ಉದಯರಶ್ಮಿ ದಿನಪತ್ರಿಕೆ
ಇಂಡಿ: ಮುಂಗಾರು ತೊಗರೆ ಬೆಳೆ ಶೇ.90% ರಷ್ಟು ನಷ್ಟದಿಂದ ರೈತರು ಕಂಗಲಾಗಿದ್ದು, ಜಿಲ್ಲಾಧಿಕಾರಿಗಳು ತಾಲೂಕಿನ ಬೆಳೆ ಸರ್ವೇ ನಡೆಸಿ ಸರ್ಕಾರ ಹಾಗೂ ವಿಮಾ ಕಂಪನಿಯಿಂದ 1 ಎಕರೆಗೆ ತಲಾ 20,000 ಪರಿಹಾರ ನೀಡಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಇಂಡಿ ಕ.ರ.ವೇ ಅಧ್ಯಕ್ಷ ಬಾಳು ಮುಳಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಖಾಸಗಿ ಬ್ಯಾಂಕ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 35 ವರ್ಷಗಳಿಂದ ಭೀಕರ ಬರಗಾಲ ಆವರಿಸಿದ್ದು ಈ ವರ್ಷ ಒಳ್ಳೆ ಮಳೆಯಾಗಿದ್ದರಿಂದ ರೈತರು ಸಾಲ ಮಾಡಿ ಕೃಷಿ ಕೇಂದ್ರದಿಂದ ಬೀಜ ಬಿತ್ತನೆ ಮಾಡಿದ್ದಾರೆ ಕಳಪೆ ಗುಣಮಟ್ಟದ ಬೀಜ ವಿತರಿಸಿದರಿಂದ ರೋಗ ಬಂದಿದ್ದು ಹೂವು ಉದುರಿ, ಕಾಳು ಕಟ್ಟಾಗಿದೆ ಎಂದು ಅಗ್ರಹಿಸಿದ್ದಾರೆ.
ತಾಲೂಕಿನ ಪ್ರತಿಶತ 70% ರಷ್ಟು ರೈತರು ತೊಗರಿ ಬೆಳೆದಿದ್ದು ಬೆಳೆಯನ್ನು ನಂಬಿ ಶುಭ ಸಮಾರಂಭಗಳನ್ನು ಆಯೋಜನೆ ಮಾಡಿದ್ದು ಅವರಿಗೆ ದಿಕ್ಕು ತೂಚ್ಚದಂತೆ ಆಗಿದೆ, ವಿಮಾ ಕಂಪನಿಗಳು ತಮ್ಮ ಮನಸ್ಸಿಗೆ ಬಂದಂತೆ ಕ್ಲೆಮ್ ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ,ರ,ವೇ ಜಿಲ್ಲಾ ಉಪಾಧ್ಯಕ್ಷ ರಾಜು ಕುಲಕರ್ಣಿ, ಇಂಡಿ ನಗರ ಅಧ್ಯಕ್ಷ ಮಹೇಶ್ ಹೂಗಾರ್, ಸಂಚಾಲಕ ಸಂದೇಶ್ ಗಲಗಲಿ, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಮೈಬೂಬ್ ಬೇನೂರು, ಯುವ ಘಟಕದ ಅಧ್ಯಕ್ಷ ಪ್ರವೀಣ್ ಪೂದ್ದಾರ, ಕರವೇ ಪ್ರಧಾನ ಕಾರ್ಯದರ್ಶಿ ಸಚಿನ್ ನಾವಿ, ಸಹ ಸಂಚಾಲಕ ಶಿವಾನಂದ್ ಮಡಿವಾಳ ಇನ್ನಿತರು ಉಪಸ್ಥಿತರಿದ್ದರು.

