ಉದಯರಶ್ಮಿ ದಿನಪತ್ರಿಕೆ
ಇಂಡಿ: ಬ್ಯಾಂಕಿನ ಸಾಲ ಪ್ರಕರಣಗಳು ಸೇರಿದಂತೆ ಒಟ್ಟು ಮೂರು ಕೋಟಿ ಐದು ಲಕ್ಷ ರೂ ಹಣ ವಸೂಲಾತಿಯಾಗಿದೆ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ ಕೋಟೆಪ್ಪ ಕಾಂಬಳೆ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮೆಗಾ ಲೋಕ ಅದಾಲತ್ ಕಾರ್ಯಕ್ರಮದ ನಂತರ ಮಾತನಾಡಿದ ಅವರು
ಲೋಕ ಅದಾಲತ್‌ನಲ್ಲಿ ೨೬೫೮ ಪ್ರಕರಣಗಳು ಇತ್ಯರ್ಥ ಗೊಂಡಿವೆ. ಕಳೆದ ಬಾರಿ ನಡೆದ ಲೋಕ ಅದಾಲತ್‌ನಲ್ಲಿ ೧೮೦೫ ಪ್ರಕರಣಗಳು ಇತ್ಯರ್ಥ ಗೊಂಡಿದ್ದವು. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನು ಪ್ರಕಾರ ರಾಜಿ ಆಗಬಹುದಾದ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ್ಯ ಪಡಿಸಿ ಇಬ್ಬರಿಗೂ ನ್ಯಾಯ ಒದಗಿಸಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರು ಕೊಟೆಪ್ಪ ಕಾಂಬಳೆ ತಿಳಿಸಿದರು.
ಕ್ರಿಮಿನಲ್ ಪ್ರಕರಣಗಳು, ಕುಡಿದು ವಾಹನ ನಡೆಸಿದ ಪ್ರಕರಣ, ಸಾರ್ವಜನಿಕ ಸ್ಥಳದಲ್ಲಿ ಶಾಂತತೆ ಭಂಗ ಉಂಟು ಮಾಡಿದ್ದು, ಅಪಘಾತ ಪ್ರಕರಣ, ಸಿವಿಲ್ ಪಾಲು, ವಾಟ್ನಿ ದಾವೆ, ನಿರ್ಭಂದಕಾಜ್ಞೆ ದಾವೆ, ವಾಹನ ಅಪಘಾತ ಪರಿಹಾರ ದಂತಹ ಪ್ರಕರಣ ಇತ್ಯರ್ಥ ಪಡಿಸಿದೆ ಎಂದು ಕಾಂಬಳೆಯವರು ತಿಳಿಸಿದರು.
ಕಿರಿಯ ಶ್ರೇಣಿ ನ್ಯಾಯಾಧೀಶ ಸುನೀಲಕುಮಾರ ಎಂ.ಎಸ್, ಎಸ್.ಆರ್.ಬಿರಾದಾರ, ನ್ಯಾಯವಾದಿಗಳಾದ ಎಸ್.ಎಲ್.ನಿಂಬರಗಿಮಠ, ಸೋಮು ನಿಂಬರಗಿಮಠ, ಎಸ್.ಎಸ್.ಪಾಟೀಲ, ಸುನೀಲ ಕುಲಕರ್ಣಿ, ಬಿ.ಬಿ.ಬಿರಾದಾರ, ಬಿ.ಸಿ.ತಾಂಬೆ, ಎಸ್.ಜಿ.ಹತ್ತರಕಿ, ಎಸ್.ಎಸ್.ರೆಬಿನಾಳ, ಪ್ರವೀಣ ಕಾಂಬಳೆ, ವಾಯ್.ಎಸ್.ಪೂಜಾರಿ, ಎ.ಜಿ. ಜೋಶಿ, ವಿ.ಎಸ್.ಹಂಜಗಿ, ವಿ.ಜಿ.ನಾಯಕ, ಎಸ್.ಬಿ.ಆಯ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರು ಸುನೀಲ ಪರಿಮಳ, ಪ್ರಕಾಶ ಗುಜಲಕರ, ಆನಂದ ಮ್ಯಾಗೇರಿ, ಸ್ಟೀಫನ ಸರ್, ಮಲ್ಲಪ್ಪ ಅಂಬಲಗಿ, ಜಗದೀಶ ದೊಡಮನಿ, ಬಾಬುರಾವ ಕೋಳೂರ, ಮಹೇಶ ಖೋತ ಮತ್ತು ಸಿದ್ದು ಹಾವಳಗಿ ಮತ್ತಿತರಿದ್ದರು.

