ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ವಿಶೇಷ ಚೇತನರ ತಾಲೂಕಾ ಮಟ್ಟದ ಕ್ರೀಡಾಕೂಟವನ್ನು ಇದೇ ಡಿಸೆಂಬರ್ ೧೦ ಹಾಗೂ ೧೧ ರಂದು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಡಿಸೆಂಬರ್ ೧೦ರಂದು ವಿಜಯಪುರ ತಾಲೂಕಿನ ಕ್ರೀಡಾಕೂಟವನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ, ಇಂಡಿ ತಾಲೂಕಿನ ಕ್ರೀಡಾಕೂಟವನ್ನು ಇಂಡಿ ತಾಲೂಕಾ ಕ್ರೀಡಾಂಗಣದಲ್ಲಿ, ಸಿಂದಗಿ ತಾಲೂಕಾ ಕ್ರೀಡಾಕೂಟ ಸಿಂದಗಿ ತಾಲೂಕಾ ಕ್ರಿಡಾಂಗಣದಲ್ಲಿ, ಹಾಗೂ ಬಸವನಬಾಗೇವಾಡಿ ತಾಲೂಕಿನ ಕ್ರೀಡಾಕೂಟ ಬಾಗೇವಾಡಿಯ ಎಸ್.ಬಿ ಪಿಯು ಕಾಲೇಜಿನಲ್ಲಿ ಮತ್ತು ಡಿಸೆಂಬರ್ ೧೧ರಂದು ಮುದ್ದೇಬಿಹಾಳ ತಾಲೂಕಿನ ಕ್ರೀಡಾಕೂಟವನ್ನು ಮುದ್ದೇಬಿಹಾಳದ ವ್ಹಿ.ಬಿ.ಸಿ. ಮೈದಾನದಲ್ಲಿ ಆಯೋಜಿಸಲಾಗಿದೆ.
ವಿಜಯಪುರ ತಾಲೂಕಿಗೆ ಸಂಬಂಧಿಸಿದಂತೆ ರಾಜಶೇಖರ ದೈವಾಡಿ (ಮೊ:೭೦೧೯೦೦೮೪೪೩), ಇಂಡಿ ತಾಲೂಕಿಗೆ ಎಚ್.ಕೆ.ಮಳಗೊಂಡ (ಮೊ:೯೬೩೨೩೧೫೪೯೨), ಸಿಂದಗಿ ತಾಲೂಕಿಗೆ ಎನ್ ಆರ್.ಚವ್ಹಾಣ (ಮೊ:೯೪೮೦೬೭೮೦೯೭), ಬಸವನಬಾಗೇವಾಡಿ ತಾಲೂಕಿಗೆ ಎಸ್.ಎಸ್.ಅವಟಿ (ಮೊ: ೯೬೬೩೨೯೭೬೫೪) ಹಾಗೂ ಮುದ್ದೇಬಿಹಾಳ ತಾಲೂಕಿಗೆ ಸಂಬಂಧಿಸಿದಂತೆ ಬಿ.ವಾಯ್.ಕವಡಿ (ಮೊ:೭೦೨೬೩೬೯೮೦೫) ಇವರನ್ನು ನೇಮಿಸಲಾಗಿದೆ.
ಕ್ರೀಡಾಕೂಟದಲ್ಲಿ ೧೮ ವರ್ಷ ವಯೋಮಿತಿ ಮೇಲ್ಪಟ್ಟ ಪುರುಷ, ಮಹಿಳೆಯರಿಗೆ ೧೦೦ ಮೀಟರ್ ಓಟ, ಗುಂಡು ಎಸೆತ, ಬೆಕಟಿನಲ್ಲಿ ರಿಂಗ್ ಹಾಕುವುದು. ೦೬ ರಿಂದ ೧೭ ವರ್ಷದವರಿಗೆ ೧೦೦ ಮೀ ಓಟ, ಗುಂಡು ಎಸೆತ, ಥ್ರೋಬಾಲ್ ಎಸೆತ, ೧೮ ವರ್ಷದೊಳಗಿನ ಹಾಗೂ ಮೇಲ್ಪಟ್ಟ ವಯೋಮಿತಿಯ ದೃಷ್ಟಿದೋಷ ವಿಶೇಷಚೇತನರಿಗೆ ೫೦ ಮೀ. ನಡಿಗೆ, ಗುಂಡು ಎಸೆತ, ಮೂಜಿಕಲ್ ಚೇರ್ ಹಾಗೂ ೧೮ ವರ್ಷದೊಳಗಿನ ಹಾಗೂ ಮೇಲ್ಪಟ್ಟ ವಯೋಮಿತಿಯ ಶ್ರವಣದೋಷ ವಿಶೇಷಚೇತನರಿಗೆ ೧೦೦ ಮೀಟರ್ ಓಟ, ಗುಂಡು ಎಸೆತ, ಉದ್ದ ಜಿಗಿತ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಆಯಾ ತಾಲೂಕಿನ ಸ್ಪರ್ಧಿಗಳು ಅಂದು ಬೆಳಿಗ್ಗೆ ೯ ಗಂಟೆಗೆ ವರದಿ ಮಾಡಿಕೊಳ್ಳಬೇಕು.
ತಾಲೂಕಾ ಮಟ್ಟದ ವಿಶೇಷ ಚೇತನ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಿಗಳು ದಿನಾಂಕ : ೧೭-೧೨-೨೦೨೪ರಂದು ವಿಜಯಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜರುಗುವ ಜಿಲ್ಲಾ ಮಟ್ಟದ ವಿಶೇಷ ಚೇತನ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ ಹಾಗೂ ಜಿಲ್ಲೆಯ ವಿಶೇಷ ಚೇತನ ಪುರುಷ-ಮಹಿಳಾ ಸ್ಪರ್ಧಿಗಳು ಆಸಕ್ತಿಯಿಂದ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಕೋರಲಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ: ೦೮೩೫೨-೨೫೧೦೮೫, ಮೊ: ೮೭೯೨೧೮೫೧೪೧ ಸಂಖ್ಯೆಗೆ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
