ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಮುಖ್ಯ ಬಜಾರನಲ್ಲಿರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಕಟ್ಟಡ ದುರಸ್ತಿ ಕಾಮಗಾರಿ ನಡೆಯಿತ್ತಿದ್ದು, ಅತ್ಯಂತ ಕಳಪೆ ಮಟ್ಟದಲ್ಲಿ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಸರಿ ಪಡಿಸಬೇಕು ಎಂದು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಪಿ.ಎಂ.ನದಾಫ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ಕಾಮಗಾರಿಗೆ ಯಾವುದೇ ವಿವರವುಳ್ಳ ನಾಮಫಲಕ ಅಳವಡಿಸಿಲ್ಲ. ಯಾವ ಅನುದಾನದಡಿ ನಡೆಸಲಾಗುತ್ತಿದೆ ಎಂಬ ಮಾಹಿತಿ ಇಲ್ಲ. ಈ ಬಗ್ಗೆ ಕೆಲಸಗಾರರಿಗೆ ಕೇಳಿದರೆ ಏನೂ ಮಾಹಿತಿ ಸಿಗುತ್ತಿಲ್ಲ. ಗಾಮಗಾರಿ ಮಾತ್ರ ಅತ್ಯಂತ ಕಳಪೆ ಮಟ್ಟದಲ್ಲಿ ನಡೆಸಲಾಗುತ್ತಿದೆ. ಬಾಗಿಲು, ಕಿಟಕಿಗಳಿಗೆ ಕಳಪೆ ಗುಣಮಟ್ಟದ ಕಟ್ಟಿಗೆ ಬಳಸಿ ಬರಿ ಜಾಯಿಂಟ್ ಪಿನ್ ಗಳನ್ನು ಹೊಡೆಯಲಾಗಿದೆ. ಸರಿಯಾಗಿ ನೀರು ಹೊಡೆಯುತ್ತಿಲ್ಲ. ಒಂದು ಕೋಣೆಯ ಟೈಲ್ಸ್ ಮುರಿದಿದ್ದು ಫೆವಿಕ್ವಿಕ್ ಹಾಕಲಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಸರಿಪಡಿಸಬೇಕು ಎಂದರು.