ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಶ್ರೀ ಲಕ್ಷ್ಮೀದೇವಿ ಹಾಗೂ ದಾನಮ್ಮದೇವಿ ಜಾತ್ರಾ ಮಹೋತ್ಸವ ಡಿ.೯ ಸೋಮವಾರದಿಂದ ಡಿ.೧೧ ಬುಧವಾರದ ವರೆಗೆ ಜರುಗುವುದು.
ಡಿ.೯ ಸೋಮವಾರ ಮತ್ತು ಡಿ.೧೦ ಮಂಗಳವಾರ ಬೆಳಿಗ್ಗೆ ೫ ಗಂಟೆಗೆ ಶ್ರೀ ಲಕ್ಷ್ಮೀದೇವಿ & ದಾನಮ್ಮದೇವಿ
ಗೆ ರುದ್ರಾಬಿಷೇಕ ಹಾಗೂ ಮಹಾಮಂಗಳಾರತಿ ನಡೆಯುವುದು. ತಿಕೋಟಾ ಹಿರೇಮಠದ ಷ಼,ಬ್ರ, ಶಿವಬಸವ ಶಿವಾಚಾರ್ಯ ಸ್ವಾಮಿಗಳು ಸಾನಿದ್ಯ ವಹಿಸುವರು, ದಾನಮ್ಮದೇವಿ ದೇವಸ್ಥಾನ ಅರ್ಚಕ ವೇ,ಮೂ,ಚಂದ್ರಶೇಖರಯ್ಯ ಹಿರೇಮಠ ನೇತೃತ್ವ ವಹಿಸುವರು.
ಅಂದು ಮುಂಜಾನೆ ೯ಕ್ಕೆ ರಂಗೋಲಿ ಸ್ಪರ್ಧೆ, ಸಾಯಂಕಾಲ ೩ಕ್ಕೆ ಸ್ಲೋ ಸೈಕಲ್ ರೇಸ್, ೪ಕ್ಕೆ ಟ್ಯಾಂಕರ್ ಜೋಡಿಸಿದ ಟ್ಯಾಕ್ಟರ್ ರಿವರ‍್ಸ್ ಸ್ಪರ್ದೆ, ೫ಕ್ಕೆ ತುಳಸಿಗೇರಿ ಕಲಾತಂಡದಿಂದ ಶ್ರೀ ಕೃಷ್ಣ ಪಾರಿಜಾತ ನಾಟಕ ಜರಗುವುದು.
ಡಿ.೧೦ ಮಂಗಳವಾರ ಬೆಳಿಗ್ಗೆ ೫ಕ್ಕೆ ಶ್ರೀ ಲಕ್ಷ್ಮೀದೇವಿ ಹಾಗೂ ದಾನಮ್ಮದೇವಿಗೆ ರುದ್ರಾಬಿಷೇಕ. ೮ಕ್ಕೆ ಶ್ರೀ ಲಕ್ಷ್ಮೀದೇವಿ ಹಾಗೂ ಶ್ರೀ ದಾನಮ್ಮದೇವಿಯ ಪಂಚ ಲೋಹ ಮತ್ತು ಬೆಳ್ಳಿಯ ಮೂರ್ತಿಗಳಯೊಂದಿಗೆ ೧೦೦೫ ಸುಮಂಗಲೆಯರ ಕಳಸ ಕನ್ನಡಿ. ಕುಂಭ ಹಾಗೂ ಆರತಿ ವಿವಿಧ ವಾಧ್ಯಮೇಳದೊಂದಿಗೆ ಮೆರವಣೆಯು ದೇವಾಸ್ಥಾನದಿಂದ ಶೇಡಜಿಯವರ ಗಿರಣಿ ಆವರಣದಲ್ಲಿ ಪ್ರವೇಶಿಸಿ ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ದೇವಸ್ಥಾನ ಆವರಣದ ಮಂಟಪಕ್ಕೆ ಬರುವುದು. ನಂತರ ಮಹಾಪ್ರಸಾದ ವಿತರಣಿ ಕಾರ್ಯಕ್ರಮ ವಾಡೆ ಮೈದಾನದಲ್ಲಿ ಜರುಗುವುದು, ನಂತರ ಧರ್ಮಸಭೆ ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ, ತಿಕೋಟಾ ವಿರಕ್ತಮಠದ ಪ.ಪೂ. ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯ ನೇತೃತ್ವ , ತಿಕೋಟಾ ಶ್ರೀ ಲಕ್ಷ್ಮಿ ದೇವಿ ಮತ್ತು ದಾನಮ್ಮದೇವಿ ಕಮಿಟಿ ಅಧ್ಯಕ್ಷ ಚನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಗುಡಾಪೂರ ಶ್ರೀ ದಾನಮ್ಮದೇವಿ ಟ್ರಸ್ಟ್ ಕಮೀಟಿ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ವಿದಾನ ಪರಿಷತ್ ಸದಸ್ಯ ಜಿ.ಕೆ.ಪಾಟೀಲ, ಗ್ರಾಹಕ ಸೊಸ್ಟೆಟಿ ಅಧ್ಯಕ್ಷ ಭಾಗೀರಥಿ ತೇಲಿ, ತಾಪಂ ಮಾಜಿ ಅಧ್ಯಕ್ಷೆ ಪ್ರಭಾವತಿ ನಾಟಿಕಾರ, ಯುವ ಮುಖಂಡ ಜಗದೀಶಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಬೀಮರಾವ ಹಂಗರಗಿ, ಗುಡಾಪುರ ಸುಕ್ಷೇತ್ರ ಸಲಹಾ ಸಮಿತಿ ಸದಸ್ಯ ಮಹಾನಿಂಗ ಮಂಟೂರ, ಆದರ್ಶ ಶಿಕ್ಷಣ ಸಂಸ್ಥೆ ಚೇರಮನ್ ಡಾ,ಗುರುರಾಜ ನಾಗಠಾಣ, ತಿಕೋಟಾ ಪಪಂ ಸಿಇಒ ರಷು ನಡುವಿನಮನಿ ವೇದಿಕೆಯಲ್ಲಿ ಇರುವರು.
ಸಾಯಂಕಾಲ ೪ಕ್ಕೆ ಸಂಗೀತ ಕುರ್ಚಿ ಸ್ಪರ್ಧೆ, ೫ಕ್ಕೆ ಸೋಮದೇವರ ಹಟ್ಟಿ ಕಲಾತಂಡದಿಂದ ಶ್ರೀ ರೇಣುಕಾ ಯಲ್ಲಮ್ಮ ದೇವಿ ಮಹಾತ್ಮೆ ನಾಟಕ ಜರಗುವುದು,
ಡಿ.೧೧ ಬುಧವಾರ ಮುಂಜಾನೆ ೮ ಗಂಟೆಗೆ ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ, ೯ಕ್ಕೆ ಜೋಡೆತ್ತಿನ ಗಾಡಿ ರೇಸ್, ಮಧ್ಯಾಹ್ನ ೧೨,೩೦ಕ್ಕೆ ಉಚಿತ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ, ನಂತರ ಆಶೀರ್ವಚನ ಜರುಗುವುದು ಮ್ಯೆಗೂರ ಶಿವಾನಂದ ಮಠದ ಗುರುಪ್ರಸಾದ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ವಿರಕ್ತಮಠದ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ಹಿರೇಮಠದ ಶಿವಬಸವ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸುವರು. ಕಮೀಟಿ ಅಧ್ಯಕ್ಷ ಚನಗೌಡ ಪಾಟೀಲ ಅಧ್ಯಕ್ಷತೆ ವಹಿಸುವುರು, ಮುಖ್ಯ ಅತಿಥಿಗಳಾಗಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ, ಎಂ.ಬಿ.ಪಾಟೀಲ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಮಾಜಿ ಜಿಪಂ ಸದಸ್ಯೆ ಪ್ರತಿಭಾ ಪಾಟೀಲ, ಮಾಜಿ ತಾಪಂ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಗ್ರಾಪಂ ಸದಸ್ಯ ಸಿದ್ರಾಮ ಪೂಜಾರಿ, ತಹಶೀಲ್ದಾರ ಪ್ರಶಾಂತ ಚನಗೂಂಡ ಪಾಲ್ಗೊಳ್ಳಲಿದ್ದಾರೆ.
೩ ಗಂಟೆಗೆ ಸಂಗ್ರಾಮ ಕಲ್ಲು ಎತಯುವುದು, ೪ಕ್ಕೆ ಗುಂಡು ಎತ್ತುವ ಸ್ಪರ್ದೆ, ಸಂಜೆ ೭ಕ್ಕೆ ಜಯಸಿಂಹ ಮೂಸಿಕಲ್ ನ್ಯೆಟ್ಸ್ ವಿಜಯಪುರ ಇವರಿಂದ ಕಲಾ ಸೇವೆ ಜರಗುವುದು.
ಮಂಗಳವಾರ ಮತ್ತು ಬುಧವಾರ ಮಹಾಪ್ರಸಾದ ವಿತರಣಿ ನಡೆಯುವುದು ಎಂದು ಪ್ರಕಟಣಿಯಲ್ಲಿ ನಿಂಗಪ್ಪ ಗುರಕಿ ತಿಳಿಸಿದ್ದಾರೆ.

