ಉದಯರಶ್ಮಿ ದಿನಪತ್ರಿಕೆ
ಇಂಡಿ: ಅರವಿಂದರು ಕವಿ, ತತ್ವಜ್ಞಾನಿ, ಹಾಗೂ ಸ್ವಾತಂತ್ರ್ಯ ಹೋರಾಟಗಾರ ಪೂರ್ಣ ಯೋಗಮಾರ್ಗವನ್ನು ಜಗತ್ತಿಗೆ ತೋರಿದ ಮಹಾಯೋಗಿ ಎಂದು ಸಾಹಿತಿ ಗೀತಯೋಗಿ ಹೇಳಿದರು.
ತಾಲೂಕಿನ ಸಾಲೋಟಗಿ ಗ್ರಾಮದ ಅರವಿಂದೋ ಸಮಿತಿ ಮತ್ತು ಸರಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕುರುಕ್ಷೇತ್ರದಲ್ಲಿ ಯುದ್ದದಲ್ಲಿ ಭಾಗಿಯಾಗಿಯೂ ಯುದ್ದ ಮಾಡದೇ ಯುದ್ದ ಗೆಲ್ಲಿಸಿದ ಅರ್ಜುನನ ಸಾರಥಿಯಾಗಿ ಶ್ರೀಕೃಷ್ಣನಂತೆ ಅರವಿಂದ ಅವರು ಸ್ವಾತಂತ್ರ್ಯ ಹೋರಾಟದಿಂದ ದೂರಸರಿದು ಆಧ್ಯಾತ್ಮಿಕ ಕ್ಷೇತ್ರಕ್ಕೆ ಪ್ರವೇಶಿಸಿದರೂ ಅಪರೋಕ್ಷವಾಗಿ ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಕಾರಣರಾದರು ಎಂದರು.
ಅರವಿಂದ ಅವರಿಗೆ ಇಂಗ್ಲೀಷ್,ಗ್ರೀಕ, ಲ್ಯಾಟಿನ, ಫ್ರೆಂಚ್, ಜರ್ಮನಿ, ಇಟಲಿ, ಹಿಂದಿ, ಬಂಗಾಲಿ, ಸಂಸ್ಕೃತ ಭಾಷೆಗಳು ಕರಗತವಾಗಿದ್ದವು ಎಂದರು.
ಫ್ರೇಂಚ್ ದೇಶದ ಮೀರಾ ಅಲ್ಪಸ್ಸಾ ಅವರು ೧೯೨೦ ರಲ್ಲಿ ಶ್ರೀ ಅರವಿಂದರ ಆಧ್ಯಾತ್ಮಿಕ ಸಾಧನೆಯ ಸಹಪಯಣಿಗರಾಗಿ ಬಂದು ಕೂಡಿಕೊಂಡರು. ಶ್ರೀ ಅರವಿಂದರು ಅವರನ್ನು ಶ್ರೀ ಮಾತೆ ಎಂದು ಕರೆದರು. ಶ್ರೀ ಮಾತಾರವಿಂದರು ಭಾರತದ ಆಧ್ಯಾತ್ಮಿಕ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದರು ಎಂದರು.
ದುಂಡಪ್ಪ ಹ್ಯಾಳದ, ಸುಭಾಸಚಂದ್ರ ಗದ್ಯಾಳ,ಅಶೋಕ ಚನಗೊಂಡ, ಹಣಮಂತ ತಡಲಗಿ ವೇದಿಕೆಯ ಮೇಲಿದ್ದರು.
ವಿನೋದಕುಮಾರ ದೊಡ್ಡಗಾಣಿಗೇರ ನಿರೂಪಿಸಿದರು.

