ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮಧ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪದಡಿ ಕುಂಟೋಜಿ ಗ್ರಾಮದ ಎಗ್‌ರೈಸ್ ವ್ಯಾಪಾರಿ ಹಣಮಂತ ಲಮಾಣಿ ಮೇಲೆ ಇಲ್ಲಿನ ಪಿಎಸ್‌ಐ ಸಂಜಯ ತಿಪರೆಡ್ಡಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಸ್ಥಾನದಲ್ಲಿರುವ ಹಣಮಂತ ತನ್ನ ಎಗ್ ರೈಸ್ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಗ್ಲಾಸು, ನೀರು ಹಾಗೂ ತಿನಿಸು ಕೊಟ್ಟು ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟಾಗ ಪೊಲೀಸರ ಕೈಗೆ ಸಿಕ್ಕು ಪ್ರಕರಣಕ್ಕೆ ದಾರಿ ಮಾಡಿ ಕೊಟ್ಟಿದ್ದಾನೆ.
