ್ಷದ ಕಾರ್ಯಕರ್ತರ ಹೆಸರಿನಲ್ಲಿ ಸಾವಿರಾರು ಜನರನ್ನು ದುಡಿಸಿಕೊಳ್ಳುತ್ತಿವೆ. ಇದೆಲ್ಲಾ ಅನಾವಶ್ಯಕವಲ್ಲವೇ..
ಇಷ್ಟೊಂದು ಸಮೂಹ ಸಂಪರ್ಕ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ವಿವಿಧ ಸ್ಯಾಟಲೈಟ್ ತಂತ್ರಜ್ಞಾನ ಬೆಳವಣಿಗೆ ಆಗಿರುವ ಸಂದರ್ಭದಲ್ಲಿ ಈ ಹಳೆಯ ಕಾಲದ ಜೈಕಾರ ಸಂಸ್ಕೃತಿಯ ಪಳೆಯುಳಿಕೆ ಅನಿವಾರ್ಯತೆ ಇದೆಯೇ..
ಇಷ್ಟೇ ಶ್ರಮವನ್ನು ರಾಜ್ಯದ ಅಭಿವೃದ್ಧಿಗೆ ಪ್ರಯತ್ನಿಸಿದರೆ, ಶ್ರಮಪಟ್ಟರೆ ಎಷ್ಟೋ ಉತ್ತಮ ಕೆಲಸಗಳಾಗುತ್ತವೆ. ಗುಲಾಮಿತನದ ಪಕ್ಷಗಳ ಈ ಕಾರ್ಯಕರ್ತರ ಪಡೆ ನಿಜಕ್ಕೂ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಮೂಡುತ್ತಿದೆ..
ಬೇರೆ ಬೇರೆ ಕೆಲವು ಕಾರಣಗಳನ್ನು ನೀಡಿ ಇದನ್ನು ಸಮರ್ಥಿಸಿಕೋಳ್ಳಬಹುದು. ಅದನ್ನೂ ಮೀರಿ ಅತ್ಯಂತ ಉಪಯೋಗಕಾರಿ ಪರ್ಯಾಯ ಮಾರ್ಗಗಳನ್ನು ಯೋಚಿಸುವುದು ಒಳಿತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ..
ಇದು ಪಕ್ಷದ ಕಚೇರಿಯ ವಿವಿಧ ಹುದ್ದೆಗಳ ಪದಾಧಿಕಾರಿಗಳಿಗೆ ಅನ್ವಯಿಸುವುದಿಲ್ಲ..

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 12,2026

ಕೈಯಲ್ಲಿ ಕುಣಿವ ಆ ಹೊನ್ನ ಬಳೆಯ ಘಲ್ ಘಲ್ ತಾಳಕೆ

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೀರಿನ ಬಾಟಲ್ ವಿತರಣೆ

ಜು.೧೪ ರಂದು ನೈಕಾನ್ ಮಿರರ್‌ಲೆಸ್ ತಂತ್ರಜ್ಞಾನ ಕಾರ್ಯಾಗಾರ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 12,2026
    In ದಿನಪತ್ರಿಕೆ
  • ಕೈಯಲ್ಲಿ ಕುಣಿವ ಆ ಹೊನ್ನ ಬಳೆಯ ಘಲ್ ಘಲ್ ತಾಳಕೆ
    In ವಿಶೇಷ ಲೇಖನ
  • ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೀರಿನ ಬಾಟಲ್ ವಿತರಣೆ
    In (ರಾಜ್ಯ ) ಜಿಲ್ಲೆ
  • ಜು.೧೪ ರಂದು ನೈಕಾನ್ ಮಿರರ್‌ಲೆಸ್ ತಂತ್ರಜ್ಞಾನ ಕಾರ್ಯಾಗಾರ
    In (ರಾಜ್ಯ ) ಜಿಲ್ಲೆ
  • ಕಾರ್ಯಕರ್ತರು ಸಕ್ರೀಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು
    In (ರಾಜ್ಯ ) ಜಿಲ್ಲೆ
  • ಘಟನೆ ಮತ್ತು ಪ್ರತಿಕ್ರಿಯೆಯ ನಡುವಿನ ಆ ಕ್ಷಣ..
    In ವಿಶೇಷ ಲೇಖನ
  • ಡಿವೈಡರ್‌ಗೆ ಕಾರು ಡಿಕ್ಕಿ; ತಾಯಿ-ಇಬ್ಬರು ಪುತ್ರರ ದುರ್ಮರಣ!
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ನಿಂದ ಎಸ್‌ಐಆರ್ ಪ್ರಕ್ರಿಯೆ ನಿಷ್ಕ್ರೀಯಗೊಳಿಸುವ ಷಡ್ಯಂತ್ರ
    In (ರಾಜ್ಯ ) ಜಿಲ್ಲೆ
  • ಸಮ್ಮೇಳನಾಧ್ಯಕ್ಷಕರಾಗಿ ಹ.ಮಾ.ಪೂಜಾರ ಆಯ್ಕೆಗೆ ಮೌಲಾಲಿ ಹರ್ಷ
    In (ರಾಜ್ಯ ) ಜಿಲ್ಲೆ
  • ಮುದ್ದೇಬಿಹಾಳದ ವಿದ್ಯಾಸ್ಪೂರ್ತಿ ಶಾಲೆಯ ಅನುಮತಿ ರದ್ದು!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.