ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ಪ್ರತಿಷ್ಠಿತ ರಾಮಚಂದ ಮೋತಿಚಂದ ಶಹಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಇಂಡಿ ಇದರ ಅಂಗ ಸಂಸ್ಥೆಗಳಾದ ಆರ್. ಎಂ. ಶಹಾ (ಸಿ.ಬಿ.ಎಸ್.ಇ) ಪಬ್ಲಿಕ್ ಶಾಲೆ ಹಾಗೂ ಎಫ್.ಕೆ ದೋಶಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ೧೨-೧೨-೨೦೨೪ ರಿಂದ ೧೫-೧೨-೨೦೨೪ರವರೆಗೆ ಉತ್ಥಾನ ಮಹೋತ್ಸವ ಕಾರ್ಯಕ್ರಮ ಜರುಗಲಿದೆ. ಈ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಮೊದಲ ದಿನ ೧೨.೧೨.೨೦೨೪ರಂದು ಮುಂಜಾನೆ ೯:೦೦— ಮಧ್ಯಾಹ್ನ ೨:೦೦ವರೆಗೆ ಉದ್ಘಾಟನಾ ಕಾರ್ಯಕ್ರಮ ಹಾಗೂ ವೃದ್ಧಿ ಕೃಷಿಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ವೃದ್ಧಿಕೃಷಿಮೇಳದಲ್ಲಿ ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ವ್ಹಿ. ಪಾಟೀಲ್, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳು, ಕೃಷಿ ವಿಜ್ಷಾನ ಕೇಂದ್ರ ವಿಜಯಪುರ ಹಾಗೂ ಇಂಡಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭಾಗಿಯಾಗಲಿದ್ದಾರೆ. ರೈತರು ಕೃಷಿಗೆ ಸಂಬಂಧಿಸಿದ ಎಲ್ಲ ರೀತಿಯ ಔಷಧಿಗಳ ಬಳಕೆ, ಕೃಷಿ ಸಂಬಂಧಿತ ಯಂತ್ರಗಳು, ಪ್ರಮುಖ ಕೃಷಿ ಬೆಳೆಗಳ ಮಾಹಿತಿಯನ್ನು ನೀಡಲಾಗುತ್ತದೆ. ಅಲ್ಲದೇ ರೈತರು ಸಮಾಲೋಚನೆಯಲ್ಲಿ ಭಾಗಿಯಾಗಿ ಮಣ್ಣು ಪರೀಕ್ಷೆ, ನೀರಾವರಿಗೆ ಸಲಹೆಗಳು, ವಿವಿಧ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ಪರಿಹಾರಗಳು ಪಡೆದುಕೊಳ್ಳಬಹುದು. ಜೊತೆಗೆ ರೈತರು ತಾವು ಬೆಳೆದ ಹಣ್ಣು, ತರಕಾರಿ ಮುಂತಾದವುಗಳನ್ನು ಮಳಿಗೆಗಳ ಮೂಲಕ ಮಾರಾಟ ಮಾಡಲು ಮುಕ್ತ ಅವಕಾಶವಿದೆ.
ಜೊತೆಗೆ ಕೃಷಿಕರು ತಾವು ತಮ್ಮ ಸ್ವಂತ ಜಮೀನಿನಲ್ಲಿ ಬೆಳೆದ ವಿಶೇಷ ತರಕಾರಿ ಮತ್ತು ಹಣ್ಣುಗಳಾದ ಡ್ರಾö್ಯಗನ್, ಕಿತ್ತಳೆ, ದಾಳಿಂಬೆ ಮುಂತಾದವುಗಳ ಪ್ರದರ್ಶನ ಮತ್ತು ಮಾರಾಟ ಮಾಡಬಹುದು. ರೈತರು ತಾವು ಬೆಳೆಗಳನ್ನು ಬೆಳೆಯಲು ಅನುಸರಿಸಿದ ವಿಧಾನಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಇದೊಂದು ಸುಸಂದರ್ಭವಾಗಿದೆ. ತಮ್ಮ ಈ ಭಾಗವಹಿಸುವಿಕೆಯಿಂದ ಉಳಿದ ರೈತ ಬಾಂಧವರಿಗೂ, ಮುಂದಿನ ಕೃಷಿ ಪೀಳಿಗೆಗೆ ಅತ್ಯಂತ ಸಹಾಯಕಾರಿಯಾಗಿದೆ. ಆದ ಕಾರಣ ಎಲ್ಲ ರೈತ ಬಾಂಧವರು ಈ ವೃದ್ಧಿ ಕೃಷಿಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಅಲ್ಲದೇ ಈ ಉತ್ಥಾನ ಮಹೋತ್ಸವ ಕಾರ್ಯಕ್ರಮದಲ್ಲಿ ದ್ವಿತೀಯ ದಿನ ೧೩ ಡಿಸೆಂಬರ್ ಮಕ್ಕಳ ಕ್ರೀಡೆಗಳು ಹಾಗೂ ಮಕ್ಕಳ ಜಾತ್ರೆ, ತೃತೀಯ ದಿನ ೧೪ ಡಿಸೆಂಬರ್ ಹಳೆಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ಹಾಗೂ ಚಿತ್ರಕಲಾ ಮೇಳ, ನಾಲ್ಕನೆಯ ದಿನ ೧೫ ಡಿಸೆಂಬರ್ ಶಾಲಾ ವಾರ್ಷಿಕೋತ್ಸವ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
