Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕನ್ನಡ ಜಗತ್ತಿನ ಪ್ರಾಚೀನ ಹಾಗೂ ಪ್ರಮುಖ ಭಾಷೆ | ಸಮ್ಮೇಳನ ಸರ್ವಾಧ್ಯಕ್ಷ ವೇ.ಚನ್ನವೀರಸ್ವಾಮಿ ಹಿರೇಮಠ ಅಭಿಮತ ಉದಯರಶ್ಮಿ ದಿನಪತ್ರಿಕೆ ಆಲಮೇಲ: (ಭಾಗ್ಯವಂತಿ ದೇವಿ ಪ್ರಧಾನ ವೇದಿಕೆ ವಿಭೂತಿಹಳ್ಳಿ)ಜಗತ್ತಿನ ಪ್ರಾಚೀನ ಹಾಗೂ ಪ್ರಮುಖ ಭಾಷೆಗಳಲ್ಲಿ ಕನ್ನಡ ಒಂದು ಕನ್ನಡ ಭಾಷೆಗೆ ಸುಮಾರು 2,000 ವರ್ಷಗಳ ಇತಿಹಾಸವಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಇವೆ ಎಂದು ಆಲಮೇಲ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ವೇ.ಚನ್ನವೀರ ಸ್ವಾಮಿ ಹಿರೇಮಠ ಹೇಳಿದರುಶನಿವಾರ ಅವರು ತಾಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಆಲಮೇಲ ತಾಲೂಕು 2ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಏಳನೆಯ ಶತಮಾನದ ಹೊತ್ತಿಗೆ ಕನ್ನಡ ಭಾಷಾ ಸಾಹಿತ್ಯದ ಗದ್ದುಗೆಯನ್ನು ಏರಿದ್ದು ಸ್ಪಷ್ಟವಾಗುತ್ತದೆ. ಬರೀ ಮಾತು ಭಾಷೆಯಾಗಿದ್ದ ಕನ್ನಡವೂ ಮುಂದೆ ಸಾಹಿತ್ಯದ ಸಿಂಹಾಸನವನ್ನೇರಿ ಕನ್ನಡ ನಾಡಿನ “ಶ್ರೀಮಂತ”ಭಾಷೆಯಾಗಿ ಬೆಳಗುತ್ತಿದೆ.ಪ್ರಸ್ತಾವಿಕವಾಗಿ ಆಲಮೇಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಶರಣ ಗುಂದಗಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಸಾಹಿತ್ತಿಕ, ಹಾಗೂ ದತ್ತಿನಿಧಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದು ಸದ್ಯ…
ಕೈಗೆತ್ತಿಕೊಳ್ಳಲಾದ ೨೫೮೩ ಪ್ರಕರಣಗಳಲ್ಲಿ ೨೦೨೧ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ | ಪಕ್ಷಗಾರರು ಹರ್ಷ ಉದಯರಶ್ಮಿ ದಿನಪತ್ರಿಕೆ ವರದಿ: ಚೇತನ ಶಿವಶಿಂಪಿಮುದ್ದೇಬಿಹಾಳ: ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಿ ಪಕ್ಷಗಾರರಿಗೆ ನ್ಯಾಯ ಒದಗಿಸಿಕೊಡಲು ನ್ಯಾಯಾಂಗ ಇಲಾಖೆ ಸಾಕಷ್ಟು ಪ್ರಯತ್ನ ಪಡುತ್ತಲೇ ಇದೆ. ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುವ ಪಕ್ಷಗಾರರಿಗೆ ಸಧ್ಯ ಲೋಕ್‌ಅದಾಲತ್ ಸಾಕಷ್ಟು ಸಹಕಾರಿಯಾಗಿದ್ದು ಈ ಬಗ್ಗೆ ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ೧೩ ವರ್ಷಗಳಿಂದ ನಡೆಯುತ್ತಿದ್ದ ಸಿವಿಲ್ ವ್ಯಾಜ್ಯವೊಂದು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡು ಸಾಕ್ಷೀಕರಿಸಿದೆ.ತಾಲೂಕಿನ ಹಡಲಗೇರಿ ಗ್ರಾಮದ ಅಂದಾಜು ೬ ಎಕರೆ ಜಮೀನು ಸೇರಿದಂತೆ ಪಟ್ಟಣದಲ್ಲಿನ ಎರಡು ಮನೆಗಳಿಗೆ ಸಂಬಂಧಿಸಿದಂತೆ ಅಂದಾಜು ೧೧ ವರ್ಷಗಳ ಹಿಂದೆ ಇಲ್ಲಿನ ನ್ಯಾಯಾಲಯದಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಪ್ರಕರಣದಲ್ಲಿರುವ ೬ ಜನರ ಪೈಕಿ ಒಂದಿಬ್ಬರು ದೂರದ ಊರಿಂದ ಅಲೆದು ಸುಸ್ತಾಗಿ ಹೋಗಿದ್ದರು. ತಮ್ಮ ಜೀವಿತ ಕಾಲದಲ್ಲಿ ಈ ಆಸ್ತಿಯನ್ನು ಅನುಭವಿಸುತ್ತೇವೋ ಇಲ್ಲವೋ ಎಂಬ ಚಿಂತೆಗೀಡಾಗಿದ್ದರು. ಈ ಮಧ್ಯೆ ರಾಷ್ಟ್ರೀಯ ಲೋಕ್ ಅದಾಲತ್…
ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ದಾಳಿ :೬ ಜನರ ಬಂಧನ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಬಳಿ ನಕಲಿ ಮಧ್ಯ ತಯಾರಿಕಾ ಘಟಕದ ಮೇಲೆ ಶನಿವಾರ ಬೆಳಿಗ್ಗೆ ದಾಳಿ ನಡೆಸಿರುವ ಅಬಕಾರಿ ಪೊಲೀಸರು ೬ ಜನರನ್ನು ಬಂಧಿಸಿ ಮಧ್ಯ ಮತ್ತು ಅದಕ್ಕೆ ಬಳಕೆ ಮಾಡುವ ವಸ್ತುಗಳನ್ನು ವಶಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪಟ್ಟಣದ ಕಲಬುರಗಿ ರಸ್ತೆ ಸಮೀಪದಲ್ಲಿನ ಅಮೋಘಸಿದ್ದ ಬಸಪ್ಪ ಹೂಗಾರ ಎಂಬಾತನ ಜಮೀನಿನ ಶೆಡ್ಡ ಒಂದರಲ್ಲಿ ನಕಲಿ ಮಧ್ಯ ತಯಾರಿಸುತ್ತಿರುವ ಮಾಹಿತಿಯನ್ನು ಖಚಿತ ಖಚಿತಪಡಿಸಿಕೊಂಡು ಅಬಕಾರಿ ಜಿಲ್ಲಾಧಿಕಾರಿ ವೀರಣ್ಣ ಬಾಗೇವಾಡಿ ಮತ್ತು ಅಬಕಾರಿ ವೃತ್ತ ನೀರಿಕ್ಷಕ ಶಿವಾನಂದ ಹೂಗಾರ ಅವರ ತಂಡ ಏಕಾಎಕಿ ದಾಳಿ ನಡೆಸಿದ್ದಾರೆ. ಇಲಾಖೆಯ ಈ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.ದಾಳಿಯ ಸಂದರ್ಭದಲ್ಲಿ ನಕಲಿ ಮಧ್ಯ ತಯಾರಿಕಾ ಘಟಕದಲ್ಲಿ ೫೬೨ ಲೀಟರ್ ನಕಲಿ ಮಧ್ಯ ಹಾಗೂ ೨೦೦ ಲೀಟರ್ ಮಧ್ಯಸಾರ ಹಾಗೂ ಎಮ್.ಸಿ ಮ್ಯಾಕಡೋವೇಲ್ಸ್ ಮತ್ತು ಆಯ್.ಬಿ ಕಂಪನಿಗೆ ಸೇರಿದ ಸುಮಾರು ೩೦೦೦ ಕ್ಕೂ ಅಧಿಕ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದು ಖಂಡನೀಯವಾಗಿದ್ದು, ರಾಜ್ಯ ಸರಕಾರದ ಈ ನಡೆ ಹೇಡಿತನದ ಕೃತ್ಯ ಎಂದು ಬಿಜೆಪಿ ಮುಖಂಡ ಮುತ್ತು ಶಾಬಾದಿ ಆರೋಪಿಸಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸುತ್ತಿರುವ ಕಾಂಗ್ರೆಸ್ ಸರಕಾರ, ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆದನ್ನು ಬಿಟ್ಟು ಸರ್ವಾಧಿಕಾರಿಯಂತೆ ಪ್ರಸ್ತುತ ಸರಕಾರ ಪಂಚಮಸಾಲಿಗಳ ಮೇಲೆ ಲಾಠಿ ಪ್ರಯೋಗಿಸಿ ದಮನಕಾರಿ ನೀತಿ ಅನುಸರಿಸಿದೆ ಎಂದು ಆರೋಪಿಸಿದೆ.ಸುವರ್ಣ ವಿಧಾನಸೌಧದ ಎದುರು ೨ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು. ಪಂಚಮಸಾಲಿಗಳ ಹೋರಾಟವನ್ನು ಹತ್ತಿಕ್ಕಲು ಸರ್ಕಾರ, ಪೊಲೀಸರನ್ನು ಬಳಸಿ ಬಲ ಪ್ರಯೋಗ ಮಾಡಿರುವುದು ನಾಚಿಕೆಗೇಡು ಎಂದಿದೆ.ಪ್ರತಿಭಟನಾಕಾರರನ್ನು ಬೆನ್ನಟ್ಟಿ ರಕ್ತ ಬರುವಂತೆ ಪೊಲೀಸರು ಲಾಠಿಯಿಂದ ಹೊಡೆದಿರುವುದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಕೆಟ್ಟ ಆಡಳಿತಕ್ಕೆ ಸಾಕ್ಷಿ.…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಕೊಕಟನೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವೀರನಗೌಡ ಪಾಟೀಲ ಹಾಗೂ ಉಪಾಧಕ್ಷರಾಗಿ ಅಬ್ದುಲಗಫುರ ಮುಜಾವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವೀರನಗೌಡ ಪಾಟೀಲ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಬ್ದುಲಗಫುರ ಮುಜಾವರ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಲೀಲಾವತಿಗೌಡ ಅವಿರೋಧ ಆಯ್ಕೆ ಎಂದು ಘೋಷಿಸಿದರು.ಇದೇ ಸಂದರ್ಭದಲ್ಲಿ ಪಿಕೆಪಿಎಸ್ ಸದಸ್ಯರಾದ ಸಿದ್ದಪ್ಪ ಜಾಲವಾದಿ, ರಾವುತಪ್ಪ ಕನ್ನೂರ, ಕೌಸರಬಾನು ಭಾಗವನ, ಲಕ್ಷ್ಮಿಬಾಯಿ ವಾಲೀಕಾರ, ಆರತಿ ಗೋಣಿ, ಯಮನಪ್ಪ ಬ್ಯಾಕೋಡ, ಯಲ್ಲಪ್ಪ ಹರಿಜನ, ಕಾರ್ಯದರ್ಶಿ ಚನ್ನಪಗೌಡ ಪ್ರಭುಗೋಳ, ಗ್ರಾಮಸ್ಥರಾದ ಎಸ್.ಕೆ ಪೂಜಾರಿ, ಫಕೃದ್ದಿನ ಕುಮಸಗಿ, ಹೂವಪ್ಪ ಕನ್ನೂರ, ಎಸ್.ಎಂ.ಮಠ, ರವಿ ಬಮ್ಮನಹಳ್ಳಿ, ಕಾಂತು ಬ್ಯಾಕೋಡ, ಶಂಕರಲಿಂಗ ಗೋಣಿ, ಸದ್ದಾಂ ಮುಜಾವರ, ಇಸ್ಮಾಯಿಲ್ ಭಾಗವಾನ, ಶ್ರೀಕಾಂತ ಸಂಗೋಗಿ, ಸಂಗಪ್ಪ ಹರನಾಳ, ಮಲಕಪ್ಪ ಕಟ್ಟಿಮನಿ, ಇಸಾಕ ಮುಲ್ಲಾ ಸೇರಿದಂತೆ ಅನೇಕರಿದ್ದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಇದೇ ಡಿಸೆಂಬರ್ ೨೭ ರಂದು ಜರುಗುವ ದೇವರಹಿಪ್ಪರಗಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಮಾದರಿ ಸಮ್ಮೇಳನವನ್ನಾಗಿ ವಿಜೃಂಭಣೆಯಿಂದ ಆಚರಿಸೋಣ ಎಂದು ವಿಜಯಪುರದ ಅನುಗ್ರಹ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡರ ಲಿಂಗದಳ್ಳಿ (ಚಬನೂರ) ಹೇಳಿದರು.ಪಟ್ಟಣದ ಶಾಸಕರ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ದೇವರಹಿಪ್ಪರಗಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು. ನಾವೆಲ್ಲರೂ ಸಮ್ಮೇಳನದ ಯಶಸ್ಸಿಗೆ ಅವಿರತವಾಗಿ ಶ್ರಮಿಸೋಣ ಎಂದರು.ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ ಮಾತನಾಡಿ ಸಮ್ಮೇಳನದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸೋಣ ಹಾಗೂ ಅರ್ಥಪೂರ್ಣವಾಗಿ ಗೋಷ್ಠಿಗಳನ್ನು ಹಮ್ಮಿಕೊಳ್ಳೋಣ ಎಂದರು.ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರ್ ಅಹ್ಮದ್ ಬೇಪಾರಿ, ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಗೌರವ ಕಾರ್ಯದರ್ಶಿ ಅರುಣ ಕೋರವಾರ ಮಾತನಾಡಿದರು.ಉದ್ಯಮಿ ಕಾಶೀನಾಥ ಸಾಲಕ್ಕಿ, ಬಸವಶರಣ ಸಂಗಮ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ತಡವಲ, ತಾಲ್ಲೂಕು ಬಣಜಿಗ ಸಂಘದ ಅಧ್ಯಕ್ಷ ಬಸವರಾಜ ತಾಳಿಕೋಟಿ, ಗುತ್ತಿಗೆದಾರ ಸಿ.ಬಿ.ಅಸ್ಕಿ, ಮುಳಸಾವಳಗಿ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಕಾಶೀನಾಥ ಕೋರಿ, ಪಿ.ಎಸ್.ಮಿಂಚನಾಳ, ರಾವುತ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ತಾಲ್ಲೂಕನ್ನು ನೋಡಲ್ ತಾಲ್ಲೂಕಾಗಿ ಮಾಡಿಕೊಂಡಿರುವ ವಿಧಾನ ಪರಿಷತ್ ಸದಸ್ಯರಾದ ಕೇಶವ ಪ್ರಸಾದ ಎಸ್ ಅವರನ್ನು ಮಹಾನಗರ ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ನಗರ ಮಂಡಲ ಪದಾಧಿಕಾರಿಗಳು ಶನಿವಾರ ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಶಿವರುದ್ರ ಬಾಗಲಕೋಟ, ಎಂ.ಎಸ್.ಕರಡಿ, ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ಕಿರಣ ಪಾಟೀಲ, ರಾಜಶೇಖರ ಕುರಿಯವರ, ವಿಠ್ಠಲ ಹೊಸಪೇಟ, ಕುಮಾರ ಗಡಗಿ, ಜವಾಹರ ಗೋಸಾವಿ, ಗಿರೀಶ ಪಾಟೀಲ, ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಶಂಕರ ಹೂಗಾರ, ಮುಖಂಡರಾದ ಮಹೇಶ ಒಡೆಯರ, ಚಂದ್ರು ಚೌದರಿ, ಅಮಿತ್ ಗರುಡಕರ ಮತ್ತಿತರರು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ಅವರು ಡಿ.೧೭ ಹಾಗೂ ೧೮ ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಡಿ.೧೬ ರಂದು ರಾತ್ರಿ ೧೧ ಗಂಟೆಗೆ ವಿಜಯಪುರಕ್ಕೆ ಆಗಮಿಸಿ ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಡಿ.೧೭ ರಂದು ಮಧ್ಯಾಹ್ನ ೧೨ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದಿಂದ ನೀಡಲಾದ ಅನುದಾನದ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ ೩-೩೦ಕ್ಕೆ ವಿಜಯಪುರ ಜಿಲ್ಲೆ ಮತ್ತು ಮಹಾರಾಷ್ಟç ರಾಜ್ಯದ ಗಡಿ ಗ್ರಾಮಗಳ ವಿವಿಧ ಗಡಿ ಕನ್ನಡ ಶಾಲೆಗಳು ಹಾಗೂ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದಿಂದ ನೀಡಲಾದ ಅನುದಾನಗಳಿಗೆ ಸಂಬಂಧಿಸಿದ ಕಾಮಗಾರಿಗಳ ವೀಕ್ಷಣ ಮಾಡಿ ಅಂದು ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.ಡಿ.೧೭ರಂದು ಬೆಳಿಗ್ಗೆ ೮-೩೦ಕ್ಕೆ ವಿಜಯಪುರದಿಂದ ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ನಗರದ ಟಕ್ಕೆಯಲ್ಲಿರುವ ಪಿ.ಎಂ.ಕೇಂದ್ರೀಯ ವಿದ್ಯಾಲಯದಲ್ಲಿ ಶನಿವಾರ ೬೨ನೇ ಸಂಸ್ಥಾಪನಾ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೇಲ್ವೆ ಇಲಾಖೆಯ ಚಂದನ ಝಾ ಅವರು ಮಾತನಾಡಿ, ಕೇಂದ್ರೀಯ ವಿದ್ಯಾಲಯದ ಮಕ್ಕಳ ಕಲಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಲ್ಲಿ ಶಿಕ್ಷಣ ಪಡೆದ ಅನೇಕರು ಇಂದು ದೇಶದ ವಿವಿಧ ಭಾಗಗಳಲ್ಲಿ ವಿವಿಧ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ನೀವು ಸಹ ಗುರಿಯನ್ನಿಟ್ಟುಕೊಂಡು ಅತ್ಯುತ್ತಮ ಸಾಧನೆಗೈಯ್ಯುವ ಮೂಲಕ ಉನ್ನತ ಸ್ಥಾನ ಪಡೆಯುವ ಮೂಲಕ ತಾವು ತಮ್ಮ ಕುಟುಂಬ, ಸಮಾಜ, ವಾಸವಿರುವ ಸ್ಥಳ, ರಾಜ್ಯ, ದೇಶದ ಗೌರವ ಹೆಚ್ಚಿಸುವಂತೆ ಅವರು ಕರೆ ನೀಡಿದರು.ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಜುನಾರಾಮ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಂತೋಷ ಹಲವಾಯಿ, ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಶೃತಿ ಸಿಲಿನ, ಅನಂತ ಪದ್ಮನಾಭನ್, ಸುಂದ್ರೇಶ ಉಮದಿ, ವಿರೇಶ ಡಂಬಳ, ಕಲ್ಯಾಣಿ ಅಶೋಕ ಕಾಳೆ, ಪಿಯುಷ ದೀಕ್ಷಿತ, ಚಿನ್ನು ಗುಪ್ಪಾ, ವೈಷ್ಣವಿ ಚೂರಿ ಉಪಸ್ಥಿತರಿದ್ದರು. ಅನಾಮಿಕ ಕುಮಾರಿ ಅವರು ಕಾರ್ಯಕ್ರಮ ನಿರೂಪಣೆ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಬ್ಯಾಂಕಿನ ಸಾಲ ಪ್ರಕರಣಗಳು ಸೇರಿದಂತೆ ಒಟ್ಟು ಮೂರು ಕೋಟಿ ಐದು ಲಕ್ಷ ರೂ ಹಣ ವಸೂಲಾತಿಯಾಗಿದೆ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ ಕೋಟೆಪ್ಪ ಕಾಂಬಳೆ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮೆಗಾ ಲೋಕ ಅದಾಲತ್ ಕಾರ್ಯಕ್ರಮದ ನಂತರ ಮಾತನಾಡಿದ ಅವರುಲೋಕ ಅದಾಲತ್‌ನಲ್ಲಿ ೨೬೫೮ ಪ್ರಕರಣಗಳು ಇತ್ಯರ್ಥ ಗೊಂಡಿವೆ. ಕಳೆದ ಬಾರಿ ನಡೆದ ಲೋಕ ಅದಾಲತ್‌ನಲ್ಲಿ ೧೮೦೫ ಪ್ರಕರಣಗಳು ಇತ್ಯರ್ಥ ಗೊಂಡಿದ್ದವು. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನು ಪ್ರಕಾರ ರಾಜಿ ಆಗಬಹುದಾದ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ್ಯ ಪಡಿಸಿ ಇಬ್ಬರಿಗೂ ನ್ಯಾಯ ಒದಗಿಸಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರು ಕೊಟೆಪ್ಪ ಕಾಂಬಳೆ ತಿಳಿಸಿದರು.ಕ್ರಿಮಿನಲ್ ಪ್ರಕರಣಗಳು, ಕುಡಿದು ವಾಹನ ನಡೆಸಿದ ಪ್ರಕರಣ, ಸಾರ್ವಜನಿಕ ಸ್ಥಳದಲ್ಲಿ ಶಾಂತತೆ ಭಂಗ ಉಂಟು ಮಾಡಿದ್ದು, ಅಪಘಾತ ಪ್ರಕರಣ, ಸಿವಿಲ್ ಪಾಲು, ವಾಟ್ನಿ ದಾವೆ, ನಿರ್ಭಂದಕಾಜ್ಞೆ ದಾವೆ, ವಾಹನ ಅಪಘಾತ ಪರಿಹಾರ ದಂತಹ ಪ್ರಕರಣ ಇತ್ಯರ್ಥ ಪಡಿಸಿದೆ ಎಂದು ಕಾಂಬಳೆಯವರು…
