Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಮನುಷ್ಯ ಯಾವ ಋಣವನ್ನಾದರೂ ತೀರಿಸಬಹುದು. ಆದರೆ ಮಣ್ಣಿನ ಋಣ ತೀರಿಸುವದು ಎಂದಿಗೂ ಅಸಾಧ್ಯ. ಹಾಗಾಗಿ ಮನುಷ್ಯರಷ್ಟೇ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವದು ಮುಖ್ಯ. ಮಣ್ಣಿದ್ದರೆ ಬದುಕು, ಮಣ್ಣೆಂದರೆ ಉತ್ತಮ ಭವಿಷ್ಯ ಎಂದು ಮಣ್ಣು ವಿಜ್ಞಾನ ಡಾ.ಬಾಲಾಜಿ ನಾಯ್ಕ ಹೇಳಿದರು.ಪಟ್ಟಣದ ಕೃಷಿ ವಿಜ್ಞಾನಕೇಂದ್ರದಲ್ಲಿ ಕೊರಮಂಡಲ್ ಇಂಟರನ್ಯಾಷನಲ್ ಲಿಮಿಟೆಡ್ ವಿಜಯಪುರಇವರ ಸಹಯೋಗದೊಂದಿಗೆ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾವಯುವ ಕೃಷಿ ರೈತ ಎಸ್. ಟಿ. ಪಾಟೀಲ ಮಾತನಾಡಿ, ನಮ್ಮ ಭವಿಷ್ಯವು ಆರೋಗ್ಯಕರ ಮಣ್ಣಿನ ಮೇಲೆ ಅವಲಂಬಿತವಾಗಿದೆ ಮಣ್ಣಿಲ್ಲದೇ ಜಗತ್ತಿಗೆ ಆಹಾರ ಭದ್ರತೆಇಲ್ಲ. ಆಹಾರವಿಲ್ಲದೇ ಜೀವನವಿಲ್ಲ. ಹೀಗಾಗಿ ಆರೋಗ್ಯಕರ, ಸುಸ್ಥಿರ ಮಣ್ಣಿನ ನಿರ್ವಹಣೆಯ ಪ್ರಾಮುಖ್ಯತೆ ತಿಳಿಸಲು ಪ್ರತಿ ವರ್ಷಡಿಸೆಂಬರ ೫ ರಂದು ವಿಶ್ವ ಮಣ್ಣಿನ ದಿನವನ್ನುಆಚರಿಸಾಲುತ್ತದೆ. ಈ ವರ್ಷದ ೨೦೨೪ ರಘೋಷವಾಕ್ಯ“ಮಣ್ಣಿನಕಾಳಜಿ : ಕ್ರಮಗಳು, ಪರಿಶೀಲಿಸಿ, ನಿರ್ವಹಿಸಿ” ಆಗಿದೆ. ಮಣ್ಣಿನಗುಣ ಲಕ್ಷಣಗಳನ್ನು ಪರಿಶೀಲಿಸುವ ಅಗತ್ಯವನ್ನು ಅದರ ಆರೋಗ್ಯ ಸುಧಾರಿಸುವ ಮಾರ್ಗವನ್ನು ಮತ್ತು ನಿತ್ಯ ನಿರ್ವಹಣೆಯ ಉಪಾಯಗಳನ್ನು ಒತ್ತಿ ಹೇಳುತ್ತದೆ ಎಂದು ತಿಳಿಸಿದರು.ಡಾ. ಹೀನಾ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಬಾಬಾಸಾಹೇಬರು ಮಹಾಪರಿನಿರ್ವಾಣ ಹೊಂದಿ ಇಂದಿಗೆ ೬೮ ವರ್ಷಗಳು ಸಂದವು. ಆದರೂ ಅವರು ಶೋಷಿತರ ಎಲ್ಲ ಮನೆಮನಗಳಲ್ಲಿ ಬೆಳೆಯುವುದರ ಜೊತೆಗೆ ಜಗತ್ತಿನ ಮುನ್ನಣೆಗೆ ಒಳಗಾಗುತ್ತಿದ್ದಾರೆ.ಇಂದಿಗೂ ಶೋಷಿತ ಸಮುದಾಯಗಳು ತಮ್ಮ ವಿಮೋಚನೆಯ ಹೊಸ ಮಾದರಿಗಳನ್ನು ಬಾಬಾ ಸಾಹೇಬರಲ್ಲಿ ಕಂಡುಕೊಳ್ಳುತ್ತಿದ್ದಾರೆ. ಅವರು ಜಗತ್ತಿನ ನೊಂದವರ ವಿಮೋಚಕರಾಗುತ್ತಿದ್ದಾರೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಹೇಳಿದರು.ಅವರು ಪಟ್ಟಣದ ಮಿನಿ ವಿದಾನಸೌಧದಲ್ಲಿ ನಡೆದ ಅಂಬೇಡಕರರ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಇಂದಿಗೂ ಈ ದಲಿತ ಸಮುದಾಯಕ್ಕೆ ಬಿಡುಗಡೆ ದಾರಿಯಾಗಿ ಕಾಣುವದು ಬಾಬಾ ಸಾಹೇಬರ ತತ್ವ ಸಿದ್ದಾಂತಗಳು ಮಾತ್ರ, ಆ ದಿಕ್ಕಿನಲ್ಲಿ ಮುನ್ನಡೆದು ಬಾಬಾಸಾಹೇಬರ ಕನಸುಗಳನ್ನು ಬೆಂಬತ್ತಿದರೆ ಅಲ್ಲಿ ಎಲ್ಲ ಶೋಷಿತರಿಗೆ ಬಿಡುಗಡೆಯ ದಾರಿ ಕಾಣಿಸುತ್ತದೆ ಮತ್ತು ಅದೇ ಬಾಬಾಸಾಹೇಬರಿಗೆ ಕೊಡುವ ಶ್ರೇಷ್ಟ ಗೌರವ ಕೂಡ ಎಂದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ ಬಿ.ಎಸ್.ಕಡಕಬಾವಿ, ಧನಪಾಲಶೆಟ್ಟಿ ದೇವೂರ, ಎಸ್.ಆರ್.ಮುಜಗೊಂಡ, ಎಸ್.ಆರ್.ಮೆಂಡೆಗಾರ , ಟಿ.ಎಸ್.ಅಲಗೂರ, ಪ್ರಕಾಶ ಲಮಾಣಿ, ಗ್ಯಾರಂಟಿ ಸಮಿತಿ ತಾಲೂಕಾ ಅಧ್ಯಕ್ಷ ಪ್ರಶಾಂತ ಕಾಳೆ, ವಿನಾಯಕ ಗುಣಸಾಗರ, ಶಿವಾನಂದ ಮೂರಮನ, ಬಾಬು…
ಉದಯರಶ್ಮಿ ದಿನಪತ್ರಿಕೆ ಇಂಡಿ: ಮುಂಗಾರು ತೊಗರೆ ಬೆಳೆ ಶೇ.90% ರಷ್ಟು ನಷ್ಟದಿಂದ ರೈತರು ಕಂಗಲಾಗಿದ್ದು, ಜಿಲ್ಲಾಧಿಕಾರಿಗಳು ತಾಲೂಕಿನ ಬೆಳೆ ಸರ್ವೇ ನಡೆಸಿ ಸರ್ಕಾರ ಹಾಗೂ ವಿಮಾ ಕಂಪನಿಯಿಂದ 1 ಎಕರೆಗೆ ತಲಾ 20,000 ಪರಿಹಾರ ನೀಡಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಇಂಡಿ ಕ.ರ.ವೇ ಅಧ್ಯಕ್ಷ ಬಾಳು ಮುಳಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಟ್ಟಣದ ಖಾಸಗಿ ಬ್ಯಾಂಕ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 35 ವರ್ಷಗಳಿಂದ ಭೀಕರ ಬರಗಾಲ ಆವರಿಸಿದ್ದು ಈ ವರ್ಷ ಒಳ್ಳೆ ಮಳೆಯಾಗಿದ್ದರಿಂದ ರೈತರು ಸಾಲ ಮಾಡಿ ಕೃಷಿ ಕೇಂದ್ರದಿಂದ ಬೀಜ ಬಿತ್ತನೆ ಮಾಡಿದ್ದಾರೆ ಕಳಪೆ ಗುಣಮಟ್ಟದ ಬೀಜ ವಿತರಿಸಿದರಿಂದ ರೋಗ ಬಂದಿದ್ದು ಹೂವು ಉದುರಿ, ಕಾಳು ಕಟ್ಟಾಗಿದೆ ಎಂದು ಅಗ್ರಹಿಸಿದ್ದಾರೆ.ತಾಲೂಕಿನ ಪ್ರತಿಶತ 70% ರಷ್ಟು ರೈತರು ತೊಗರಿ ಬೆಳೆದಿದ್ದು ಬೆಳೆಯನ್ನು ನಂಬಿ ಶುಭ ಸಮಾರಂಭಗಳನ್ನು ಆಯೋಜನೆ ಮಾಡಿದ್ದು ಅವರಿಗೆ ದಿಕ್ಕು ತೂಚ್ಚದಂತೆ ಆಗಿದೆ, ವಿಮಾ ಕಂಪನಿಗಳು ತಮ್ಮ ಮನಸ್ಸಿಗೆ ಬಂದಂತೆ ಕ್ಲೆಮ್ ಮಾಡುತ್ತಿದ್ದಾರೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಮಧ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪದಡಿ ಕುಂಟೋಜಿ ಗ್ರಾಮದ ಎಗ್‌ರೈಸ್ ವ್ಯಾಪಾರಿ ಹಣಮಂತ ಲಮಾಣಿ ಮೇಲೆ ಇಲ್ಲಿನ ಪಿಎಸ್‌ಐ ಸಂಜಯ ತಿಪರೆಡ್ಡಿ ಪ್ರಕರಣ ದಾಖಲಿಸಿದ್ದಾರೆ.ಆರೋಪಿ ಸ್ಥಾನದಲ್ಲಿರುವ ಹಣಮಂತ ತನ್ನ ಎಗ್ ರೈಸ್ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಗ್ಲಾಸು, ನೀರು ಹಾಗೂ ತಿನಿಸು ಕೊಟ್ಟು ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟಾಗ ಪೊಲೀಸರ ಕೈಗೆ ಸಿಕ್ಕು ಪ್ರಕರಣಕ್ಕೆ ದಾರಿ ಮಾಡಿ ಕೊಟ್ಟಿದ್ದಾನೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೧೦/೩೩/೧೧ ಕೆವಿ ಮಮದಾಪುರ೧ ಹಾಗೂ ೨ರ ಮಾರ್ಗಗಳ ಮೇಲೆ ಬರುವ ೧೧೦ ಕೆವಿ ವಿದ್ಯುತ್ ಉಪ ಕೇಂದ್ರಗಳಾದ ಬೆಳ್ಳುಬ್ಬಿ, ಶಿರಬುರ, ದೇವರಗೆಣ್ಣೂರ, ರೋಣಿಹಾಳ, ಕಂಬಾಗಿ, ಬಬಲೇಶ್ವರ ಹಾಗೂ ೩೩ ಕೆವಿ ದೇವರ ಗೆಣ್ಣೂರ ವಿದ್ಯುತ್ ಉಪ ಕೇಂದ್ರಗಳಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ಆದ್ದರಿಂದ, ೧೧೦ ಕೆವಿ ವಿದ್ಯುತ್ ಉಪ ಕೇಂದ್ರಗಳಾದ ಬೆಳ್ಳುಬ್ಬಿ, ಶಿರಬುರ, ದೇವರಗೆಣ್ಣೂರ, ರೋಣಿಹಾಳ, ಕಂಬಾಗಿ, ಬಬಲೇಶ್ವರ ಹಾಗೂ ೩೩ ಕೆವಿ ದೇವರ ಗೆಣ್ಣೂರ ವಿದ್ಯುತ್ ಉಪ ಕೇಂದ್ರಗಳಿಂದ ಸರಬರಾಜಾಗುವ ನಗರ, ಗ್ರಾಮೀಣ, ನೀರಾವರಿ ಪಂಪಸೆಟ್ ೩೩ ಕೆವಿ ಲಿಂಗದಳ್ಳಿ ಎಲ್‌ಐಸಿ ಮಾರ್ಗ, ಕೋಲಾರ ಕುಡಿಯುವ ನೀರಿನ ಮಾರ್ಗಗಳಲ್ಲಿ ಡಿಸೆಂಬರ್ ೦೭ರ ಬೆಳಿಗ್ಗೆ ೯ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂನ ಅಧಿಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಅಪ್ರೆಂಟಿಶಿಪ್ ತರಬೇತಿಗೆ ಪರಿಶಿಷ್ಟ ಜಾತಿ-ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿಯ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಹಾಗೂ ಕಂಪ್ಯೂಟರ್ ಜ್ಞಾನಹೊಂದಿದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ೧೨ ತಿಂಗಳ ಅಪ್ರೆಂಟಿಶಿಪ್ ತರಬೇತಿಗಾಗಿ ಅರ್ಜಿಗಳನ್ನು ಡಿಸೆಂಬರ್ ೧೮ರವರೆಗೆ ಸಲ್ಲಿಸಬಹುದಾಗಿದೆ.ವಿಜಯಪುರ ಜಿಲ್ಲಾ ಕಚೇರಿಯಲ್ಲಿ ತಲಾ ಒಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಅಪ್ರೆಂಟಿಶಿಪ್ ತರಬೇತಿಗೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ತರಬೇತಿಗೆ ಮೆರಿಟ್ ಹಾಗೂ ಸಂದರ್ಶನ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಧ್ಯಮ ಅಕಾಡೆಮಿ ಮೂಲಕ ತರಬೇತಿ ಭತ್ಯೆ ನೀಡಲಾಗುವುದು.ಅಪ್ರೆಂಟಿಶಿಪ್ ತರಬೇತಿಗೆ ಆಯ್ಕೆ ಬಯಸುವ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ದಿನಾಂಕ:೧೮-೧೨-೨೦೨೪ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರ…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಾ.ಅಂಬೇಡ್ಕರ್ ಅವರು ಕೇವಲ ನಾಯಕರಲ್ಲ ಅವರು ಲಕ್ಷಾಂತರ ಶೋಷಿತ ಜನರ ಭರವಸೆಯ ಬೆಳಕಾಗಿದ್ದರು ಎಂದು ಎಸ್‌ಬಿ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಎಂದು ಉಪ ಪ್ರಾಚಾರ್ಯ ಡಾ.ಅನಿಲ್ ನಾಯಕ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆಯಲ್ಲಿ ಭಾಗವಹಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯದ ಪರ ಶ್ರಮಿಸಿದವರು. ಇಂದು ಸಮಾಜ ಸುಧಾರಕ, ದಾರ್ಶನಿಕ ಹಾಗೂ ನಮ್ಮ ಸಂವಿಧಾನದ ಶಿಲ್ಪಿಯ ಜೀವನ ಮತ್ತು ಪರಂಪರೆಯನ್ನು ನೆನಪಿಸಿಕೊಳ್ಳುವ ದಿನವಾಗಿದೆ ಎಂದು ಸ್ಮರಿಸಿದರು.ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆಲ್ಲ ನ್ಯಾಯ, ಸಮಾನತೆ ಹಾಗೂ ಸೋದರತ್ವದ ತತ್ವಗಳನ್ನು ಕೊಟ್ಟು ಭಾರತದ ಇತಿಹಾಸ ಪರಂಪರೆಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಇಂದು ಅವರ ಅಮೂಲ್ಯ ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಅವಶ್ಯಕವಾಗಿದೆ. “ಶಿಕ್ಷಣವು ಜಗತ್ತನ್ನು ಬದಲಾಯಿಸಲು ನೀವು ಬಳಸಬಹುದಾದ ಅತ್ಯಂತ…
ವಿಜಯಪುರದಲ್ಲಿ ಪವಾಡ ಪುರುಷ ಕೋಳಕೂರ ಸಿದ್ಧಬಸವೇಶ್ವರ ೫೯೭ನೇ ಜಯಂತೋತ್ಸವ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿ ವರ್ಷ ಸಿದ್ಧಬಸವೇಶ್ವರ ಜಯಂತೋತ್ಸವ ಹಮ್ಮಿಕೊಂಡು ಬಡಾವಣೆಯ ಜನತೆಗೆ ಜ್ಞಾನ ದಾಸೋಹದೊಂದಿಗೆ ಅನ್ನದಾಸೋಹಗೈಯುತ್ತಿರುವ ಸಿ.ಎಂ.ಮಾಲಿಪಾಟೀಲರ ಭಕ್ತಿಸೇವೆ ಶ್ಲಾಘನೀಯ ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ನಗರದ ರಾಜಕುಮಾರ ಬಡಾವಣೆಯಲ್ಲಿ ಉದ್ಯಮಿ ಸಿ.ಎಂ.ಮಾಲಿಪಾಟೀಲರು ಏರ್ಪಡಿಸಿದ ಪವಾಡ ಪುರುಷ ಕೋಳಕೂರ ಸಿದ್ಧಬಸವೇಶ್ವರ ೫೯೭ನೇ ಜಯಂತೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಮನೆಯಲ್ಲಿ ಪಾಲಕರು ಸದಾಚಾರ ರೂಡಿಸಿಕೊಳ್ಳಬೇಕು. ಏಕೆಂದರೆ ಮಕ್ಕಳು ಪಾಲಕರನ್ನೇ ಅನುಸರಿಸುವುದರಿಂದ ನಮ್ಮ ನಡೆ-ನುಡಿ ಶುದ್ಧವಾಗಿರಬೇಕು. ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡಬೇಕು. ನಮ್ಮ ದೇಶದ ಸಂಸ್ಕೃತಿ ಶ್ರೇಷ್ಠವಾಗಿದೆ. ಅದನ್ನು ಉಳಿಸಿಕೊಂಡು ಬೆಳೆಸುವ ಹೊಣೆ ನಮ್ಮೆಲ್ಲರದು ಎಂದು ಶ್ರೀಗಳು ನುಡಿದರು.ಹೊನವಾಡ ದ ಬಾಬುರಾವ ಮಹಾರಾಜರು ಪವಾಡ ಪುರುಷ ಕೋಳಕೂರ ಸಿದ್ಧಬಸವೇಶ್ವರರ ಕುರಿತು ವಿವರಿಸಿದರು.ಮಾಜಿ ಶಾಸಕ ರಾಜು ಆಲಗೂರ, ಎಸ್.ಜಿ.ಲಕ್ಕುಂಡಿಮಠ, ಹರೀಶಗೌಡ ಪಾಟೀಲ, ಜಿ.ಬಿ.ಜಿದ್ದಿಮನಿ, ನಾಡಗೌಡ, ಹೊಸಮನಿ, ಗುರುಬಸಯ್ಯ ಹಿರೇಮಠ ವೇದಿಕೆ ಮೇಲಿದ್ದರು.ಅಂಬಾದಾಸ ಜೋಶಿ, ಮಾಳವಿಕ ಜೋಶಿ ಸಂಗೀತ ಸೇವೆಗೈದರು.ಈರಣ್ಣ…
ಒಣಗಿ ನೆಲೆಕ್ಕುರುಳುತ್ತಿರವ ಭತ್ತ | ಅಕಾಲಿಕ ಮಳೆಯ ಭಯ | ಲಭ್ಯವಾಗದ ಭತ್ತ ಕಟಾವು ಯಂತ್ರಗಳು | ಸಂಕಷ್ಟದಲ್ಲಿ ರೈತರು ಉದಯರಶ್ಮಿ ದಿನಪತ್ರಿಕೆ ವರದಿ: ಇಲ್ಯಾಸ್ ಪಟೇಲ್. ಬಳಗಾನೂರಯಾದಗಿರಿ: ಭತ್ತ ಕಟಾವಿಗೆ ಯಂತ್ರ ಸಿಗದೆ ಗಿರಿನಾಡು ಯಾದಗಿರಿ ಜಿಲ್ಲಾದ್ಯಂತ ಅನೇಕ ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ಸಂಕಷ್ಟ ಅನುಭವಿಸುತ್ತಿರುವುದು ಎದ್ದು ಕಾಣುತ್ತಿದೆ.ರೈತರು ಬೆಳೆದ ಭತ್ತ ಗದ್ದೆಯಲ್ಲಿಯೇ ಒಣಗಿ ನೆಲೆಕ್ಕುರುಳುತ್ತಿವೆ. ಅಕಾಲಿಕ ಮಳೆಯಿಂದ ಬೆಳೆದ ಭತ್ತದ ಬೆಳೆ ನೀರಿನಲ್ಲಿಯೇ ಕೊಳೆತು ಹೋಗುತ್ತದೆ ಎಂಬ ಭಯ ಕೃಷಿಕರನ್ನು ಕಾಡುತ್ತಿದೆ. ಅಕಾಲಿಕ ಮಳೆ ಭತ್ತ ಕಟಾವು ವಿಳಂಬಕ್ಕೆ ಕಾರಣವಾದರೆ, ಇನ್ನೊಂದು ಕಡೆ ಹಲವಾರು ಪ್ರದೇಶಗಳಲ್ಲಿ ಭತ್ತ ಕಟಾವು ಆರಂಭಗೊಂಡಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ಭತ್ತ ಕಟಾವು ಯಂತ್ರಗಳು ಜಿಲ್ಲೆಯಿಂದ ಹೊರ ಹೋಗಿರುವುದು ಭತ್ತ ಕಟಾವಿಗೆ ದೊಡ್ಡ ಮಟ್ಟದ ಹೊಡೆತ ನೀಡಿದೆ.ಈಗ ಭತ್ತದ ಬೆಳೆಯ ಕಟಾವು ಆರಂಭವಾಗಿದ್ದು, ಮೊದಲಿನಂತೆ ಕಟಾವು ಮಾಡಲು ಕೂಲಿ ಕಾರ್ಮಿಕರ ಸಮಸ್ಯೆ ಉದ್ಭವಿಸಿದ್ದು, ರೈತರು ಆತಂಕ ಪಡುವಂತಾಗಿದೆ. ಇದರ…
ಲೇಖನ- ಡಾ.ಶಶಿಕಾಂತ.ರುದ್ರಪ್ಪಾ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಕಲ್ಯಾಣ ಮಹಾಮನೆಯಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳುವಳಿಯ ಅಗ್ರ ನಾಯಕ ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವರು.ಕಲ್ಯಾಣ ಕ್ರಾಂತಿಯು ರಕ್ತಸಿಕ್ತವಾಗಿ ಮಾರ್ಪಟ್ಟಾಗ, ವಚನಗಳಿಗೆ ಸನಾತನಿಗಳಿಂದ ಆಪತ್ತು ವಿಪತ್ತು ಬಂದು ಒದಗಿದಾಗ ವಚನಗಳ ಸಂರಕ್ಷಣೆಗೆ ಮುಂದಾಗಿ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಅವುಗಳನ್ನು ಒಂದೆಡೆ ಕ್ರೋಢೀಕರಿಸಿ ಬಿಜ್ಜಳನ ಮಗ ಸೋವಿದೇವ ಹಾಗೂ ಅವನ ಸೈನ್ಯದ ದಾಳಿಯಿಂದ ಉಳಿಸಲು ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವರು ಹರ ಸಾಹಸ ಯುದ್ಧ ಮಾಡಬೇಕಾಗಿ ಬಂತು.ಬಸವ ನಿಷ್ಠ ವಚನಕಾರ ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವರು. ಇವರು ಇಂದಿನ ಬಿಜಾಪುರ ಜಿಲ್ಲೆಯ ಹಿಪ್ಪರಗಿ (ದೇವರ ಹಿಪ್ಪರಗಿ) ಜನ್ಮ ತಾಳಿದರು. ಬಸವಣ್ಣ ಅಲ್ಲಮ ಅಕ್ಕ ಮಹಾದೇವಿ ಸಿದ್ಧರಾಮ ಚೆನ್ನ ಬಸವಣ್ಣ ಮತ್ತು ಮರುಳ ಶಂಕರದೇವರ ವಚನಗಳಲ್ಲಿ ಅವರರೆಲ್ಲರ ಪ್ರೀತಿಗೆ ಪಾತ್ರನಾಗಿ ಅವರಿಂದ ಸ್ತುತಿಗೆ ಒಳಗಾಗುತ್ತಾರೆ ಮಡಿವಾಳ ಮಾಚಿದೇವರು.ಅನೇಕ ಲಿಂಗಾಯತ ಕೃತಿಗಳಲ್ಲಿ ಮಡಿವಾಳ ಮಾಚಿದೇವರ ವೀರತ್ವ ಶೌರ್ಯವನ್ನು ಕಥೆ ರೂಪಕ ಪುರಾಣಗಳಲ್ಲಿ ಕಾಣಬಹುದು.. ಜನಪದಿಗರಂತೂ ಮಡಿವಾಳ…
