ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ದಾಳಿ :೬ ಜನರ ಬಂಧನ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಬಳಿ ನಕಲಿ ಮಧ್ಯ ತಯಾರಿಕಾ ಘಟಕದ ಮೇಲೆ ಶನಿವಾರ ಬೆಳಿಗ್ಗೆ ದಾಳಿ ನಡೆಸಿರುವ ಅಬಕಾರಿ ಪೊಲೀಸರು ೬ ಜನರನ್ನು ಬಂಧಿಸಿ ಮಧ್ಯ ಮತ್ತು ಅದಕ್ಕೆ ಬಳಕೆ ಮಾಡುವ ವಸ್ತುಗಳನ್ನು ವಶಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಟ್ಟಣದ ಕಲಬುರಗಿ ರಸ್ತೆ ಸಮೀಪದಲ್ಲಿನ ಅಮೋಘಸಿದ್ದ ಬಸಪ್ಪ ಹೂಗಾರ ಎಂಬಾತನ ಜಮೀನಿನ ಶೆಡ್ಡ ಒಂದರಲ್ಲಿ ನಕಲಿ ಮಧ್ಯ ತಯಾರಿಸುತ್ತಿರುವ ಮಾಹಿತಿಯನ್ನು ಖಚಿತ ಖಚಿತಪಡಿಸಿಕೊಂಡು ಅಬಕಾರಿ ಜಿಲ್ಲಾಧಿಕಾರಿ ವೀರಣ್ಣ ಬಾಗೇವಾಡಿ ಮತ್ತು ಅಬಕಾರಿ ವೃತ್ತ ನೀರಿಕ್ಷಕ ಶಿವಾನಂದ ಹೂಗಾರ ಅವರ ತಂಡ ಏಕಾಎಕಿ ದಾಳಿ ನಡೆಸಿದ್ದಾರೆ. ಇಲಾಖೆಯ ಈ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ನಕಲಿ ಮಧ್ಯ ತಯಾರಿಕಾ ಘಟಕದಲ್ಲಿ ೫೬೨ ಲೀಟರ್ ನಕಲಿ ಮಧ್ಯ ಹಾಗೂ ೨೦೦ ಲೀಟರ್ ಮಧ್ಯಸಾರ ಹಾಗೂ ಎಮ್.ಸಿ ಮ್ಯಾಕಡೋವೇಲ್ಸ್ ಮತ್ತು ಆಯ್.ಬಿ ಕಂಪನಿಗೆ ಸೇರಿದ ಸುಮಾರು ೩೦೦೦ ಕ್ಕೂ ಅಧಿಕ ಬಾಟಲಿಗಳ ೬೫ ಬಾಕ್ಸಗಳು ನಕಲಿ ಮಧ್ಯ ತಯಾರಿಕೆಗೆ ಬಳಕೆಯಾಗುತ್ತಿದ್ದ ಖಾಲಿ ಬಾಟಲಿಗಳು ಮತ್ತು ನಕಲಿ ಭದ್ರತಾ ಚೀಟಿಗಳ (ಲೇಬಲ್) ನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಮಾರು ರೂ ೮೪೨೦೦೦ ಮೌಲ್ಯದ ನಕಲಿ ಮಧ್ಯ ಹೊಂದಿದ್ದು. ಅವರ ತೋಟದಲ್ಲಿಯೆ ನಿತ್ಯ ನಕಲಿ ಮಧ್ಯವನ್ನು ತಯಾರಿಸಿ ಬೇರೆ ಬೇರೆ ಕಡೆ ಇವುಗಳನ್ನು ಮಾರಾಟ ಮಾಡಲು ಸಿದ್ದರಾಗಿದ್ದರು. ಇದರಲ್ಲಿ ೫ ಜನ ಆರೋಪಿಗಳು ಹುಬ್ಬಳ್ಳಿಯ ಮೂಲದವರು. ೧ ಆರೋಪಿ ಸಿಂದಗಿಯವನು ಎಂದು ಅಬಕಾರಿ ಪೋಲಿಸ ಮೂಲಗಳು ತಿಳಿಸಿವೆ.
ಕಾರ್ಯಚರಣೆಯಲ್ಲಿ ಜಿಲ್ಲೆಯ ಅನೇಕ ಅಬಕಾರಿ ಸಿಬ್ಭಂದಿಗಳು, ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ನಿಖಿಲಅಹ್ಮದ ಖಾನಾಪೂರ, ಸಂತೋಷ ವಾಲಿಕಾರ ಸೇರಿದಂತೆ ಅನೇಕರು ಇದ್ದರು.

” ಇದು ಅತ್ಯಂತ ದೊಡ್ಡ ಪ್ರಕರಣ. ಖಚಿತ ಮಾಹಿತಿಯನ್ನು ಪಡೆದುಕೊಂಡು ನಕಲಿ ಮಧ್ಯ ತಯಾರಕ ಘಟಕದ ಮೇಲೆ ದಾಳಿ ಮಾಡಿದ್ದೇವೆ. ಇಂತಹ ಘಟಕಗಳನ್ನು ಪತ್ತೆ ಹಚ್ಚಿ ಕೂಡಲೇ ವಶಪಡಿಸಿಕೊಳ್ಳುತ್ತೇವೆ. ಜನರ ದಾರಿ ತಪ್ಪಿಸುವ ಕಾರ್ಯದಲ್ಲಿ ಈ ಚಟುವಟಿಕೆಗಳು ನಡೆಯುತಿದ್ದು ಇವುಗಳಿಗೆ ಬಳಸುವ ಲೇಬಲಗಳನ್ನು ಇಂದೋರ, ರಾಜಸ್ತಾನ, ಮಧ್ಯಪ್ರದೇಶಗಳಿಂದ ತರಲಾಗಿದ್ದು ಇನ್ನು ಹಲವು ವಿಚಾರಗಳು ಆರೋಪಿಗಳನ್ನು ತನಿಖೆಮಾಡಿದಾಗ ಇನ್ನು ಹೆಚ್ಚು ಮಾಹಿತಿಗಳು ಹೋರಬಿಳಲಿವೆ.
– ವೀರಣ್ಣ ಬಾಗೇವಾಡಿ
ಅಬಕಾರಿ ಜಿಲ್ಲಾಧಿಕಾರಿಗಳು, ವಿಜಯಪುರ.
“ಸಿಂದಗಿಯ ಜಮೀನೊಂದರಲ್ಲಿ ಮಧ್ಯ ಘಟಕದ ಮೂಲವನ್ನು ತಿಳಿದುಕೊಂಡು ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಮೇಲಾಧಿಕಾರಿಗಳ ನಿರ್ದೇಶನದಂತೆ ಕಾರ್ಯಾಚರಣೆ ಮಾಡಿದ್ದೇವೆ. ಇನ್ನೂ ಹಿಂತಾ ನಕಲಿ ಮಧ್ಯ ತಯಾರಿಕಾ ಘಟಕಗಳ ಶೋಧನಾ ಕಾರ್ಯ ನಡೆಯುತ್ತಿದ್ದು ಆದಷ್ಟು ಬೇಗ ಪತ್ತೆ ಹಚ್ಚುತ್ತೇವೆ.”
– ಶಿವಾನಂದ ಹೂಗಾರ
ಅಬಕಾರಿ ವೃತ್ತ ನೀರಿಕ್ಷಕರು, ಸಿಂದಗಿ.

