ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಣಿಯಾದ ಫಲಾನುಭವಿಗಳಿಗೆ ವೇಲ್ಡಿಂಗ್ ಕಿಟ್, ರೋಡ್ ನಿರ್ಮಾಣ ಕಿಟ್ ಮತ್ತು ಟೈಲ್ಸ್ ಲೇಯರ್ ಟೂಲ್ ಕಿಟ್‌ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಫಲಾನುಭವಿಯ ಚಾಲ್ತಿಯಲ್ಲಿರುವ ಕಾರ್ಮಿಕ ಗುರುತಿನ ಚೀಟಿ, ಆಧಾರ ಕಾರ್ಡ ಮತ್ತು ಭಾವಚಿತ್ರಗಳನ್ನೊಂಗೊಂಡ ದಾಖಲೆಗಳನ್ನು ದಿನಾಂಕ: ೨೧-೧೨-೨೦೨೪ರೊಳಗಾಗಿ ಕಾರ್ಮಿಕ ನಿರೀಕ್ಷಕರ ಕಚೇರಿ, ೧ನೇ ವೃತ್ತ, ಕಲ್ಯಾಣ ಸಮುದಾಯ ಭವನ, ಸಿಂದಗಿ ನಾಕಾ ಅಲ್ಲಾಪೂರ ಓಣಿ ವಿಜಯಪುರದಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಪರಿಶೀಲಿಸಿ ಜೇಷ್ಠತಾ ಆಧಾರದ ಮೇರೆಗೆ ವಿತರಿಸಲಾಗುವುದು ವಿಜಯಪುರ ಕಾರ್ಮಿಕ ನಿರೀಕ್ಷಕರ ಪ್ರಕಟಣೆ ತಿಳಿಸಿದೆ.
