ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಇದೇ ಡಿಸೆಂಬರ್ ೨೭ ರಂದು ಜರುಗುವ ದೇವರಹಿಪ್ಪರಗಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಮಾದರಿ ಸಮ್ಮೇಳನವನ್ನಾಗಿ ವಿಜೃಂಭಣೆಯಿಂದ ಆಚರಿಸೋಣ ಎಂದು ವಿಜಯಪುರದ ಅನುಗ್ರಹ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡರ ಲಿಂಗದಳ್ಳಿ (ಚಬನೂರ) ಹೇಳಿದರು.
ಪಟ್ಟಣದ ಶಾಸಕರ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ದೇವರಹಿಪ್ಪರಗಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು. ನಾವೆಲ್ಲರೂ ಸಮ್ಮೇಳನದ ಯಶಸ್ಸಿಗೆ ಅವಿರತವಾಗಿ ಶ್ರಮಿಸೋಣ ಎಂದರು.
ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ ಮಾತನಾಡಿ ಸಮ್ಮೇಳನದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸೋಣ ಹಾಗೂ ಅರ್ಥಪೂರ್ಣವಾಗಿ ಗೋಷ್ಠಿಗಳನ್ನು ಹಮ್ಮಿಕೊಳ್ಳೋಣ ಎಂದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರ್ ಅಹ್ಮದ್ ಬೇಪಾರಿ, ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಗೌರವ ಕಾರ್ಯದರ್ಶಿ ಅರುಣ ಕೋರವಾರ ಮಾತನಾಡಿದರು.
ಉದ್ಯಮಿ ಕಾಶೀನಾಥ ಸಾಲಕ್ಕಿ, ಬಸವಶರಣ ಸಂಗಮ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ತಡವಲ, ತಾಲ್ಲೂಕು ಬಣಜಿಗ ಸಂಘದ ಅಧ್ಯಕ್ಷ ಬಸವರಾಜ ತಾಳಿಕೋಟಿ, ಗುತ್ತಿಗೆದಾರ ಸಿ.ಬಿ.ಅಸ್ಕಿ, ಮುಳಸಾವಳಗಿ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಕಾಶೀನಾಥ ಕೋರಿ, ಪಿ.ಎಸ್.ಮಿಂಚನಾಳ, ರಾವುತ್ ತಳಕೇರಿ, ಯಶವಂತ ರಾವ್, ಕಾಶೀನಾಥ ತಳಕೇರಿ, ಶಿವರಾಜ ತಳವಾರ, ಪ್ರಕಾಶ ಮಲ್ಹಾರಿ, ಮುನೀರ್ ಅಹ್ಮದ್ ಮಳಖೇಡ, ಎಸ್.ಎಸ್.ಸಾತಿಹಾಳ, ಶ್ರೀಕಾಂತ ರಾಠೋಡ, ಪಿ.ಸಿ.ತಳಕೇರಿ, ಮುರ್ತುಜಾ ತಾಂಬೋಳಿ, ರಾಘವೇಂದ್ರ ಗುಡಿಮನಿ, ಸಿದ್ದು ಮೇಲಿನಮನಿ, ಗೋಲ್ಲಾಳ ಬಿರಾದಾರ, ಸುರೇಶ ಬಡಿಗೇರ, ಕೆ.ಎಮ್. ನಂದಿ, ರವಿ ಕೊಟೀನ, ಮಲಕಪ್ಪ ಸುರಗಿಹಳ್ಳಿ, ಎಸ್.ಜಿ.ತಾವರಖೇಡ, ಸದಾಶಿವ ಗುಡಿಮನಿ, ಎಸ್.ಎಮ್.ನಂದ್ಯಾಳ, ಶಿವಶರಣ ಪೂಜಾರಿ, ದಸ್ತಗೀರ ಬಗಲಿ ಇದ್ದರು.

