Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಭಗವದ್ಗೀತೆ ಭಗವಂತ ಕೊಟ್ಟ ಹಾಲು. ಅದು ಅತ್ಯಂತ ಪೌಷ್ಠಿಕವಾಗಿದ್ದು, ಭಗವಂತನ ಮಕ್ಕಳಾದ ನಮಗೆಲ್ಲ ತಾಯಿಯ ಹಾಲಿದ್ದಹಾಗೆ. ಇವತ್ತು ಕಲಬೆರಿಕೆ ಹಾಲನ್ನ ಕುಡಿದು ನಮ್ಮ ಆರೋಗ್ಯವನ್ನು ಸಾಕಷ್ಟು ಹಾಳು ಮಾಡಿಕೊಂಡಿದ್ದೇವೆ ಎಂದು ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಯತಿವರೇಣ್ಯ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು.ಪಟ್ಟಣದ ಶ್ರೀ ರಾಘವೇಂದ್ರ ಮಂಗಲ ಕಾರ್ಯಾಲಯದಲ್ಲಿ ರವಿವಾರ ಭಗವದ್ಗೀತಾ ಅಭಿಯಾನ ತಾಲೂಕು ಸಮೀತಿ ಮತ್ತು ಶ್ರೀ ರಾಘವೇಂದ್ರ ಮಠದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗವದ್ಗೀತಾ ಅಭಿಯಾನ ಜಾಗೃತಿ ಕಾರ್ಯಮದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.ಕಲಬೆರೆಕೆ ಹಾಲುಗಳಿಂದ ನಮ್ಮ ಬದುಕು ಹಾಳಾಗುತ್ತಿದೆ. ಸಧ್ಯ ಶುದ್ಧ ವಿಚಾರ ಶುದ್ಧ ಹಾಲಿನ ಮೂಲಕ ಆರೋಗ್ಯವಂತರಾಗುವ ಅವಶ್ಯಕತೆ ನಮಗೆಲ್ಲ ಇದೆ. ಹಾಗಾಗಿ ಭಗವದ್ಗೀತೆ ಎಂಬ ಹಾಲನ್ನ ಎಲ್ಲರು ಕುಡಿಯಿರಿ. ಸಾಧ್ಯವಾದಷ್ಟು ಜನಕ್ಕೆ ಕುಡಿಸಿ ಸಮಾಜವನ್ನು ಪುಷ್ಠವನ್ನಾಗಿಸಿ ಎನ್ನುವದು ನಮ್ಮ ಕಳಕಳಿ ಎಂದರು.ಈ ಬಾರಿಗೆ ಭಗವದ್ಗೀತಾ ಜಯಂತಿ ಡಿ.೧೧ ರಂದು ಬಂದಿದೆ. ಆದಿನ ಸಮಗ್ರ ಭಗವದ್ಗೀತೆ ಪಠಣ ಮಾಡುವ ರೂಢಿ ನಮಗೆ ಬರಬೇಕು. ದೇವಸ್ಥಾನಗಳಲ್ಲಿ,…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಯುಕೆಪಿಯ ನ್ಯಾಯವಾದಿ ಎನ್.ಜಿ.ಗುರಿಕಾರ ಅವರುವಿಜಯಪುರ ನ್ಯಾಯಾಲಯದ ವಿಶೇಷ ಸರ್ಕಾರಿ ವಕೀಲರಾಗಿ ನೇಮಕರಾದ ಪ್ರಯುಕ್ತ ಅವರಿಗೆ ಇಲ್ಲಿನ ನ್ಯಾಯವಾದಿಗಳು ಸನ್ಮಾನಿಸಿ ಗೌರವಿಸಿದರು.ಈ ವೇಳೆ ನ್ಯಾಯವಾದಿಗಳಾದ ಎಂ.ಬಿ.ಪಾಟೀಲ, ವಿ.ಜಿ.ಮದರಕಲ್ಲ, ಎಸ್.ಸಿ.ಹಿರೇಮಠ, ಎಸ್.ಜಿ.ಅಂಗಡಿ, ಎನ್.ಬಿ.ಮುದ್ನಾಳ, ಐ.ಕೆ.ಸಾಸನೂರ, ಎನ್.ಆಯ್.ಕೇಸಾಪೂರ, ಎಚ್.ಎಚ್.ಬಡಿಗೇರ, ಜಿ.ಎಸ್.ಬಿಜ್ಜೂರ, ಎಸ್.ಎನ್.ಬಳೂತಿ ಸೇರಿದಂತೆ ಮತ್ತೀತರರು ಇದ್ದರು.

Read More

ಸಾವಿಲ್ಲದ ಶರಣರು ಲೇಖನ- ಡಾ.ಶಶಿಕಾಂತ.ಪಟ್ಟಣರಾಮದುರ್ಗ, ಮೊ:9552002338 ಉದಯರಶ್ಮಿ ದಿನಪತ್ರಿಕೆ ಸತ್ಯ ಸಮತೆ ಶಾಂತಿ ಪ್ರೀತಿಗೆ ಶರಣರು ತಮ್ಮನ್ನೇ ಬಲಿದಾನ ಮಾಡಿಕೊಂಡರು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಈ ಆಂದೋಲನದಲ್ಲಿ ದಲಿತ ದಂಪತಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ಎಂಬ ಪುಣ್ಯ ಸತಿ ಪತಿಗಳು ಕಲ್ಯಾಣದ ಮಹಾ ಮನೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡರು.ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯಾ. ದಂಪತಿಗಳು ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಅಮರೇಶ್ವರ ಗ್ರಾಮದವರು. ಇದನ್ನು ಗುಡುಗುಂಟಿ ಅಮರೇಶ್ವರ ಎಂತಲೂ ಕರೆಯುತ್ತಾರೆ.ಬಡ ದಂಪತಿಗಳು ಬಸವಣ್ಣನವರ ಕೀರ್ತಿ ವಾರ್ತೆಗೆ ಮರುಳಾಗಿ ಕಲ್ಯಾಣದ ಶರಣ ಚಳುವಳಿಯಲ್ಲಿ ಪಾಲ್ಗೊಳ್ಳಲು ಅವರಿಬ್ಬರೂ ಕಲ್ಯಾಣಕ್ಕೆ ಬರುತ್ತಾರೆ.”ಆಯ” ಎಂದರೆ ಕೂಲಿ. ಇಲ್ಲಿಯವರೆಗೆ ಎಲ್ಲ ವಚನ ಸಂಪುಟ, ಶರಣ ಚರಿತಾಮೃತ ,ಶರಣರ ಚರಿತ್ರೆ ಶೂನ್ಯ ಸಂಪಾದನೆಯಲ್ಲಿ , ಆಯ ಅಂದರೆ – ಆಯ್ದುಕೊಳ್ಳುವುದು ಅಂತ ದಾಖಲೆಯಾಗಿದೆ. ಅದು ಸಂಪೂರ್ಣ ತಪ್ಪು. ಕಾಯಕಕ್ಕೆ ಎಲ್ಲಕ್ಕಿಂತ ಹೆಚ್ಚಿನ ಮಹತ್ವ ಕೊಟ್ಟವರು ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯಾ ಶರಣ ದಂಪತಿಗಳು. ರಸ್ತೆಯಲ್ಲಿ ಬಿದ್ದ ಕಾಳುಗಳನ್ನು ಹೆಕ್ಕಿ…

Read More

ಭಾರತದ ಕಿರಿಯ ವಯಸ್ಸಿನ ಪೈಲೆಟ್ ಆಗಿ ಆಯ್ಕೆಯಾದ ಸಾಧಕಿ ಕು.ಸಮೈರಾ ಹುಲ್ಲೂರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದಯರಶ್ಮಿ ದಿನಪತ್ರಿಕೆ ಬಬಲೇಶ್ವರ: ಭಾರತದ ಕಿರಿಯ ವಯಸ್ಸಿನ ಪೈಲೆಟ್ ಆಗಿ ಆಯ್ಕೆಯಾಗಿರುವ ವಿಜಯಪುರದ ಸಾಧಕಿ ಕುಮಾರಿ ಸಮೈರಾ ಹುಲ್ಲೂರವರ ನಿವಾಸಕ್ಕೆ ಭೇಟಿ ನೀಡಿದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಸರಕಾರದ ಪರವಾಗಿ ಸಾಧಕಿ ಸಮೈರಾ ಹುಲ್ಲೂರ ಅವರನ್ನು ಸನ್ಮಾನಿಸಿ, “ವಿಜಯಪುರ ಸಾಧಕರ ತವರೂರು ಬಸವ ನಾಡಿನ ಈ ನೆಲದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊರತೆ ಇಲ್ಲ, ಈಗ ಅಂಥ ಸಾಧಕರ ಪಟ್ಟಿಗೆ ಸೇರುವುದರ ಮೂಲಕ ಅತೀ ಕಿರಿಯ ವಯಸ್ಸಿನ ಪೈಲೆಟ್ ಆಗಿ ಆಯ್ಕೆಯಾಗಿರುವ ಕುಮಾರಿ ಸಮೈರಾ ಹುಲ್ಲೂರ್ ಸಾಧನೆ ವಿದ್ಯಾರ್ಥಿನಿಯರಿಗೆ ಮಾದರಿಯಾದದ್ದು, ಸಾಧಿಸಬೇಕೆಂಬ ದೃಢಸಂಕಲ್ಪ ಇರುವವರು ಯಾವ ಎತ್ತರಕ್ಕೆ ಬೇಕಾದರೂ ಹಾರಬಲ್ಲರು, ಏರಬಲ್ಲರು ಎನ್ನುವುದನ್ನು ಸಮೈರಾ ತೋರಿಸಿಕೊಟ್ಟಿದ್ದಾಳೆ. ಅವಳನ್ನು ನಾಡಿನ ಜನತೆ ಪರವಾಗಿ ಅಭಿನಂದಿಸಿ, ಸನ್ಮಾನಿಸಲು ಕರ್ನಾಟಕ ಬಾಲ ವಿಕಾಸ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಣಿಯಾದ ಫಲಾನುಭವಿಗಳಿಗೆ ವೇಲ್ಡಿಂಗ್ ಕಿಟ್, ರೋಡ್ ನಿರ್ಮಾಣ ಕಿಟ್ ಮತ್ತು ಟೈಲ್ಸ್ ಲೇಯರ್ ಟೂಲ್ ಕಿಟ್‌ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.ಫಲಾನುಭವಿಯ ಚಾಲ್ತಿಯಲ್ಲಿರುವ ಕಾರ್ಮಿಕ ಗುರುತಿನ ಚೀಟಿ, ಆಧಾರ ಕಾರ್ಡ ಮತ್ತು ಭಾವಚಿತ್ರಗಳನ್ನೊಂಗೊಂಡ ದಾಖಲೆಗಳನ್ನು ದಿನಾಂಕ: ೨೧-೧೨-೨೦೨೪ರೊಳಗಾಗಿ ಕಾರ್ಮಿಕ ನಿರೀಕ್ಷಕರ ಕಚೇರಿ, ೧ನೇ ವೃತ್ತ, ಕಲ್ಯಾಣ ಸಮುದಾಯ ಭವನ, ಸಿಂದಗಿ ನಾಕಾ ಅಲ್ಲಾಪೂರ ಓಣಿ ವಿಜಯಪುರದಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಪರಿಶೀಲಿಸಿ ಜೇಷ್ಠತಾ ಆಧಾರದ ಮೇರೆಗೆ ವಿತರಿಸಲಾಗುವುದು ವಿಜಯಪುರ ಕಾರ್ಮಿಕ ನಿರೀಕ್ಷಕರ ಪ್ರಕಟಣೆ ತಿಳಿಸಿದೆ.

Read More

ಮೊದಲ ದಿನದಿಂದಲೇ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಮೊದಲ ದಿನದಿಂದಲೇ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು, ವಿಧಾನಸಭೆ ಸಭಾಪತಿಗಳಾದ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿದ್ದಾರೆ.ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗಗಳ ಅಭಿವೃದ್ಧಿ ಹಾಗೂ ಸ್ಥಾನಮಾನಗಳ ಹಂಚಿಕೆಯಲ್ಲಿ ಪ್ರಾದೇಶಿಕ ತಾರತಮ್ಯವನ್ನು ನಿವಾರಿಸುವುದು ಅತ್ಯವಶ್ಯವಿದೆ. ಆದರೆ, ಪ್ರತಿ ಬಾರಿ ಅಧೀವೇಶನ ಜರುಗಿದಾಗ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಕೊನೆಯ ದಿನಗಳಲ್ಲಿ ಚರ್ಚೆಗೆ ಅವಕಾಶ ನೀಡುತ್ತಿದ್ದರಿಂದ, ಕೊನೆಯ ದಿನಗಳಲ್ಲಿ ಶಾಸಕರ ಹಾಜರಾತಿ ಕಡಿಮೆಯಾಗಿ ಚರ್ಚೆಯೇ ನಡೆಯುವುದಿಲ್ಲ.ಆದ್ದರಿಂದ, ಸಮಗ್ರ ಉತ್ತರ ಕರ್ನಾಟಕದ ನೀರಾವರಿ ಯೋಜನೆ, ರೈತರ ಸಮಸ್ಯೆಗಳು, ಕೈಗಾರಿಕೆಗಳು, ಶೈಕ್ಷಣಿಕ ಇತ್ಯಾದಿಗಳ ಅಭಿವೃದ್ಧಿಯ ಕುರಿತು ಅಧಿವೇಶನದ ಪ್ರಾರಂಭಿಕ ಹಂತದಲ್ಲಿಯೇ ಚರ್ಚೆಗೆ ಅವಕಾಶ ಕಲ್ಪಿಸಿ, ಆದ್ಯತೆ ನೀಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಆಲೋಚನೆಗಳ ವಿನಿಮಯ ಮತ್ತು ಕಾರ್ಯಕ್ರಮಗಳು, ಸೇವೆಗಳು ಮತ್ತು ಚಟುವಟಿಕೆಗಳ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಪಟ್ಟಣದ ಶ್ರೀ ಸಂಗಮೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಬಿ.ರಾಠೋಡ ಹೇಳಿದರು.ಎರಡೂ ಮಹಾವಿದ್ಯಾಲಯಗಳ ಒಡಂಬಡಿಕೆಯ ಪ್ರಕಾರ ಕನ್ನಡ ವಿಭಾಗ ಆಯೋಜಿಸಿದ ಕಾರ್ಯಕ್ರಮದಲ್ಲಿ ಇಂಡಿ ಪಟ್ಟಣದ ಜಿ.ಆರ್. ಗಾಂಧಿ ಕಲಾ ಹಾಗೂ ವೈ.ಎ. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಕಾಲೇಜಿಗೆ ಭೇಟಿ ನೀಡಿದ ಪ್ರಯುಕ್ತ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್. ಮಾಗಣಗೇರಿ ಮಾತನಾಡಿ, ವಿದ್ಯಾರ್ಥಿ ಮತ್ತು ಶಿಕ್ಷಕರ ವಿನಿಮಯ ಕಾರ್ಯಕ್ರಮವು ಜಾಗತಿಕ ಪೌರತ್ವವನ್ನು ಬೆಳೆಸಲು, ಅಂತರ್ ಸಾಂಸ್ಕೃತಿಕ ತಿಳುವಳಿಕೆಯನ್ನು ಉತ್ತೇಜಿಸಲು ಮತ್ತು ಹೆಚ್ಚುತ್ತಿರುವ ಅಂತರ ಸಪರ್ಕಿತ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಕೌಶಲ್ಯ ಮತ್ತು ದೃಷ್ಟಿಕೋನಗಳನ್ನು ಬೇಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು. ಇಂಡಿ ಪಟ್ಟಣದ ಜಿ.ಆರ್. ಗಾಂಧಿ ಕಲಾ ಹಾಗೂ ವೈ.ಎ. ಪಾಟೀಲ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಶ್ರೀಮತಿ. ಯಶೋಧರಮ್ಮ ದಾಸಪ್ಪ ದತ್ತಿ ಪೀಠ ಹಾಗೂ ಸ್ನಾತಕ ಮಹಿಳಾ ಅಧ್ಯಯನ ವಿಭಾಗ, ಬಿ.ಎಲ್.ಡಿ.ಇ. ಸಂಸ್ಥೆಯ ಎಸ್.ಬಿ.ಎಸ್. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಿಳಾ ಮಹಾವಿದ್ಯಾಲಯ ಇವರ ಸಹಯೋಗದೊಂದಿಗೆ ‘ಪ್ರೊ.ಎಚ್.ಎಸ್.ಶ್ರೀಮತಿ ಅವರ ಬದುಕು ಮತ್ತು ಬರಹ’ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಇದೇ ಡಿ.೯ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಜರುಗಲಿದೆ.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಎಚ್.ಎಸ್.ಶ್ರೀಮತಿ ಭಾಗವಹಿಸಲಿದ್ದು, ದಿಕ್ಸೂಚಿ ಭಾಷಣಕಾರರಾಗಿ ತರೀಕೆರೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮುಖ್ಯಸ್ಥೆ ಪ್ರೊ.ಸಬಿತಾ ಬನ್ನಾಡಿ ಭಾಗವಹಿಸಲಿದ್ದಾರೆ.ಸಂಪನ್ಮೂಲ ವ್ಯಕ್ತಿಗಳಾಗಿ ತುಮಕೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ವಸಂತ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಶಿವಾನಂದ ವಿರಕ್ತಮಠ, ಬೆಂಗಳೂರಿನ…

Read More

ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಿದ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೩ನೇ ಸಾಲಿನಲ್ಲಿ ಅತಿ ಹೆಚ್ಚು ಧ್ವಜ ನಿಧಿ ಸಂಗ್ರಹ ಮಾಡಿದ ವಿಜಯಪುರ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಸಶಸ್ತ್ರ ಪಡೆಗಳ ದ್ವಜ ದಿನಾಚರಣೆ ಅಂಗವಾಗಿ ಬೆಂಗಳೂರಿನ ರಾಜಭವನದಲ್ಲಿ ಡಿಸೆಂಬರ್ ೭ರಂದು ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಘನತೆವೆತ್ತ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.ಕಳೆದ ವರ್ಷವೂ ಕೂಡಾ ವಿಜಯಪುರ ಜಿಲ್ಲೆ ಪ್ರಥಮ ಸ್ಥಾನಕ್ಕೆ ಭಾಜನವಾಗಿತ್ತು. ಈ ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ ಎಸ್.ಆರ್, ವಿಜಯಪುರದ ಸೈನಿಕ ಕಲ್ಯಾಣ ಮತ್ತು ಪುನವರ್ಸತಿ ಇಲಾಖೆಯ ಉಪ ನಿರ್ದೇಶಕರಾದ ವಿನುತಾ ಜಿ.ಆರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿಯಲ್ಲಿ ೨೦೨೩ನೇ ವರ್ಷದಲ್ಲಿ ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕ್ರೀಡಾಪಟುಗಳಿಗೆ ಪ್ರೊತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಕ್ರೀಡಾಪಟುಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ: ೨೧-೧೨-೨೦೨೪ರೊಳಗೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ:೦೮೩೫೨-೨೫೧೦೮೫, ಮೊ:೮೭೯೨೧೮೫೧೪೧ ಸಂಖ್ಯೆಗೆ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More