ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಹಿಳೆಯರನ್ನು ಮಾತೆಯರ ಸ್ವರೂಪವಾಗಿ ಕಾಣುವ ನಮ್ಮ ಸಭ್ಯ ಸಂಸ್ಕೃತಿಯ ಪರಂಪರೆಯಲ್ಲಿ ಉಡಿ ತುಂಬುವ ಕಾರ್ಯಕ್ಕೆ ತುಂಬ ಮಹತ್ವವಿದೆ ಎಂದು ಬಸವನ ಬಾಗೇವಾಡಿ ಒಡೆಯರ ಹಿರೇಮಠದ ಶಿವಪ್ರಕಾಶಶ್ರೀಗಳು ಹೇಳಿದರು.
ಪಟ್ಟಣದ ಪತ್ತಾರಕಟ್ಟಿ ಆವರಣದಲ್ಲಿ ಮಂಗಳವಾರ ಶ್ರೀವೀರಭದ್ರೇಶ್ವರ ೧೨ನೇ ವರ್ಷದ ಕಾರ್ತಿಕೋತ್ಸವದ ಅಂಗವಾಗಿ ಜರುಗುತ್ತಿರುವ ಕಲಬುರ್ಗಿ ಶರಣಬಸವೇಶ್ವರ ಮಹಾಪುರಾಣದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಮಾತನಾಡಿದರು.
ಇಂದು ಪಟ್ಟಣದ ಬಹುತೇಕ ಮುತೈದೆ ಮಹಿಳೆಯರೆಲ್ಲರೂ ಭಾಗವಹಿಸಿದ್ದು ಶ್ಲಾಘನೀಯ ಎಂದರು.
ಆವೋಗೇಶ್ವರ ತಪೋಧಾಮದ ಶ್ರೀ ಮಾತನಾಡಿದರು.
ನಂತರ ಪಟ್ಟಣದ ಮಹಿಳೆಯರಿಗೆ ಉಡಿ ತುಂಬಲಾಯಿತು. ನಂತರ ಮಹಾಪ್ರಸಾದ ವಿತರಣೆಯಾಯಿತು.
ಇಂದ್ರಾಬಾಯಿ ಕುದರಿ, ಮಾಯಾ ಪಾಟೀಲ, ಮಂಜುಳಾ ಕಕ್ಕಳಮೇಲಿ, ದೀಪಾ ಪಾಟೀಲ,ಶೈಲಾ ಧುತ್ತರಗಾಂವಿ, ಮಹಾದೇವಿ ಪಾಟೀಲ, ಜ್ಯೋತಿ ದೇವೂರ, ಸಾವಿತ್ರಿ ಹಿರೇಮಠ, ನಿರ್ಮಲಾ ಯಾಳಗಿ, ರೇಖಾ ಪಾಟೀಲ, ಲಕ್ಷ್ಮಿ ದಾನಗೊಂಡ, ರೇಣುಕಾ ಪಾಟೀಲ, ದ್ರಾಕ್ಷಾಯಣಿ ಸೌದಿ, ಭಾರತಿ ಪಾಟೀಲ, ಸುರೇಖಾ ಬುದ್ನಿ, ಲಕ್ಷಿö್ಮÃ ಸಾಸಾಬಾಳ, ಭಾರತಿ ಬುದ್ನಿ, ಮಂಜುಳಾ ಅಡಕಿ, ಶಿವಲೀಲಾ ಅರಳಿಮಟ್ಟಿ, ಅಶ್ವಿನಿ ದೇವೂರ, ರೇಖಾ ಧುತ್ತರಗಾಂವಿ, ಭಾಗ್ಯಾ ತೋಟದ, ಶರಣಮ್ಮ ದೇವೂರ, ಅನೀತಾ ವಿಜಾಪೂರ ಸೇರಿದಂತೆ ಬೂದಿಹಾಳ ಗ್ರಾಮದ ಮಹಿಳೆಯರು ಇದ್ದರು.

