ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ಬಮ್ಮನಹಳ್ಳಿಯಲ್ಲಿ ರಾಜಾಧಿರಾಜಯೋಗಿ ಶ್ರೀ ಸಮರ್ಥಸದ್ದುರು ಭೀಮಾಶಂಕರ ಮಹಾರಾಜರ ೭೦ನೇ ಜಾತ್ರಾ ಮಹೋತ್ಸವು ಡಿಸೆಂಬರ ೬ ರಿಂದ ೯ವರಗೆ ನಡೆಯಲ್ಲಿದೆ.
ಶ್ರೀ ಸಮರ್ಥ ಸದ್ಗುರು ನರಸಿಂಹರಾವ ಮಹಾರಾಜ ನೇತೃತ್ವದಲ್ಲಿ ವಿಶೇಷ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ದಿನಾಂಕ ೬ರಂದು ಧ್ವಜಾರೋಹಣ ೭ ರಂದು ಪುಣ್ಯಾರಾಧನೆ ಮತ್ತು ಶ್ರೀ ಭೀಮಾಶಂಕರ ಸ್ತುತಿಗೀತಕುಸುಮಾಂಜಲಿ ಪುಸ್ತಕ ಬಿಡುಗಡೆ ಮತ್ತು ಮುತೈದಿಯರ ಉಡಿ ತುಂಬುವ ಕಾರ್ಯಕ್ರಮ ೮ ರಂದು ರುದ್ರಾಭಿಷೇಕ ರಥಾಂಗ ಹೋಮ ಕಳಸಾರೋಣ ಭವ್ಯ ರಥೋತ್ಸವ ಹಾಗೂ ೯ ರಂದು ರಸಮಂಜರಿ ಕಾರ್ಯಕ್ರಮ ೧೦ ರಂದು ಸೇಡಿಗಾಗಿ ಸಿಡಿದೆದ್ದ ಶಿವನಾಗ ಮತ್ತು ಸಾಮಜಾಜಿ ನಾಟಕ ಜರಗುವುದು ಎಂದು ನರಸಿಂಹರಾವ ಮಹಾರಾಜರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

