ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಾವೇರಿಯಲ್ಲಿ ಡಿಸೆಂಬರ ೭ ರಿಂದ ೯ರ ವರೆಗೆ ಜರುಗಿದ ಟೈಕೊಂಡೊ ಕ್ರೀಡಾಕೂಟದಲ್ಲಿ ಸಿಕ್ಯಾಬ ಮಹಿಳಾ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ಕೈಪಿಅಜ್ಮಿ ದೊಡಮನಿ ಇವರು ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಈ ವಿದ್ಯಾರ್ಥಿನಿಗೆ ಸಂಸ್ಥೆಯ ಅಧ್ಯಕ್ಷರಾದ ಎಸ್.ಎ. ಪುಣೇಕರ ಕಾರ್ಯದರ್ಶಿಗಳಾದ ಶ್ರೀ ಎ.ಎಸ್. ಪಾಟೀಲ, ನಿರ್ದೇಶಕ ಸಲಾವುದ್ದೀನ ಅಯುಬಿ, ಪ್ರಾಚಾರ್ಯರು, ಪಾಲಕರು, ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

