Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾರು ಮತ್ತು ಕಬ್ಬು ಕಟಾವು ಮಷೀನ್ ನಡುವೆ ಭೀಕರ ಅಪಘಾತ ಸಂಭವಿಸಿ ಐವರು ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೇಬಾವಿ ಕ್ರಾಸ್ ಬಲಿ ನಡೆದಿದೆ.ಮೃತರನ್ನು ವಿಜಯಪುರ ತಾಲೂಕಿನ ಅಲಿಯಾಬಾದ್ ನಿವಾಸಿಗಳೆಂದು ಗುರುತಿಸಲಾಗಿದ್ದು, ಈರ್ವರು ಮಹಿಳೆಯರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.ಮೃತರು ಹುಣಸಗಿಯಿಂದ ತಾಳಿಕೋಟೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.ಮೃತರನ್ನು ನಿಂಗಪ್ಪ ಪಾಟೀಲ (೫೫), ಶಾಂತಪ್ಪ ಪಾಟೀಲ (೪೫), ಭೀಮಶಿ ಸಂಕನಾಳ (೬೫), ಶಶಿಕಲಾ (೫೦), ದಿಲೀಪ ಪಾಟೀಲ (೪೫) ಎಂದು ಗುರುತಿಸಲಾಗಿದೆ.ಕಾರು ಮತ್ತು ಕಬ್ಬು ಕಟಾವು ಮಷೀನ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮದುವೆಗೆ ಹುಡುಗಿ ನೋಡಲು ಹೋಗಿ ವಾಪಸು ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ತಾಳಿಕೋಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸ್ಥಳಕ್ಕೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ಅಸುರಕ್ಷಿತ ಲೈಂಗಿಕತೆ ಜೀವಕ್ಕೆ ಅಪಾಯ. ಅದರಲ್ಲೂ ಮಹಾಮಾರಿ ಎಚ್.ಐ ವಿ ಮತ್ತು ಏಡ್ಸ ಸೋಂಕಿತದ ಬಗ್ಗೆ ಯುವ ಜನಾಂಗ ಬಹಳಷ್ಟು ಎಚ್ಚರಿಕೆ ಮತ್ತು ಸುರಕ್ಷಾ ಕ್ರಮ ಅನುಸರಿಸಲು ಹಿರಿಯ ಶ್ರೇಣಿ ನ್ಯಾಯಾಧೀಶ ಕೊಟೆಪ್ಪ ಕಾಂಬಳೆ ಮಾತನಾಡಿದರು.ತಾಲೂಕಿನ ಚವಡಿಹಾಳ ಗ್ರಾಮದ ಭಾಗ್ಯವಂತಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಏಡ್ಸ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಿರಿಯ ಶ್ರೇಣಿ ನ್ಯಾಯಾಧೀಶ ಸುನೀಲಕುಮಾರ ಮಾತನಾಡಿ ಏಡ್ಸ ಎಂದು ಯಾರು ಭಯ ಪಡುವ ಅಗತ್ಯವಿಲ್ಲ. ಅದಕ್ಕಾಗಿ ಸರಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಏಡ್ಸ ಹೋಗಲಾಡಿಸಲು ಪ್ರಯತ್ನ ನಡೆದಿದೆ ಎಂದರು.ಡಾ|| ರಾಜೇಶ ಕೋಳೆಕರ ಮಾತನಾಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಉಚಿತ ಊಟ, ಔಷದ ರಕ್ತ ಪರೀಕ್ಷೆ ವೈದ್ಯರ ಸಲಹೆ ನೀಡಲಾಗುತ್ತದೆ ಎಂದರು.ಪ್ರಾಚಾರ್ಯ ಚಂದ್ರಶೇಖರ ದಶವಂತ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಅಂಬಲಗಿ, ಕೆ.ಜಿ.ಶೀಲವಂತ, ವಿಜಯಕುಮಾರ ಶಿಂಧೆ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಾಂತಪ್ಪ ದಶವಂತ, ನ್ಯಾಯವಾದಿ ಅಶೋಕ ಗಜಾಕೋಶ, ಅಜೀತ ಧನಶೆಟ್ಟಿ, ವೈದ್ಯರಾದ ಡಾ||ಪ್ರವೀಣ ಗಜಾಕೋಶ, ಎನ್.ಕೆ.ನಾಡಪುರೋಹಿತ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇತ್ತೀಚಿನ ದಿನದಲ್ಲಿ ದುಡಿಮೆ, ಒಳೆತನ ಮರೆಯಾಗುತ್ತಿದೆ. ಸದಾ ಅಮಾಯಕರು ಕೆಟ್ಟ ದುಶ್ಚಟ, ವಂಚನೆ ಮುಂತಾವುಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ವ್ಯವಸ್ಥೆಯಿಂದ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕೆಂದು ಗಾನಯೋಗಿ ಸಂಘದ ಅಧ್ಯಕ್ಷ ಪ್ರಕಾಶ ಆರ್.ಕೆ. ಹೇಳಿದರು.ಅವರು ನಗರದ ಪ್ರಮುಖ ಬೀದಿಗಳಲ್ಲಿ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಅಭಿಯಾನ ಹಮ್ಮಿಕೊಂಡು ಕೆಲವು ಪೋಸ್ಟರ್‌ಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರು ನಿಮ್ಮೊಂದಿಗೆ ಅಶ್ಲೀಲವಾಗಿ ವಿಡಿಯೋ ಕಾಲ್ ಮಾಡಿ ಅದನ್ನು ಸ್ಕ್ರೀನ್ ರೀಕಾರ್ಡಿಂಗ್ ಮಾಡಿ ಹಣಕ್ಕೆ ಆಮಿಷ ಒಡ್ಡುತ್ತಿರುವುದು ಹಲವಾರು ಸಾಮಾಜಿಕ ಜಾಲತಾಣದಲ್ಲಿ ನಾವೆಲ್ಲರೂ ನೋಡುತ್ತಿದ್ದೇವೆ. ಆದರೆ ಯಾರು ಅದರ ಬಗ್ಗೆ ಎಚ್ಚೆತ್ತುಕೊಳ್ಳುತ್ತಿಲ್ಲ. ಇಂತಹದ ಬಲಿಗೆ ಬಿದ್ದು ತಮ್ಮ ಬದುಕನ್ನು ನರಕ ಮಾಡಿಕೊಳ್ಳುತ್ತಿರುವುದು ಖೇದಕರ ಸಂಗತಿಯಾಗಿದೆ. ಕುಟುಂಬದ ನಿರ್ವಹಣೆಗಾಗಿ ಹಗಲು ರಾತ್ರಿ ಲೆಕ್ಕಿಸದೇ ದುಡಿಮೇಯೇ ದುಡ್ಡಿನ ತಾಯಿ ಎಂದು ನ್ಯಾಯಯುತವಾಗಿ ದುಡಿದ ನಿಮ್ಮ ದುಡ್ಡನ್ನು ವಂಚಕರಿಗೆ ಫೋನ್ ಮೂಲಕ ಬ್ಯಾಂಕ್ ಅಕೌಂಟ್ ಡೆಬಿಟ್ ಕಾರ್ಡ್. ಕ್ರೆಡಿಟ್ ಕಾರ್ಡ್ ಹಾಗೂ ಓಟಿಪಿ ಮೆಸೇಜ್ ಯಾರೋಂದಿಗೂ…
ಮಹಿಳಾ ವಿವಿಯಲ್ಲಿ ಓರಿಯೆಂಟೇಶನ್ ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಪರಶುರಾಮ ಬಾಸಗಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು ಈ ಅವಕಾಶಗಳನ್ನು ಪಡೆದುಕೊಳ್ಳಬೇಕಾದರೆ ಹೆಚ್ಚು ಹೆಚ್ಚು ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ಪತ್ರಕರ್ತ ಪರಶುರಾಮ ಬಾಸಗಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಓರಿಯೆಂಟೇಶನ್ ಕಾರ್ಯಕ್ರಮ ತ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಬರವಣಿಗೆಯ ಕೌಶಲ್ಯ, ವಿಮರ್ಶಾತ್ಮಕ ಚಿಂತನೆ, ತಂತ್ರಜ್ಞಾನ ಜ್ಞಾನ, ಮತ್ತು ಸ್ಪಷ್ಟ ಸಂವಹನವು ಮಾಧ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.ಮಾಧ್ಯಮ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಕೌಶಲ್ಯಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕೇವಲ ಅಧ್ಯಯನ ಮಾತ್ರವಲ್ಲ, ಉತ್ತಮ ಬರವಣಿಗೆಯ ಕೌಶಲ್ಯ, ವಿಚಾರಧಾರೆಗಳು, ಹಾಗೂ ವಿಭಿನ್ನ ಭಾಷೆಗಳ ಪ್ರಭುತ್ವವು ಮುಖ್ಯ. ವಿಶ್ಲೇಷಣೆ, ತೀಕ್ಷ್ಣ ನೋಟ, ಮತ್ತು ನಿರಂತರವಾಗಿ ಕಲಿಯುವ ಹಂಬಲ ನಿಮ್ಮ ಯಶಸ್ಸಿಗೆ ದಾರಿ ತೋರುತ್ತವೆ. ಹೊಸ ವಿಚಾರಗಳನ್ನು ಅನ್ವೇಷಿಸಲು ಮತ್ತು…
ಡಾ.ಬಿ.ಆರ್.ಅಂಬೇಡ್ಕರ್ ಅವರ ೬೮ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಗುಲಬರ್ಗಾ ವಿ.ವಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಹೆಚ್.ಟಿ. ಪೋತೆ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಧುನಿಕ ಭಾರತದ ನಿರ್ಮಾತೃ ಹಾಗೂ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೆಬ್ ಅಂಬೇಡ್ಕರ ಅವರ ತ್ಯಾಗ ಮತ್ತು ಸಮಾಜ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಗುಲಬರ್ಗಾ ವಿ.ವಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಹೆಚ್.ಟಿ. ಪೋತೆ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಪ.ಜಾ/ಪ.ಪಂ ಘಟಕದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೮ನೇ ಮಹಾ ಪರಿನಿರ್ವಾಣ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಡಾ.ಅಂಬೇಡ್ಕರ್ ಅವರ ಆಂದೋಲನಗಳು ಮತ್ತು ದೃಷ್ಟಿಕೋನವು ದೇಶದ ಅಭಿವೃದ್ಧಿಗೆ ಮಹತ್ವಪೂರ್ಣವಾದ ಕೊಡುಗೆ ನೀಡಿವೆ. ಕಾರ್ಮಿಕರ ಹಕ್ಕುಗಳನ್ನು, ಸಮಾನತೆ ಮತ್ತು ನ್ಯಾಯವನ್ನು ಎತ್ತಿಹಿಡಿದ ಅವರು, ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡರು. ಅಂಬೇಡ್ಕರ್ ಅವರ ಸಾಹಸ ಮತ್ತು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ವಿಚಾರಗಳನ್ನು ಅರ್ಥೈಸಿಕೊಂಡು ಅವರ ದಾರಿಯಲ್ಲಿ ಸಾಗುವುದೇ ನಾವು ಅವರಿಗೆ ನೀಡುವ ನಿಜವಾದ ಗೌರವ ಎಂದು ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ ಹೇಳಿದರು.ಬುದ್ಧವಿಹಾರ ನಿರ್ಮಾಣ ಸಮಿತಿ, ಮಾನವ ಬಂಧುತ್ವ ವೇದಿಕೆ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಇಂದು ನಗರದ ಸಾರಿಪುತ್ರ ಬೋಧಿಧಮ್ಮ ಬುದ್ಧವಿಹಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ೬೮ನೆಯ ಮಹಾಪರಿನಿರ್ವಾಣದ ನಿಮಿತ್ಯವಾಗಿ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಗವಾನ ಬುದ್ಧ, ಬಸವಣ್ಣ ಮತ್ತು ಡಾ. ಅಂಬೇಡ್ಕರ್ ಇವರಾರೂ ಅವತಾರಿಪುರುಷರಲ್ಲ. ಅವರೆಲ್ಲ ತಮ್ಮ ವೈಯಕ್ತಿಕ ಶ್ರಮ ಮತ್ತು ಸಾಧನೆಯಿಂದ ವಿಶ್ವಮಾನವರಾಗಿ ಬೆಳೆದು ನಿಂತವರು. ಅವರನ್ನು ದೇವರು ಮಾಡಿ ಆರಾಧಿಸುವ ಬದಲಾಗಿ ಅವರನ್ನು ಅನುಸರಿಸಬೇಕು ಎಂದು ಹೇಳಿದರು.ಭಾರತದ ಎಲ್ಲಾ ಜಾತಿ ಜನಾಂಗದವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿದ್ದಾರೆ. ಆದರೆ ವೈದಿಕವಾದಿಗಳು ಈ ಸಂವಿಧಾನ ಬೇಡವೆಂದು ಹೇಳುತ್ತಿದ್ದಾರೆ. ಮೊದಲಿನಿಂದಲೂ ಸಂವಿಧಾನವನ್ನು ವಿರೋಧಿಸುತ್ತ ಬಂದಿರುವ ವೈದಿಕರು ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ. ಸಮಾನತೆಯನ್ನು ಬಯಸುವ ಎಲ್ಲ ವರ್ಗದವರು ಸಂವಿಧಾನವನ್ನು ರಕ್ಷಿಸಿಕೊಳ್ಳಲು…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ವಿದ್ಯಾರ್ಥಿಗಳು ತಮ್ಮ ಸಮಗ್ರ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡಾಗ ಮಾತ್ರ ಅವರಿಂದ ಸಾಧನೆ ಮೂಡಿಬರಲು ಸಾಧ್ಯ ಎಂದು ಮುಖ್ಯಶಿಕ್ಷಕ ಎ.ವ್ಹಿ.ವಡ್ಡೋಡಗಿ ಹೇಳಿದರು.ಪಟ್ಟಣದ ಡಿಬಿಇ ಪ್ರೌಢಶಾಲೆಯಲ್ಲಿ ಗುರುವಾರ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.ಮಕ್ಕಳಿಗೆ ಬಾಲ್ಯದಿಂದಲೇ ಶಿಸ್ತು, ಸಂಯಮ, ಸದ್ವೀಚಾರ, ಸನ್ನಡತೆಗಳನ್ನು ಪರಿಚಯಿಸಿ ಅವರು ಜೀವನದಲ್ಲಿ ಅಳವಡಿಸಿಕೊಳ್ಳಲು ಶಿಕ್ಷಕರು ಹಾಗೂ ಪಾಲಕರು ಮಾರ್ಗದರ್ಶನ ಮಾಡಬೇಕು. ಆಗ ಮಾತ್ರ ಅವರಿಂದ ಶಿಕ್ಷಣದಲ್ಲಿ ಸಾಧನೆ ಸಾಧ್ಯ ಎಂದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ ಮಾತನಾಡಿ, ಇಂದು ವಿದ್ಯಾರ್ಥಿಗಳಲ್ಲಿ ಸ್ಪರ್ಧಾಮನೋಭಾವ ಅಗತ್ಯವಾಗಿದೆ ಎಂದರು.ಯುವಧುರೀಣ ಶಂಕರಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿ ಜೀವನ ಹಾಗೂ ಸಮಯ ಅತ್ಯಂತ ಅಮೂಲ್ಯ, ತಾವು ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ವಿದ್ಯಾರ್ಥಿಗಳಾದ ಪ್ರಜ್ವಲ್ ಕುರಿ, ಕಾವೇರಿ ಗೊಲ್ಲರ, ಸೃಷ್ಟಿ ಹಯ್ಯಾಳ, ಅಶ್ವಿನಿ ಗೊಲ್ಲರ, ರೇಖಾ ದೇವೂರ, ರೇಣುಕಾ ಮಸಬಿನಾಳ, ಸುಶ್ಮೀತಾ ಅವಟಿ ಶೈಕ್ಷಣಿಕ ಚಟುವಟಿಕೆಗಳ ಕುರಿತು…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಶ್ರೀ ಲಕ್ಷ್ಮೀದೇವಿ ಹಾಗೂ ದಾನಮ್ಮದೇವಿ ಜಾತ್ರಾ ಮಹೋತ್ಸವ ಡಿ.೯ ಸೋಮವಾರದಿಂದ ಡಿ.೧೧ ಬುಧವಾರದ ವರೆಗೆ ಜರುಗುವುದು.ಡಿ.೯ ಸೋಮವಾರ ಮತ್ತು ಡಿ.೧೦ ಮಂಗಳವಾರ ಬೆಳಿಗ್ಗೆ ೫ ಗಂಟೆಗೆ ಶ್ರೀ ಲಕ್ಷ್ಮೀದೇವಿ & ದಾನಮ್ಮದೇವಿಗೆ ರುದ್ರಾಬಿಷೇಕ ಹಾಗೂ ಮಹಾಮಂಗಳಾರತಿ ನಡೆಯುವುದು. ತಿಕೋಟಾ ಹಿರೇಮಠದ ಷ಼,ಬ್ರ, ಶಿವಬಸವ ಶಿವಾಚಾರ್ಯ ಸ್ವಾಮಿಗಳು ಸಾನಿದ್ಯ ವಹಿಸುವರು, ದಾನಮ್ಮದೇವಿ ದೇವಸ್ಥಾನ ಅರ್ಚಕ ವೇ,ಮೂ,ಚಂದ್ರಶೇಖರಯ್ಯ ಹಿರೇಮಠ ನೇತೃತ್ವ ವಹಿಸುವರು.ಅಂದು ಮುಂಜಾನೆ ೯ಕ್ಕೆ ರಂಗೋಲಿ ಸ್ಪರ್ಧೆ, ಸಾಯಂಕಾಲ ೩ಕ್ಕೆ ಸ್ಲೋ ಸೈಕಲ್ ರೇಸ್, ೪ಕ್ಕೆ ಟ್ಯಾಂಕರ್ ಜೋಡಿಸಿದ ಟ್ಯಾಕ್ಟರ್ ರಿವರ‍್ಸ್ ಸ್ಪರ್ದೆ, ೫ಕ್ಕೆ ತುಳಸಿಗೇರಿ ಕಲಾತಂಡದಿಂದ ಶ್ರೀ ಕೃಷ್ಣ ಪಾರಿಜಾತ ನಾಟಕ ಜರಗುವುದು.ಡಿ.೧೦ ಮಂಗಳವಾರ ಬೆಳಿಗ್ಗೆ ೫ಕ್ಕೆ ಶ್ರೀ ಲಕ್ಷ್ಮೀದೇವಿ ಹಾಗೂ ದಾನಮ್ಮದೇವಿಗೆ ರುದ್ರಾಬಿಷೇಕ. ೮ಕ್ಕೆ ಶ್ರೀ ಲಕ್ಷ್ಮೀದೇವಿ ಹಾಗೂ ಶ್ರೀ ದಾನಮ್ಮದೇವಿಯ ಪಂಚ ಲೋಹ ಮತ್ತು ಬೆಳ್ಳಿಯ ಮೂರ್ತಿಗಳಯೊಂದಿಗೆ ೧೦೦೫ ಸುಮಂಗಲೆಯರ ಕಳಸ ಕನ್ನಡಿ. ಕುಂಭ ಹಾಗೂ ಆರತಿ ವಿವಿಧ ವಾಧ್ಯಮೇಳದೊಂದಿಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ನಗರದ ಟಕ್ಕೆಯಲ್ಲಿರುವ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ದಿನಾಂಕ : ೦೬-೧೨-೨೦೨೪ ರಂದು ಹಮ್ಮಿಕೊಂಡ ಒಂದು ದಿನ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಉಪ ಪ್ರಾಂಶುಪಾಲರಾದ ಡಾ. ಅನಾಮಿಕಾ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಡಿ.೬ರಂದು ಬೆಳಿಗ್ಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳ ಮೂಲಕ ವಿದ್ಯಾಲಯದ ಆವರಣದಿಂದ ಆರಂಭಗೊಂಡ ಪ್ರವಾಸದಲ್ಲಿ ೯,೧೧ ಹಾಗೂ ೧೨ನೇ ತರಗತಿಯ ೮೧ ವಿದ್ಯಾರ್ಥಿಗಳನ್ನು ಧಾರವಾಡದ ಐಐಟಿಗೆ ಪ್ರವಾಸ ಕರೆದುಕೊಂಡು ಹೋಗಿ, ಐಐಟಿಯಲ್ಲಿ ಕೈಗೊಳ್ಳಲಾಗುವ ಶೈಕ್ಷಣಿಕ ಚಟುವಟಿಕೆ, ಕಂಪ್ಯೂಟರ್ ಲ್ಯಾಬ್, ಕೆಮಿಸ್ಟ್ರಿ, ಬಯೋಲಾಜಿ, ಫಿಜಿಕ್ಸ್ ಲ್ಯಾಬ್, ಪ್ರಯೋಗಾಲಯ ಸೇರಿದಂತೆ ಉಪಯುಕ್ತ ಮಾಹಿತಿ ಒದಗಿಸುವ ಮೂಲಕ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಪ್ರೇರೆಪಿಸಲಾಯಿತು.ಶಿಕ್ಷಕರಾದ ಶ್ರೀಮತಿ ಶಾಲೂ, ಸೀಮಾ, ತೇಜಶ್ರೀ, ಆರಾಧ್ಯ ಜೈನ್, ರಮೇಶ ಚವ್ಹಾಣ ಅವರು ಉಪಸ್ಥಿತರಿದ್ದರು ಎಂದು ಪ್ರಾಂಶುಪಾರಾದ ಜುನ್ನಾರಾಮ್ ತಿಳಿಸಿದ್ದಾರೆ.
೧೪ ವರ್ಷ ವಯೋಮಿತಿಯ ಬಾಲಕಿಯರ ಕಬ್ಬಡಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಐಶ್ವರ್ಯ ಬಿರಾದಾರ ಉದಯರಶ್ಮಿ ದಿನಪತ್ರಿಕೆ ವರದಿ: ರೇಖಾ ಪಿ.ಗದ್ಯಾಳತಿಕೋಟಾ: 68 ನೇ ರಾಷ್ಟ್ರ ಮಟ್ಟದ ಹದಿನಾಲ್ಕು ವರ್ಷ ವಯೋಮಿತಿಯ ಬಾಲಕಿಯರ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಕರ್ನಾಟಕ ಕಬ್ಬಡಿ ತಂಡದಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ತಿಗಣಿಬಿದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿನಿ ಐಶ್ವರ್ಯ ಅಶೋಕ ಬಿರಾದಾರ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.ಕಬಡ್ಡಿಯ ತವರೂರು ಮಹಾರಾಷ್ಟ್ರದ ಅಮರಾವತಿಯಲ್ಲಿ ಇದೇ ಡಿಸೆಂಬರ್ 10 ರಿಂದ 12 ರವರೆಗೆ ನಡೆಯುವ ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾವಳಿಗಳಲ್ಲಿ ದೇಶದ ವಿವಿಧ ರಾಜ್ಯಗಳ ತಂಡಗಳು ಭಾಗವಹಿಸುತ್ತಿದ್ದು, ಕರ್ನಾಟಕ ರಾಜ್ಯದ ಪರವಾಗಿ ಇರುವ ಈ ತಂಡದಲ್ಲಿ ವಿಜಯಪುರ ಜಿಲ್ಲೆಯಿಂದ ಭಾಗವಹಿಸುತ್ತಿರುವ ಏಕೈಕ ವಿಧ್ಯಾರ್ಥಿನಿ ಐಶ್ವರ್ಯ ಆಗಿದ್ದಾಳೆ.ಶಾಲೆಯಲ್ಲಿ ಉತ್ತಮ ಪ್ರದರ್ಶನ ನೀಡಿ ರಚನೆಯಾದ ಈ ಶಾಲೆಯ ಕಬ್ಬಡಿ ತಂಡವು ನಾಗರಾಳದಲ್ಲಿ ನಡೆದ ಕ್ಲಸ್ಟರ್ ಹಂತ, ಗುಣದಾಳದಲ್ಲಿ ನಡೆದ ವಲಯ ಮಟ್ಟದ ಹಂತ, ತಿಕೋಟಾದಲ್ಲಿ ನಡೆದ ತಾಲ್ಲೂಕ ಮಟ್ಟದ ಹಂತದಲ್ಲಿ…
