ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೨ ರಿಂದ ಇತ್ತೀಚೆಗೆ ನಿವೃತ್ತರಾದ ನೌಕರರು ೭ ನೇ ವೇತನ ಆಯೋಗ ಅವಧಿಯಲ್ಲಿಯೇ ಸೇವೆ ಸಲ್ಲಿಸಿದ್ದು , ಡಿ.ಸಿ.ಆರ್.ಜಿ. ಕಮ್ಯುಟೇಶನ್ , ಗಳಿಕೆ ರಜೆ , ನಗದೀಕರಣದ ಮೊತ್ತವನ್ನು ೭ ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿಯೇ ನೀಡುವಲ್ಲಿ ಪರಿಷ್ಕೃತ ಆದೇಶ ಹೊರಡಿಸಲು ಆಗ್ರಹಿಸಿ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
೦೧-೦೭-೨೦೨೨ ರಿಂದ ೩೧-೦೭-೨೦೨ ಅವಧಿಯಲ್ಲಿ ನಿವೃತ್ತ ನೌಕರ ವರ್ಗದವರಿಗೆ ೭ ನೇ ವೇತನ ಆಯೋಗದ ಅನುಷ್ಠಾನದಲ್ಲಿ ನಿವೃತ್ತ ಆರ್ಥಿಕ ಸೌಲಭ್ಯವನ್ನು ನೀಡದೇ ೬ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿಯೇ ನೀಡಲಾಗಿದೆ.
ಸತತ ನಾಲ್ಕು ತಿಂಗಳುಗಳಿಂದ ಸಮಾವೇಶಗೊಂಡು ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳಿಗೆ ಉಪ ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ, ಪ್ರತಿಪಕ್ಷದನಾಯಕರುಗಳಿಗೆ , ಉಭಯ ಸದನಗಳ ಸಭಾಪತಿಗಳಿಗೆ, ಉಪಸಭಾಪತಿಗಳಿಗೆ ವಿಷಯ ಮನವರಿಕೆ ಮಾಡಿದ್ದೇವೆ. ಆದರೂ ಗಮನ ಹರಿಸಿಲ್ಲ. ರಾಜ್ಯದ ನಿವೃತ್ತ ನೌಕರರು ಡಿ. ೧೬ ರಂದು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದ ಮುಂದೆ ಎಲ್ಲಾ ನಿವೃತ್ತ ನೌಕರರು ಸಮಾವೇಶಗೊಂಡು ಮುಖ್ಯಮಂತ್ರಿಗಳಲ್ಲಿ ನಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಿದ್ದೇವೆ ಎಂದು ನಿವೃತ್ತ ಶಿಕ್ಷಕರ ಸಂಘದ ವಿಜಯಪರ ಜಿಲ್ಲಾ ಸಂಚಾಲಕರಾದ ಬಿರಾದಾರ ಡಿ.ಎಸ್., ಹಾಗೂ ಇತರ ಸದಸ್ಯರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
