ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಎಂಎಸ್‌ಎಂಇ ನೋಂದಾಯಿತರಿಗಾಗಿ ತಮ್ಮ ಉದ್ಯೋಗದಲ್ಲಿ ಸಹಕಾರಿಯಾಗುವ ವ್ಯವಸ್ಥೆ ಬಗ್ಗೆ ಟಿಆರ್‌ಇಡಿಎಸ್ ಹಾಗೂ ಇಎಸ್‌ಎಂ ಈ ಎರಡು ವಿಷಯಗಳ ಕುರಿತು ಪರಿಣಿತರಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ.
ಆಸಕ್ತರು ನಿಗದಿತ ನಮೂನೆಯೊಂದಿಗೆ ಉದ್ಯಮ ನೋಂದಣಿ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಆಧಾರ ಕಾರ್ಡ ಪ್ರತಿ ಸಹಿತ ಇತ್ತೀಚಿನ ಭಾವಚಿತ್ರದೊಂದಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಮೊಬೈಲ್ ಸಂಖ್ಯೆ ೯೯೪೫೭೭೯೭೯೮ ಅನ್ನು ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
