ಉದಯರಶ್ಮಿ ದಿನಪತ್ರಿಕೆ
ಇಂಡಿ: ಮನುಷ್ಯ ಯಾವ ಋಣವನ್ನಾದರೂ ತೀರಿಸಬಹುದು. ಆದರೆ ಮಣ್ಣಿನ ಋಣ ತೀರಿಸುವದು ಎಂದಿಗೂ ಅಸಾಧ್ಯ. ಹಾಗಾಗಿ ಮನುಷ್ಯರಷ್ಟೇ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವದು ಮುಖ್ಯ. ಮಣ್ಣಿದ್ದರೆ ಬದುಕು, ಮಣ್ಣೆಂದರೆ ಉತ್ತಮ ಭವಿಷ್ಯ ಎಂದು ಮಣ್ಣು ವಿಜ್ಞಾನ ಡಾ.ಬಾಲಾಜಿ ನಾಯ್ಕ ಹೇಳಿದರು.
ಪಟ್ಟಣದ ಕೃಷಿ ವಿಜ್ಞಾನಕೇಂದ್ರದಲ್ಲಿ ಕೊರಮಂಡಲ್ ಇಂಟರನ್ಯಾಷನಲ್ ಲಿಮಿಟೆಡ್ ವಿಜಯಪುರಇವರ ಸಹಯೋಗದೊಂದಿಗೆ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾವಯುವ ಕೃಷಿ ರೈತ ಎಸ್. ಟಿ. ಪಾಟೀಲ ಮಾತನಾಡಿ, ನಮ್ಮ ಭವಿಷ್ಯವು ಆರೋಗ್ಯಕರ ಮಣ್ಣಿನ ಮೇಲೆ ಅವಲಂಬಿತವಾಗಿದೆ ಮಣ್ಣಿಲ್ಲದೇ ಜಗತ್ತಿಗೆ ಆಹಾರ ಭದ್ರತೆಇಲ್ಲ. ಆಹಾರವಿಲ್ಲದೇ ಜೀವನವಿಲ್ಲ. ಹೀಗಾಗಿ ಆರೋಗ್ಯಕರ, ಸುಸ್ಥಿರ ಮಣ್ಣಿನ ನಿರ್ವಹಣೆಯ ಪ್ರಾಮುಖ್ಯತೆ ತಿಳಿಸಲು ಪ್ರತಿ ವರ್ಷಡಿಸೆಂಬರ ೫ ರಂದು ವಿಶ್ವ ಮಣ್ಣಿನ ದಿನವನ್ನುಆಚರಿಸಾಲುತ್ತದೆ. ಈ ವರ್ಷದ ೨೦೨೪ ರಘೋಷವಾಕ್ಯ“ಮಣ್ಣಿನಕಾಳಜಿ : ಕ್ರಮಗಳು, ಪರಿಶೀಲಿಸಿ, ನಿರ್ವಹಿಸಿ” ಆಗಿದೆ. ಮಣ್ಣಿನಗುಣ ಲಕ್ಷಣಗಳನ್ನು ಪರಿಶೀಲಿಸುವ ಅಗತ್ಯವನ್ನು ಅದರ ಆರೋಗ್ಯ ಸುಧಾರಿಸುವ ಮಾರ್ಗವನ್ನು ಮತ್ತು ನಿತ್ಯ ನಿರ್ವಹಣೆಯ ಉಪಾಯಗಳನ್ನು ಒತ್ತಿ ಹೇಳುತ್ತದೆ ಎಂದು ತಿಳಿಸಿದರು.
ಡಾ. ಹೀನಾ ಎಂ.ಎಸ್, ಡಾ. ಪ್ರಸಾದ ಎಂ. ಜಿ. ಡಾ. ಪ್ರೇಮ್‌ಚಂದ್‌ಯು. ಡಾ. ಪ್ರಕಾಶ ಜಿ. ಮಾತನಾಡಿದರು.
ಬಿ. ಎಸ್. ಬಿರಾದಾರ, ಎಂ. ಎಲ್. ದೇವರ, ಅಬ್ದುಲ ರಜಾಕ ಮಾರುಕಟ್ಟೆಅಧಿಕಾರಿ, ಕೊರಮಂಡಲ್‌ಇಟರನ್ಯಾಷನಲ್ ಲಿಮಿಟೆಡ್ ವಿಜಯಪುರ, ರಂಜಿತಕುಮಾರ ಜಿ. ಟಿ. ವಲಯ ಪ್ರಬಂಧಕರು, ಕೊರಮಂಡಲ್‌ಇಂಟರನ್ಯಾಷನಲ್ ಲಿಮಿಟೆಡ್, ಅನಿಲ ಬನಸೊಡೆ , ಶೈಲಶ್ರೀ ಜಾಧವ, ಅನಿಲ ಬನಸೋಡೆ, ಮತ್ತಿತರಿದ್ದರು.
ಹೆಚ್ಚು ಜನ ಆಸಕ್ತ ರೈತರು, ಯುವಕರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

