ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೧೧೦/೩೩/೧೧ ಕೆವಿ ಮಮದಾಪುರ೧ ಹಾಗೂ ೨ರ ಮಾರ್ಗಗಳ ಮೇಲೆ ಬರುವ ೧೧೦ ಕೆವಿ ವಿದ್ಯುತ್ ಉಪ ಕೇಂದ್ರಗಳಾದ ಬೆಳ್ಳುಬ್ಬಿ, ಶಿರಬುರ, ದೇವರಗೆಣ್ಣೂರ, ರೋಣಿಹಾಳ, ಕಂಬಾಗಿ, ಬಬಲೇಶ್ವರ ಹಾಗೂ ೩೩ ಕೆವಿ ದೇವರ ಗೆಣ್ಣೂರ ವಿದ್ಯುತ್ ಉಪ ಕೇಂದ್ರಗಳಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಆದ್ದರಿಂದ, ೧೧೦ ಕೆವಿ ವಿದ್ಯುತ್ ಉಪ ಕೇಂದ್ರಗಳಾದ ಬೆಳ್ಳುಬ್ಬಿ, ಶಿರಬುರ, ದೇವರಗೆಣ್ಣೂರ, ರೋಣಿಹಾಳ, ಕಂಬಾಗಿ, ಬಬಲೇಶ್ವರ ಹಾಗೂ ೩೩ ಕೆವಿ ದೇವರ ಗೆಣ್ಣೂರ ವಿದ್ಯುತ್ ಉಪ ಕೇಂದ್ರಗಳಿಂದ ಸರಬರಾಜಾಗುವ ನಗರ, ಗ್ರಾಮೀಣ, ನೀರಾವರಿ ಪಂಪಸೆಟ್ ೩೩ ಕೆವಿ ಲಿಂಗದಳ್ಳಿ ಎಲ್‌ಐಸಿ ಮಾರ್ಗ, ಕೋಲಾರ ಕುಡಿಯುವ ನೀರಿನ ಮಾರ್ಗಗಳಲ್ಲಿ ಡಿಸೆಂಬರ್ ೦೭ರ ಬೆಳಿಗ್ಗೆ ೯ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂನ ಅಧಿಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
