Author: editor.udayarashmi@gmail.com

ಕೃಷ್ಣೆ ಸಂತ್ರಸ್ತರ ಬೇಡಿಕೆ ಈಡೇರಿಕೆ ಸರ್ಕಾರದ ಆದ್ಯ ಕರ್ತವ್ಯವಾಗಬೇಕು ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಕೃಷ್ಣಾ ಮೇಲ್ದಂಡೆ ಯೋಜನೆಯ ಬಾಧಿತ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಮೀನ-ಮೇಷ ಎಣಿಸಬಾರದು ಎಂದು ಕೊಡೆಕಲ್ ದುರದುಂಡೇಶ್ವರ ಮಠದ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.ಬಾಗಲಕೋಟೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಬಾಧಿತ ಸಂತ್ರಸ್ತರ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಕೊಲ್ಹಾರ ಹಿರೇಮಠದ ನೂತನ ಕಟ್ಟಡ ಜೀರ್ಣೋದ್ದಾರವನ್ನು ವೀಕ್ಷಿಸಿದ ಸಂದರ್ಭ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಫಲವತ್ತಾದ ಭೂಮಿ ಕಳೆದುಕೊಂಡಿರುವ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು.ಕೃಮೇಯೋ ಬಾಧಿತ ಸಂತ್ರಸ್ತರು ನ್ಯಾಯಯುತ ಪರಿಹಾರ ಕೇಳುತ್ತಿದ್ದಾರೆ, ನೀರಾವರಿಗಾಗಿ ಫಲವತ್ತಾದ ಜಮೀನು ಕಳೆದುಕೊಂಡಿರುವ ಅನ್ನದಾತ ಬೀದಿಗೆ ಬಂದು ಅಹೋರಾತ್ರಿ ಹೋರಾಟ ಆರಂಭಿಸಿರುವುದು ವಿಪರ್ಯಾಸವೆ ಸರಿ!. ಜಗತ್ತಿಗೆ ಅನ್ನ ನೀಡುವ ರೈತಾಪಿ ವರ್ಗದ ಬದುಕು ದುಸ್ಥರವಾಗಿದೆ ಸರ್ಕಾರ ಕೂಡಲೇ ಸಂತ್ರಸ್ತರ ಹೋರಾಟಕ್ಕೆ ಸ್ಪಂದಿಸಬೇಕು ಬಾಧಿತ ಸಂತ್ರಸ್ತರ ಹಾಗೂ ರೈತರ ಹೋರಾಟಕ್ಕೂ ಮಠಾಧೀಶರುಗಳಾದ ನಾವುಗಳು ಸದಾಕಾಲ ಬೆಂಬಲವಾಗಿ ನಿಲ್ಲುತ್ತವೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೨ ರಿಂದ ಇತ್ತೀಚೆಗೆ ನಿವೃತ್ತರಾದ ನೌಕರರು ೭ ನೇ ವೇತನ ಆಯೋಗ ಅವಧಿಯಲ್ಲಿಯೇ ಸೇವೆ ಸಲ್ಲಿಸಿದ್ದು , ಡಿ.ಸಿ.ಆರ್.ಜಿ. ಕಮ್ಯುಟೇಶನ್ , ಗಳಿಕೆ ರಜೆ , ನಗದೀಕರಣದ ಮೊತ್ತವನ್ನು ೭ ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿಯೇ ನೀಡುವಲ್ಲಿ ಪರಿಷ್ಕೃತ ಆದೇಶ ಹೊರಡಿಸಲು ಆಗ್ರಹಿಸಿ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.೦೧-೦೭-೨೦೨೨ ರಿಂದ ೩೧-೦೭-೨೦೨ ಅವಧಿಯಲ್ಲಿ ನಿವೃತ್ತ ನೌಕರ ವರ್ಗದವರಿಗೆ ೭ ನೇ ವೇತನ ಆಯೋಗದ ಅನುಷ್ಠಾನದಲ್ಲಿ ನಿವೃತ್ತ ಆರ್ಥಿಕ ಸೌಲಭ್ಯವನ್ನು ನೀಡದೇ ೬ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿಯೇ ನೀಡಲಾಗಿದೆ.ಸತತ ನಾಲ್ಕು ತಿಂಗಳುಗಳಿಂದ ಸಮಾವೇಶಗೊಂಡು ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳಿಗೆ ಉಪ ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ, ಪ್ರತಿಪಕ್ಷದನಾಯಕರುಗಳಿಗೆ , ಉಭಯ ಸದನಗಳ ಸಭಾಪತಿಗಳಿಗೆ, ಉಪಸಭಾಪತಿಗಳಿಗೆ ವಿಷಯ ಮನವರಿಕೆ ಮಾಡಿದ್ದೇವೆ. ಆದರೂ ಗಮನ ಹರಿಸಿಲ್ಲ. ರಾಜ್ಯದ ನಿವೃತ್ತ ನೌಕರರು ಡಿ. ೧೬ ರಂದು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಸುವರ್ಣ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಇದೇ ದಿನಾಂಕ ೧೩ ಶುಕ್ರವಾರದಿಂದ ೨೩ ಸೋಮವಾರ ೧೦ ದಿನಗಳ ಕಾಲ ಪಟ್ಟಣದಲ್ಲಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲಾ ಆವರಣದಲ್ಲಿ ಪಟ್ಟಣ ಪಂಚಾಯತ ಮತ್ತು ಶ್ರೀ ಸಂಗಮೇಶ್ವರ ವಿದ್ಯಾವರ್ದಕ ಸಂಘದ ಆಶ್ರಯದಲ್ಲಿ ಹಿಮಾಲಯನ್ ಧ್ಯಾನಯೋಗ ಕಾರ್ಯಕ್ರಮಗಳು ಜರುಗುವದು ಎಂದು ಸಂಘಟಣೆಯ ರೂವಾರಿ ಟಿ.ಟಿ.ಹಗೇದಾಳ, ಕೆ.ಎಸ್.ದೇಸಾಯಿ ಹೇಳಿದರು.ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಜಂಟಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೫.೩೦ ರಿಂದ ೬.೩೦ ರವರೆಗೆ ಯೋಗ ತರಬೇತಿ, ೬ ವರ್ಷದ ಮಕ್ಕಳಿಂದ ೮೦ ವರ್ಷದ ವಯೋವೃದ್ದರವರೆಗೆ ಸರ್ವ ಜನಾಂಗದ ಪುರುಷ, ಮಹಿಳೆಯರು ಯೋಗ ತರಬೇತಿಯನ್ನು ಪಡೆದುಕೊಂಡು ಆರೋಗ್ಯವೃದ್ದಿಯನ್ನು ಹಿಮಾಲಯದಲ್ಲಿ ೬ ವರ್ಷಗಳ ಕಾಲ ಯೋಗ ಸಾಧನೆ ಮಾಡಿರುವ ನಿರಂಜನ ಮಹಾಸ್ವಾಮಿಗಳಿಂದ ಯೋಗಾಬ್ಯಾಸ ಜರುಗುವದು ಎಂದರು.ಸಾಯಂಕಾಲ ೬.೩೦ ರಿಂದ ೭.೩೦ ರವರೆಗೆ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿರುವ ಭಕ್ತಾಧಿಗಳಿಗೆ ಸಾಮೂಹಿಕ ಭಜನೆ ಮಾಡುವ ಸಂಪ್ರದಾಯ ಹಾಗೂ ಶ್ರೀಗಳಿಂದ ಆದ್ಯಾತ್ಮಿಕ ಪ್ರವಚನ ಬೋಧನೆ ನಡೆಯುವದು ಈ ಕಾರ್ಯಕ್ರಮದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಅರವಿಂದರು ಕವಿ, ತತ್ವಜ್ಞಾನಿ, ಹಾಗೂ ಸ್ವಾತಂತ್ರ್ಯ ಹೋರಾಟಗಾರ ಪೂರ್ಣ ಯೋಗಮಾರ್ಗವನ್ನು ಜಗತ್ತಿಗೆ ತೋರಿದ ಮಹಾಯೋಗಿ ಎಂದು ಸಾಹಿತಿ ಗೀತಯೋಗಿ ಹೇಳಿದರು.ತಾಲೂಕಿನ ಸಾಲೋಟಗಿ ಗ್ರಾಮದ ಅರವಿಂದೋ ಸಮಿತಿ ಮತ್ತು ಸರಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಕುರುಕ್ಷೇತ್ರದಲ್ಲಿ ಯುದ್ದದಲ್ಲಿ ಭಾಗಿಯಾಗಿಯೂ ಯುದ್ದ ಮಾಡದೇ ಯುದ್ದ ಗೆಲ್ಲಿಸಿದ ಅರ್ಜುನನ ಸಾರಥಿಯಾಗಿ ಶ್ರೀಕೃಷ್ಣನಂತೆ ಅರವಿಂದ ಅವರು ಸ್ವಾತಂತ್ರ್ಯ ಹೋರಾಟದಿಂದ ದೂರಸರಿದು ಆಧ್ಯಾತ್ಮಿಕ ಕ್ಷೇತ್ರಕ್ಕೆ ಪ್ರವೇಶಿಸಿದರೂ ಅಪರೋಕ್ಷವಾಗಿ ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಕಾರಣರಾದರು ಎಂದರು.ಅರವಿಂದ ಅವರಿಗೆ ಇಂಗ್ಲೀಷ್,ಗ್ರೀಕ, ಲ್ಯಾಟಿನ, ಫ್ರೆಂಚ್, ಜರ್ಮನಿ, ಇಟಲಿ, ಹಿಂದಿ, ಬಂಗಾಲಿ, ಸಂಸ್ಕೃತ ಭಾಷೆಗಳು ಕರಗತವಾಗಿದ್ದವು ಎಂದರು.ಫ್ರೇಂಚ್ ದೇಶದ ಮೀರಾ ಅಲ್ಪಸ್ಸಾ ಅವರು ೧೯೨೦ ರಲ್ಲಿ ಶ್ರೀ ಅರವಿಂದರ ಆಧ್ಯಾತ್ಮಿಕ ಸಾಧನೆಯ ಸಹಪಯಣಿಗರಾಗಿ ಬಂದು ಕೂಡಿಕೊಂಡರು. ಶ್ರೀ ಅರವಿಂದರು ಅವರನ್ನು ಶ್ರೀ ಮಾತೆ ಎಂದು ಕರೆದರು. ಶ್ರೀ ಮಾತಾರವಿಂದರು ಭಾರತದ ಆಧ್ಯಾತ್ಮಿಕ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದರು ಎಂದರು.ದುಂಡಪ್ಪ ಹ್ಯಾಳದ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಾವೇರಿಯಲ್ಲಿ ಡಿಸೆಂಬರ ೭ ರಿಂದ ೯ರ ವರೆಗೆ ಜರುಗಿದ ಟೈಕೊಂಡೊ ಕ್ರೀಡಾಕೂಟದಲ್ಲಿ ಸಿಕ್ಯಾಬ ಮಹಿಳಾ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ಕೈಪಿಅಜ್ಮಿ ದೊಡಮನಿ ಇವರು ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಈ ವಿದ್ಯಾರ್ಥಿನಿಗೆ ಸಂಸ್ಥೆಯ ಅಧ್ಯಕ್ಷರಾದ ಎಸ್.ಎ. ಪುಣೇಕರ ಕಾರ್ಯದರ್ಶಿಗಳಾದ ಶ್ರೀ ಎ.ಎಸ್. ಪಾಟೀಲ, ನಿರ್ದೇಶಕ ಸಲಾವುದ್ದೀನ ಅಯುಬಿ, ಪ್ರಾಚಾರ್ಯರು, ಪಾಲಕರು, ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ೨ಎ ಮೀಸಲಾತಿಗೆ ಸಂಬಂಧಿಸಿದ ಹೋರಾಟದ ವೇಳೆ ನಡೆದ ಲಾಠಿ ಚಾರ್ಜ್ ಗೆ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಖಂಡಿಸಿದ್ದಾರೆ.ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೆ ಈ ಭೂಮಿಯ ಮೇಲೆ ಸ್ವತಂತ್ರವಾಗಿ ಬದುಕುವ ಹಾಗೂ ಜೀವಿಸುವ ಹಕ್ಕಿದೆ. ಆದರೆ ನಮ್ಮ ಹಕ್ಕುಗಳು ನಮಗೆ ಸಿಕ್ಕಿಲ್ಲ ಅಂದಾಗ ಹೋರಾಟ ಮಾಡಿ ಪಡೆಯುವುದು ಅವರ ಕರ್ತವ್ಯ ಕೂಡ ಹೌದು. ಆದರೆ ನಮ್ಮ ದೇಶದ ಕಾನೂನು ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿಯೊಂದು ಸಮಾಜಕ್ಕೂ ಸ್ವತಂತ್ರವಾಗಿ ಬದುಕುವ ಸ್ವಾತಂತ್ರ‍್ಯ ಇರುತ್ತದೆ ಆದರೆ ಈ ಸರಕಾರವು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗಿದೆ ಅದರಲ್ಲೂ ವಿಶೇಷವಾಗಿ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ ಮಾಡಿರುವುದು ಖಂಡನಿಯ. ಜೊತೆಗೆ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಂಧನ ಮಾಡಿರುವುದು ಖಂಡನಾರ್ಹ ಮತ್ತು ಮಹಾ ಅಪರಾಧ ಮಾಡಿದಂತಾಗಿದೆ. ಕೂಡಲೇ ರಾಜ್ಯದ ಪಂಚಮಸಾಲಿ ಸಮಾಜಕ್ಕೆ ಕ್ಷಮೆ ಕೇಳಿ ಅವರಿಗೆ ನ್ಯಾಯ ಕೊಡಬೇಕೆಂದು ಆಗ್ರಪಡಿಸಿದ್ದಾರೆ.

Read More

ಸಿಎಂ ಸಿದ್ಧರಾಮಯ್ಯ ಸಿಂದಗಿಗೆ ಇಂದು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರು ಡಿ.೧೨ರಂದು ಸಂಜೆ ೪ ಗಂಟೆಗೆ ಬೆಳಗಾವಿಯಿಂದ ಹೆಲಿಕ್ಯಾಪ್ಟರ್ ಮೂಲಕ ಹೊರಟು ಸಂಜೆ ೫-೦೦ ಗಂಟೆಗೆ ಜಿಲ್ಲೆಯ ಸಿಂದಗಿಗೆ ಆಗಮಿಸಿ, ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ರಾತ್ರಿ ೭ ಗಂಟೆಗೆ ಸಿಂದಗಿಯಿಂದ ಹೊರಟು ೭-೪೫ಕ್ಕೆ ವಿಜಯಪುರಕ್ಕೆ ಆಗಮಿಸಲಿದ್ದಾರೆ.ಡಿ.೧೨ರಂದು ವಿಜಯಪುರದ ಬಿಎಲ್‌ಡಿಇ ಎನ್‌ಆರ್‌ಐ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಿ, ಡಿ.೧೩ರಂದು ಬೆಳಿಗ್ಗೆ ೯ ಗಂಟೆಗೆ ವಿಜಯಪುರದಿಂದ ಬೆಳಗಾವಿಗೆ ಹೆಲಿಕ್ಯಾಪ್ಟರ್ ಮೂಲಕ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಪ್ರತಿಷ್ಠಿತ ರಾಮಚಂದ ಮೋತಿಚಂದ ಶಹಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಇಂಡಿ ಇದರ ಅಂಗ ಸಂಸ್ಥೆಗಳಾದ ಆರ್. ಎಂ. ಶಹಾ (ಸಿ.ಬಿ.ಎಸ್.ಇ) ಪಬ್ಲಿಕ್ ಶಾಲೆ ಹಾಗೂ ಎಫ್.ಕೆ ದೋಶಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ೧೨-೧೨-೨೦೨೪ ರಿಂದ ೧೫-೧೨-೨೦೨೪ರವರೆಗೆ ಉತ್ಥಾನ ಮಹೋತ್ಸವ ಕಾರ್ಯಕ್ರಮ ಜರುಗಲಿದೆ. ಈ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಮೊದಲ ದಿನ ೧೨.೧೨.೨೦೨೪ರಂದು ಮುಂಜಾನೆ ೯:೦೦— ಮಧ್ಯಾಹ್ನ ೨:೦೦ವರೆಗೆ ಉದ್ಘಾಟನಾ ಕಾರ್ಯಕ್ರಮ ಹಾಗೂ ವೃದ್ಧಿ ಕೃಷಿಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಈ ವೃದ್ಧಿಕೃಷಿಮೇಳದಲ್ಲಿ ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ವ್ಹಿ. ಪಾಟೀಲ್, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳು, ಕೃಷಿ ವಿಜ್ಷಾನ ಕೇಂದ್ರ ವಿಜಯಪುರ ಹಾಗೂ ಇಂಡಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭಾಗಿಯಾಗಲಿದ್ದಾರೆ. ರೈತರು ಕೃಷಿಗೆ ಸಂಬಂಧಿಸಿದ ಎಲ್ಲ ರೀತಿಯ ಔಷಧಿಗಳ ಬಳಕೆ, ಕೃಷಿ ಸಂಬಂಧಿತ ಯಂತ್ರಗಳು, ಪ್ರಮುಖ ಕೃಷಿ ಬೆಳೆಗಳ ಮಾಹಿತಿಯನ್ನು ನೀಡಲಾಗುತ್ತದೆ. ಅಲ್ಲದೇ ರೈತರು ಸಮಾಲೋಚನೆಯಲ್ಲಿ ಭಾಗಿಯಾಗಿ ಮಣ್ಣು ಪರೀಕ್ಷೆ, ನೀರಾವರಿಗೆ ಸಲಹೆಗಳು,…

Read More

ಶಾಸಕ ಬಸನಗೌಡ ಪಾಟೀಲ ಯತ್ನಾಳ ರಿಂದ ಕೃಷಿ ಸಚಿವ ಚಲುವರಾಯ ಸ್ವಾಮಿ ಅವರಿಗೆ ಪತ್ರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಪರೀತ ಮಂಜಿನ ವಾತಾವರಣ ಹಾಗೂ ಕಳಪೆ ಬೀಜಗಳಿಂದ ತೀವ್ರ ನಷ್ಟ ಅನುಭವಿಸುತ್ತಿರುವ ವಿಜಯಪುರದ ತೊಗರಿ ಬೆಳೆದಿರುವ ರೈತರ ನಷ್ಟ ಸರಿದೂಗಿಸಲು ಬೆಂಬಲ ಬೆಲೆಯನ್ನು ನೀಡಬೇಕು ಹಾಗೂ ಕಳಪೆ ಬೀಜ ಪೂರೈಕೆ ಮಾಡಿದ ಕೃಷಿ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು, ಕೃಷಿ ಸಚಿವ ಚಲುವರಾಯ ಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.ರಾಜ್ಯ ಸರ್ಕಾರ ಕಳಪೆ ಮಟ್ಟದ ತೊಗರಿ ಬೀಜ ವಿತರಣೆ ಮಾಡಿರುವುದರಿಂದ ತೊಗರಿ ಗಿಡದಲ್ಲಿ ಕಾಯಿಗಳೇ ಬಿಡದೆ, ನಮ್ಮ ವಿಜಯಪುರ ಭಾಗದ ರೈತರು ಕಂಗಾಲಾಗಿದ್ದಾರೆ. ರೈತರಿಗೆ ತೊಗರಿ ಬೀಜ ವಿತರಣೆ ಮಾಡುವ ಮುನ್ನ ಅದರ ಗುಣಮಟ್ಟ ಹಾಗೂ ಕಂಪನಿಯ ಪೂರ್ವಾಪರವನ್ನು ಪರಿಶೀಲಿಸಿ ನೀಡಬೇಕಾಗಿದ್ದ ಕೃಷಿ ಇಲಾಖೆಯ ಅಧಿಕಾರಿಗಳು, ಕೆಲ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಕಳಪೆ ಬೀಜ ವಿತರಿಸಿರುತ್ತಾರೆ.ಸರ್ಕಾರ ಸಬ್ಸಿಡಿ ದರದಲ್ಲಿ ವಿತರಿಸಿರುವ ಜಿ.ಆರ್.ಜಿ 152,…

Read More

ಸಕಲ ಸರ್ಕಾರಿ ಗೌರವದೊಂದಿಗೆ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ | ನಾಡಿನ ಗಣ್ಯರಿಂದ ಪುಷ್ಪ ನಮನ ಮಂಡ್ಯ: ಅಗಲಿದ ಮಾಜಿ ಮುಖ್ಯಮಂತ್ರಿ, ದೇಶ ಕಂಡ ಅಪರೂಪದ ರಾಜಕಾರಣಿ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಎಸ್.ಎಂ. ಕೃಷ್ಣ ಅವರು ತಮ್ಮ ಹುಟ್ಟೂರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಪಂಚಭೂತಗಳಲ್ಲಿ ಲೀನವಾದರು. ಕುಟುಂಬಸ್ಥರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಕರುನಾಡ ಕಣ್ಮಣಿಗೆ ಕಣ್ಣೀರಿನ ವಿದಾಯ ಹೇಳಿದರು.ಬುಧವಾರ ಸಂಜೆ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಕಾಫಿ ಡೇ ಹತ್ತಿರದ ಖಾಲಿ ಜಾಗದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿತು.ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಪುತ್ರ ಹಾಗೂ ಎಸ್.ಎಂ.ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಹೆಗ್ಡೆ ತಾತನ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.ವೇದಬ್ರಹ್ಮ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ 15 ವೈದಿಕರ ತಂಡದಿಂದ ವಿಧಿ-ವಿಧಾನ ಕಾರ್ಯಗಳು ನಡೆದವು. ಹಲವು ಯತಿಗಳು, ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಕೃಷ್ಣ ಅವರ ಅಂತ್ಯಕ್ರಿಯೆ ಜರುಗಿತು.ಇದಕ್ಕು ಮುನ್ನ…

Read More