Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ಬಮ್ಮನಹಳ್ಳಿಯಲ್ಲಿ ರಾಜಾಧಿರಾಜಯೋಗಿ ಶ್ರೀ ಸಮರ್ಥಸದ್ದುರು ಭೀಮಾಶಂಕರ ಮಹಾರಾಜರ ೭೦ನೇ ಜಾತ್ರಾ ಮಹೋತ್ಸವು ಡಿಸೆಂಬರ ೬ ರಿಂದ ೯ವರಗೆ ನಡೆಯಲ್ಲಿದೆ.ಶ್ರೀ ಸಮರ್ಥ ಸದ್ಗುರು ನರಸಿಂಹರಾವ ಮಹಾರಾಜ ನೇತೃತ್ವದಲ್ಲಿ ವಿಶೇಷ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.ದಿನಾಂಕ ೬ರಂದು ಧ್ವಜಾರೋಹಣ ೭ ರಂದು ಪುಣ್ಯಾರಾಧನೆ ಮತ್ತು ಶ್ರೀ ಭೀಮಾಶಂಕರ ಸ್ತುತಿಗೀತಕುಸುಮಾಂಜಲಿ ಪುಸ್ತಕ ಬಿಡುಗಡೆ ಮತ್ತು ಮುತೈದಿಯರ ಉಡಿ ತುಂಬುವ ಕಾರ್ಯಕ್ರಮ ೮ ರಂದು ರುದ್ರಾಭಿಷೇಕ ರಥಾಂಗ ಹೋಮ ಕಳಸಾರೋಣ ಭವ್ಯ ರಥೋತ್ಸವ ಹಾಗೂ ೯ ರಂದು ರಸಮಂಜರಿ ಕಾರ್ಯಕ್ರಮ ೧೦ ರಂದು ಸೇಡಿಗಾಗಿ ಸಿಡಿದೆದ್ದ ಶಿವನಾಗ ಮತ್ತು ಸಾಮಜಾಜಿ ನಾಟಕ ಜರಗುವುದು ಎಂದು ನರಸಿಂಹರಾವ ಮಹಾರಾಜರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read More

ರಾಜ್ಯದ ವಿವಿಧ ವಿವಿ ತಂತ್ರಾಂಶದ ದೋಷ ಸರಿಪಡಿಸಲು ಒತ್ತಾಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ತಂತ್ರಾಂಶದ ದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ವಿಜಯಪುರ ವತಿಯಿಂದ ಬಂಜಾರಾ ಕ್ರಾಸ್ ಹತ್ತಿರ, ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಲಾಯಿತು.ಈ ಸಮಯದಲ್ಲಿ ಸಂಬಂಧಪಟ್ಟ ಯಾವ ಅಧಿಕಾರಿಗಳು ಮನವಿ ಸ್ವೀಕಾರ ಮಾಡದೇ ಇರುವದಕ್ಕೆ ಖಾಲಿ ಕುರ್ಚಿಗೆ ಮನವಿ ಸಲ್ಲಿಸಿ ಹೋರಾಟ ಮಾಡಲಾಯಿತು.ಬೆಳಗಾವಿಯ ಪ್ರತಿಷ್ಠಿತ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಯು.ಯು.ಸಿ.ಎಮ್.ಎಸ್. ತಂತ್ರಾಂಶದಲ್ಲಿ ಬಹಳ ದೋಷಗಳಿಂದ ವಿಧ್ಯಾರ್ಥಿಗಳ ಪರದಾಡುವಂತಹ ಸ್ಥಿತಿಗೆ ಬಂದಿದೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಪದವಿ ಕಾಲೇಜುಗಳ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ ಡಿಸೆಂಬರ್ ನಲ್ಲಿ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಪರೀಕ್ಷಾ ಅರ್ಜಿ ತುಂಬುತ್ತಿದ್ದಾರೆ ವಿಧ್ಯಾರ್ಥಿಗಳ ಖಾತೆಯಿಂದ ಹಣ ಪಾವತಿಯಾಗುತ್ತಿದೆ ಆದರೆ ಅರ್ಜಿ ಸಲ್ಲಿಕೆ ಆಗದೆ ವಿದ್ಯಾರ್ಥಿಗಳು ಚಿಂತೆಗೀಡಾಗುತ್ತಿದ್ದಾರೆ. ನಿಮ್ಮ ಅರ್ಜಿ ಫೇಲ್ಡ್ ಎಂಬ ಸಂದೇಶದಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಈಗಾಗಲೇ…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ವಿಶೇಷಚೇತನ ಮಕ್ಕಳಲದಲಿರುವ ಕೀಳರಿಮೆಯನ್ನು ತೊಡೆದು ಹಾಕಬೇಕು. ಅಂತಹ ಮಕ್ಕಳ ಪೋಷಣೆ ಮಾಡುವ ತಾಯಂದಿರ ತಾಳ್ಮೆ ದೊಡ್ಟದು ಎಂದು ವಿಜಯಪುರ ಗ್ರಾಮೀಣವಲಯ ಬಿಇಓ ಪ್ರಮೋದಿನಿ ಬಳೋಲಮಟ್ಟಿ ಹೇಳಿದರು.ತಾಲ್ಲೂಕಿನ ಕನಮಡಿ ಗ್ರಾಮದ ಧರಿದೇವರ ವಿದ್ಯಾ ವರ್ಧಕ ಸಂಘದ ಪ್ರೌಢ ಶಾಲೆಯಲ್ಲಿ ಮಂಗಳವಾರ ನಡೆದ ತಾಲ್ಲೂಕ ಮಟ್ಟದ ವಿಶೇಷಚೇತನ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಮಕ್ಕಳ ಬಗ್ಗೆ ಸಾಂತ್ವನ ಮತ್ತು ಪ್ರೋತ್ಸಾಹ ನೀಡಬೇಕು. ಶಿಕ್ಷಕರು ಅಂತಹ ಮಕ್ಕಳಿಗೆ ಪ್ರೋತ್ಸಾಹಿಸಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಶಾಂತ ಪಾಟೀಲ, ಮಕ್ಕಳಲ್ಲಿನ ಸೂಕ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡುವದು ಸಮಾಜದ ಹಾಗೂ ಜನಪ್ರತಿನಿಧಿಗಳ ಕರ್ತವ್ಯ ಎಂದು ಹೇಳಿದರು.ಬಿಐಈಆರ್ ಟಿ ಎಸ್. ಬಿ. ಬಿರಾದಾರ ಮಾತನಾಡಿ ಗ್ರಾಮೀಣ ವಲಯದಲ್ಲಿ ವಿವಿಧ ನ್ಯೂನತೆಯ 970 ಮಕ್ಕಳನ್ನು ಗುರುತಿಸಲಾಗಿದೆ. ಇವರಲ್ಲಿ 138 ಮಕ್ಕಳಿಗೆ ಗೃಹ ಆಧಾರಿತ ಶಿಕ್ಷಣ ನೀಡುವ ಮೂಲಕ ಶಾಲೆಯ ಎಲ್ಲ ಉಚಿತ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಸಾಧನ ಸಲಕರಣೆ ವಿತರಣೆ, ವಿದ್ಯಾರ್ಥಿ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ವಿಜಯಪುರದ ಜ್ಞಾನ ಯೋಗಾಶ್ರಮದ ಶತಮಾನದ ಸಂತ ಸಿದ್ದೇಶ್ವರ ಶ್ರೀಗಳ ನುಡಿಗಳು ಸಾರ್ವಕಾಲಿಕ ಸತ್ಯವಾಗಿರುವ ನುಡಿಗಳಾಗಿದ್ದು ನಾವೆಲ್ಲರೂ ಸಿದ್ದೇಶ್ವರ ಶ್ರೀಗಳ ಅನುಭವಾಮೃತವನ್ನು ಮುಂದಿನ ಪೀಳಿಗೆಗೂ ಕೂಡ ತಲುಪಿಸೋಣ ಎಂದು ನಾಗಠಾಣದ ಪ್ರಜ್ಞಾನಂದ ಶ್ರೀಗಳು ಹೇಳಿದರು.ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಕಂಬಿ ಮಲ್ಲಯ್ಯನ ದೇವಸ್ಥಾನದಲ್ಲಿ ಇತ್ತೀಚಿಗೆ ಜರುಗಿದ ಗುರುನಮನ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸತ್ಯವಂತರ ಸಂಗವಿರಲು ತೀರ್ಥವೇತಕೆ ನಿತ್ಯ ಜ್ಞಾನಿಯಾದ ಮೇಲೆ ಚಿಂತೆಯೇತಕೆ ಎಂಬ ಸಂತ ಕನಕದಾಸರ ವಾಣಿಯಂತೆ ಸಿದ್ಧೇಶ್ವರಶ್ರೀಗಳ ನಡೆ ನುಡಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.ಮುಳಸಾವಳಗಿ ಗ್ರಾಮದ ಸಿದ್ದಾರೂಢ ಆಶ್ರಮದ ದಯಾನಂದ ಸ್ವಾಮೀಜಿ, ವಿಜಯಪುರದ ಜ್ಞಾನ ಯೋಗಾಶ್ರಮದ ಗಿರಿಜಾನಂದ , ಬ್ರಹ್ಮಾನಂದ, ,ಬಸವಪ್ರಸಾದ ಸ್ವಾಮೀಜಿಗಳು, ಸ್ಥಳೀಯ ನಿಂಗರಾಯ ಮಹಾರಾಜರು ಆಶೀರ್ವಚನ ನೀಡಿದರುಕಾರ್ಯಕ್ರಮದ ಅಂಗವಾಗಿ ಗ್ರಾಮದ ಶ್ರೀಹನುಮಾನ ದೇವಸ್ಥಾನದಿಂದ ಮಲ್ಲಯ್ಯನ ದೇವಸ್ಥಾನದವರೆಗೆ ಸಿದ್ದೇಶ್ವರ ಶ್ರೀಗಳ ಭಾವಚಿತ್ರದ ಭವ್ಯ ಮೆರವಣಿಗೆ ಮಾಡಲಾಯಿತು.ಪೂಜ್ಯರು, ಗುರುಹಿರಿಯರು, ಸುಮಂಗಲೆಯರು, ಮಕ್ಕಳು, ಸಿದ್ದೇಶ್ವರ ಶ್ರೀಗಳ ವೇಷಧರಿಸಿದ ಶಾಲಾ ಮಕ್ಕಳು ಈ ಮೆರವಣಿಗೆಯಲ್ಲಿ ಭಕ್ತಿಭಾವದಿಂದ ಪಾಲ್ಗೊಂಡಿದ್ದರು. ಸಿದ್ದೇಶ್ವರ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಹಿಳೆಯರನ್ನು ಮಾತೆಯರ ಸ್ವರೂಪವಾಗಿ ಕಾಣುವ ನಮ್ಮ ಸಭ್ಯ ಸಂಸ್ಕೃತಿಯ ಪರಂಪರೆಯಲ್ಲಿ ಉಡಿ ತುಂಬುವ ಕಾರ್ಯಕ್ಕೆ ತುಂಬ ಮಹತ್ವವಿದೆ ಎಂದು ಬಸವನ ಬಾಗೇವಾಡಿ ಒಡೆಯರ ಹಿರೇಮಠದ ಶಿವಪ್ರಕಾಶಶ್ರೀಗಳು ಹೇಳಿದರು.ಪಟ್ಟಣದ ಪತ್ತಾರಕಟ್ಟಿ ಆವರಣದಲ್ಲಿ ಮಂಗಳವಾರ ಶ್ರೀವೀರಭದ್ರೇಶ್ವರ ೧೨ನೇ ವರ್ಷದ ಕಾರ್ತಿಕೋತ್ಸವದ ಅಂಗವಾಗಿ ಜರುಗುತ್ತಿರುವ ಕಲಬುರ್ಗಿ ಶರಣಬಸವೇಶ್ವರ ಮಹಾಪುರಾಣದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಮಾತನಾಡಿದರು.ಇಂದು ಪಟ್ಟಣದ ಬಹುತೇಕ ಮುತೈದೆ ಮಹಿಳೆಯರೆಲ್ಲರೂ ಭಾಗವಹಿಸಿದ್ದು ಶ್ಲಾಘನೀಯ ಎಂದರು.ಆವೋಗೇಶ್ವರ ತಪೋಧಾಮದ ಶ್ರೀ ಮಾತನಾಡಿದರು.ನಂತರ ಪಟ್ಟಣದ ಮಹಿಳೆಯರಿಗೆ ಉಡಿ ತುಂಬಲಾಯಿತು. ನಂತರ ಮಹಾಪ್ರಸಾದ ವಿತರಣೆಯಾಯಿತು.ಇಂದ್ರಾಬಾಯಿ ಕುದರಿ, ಮಾಯಾ ಪಾಟೀಲ, ಮಂಜುಳಾ ಕಕ್ಕಳಮೇಲಿ, ದೀಪಾ ಪಾಟೀಲ,ಶೈಲಾ ಧುತ್ತರಗಾಂವಿ, ಮಹಾದೇವಿ ಪಾಟೀಲ, ಜ್ಯೋತಿ ದೇವೂರ, ಸಾವಿತ್ರಿ ಹಿರೇಮಠ, ನಿರ್ಮಲಾ ಯಾಳಗಿ, ರೇಖಾ ಪಾಟೀಲ, ಲಕ್ಷ್ಮಿ ದಾನಗೊಂಡ, ರೇಣುಕಾ ಪಾಟೀಲ, ದ್ರಾಕ್ಷಾಯಣಿ ಸೌದಿ, ಭಾರತಿ ಪಾಟೀಲ, ಸುರೇಖಾ ಬುದ್ನಿ, ಲಕ್ಷಿö್ಮÃ ಸಾಸಾಬಾಳ, ಭಾರತಿ ಬುದ್ನಿ, ಮಂಜುಳಾ ಅಡಕಿ, ಶಿವಲೀಲಾ ಅರಳಿಮಟ್ಟಿ, ಅಶ್ವಿನಿ ದೇವೂರ, ರೇಖಾ ಧುತ್ತರಗಾಂವಿ, ಭಾಗ್ಯಾ ತೋಟದ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ಪಿಯುಸಿ, ಡಿಪ್ಲೊಮಾ, ಐಟಿಐ, ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಎಸ್ ಎಸ್ ಪಿ ಪೋರ್ಟಲ್ ನಲ್ಲಿ ಶುಲ್ಕ ಮರುಪಾವತಿ ಯೋಜನೆಯಡಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: ೩೧-೧೨-೨೦೨೪ರ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ https://dom.karnataka.gov.inಅಥವಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ೦೧ ರಿಂದ ೦೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ರಾಜ್ಯ ವಿದ್ಯಾರ್ಥಿ ಪೋರ್ಟಲ್ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: ೩೧-೧೨-೨೦೨೪ರ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ https://dom.karnataka.gov.inಅಥವಾ ಅಲ್ಪ ಸಂಖ್ಯಾತರ ಮಾಹಿತಿ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ಮೆಟ್ರಿಕ ನಂತರದ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-೧ರ ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಸ್ನಾತಕೋತ್ತರ ಪದವಿ, ವೃತ್ತಿಪರ ಪದವಿ ಹಾಗೂ ವೃತ್ತಿಪರ ಸ್ನಾತಕೋತ್ತರ ಪದವಿಗಳ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ-ನಂತರದ ಶುಲ್ಕ ಮರುಪಾವತಿ ಹಾಗೂ ವಿದ್ಯಾರ್ಥಿ ವೇತನ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಡಿಸೆಂಬರ ೨೦, ೨೦೨೪ ರವರೆಗೆ ವಿಸ್ತರಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಇಲಾಖಾ ಸಹಾಯವಾಣಿ ಸಂಖ್ಯೆ: ೮೦೫೦೭೭೦೦೦೫ ಅಥವಾ bಛಿತಿಜ.ಞಚಿಡಿಟಿಚಿಣಚಿಞಚಿ.gov.iಟಿ ವೆಬ್ಸೈಟ್‌ಗೆ ಭೇಟಿ ನೀಡಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಎಂಎಸ್‌ಎಂಇ ನೋಂದಾಯಿತರಿಗಾಗಿ ತಮ್ಮ ಉದ್ಯೋಗದಲ್ಲಿ ಸಹಕಾರಿಯಾಗುವ ವ್ಯವಸ್ಥೆ ಬಗ್ಗೆ ಟಿಆರ್‌ಇಡಿಎಸ್ ಹಾಗೂ ಇಎಸ್‌ಎಂ ಈ ಎರಡು ವಿಷಯಗಳ ಕುರಿತು ಪರಿಣಿತರಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ.ಆಸಕ್ತರು ನಿಗದಿತ ನಮೂನೆಯೊಂದಿಗೆ ಉದ್ಯಮ ನೋಂದಣಿ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಆಧಾರ ಕಾರ್ಡ ಪ್ರತಿ ಸಹಿತ ಇತ್ತೀಚಿನ ಭಾವಚಿತ್ರದೊಂದಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಮೊಬೈಲ್ ಸಂಖ್ಯೆ ೯೯೪೫೭೭೯೭೯೮ ಅನ್ನು ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ವಿಶೇಷ ಚೇತನರ ತಾಲೂಕಾ ಮಟ್ಟದ ಕ್ರೀಡಾಕೂಟವನ್ನು ಇದೇ ಡಿಸೆಂಬರ್ ೧೦ ಹಾಗೂ ೧೧ ರಂದು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದೆ.ಡಿಸೆಂಬರ್ ೧೦ರಂದು ವಿಜಯಪುರ ತಾಲೂಕಿನ ಕ್ರೀಡಾಕೂಟವನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ, ಇಂಡಿ ತಾಲೂಕಿನ ಕ್ರೀಡಾಕೂಟವನ್ನು ಇಂಡಿ ತಾಲೂಕಾ ಕ್ರೀಡಾಂಗಣದಲ್ಲಿ, ಸಿಂದಗಿ ತಾಲೂಕಾ ಕ್ರೀಡಾಕೂಟ ಸಿಂದಗಿ ತಾಲೂಕಾ ಕ್ರಿಡಾಂಗಣದಲ್ಲಿ, ಹಾಗೂ ಬಸವನಬಾಗೇವಾಡಿ ತಾಲೂಕಿನ ಕ್ರೀಡಾಕೂಟ ಬಾಗೇವಾಡಿಯ ಎಸ್.ಬಿ ಪಿಯು ಕಾಲೇಜಿನಲ್ಲಿ ಮತ್ತು ಡಿಸೆಂಬರ್ ೧೧ರಂದು ಮುದ್ದೇಬಿಹಾಳ ತಾಲೂಕಿನ ಕ್ರೀಡಾಕೂಟವನ್ನು ಮುದ್ದೇಬಿಹಾಳದ ವ್ಹಿ.ಬಿ.ಸಿ. ಮೈದಾನದಲ್ಲಿ ಆಯೋಜಿಸಲಾಗಿದೆ.ವಿಜಯಪುರ ತಾಲೂಕಿಗೆ ಸಂಬಂಧಿಸಿದಂತೆ ರಾಜಶೇಖರ ದೈವಾಡಿ (ಮೊ:೭೦೧೯೦೦೮೪೪೩), ಇಂಡಿ ತಾಲೂಕಿಗೆ ಎಚ್.ಕೆ.ಮಳಗೊಂಡ (ಮೊ:೯೬೩೨೩೧೫೪೯೨), ಸಿಂದಗಿ ತಾಲೂಕಿಗೆ ಎನ್ ಆರ್.ಚವ್ಹಾಣ (ಮೊ:೯೪೮೦೬೭೮೦೯೭), ಬಸವನಬಾಗೇವಾಡಿ ತಾಲೂಕಿಗೆ ಎಸ್.ಎಸ್.ಅವಟಿ (ಮೊ: ೯೬೬೩೨೯೭೬೫೪) ಹಾಗೂ ಮುದ್ದೇಬಿಹಾಳ ತಾಲೂಕಿಗೆ ಸಂಬಂಧಿಸಿದಂತೆ ಬಿ.ವಾಯ್.ಕವಡಿ (ಮೊ:೭೦೨೬೩೬೯೮೦೫) ಇವರನ್ನು ನೇಮಿಸಲಾಗಿದೆ.ಕ್ರೀಡಾಕೂಟದಲ್ಲಿ ೧೮ ವರ್ಷ ವಯೋಮಿತಿ ಮೇಲ್ಪಟ್ಟ ಪುರುಷ, ಮಹಿಳೆಯರಿಗೆ ೧೦೦ ಮೀಟರ್ ಓಟ, ಗುಂಡು ಎಸೆತ,…

Read More