ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ವಿಶೇಷಚೇತನ ಮಕ್ಕಳಲದಲಿರುವ ಕೀಳರಿಮೆಯನ್ನು ತೊಡೆದು ಹಾಕಬೇಕು. ಅಂತಹ ಮಕ್ಕಳ ಪೋಷಣೆ ಮಾಡುವ ತಾಯಂದಿರ ತಾಳ್ಮೆ ದೊಡ್ಟದು ಎಂದು ವಿಜಯಪುರ ಗ್ರಾಮೀಣವಲಯ ಬಿಇಓ ಪ್ರಮೋದಿನಿ ಬಳೋಲಮಟ್ಟಿ ಹೇಳಿದರು.
ತಾಲ್ಲೂಕಿನ ಕನಮಡಿ ಗ್ರಾಮದ ಧರಿದೇವರ ವಿದ್ಯಾ ವರ್ಧಕ ಸಂಘದ ಪ್ರೌಢ ಶಾಲೆಯಲ್ಲಿ ಮಂಗಳವಾರ ನಡೆದ ತಾಲ್ಲೂಕ ಮಟ್ಟದ ವಿಶೇಷಚೇತನ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಮಕ್ಕಳ ಬಗ್ಗೆ ಸಾಂತ್ವನ ಮತ್ತು ಪ್ರೋತ್ಸಾಹ ನೀಡಬೇಕು. ಶಿಕ್ಷಕರು ಅಂತಹ ಮಕ್ಕಳಿಗೆ ಪ್ರೋತ್ಸಾಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಶಾಂತ ಪಾಟೀಲ, ಮಕ್ಕಳಲ್ಲಿನ ಸೂಕ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡುವದು ಸಮಾಜದ ಹಾಗೂ ಜನಪ್ರತಿನಿಧಿಗಳ ಕರ್ತವ್ಯ ಎಂದು ಹೇಳಿದರು.
ಬಿಐಈಆರ್ ಟಿ ಎಸ್. ಬಿ. ಬಿರಾದಾರ ಮಾತನಾಡಿ ಗ್ರಾಮೀಣ ವಲಯದಲ್ಲಿ ವಿವಿಧ ನ್ಯೂನತೆಯ 970 ಮಕ್ಕಳನ್ನು ಗುರುತಿಸಲಾಗಿದೆ. ಇವರಲ್ಲಿ 138 ಮಕ್ಕಳಿಗೆ ಗೃಹ ಆಧಾರಿತ ಶಿಕ್ಷಣ ನೀಡುವ ಮೂಲಕ ಶಾಲೆಯ ಎಲ್ಲ ಉಚಿತ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಸಾಧನ ಸಲಕರಣೆ ವಿತರಣೆ, ವಿದ್ಯಾರ್ಥಿ ನಿರ್ಧಿಷ್ಟ ಮೊತ್ತ ನೀಡಲು ಅವಕಾವಿದೆ. .ಯು ಡಿ ಆಯ್ ಡಿ ಸೌಲಭ್ಯ ಮಾಡಿಸಿಕೊಡಲಾಗುತ್ತಿದೆ ಇವುಗಳೆಲ್ಲದರ ಸೌಲಭ್ಯ ಪಡೆದುಕೊಳ್ಳಲು ಹೇಳಿದರು.
ಮುಖ್ಯಗುರುಮಾತೆ ಎ.ಎಸ್. ಹಜೇರಿ, ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಎಲ್.ಎಂ. ತಿಕೋಟಿ, ಎಸ್. ಆರ್.ತುಂಗಳ, ವಿ. ಎಸ್. ಬಳೂರ, ಭಾಸ್ಕರ ಹೊಸಮನಿ, ರಾಮಗೊಂಡ ಬಿರಾದಾರ, ಅಶೋಕ ಬಿರಾದಾರ, ಚಂದ್ರಶೇಖರ ಕೋರೆ, ವಸಂತ ಚವ್ಹಾಣ, ಎಂ. ಎಚ್. ಜಾಧವ, ಸೋಮಪ್ಪ ಆಯೆಟ್ಟಿ, ಎಸ್. ಎಸ್. ಪಟ್ಟಣಶೆಟ್ಟಿ, ಆರ್. ವಾಯ್ ಗೊಳಸಂಗಿ ಇದ್ದರು.
ಮಕ್ಕಳಿಗೆ ಹಾಗೂ ಪಾಲಕರಿಗೆ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಎಸ್. ಎಂ. ಓಜಿ ಸ್ವಾಗತಿಸಿದರು, ಎಸ್.ಜಿ. ಮಳ್ಳಿ ವಂದಿಸಿದರು. ಎಸ್. ಆರ್. ಕೆಳಗಿನಮಠ ನಿರೂಪಿಸಿದರು.

