Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳು ಪ್ರಜಾಪ್ರಭುತ್ವದ ತಳಹದಿಯಾಗಿವೆ. ಪ್ರಜಾಪಭುತ್ವ ಯಶಸ್ವಿಗೆ ಪ್ರಬುದ್ಧ ಹಾಗೂ ಜಾಗರೂಕ ಮತದಾರರಿಂದಲೇ ಸಾಧ್ಯ, ಪ್ರೌಢ ಹಾಗೂ ಪದವಿ ಪೂರ್ವ ಹಂತದಿಂದಲೇ ಮತದಾನದ ಮಹತ್ವ ಹಾಗೂ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳಲ್ಲಿ ಈ ಕುರಿತು ಅರಿವು ಮೂಡಿಸಲು ಪ್ರಬಂಧ, ಚಿತ್ರಕಲೆ, ರಸಪ್ರಶ್ನೆಯಂತಹ ಅನೇಕ ಸ್ಫರ್ಧೆಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ಬಿ. ಎಸ್. ರಾಠೋಡ ಅಭಿಪ್ರಾಯಪಟ್ಟರು.ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ನಗರದ ಬಾಲಕಿಯಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಶಾರದಾ ಸಭಾ ಭವನದಲ್ಲಿ ಇತ್ತಿಚಿಗೆ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಮತದಾನ ಜಾಗೃತಿಗಾಗಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಹಾಗೂ ಯಶಸ್ವಿ ಪ್ರಜಾಪ್ರಭುತ್ವ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಮಕ್ಕಳಲ್ಲಿ ಕುತೂಹಲ ಕೆರಳಿಸುವ, ಅವರು ಏಕಾಗ್ರತೆಯಿಂದ ನೋಡುವ, ಮಾನವೀಯ ಮೌಲ್ಯಗಳನ್ನು ಬೀರುವಂತಹ ಅಂಶಗಳು ಮಕ್ಕಳ ಸಾಹಿತ್ಯದಲ್ಲಿರಬೇಕು. ಈ ನಿಟ್ಟಿನಲ್ಲಿ ಇಂದು ಬಿಡುಗಡೆಗೊಂಡ ಇಂದುಮತಿ ಲಮಾಣಿಯವರ ಕಾಡಿನ ಕರಡಿ ನಾಡಿಗೆ ಬಂತು ಶಿಶು ಕಥಾ ಸಂಕಲನ ಒಳಗೊಂಡಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಸಾಹಿತಿ ಜಂಬುನಾಥ ಕಂಚ್ಯಾಣಿ ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ವಿಜಯಪುರದ ಗೋರಬಾಯಿ ಟೋಳಿ ಮಹಿಳಾ ಸಮೂಹ ಸಂಸ್ಥೆಯ ಸಹಯೋಗದಲ್ಲಿ ದಿ.ಶಂಕರ ಡಾಕಪ್ಪ ಲಮಾಣಿ ಸ್ಮರಣಾರ್ಥ ಶನಿವಾರ ಹಮ್ಮಿಕೊಂಡಿದ್ದ ಶಂಕರಶ್ರೀ ದತ್ತಿನಿಧಿ ಪ್ರಶಸ್ತಿ ಪ್ರಧಾನ ಮತ್ತು ಇಂದುಮತಿ ಲಮಾಣಿಯವರ ಕಾಡಿನ ಕರಡಿ ನಾಡಿಗೆ ಬಂತು ಶಿಶು ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಬುದ್ಧಿಮಟ್ಟವನ್ನು ವಿಕಾಸಗೊಳಿಸುವ ಶಕ್ತಿ ಸಾಮರ್ಥ್ಯ ಮಕ್ಕಳ ಸಾಹಿತ್ಯದಲ್ಲಿರಬೇಕು. ಮಕ್ಕಳ ಒಡನಾಡಿಗಳು, ಅವರ ಪ್ರೀತಿ ವಿಶ್ವಾಸಗಳಿಸಿದ್ದರೆ ಮಾತ್ರ ಅಂತಹವರಿಂದ ಉತ್ತಮ ಮಕ್ಕಳ ಸಾಹಿತ್ಯ ಹೊರಬರುತ್ತದೆ ಎಂದರು.ಗ್ರಾಮೀಣ ಭಾಗದಲ್ಲಿ ಜನಿಸಿದ ಇಂದುಮತಿ ಲಮಾಣಿ ಅವರು ಹಲವಾರು…
ವೀಣಾಂತರಂಗ – ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ – ಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಈ ಜಗತ್ತಿನಲ್ಲಿ ಹೆಣ್ಣು ಮಕ್ಕಳಿಗೆ ಅವರು ಯಾರು, ಅವರು ಹೇಗಿರಬೇಕು, ಅವರು ಹೇಗೆ ಬದುಕಬೇಕು ಎಂಬುದನ್ನು ನಿರಂತರವಾಗಿ ಭೋದಿಸಲಾಗುತ್ತದೆ. ಹೆಣ್ಣು ಮಕ್ಕಳನ್ನು ಅವರಿರುವಂತೆಯೇ ಸ್ವೀಕರಿಸುವ ಮನಸ್ಥಿತಿಯನ್ನು ನಮ್ಮ ಸಮಾಜ ಬೆಳೆಸಿಕೊಳ್ಳಬೇಕು. ಮನೋ ದೈಹಿಕವಾಗಿ ಹೆಣ್ಣುಮಕ್ಕಳನ್ನು ಗಟ್ಟಿಗಿತ್ತಿಯರನ್ನಾಗಿ ಬೆಳೆಸುವ, ತಮ್ಮ ಬದುಕಿನ ನಿರ್ಧಾರಗಳನ್ನು ತಾವೇ ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದುವಂತೆ ಪ್ರಸ್ತುತ ದಿನಮಾನದ ಅವಶ್ಯಕತೆಯಾಗಿದೆ.ಬದ್ಧತೆಯ ಜೊತೆ ಜೊತೆಗೆ ಧೈರ್ಯ, ಆತ್ಮವಿಶ್ವಾಸ ಭಾವನಾತ್ಮಕ ಜಾಣ್ಮೆ, ತಾಳ್ಮೆ ಮತ್ತು ತಮ್ಮ ನಿರ್ಧಾರಗಳಲ್ಲಿ ಸ್ಪಷ್ಟತೆಯನ್ನು ಹೊಂದಿದ್ದು ಜಗತ್ತನ್ನು ಎದುರಿಸುವ ಛಾತಿಯನ್ನು ಹೆಣ್ಣು ಮಕ್ಕಳಲ್ಲಿ ಬೆಳೆಸಬೇಕಾಗಿದೆ. ಪ್ರಾಚೀನ ಕಾಲದಿಂದಲೂ ಹೆಣ್ಣು ಮಕ್ಕಳು ತಾಳ್ಮೆ, ಕೌಟುಂಬಿಕ ಪ್ರೀತಿ, ಶ್ರದ್ಧೆಯನ್ನು ಹೊಂದಿದ್ದು ಸಮಯ ಬಂದಾಗ ಧೈರ್ಯ, ಸಾಹಸ ಮತ್ತು ದಿಟ್ಟತನದ ಪ್ರತೀಕವಾಗಿ ಬೆಳೆದಿದ್ದಾರೆ. ಹೆಣ್ಣುಮಕ್ಕಳನ್ನು ಕುಟುಂಬದ ಮರ್ಯಾದೆಯನ್ನು ಕಾಪಾಡುವ ಹೆಸರಿನಲ್ಲಿ ಹತ್ತಿಕ್ಕಲಾಗುತ್ತಿರುವ ಇಂದಿನ ದಿನಮಾನಗಳಲ್ಲಿ ನಮ್ಮ ಸಂಸ್ಕೃತಿಯ ಉಳಿಯುವಿಕೆಗೆ ಅಗತ್ಯವಾದ ಮೌಲ್ಯಗಳು ಮತ್ತು ಸಾಮಾಜಿಕ ಸಂಬಂಧಗಳನ್ನು ಸರಿಪಡಿಸುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಾಸಕ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಿದ್ದಸಿರಿ ಆಡಳಿತ ಮಂಡಳಿಯ ನಿರ್ಣಯದಂತೆ, ನಗರದಲ್ಲಿ ಇದೇ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷೋತ್ಥಾನ್ ಹೆರಿಟೇಜ್ ರನ್-2024ಕ್ಕೆ ಸಿದ್ಧಸಿರಿ ಸೌಹಾರ್ದ್ ಸಹಕಾರಿ ವತಿಯಿಂದ ರೂ.10 ಲಕ್ಷ ದೇಣಿಗೆಯ ಚೆಕ್ ನ್ನು ಸೋಮವಾರ ಸಹಕಾರಿಯ ನಿರ್ದೇಶಕಿ ಶೈಲಜಾ ಪಾಟೀಲ ಯತ್ನಾಳ ರವರು ವೃಕ್ಷೋತ್ಥಾನ್ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.ನಂತರ ಮಾತನಾಡಿದ ಅವರು, ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ ಜಿಲ್ಲೆ ಹಾಗೂ ನಗರ ಮತಕ್ಷೇತ್ರದಲ್ಲಿ ಅರಣ್ಯ ವೃದ್ಧಿಗಾಗಿ ಹಾಗೂ ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ನಿರಂತರವಾಗಿ ವಿವಿಧ ರೀತಿಯಲ್ಲಿ ಸಹಾಯ ಸಹಕಾರ ನಡೆಯುತ್ತಲೇ ಇದೆ. ಕಳೆದ ಜುಲೈ ತಿಂಗಳಲ್ಲಿ ವಿಜಯಪುರ ನಗರ ಮತಕ್ಷೇತ್ರದಲ್ಲಿ ಸಸಿಗಳನ್ನು ಬೆಳೆಸಲು ಹಾಗೂ ಸಂರಕ್ಷಣೆಗಾಗಿ ರೂ.10 ಲಕ್ಷ, ಅದಕ್ಕಿಂತ ಮೊದಲು ಟ್ರೀಗಾರ್ಡ್ ವ್ಯವಸ್ಥೆ ಕಲ್ಪಿಸಲು ರೂ.10 ಲಕ್ಷ ಜಿಲ್ಲಾಡಳಿತಕ್ಕೆ ನೀಡಲಾಗಿತ್ತು. ಅದೇ ರೀತಿ ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ…
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಹಾಗೂ ೧೯೭೧ನೇ ಯುದ್ಧ ವಾರ್ಷಿಕೋತ್ಸವದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ದೇಶದ ಎಲ್ಲ ಕಡೆ ಪ್ರತಿ ವರ್ಷ ಡಿಸೆಂಬರ್ ೭ರಂದು ಆಚರಿಸಲಾಗುತ್ತಿದೆ. ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮಾಡಲಾಗುತ್ತದೆ. ವೀರ ಯೋಧರ ಕುಟುಂಬಕ್ಕೆ ಬೆಂಬಲ ಒದಗಿಸಲು ಈ ದಿನಾಚರಣೆ ಆಚರಿಸಲಾಗುತ್ತಿದೆ. ಈ ನಿಧಿಯನ್ನು ಯುದ್ಧ ಸಂತ್ರಸ್ತರಿಗೆ, ಮಾಜಿ ಸೈನಿಕರು ಅವರ ಅವಲಂಬಿತರ ಸಲುವಾಗಿ ಹಮ್ಮಿಕೊಂಡ ವಿವಿಧ ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತಿದೆ. ಸಾರ್ವಜನಿಕರು ಧ್ವಜ ಖರೀದಿಸುವ ಮೂಲಕ ದೇಶದ ಸೈನಿಕರಿಗೆ ಬೆಂಬಲಿಸಬೇಕು ಎಂದು ಜಿಲ್ಲಾ ಸೈನಿಕ ಮಂಡಳಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ನಗರದ ಜಿಲ್ಲಾ ಪಂಚಾಯತಿ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಸೋಮವಾರ ೨೦೨೪ನೇ ಸಾಲಿನ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಹಾಗೂ ೧೯೭೧ನೇ ಯುದ್ಧ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ಹಲಸಂಗಿ ಗೆಳೆಯರ ಟ್ರಸ್ಟ್ ನ ಸದಸ್ಯರಾಗಿ ಪಟ್ಟಣದ ಸಾಹಿತಿ ಡಾ.ರಮೇಶ ಕತ್ತಿ ನೇಮಕರಾಗಿದ್ದಾರೆ.ಈ ಟ್ರಸ್ಟ್ ನಲ್ಲಿ ಅಧ್ಯಕ್ಷರಾಗಿವಿಜಯಪುರ ಜಿಲ್ಲಾಧಿಕಾರಿ, ಸದಸ್ಯರಾಗಿ ಪುಲಿಕೇಶಿ ಪುರುಷೋತ್ತಮ ಗಲಗಲಿ, ಡಾ.ವಿ.ಡಿ.ಐಹೋಳ್ಳಿ, ಬಿ.ಆರ್.ಬನಸೋಡೆ, ಶ್ರೀಮತಿ ದ್ರಾಕ್ಷಾಯಣಿ ರಮೇಶ ಬಿರಾದಾರ, ಡಾ.ರಮೇಶ ಕತ್ತಿ ಮತ್ತು ಸದಸ್ಯ ಕಾರ್ಯದರ್ಶಿಯಾಗಿ ವಿಜಯಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ನೇಮಕರಾಗಿದ್ದಾರೆ.
ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ಅಸಂಖ್ಯ ಭಕ್ತ ಸಮೂಹ | ವಿವಿಧೆಡೆ ಅನ್ನ ಸಂತರ್ಪಣೆ | ಉಳ್ಳಾಗಡ್ಡಿ ಬಜಿ-ಬೆಲ್ಲದ ಜಿಲೇಬಿಯದೇ ವಿಶೇಷ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಉತ್ತರಕರ್ನಾಟಕದ ದೊಡ್ಡ ಜಾತ್ರೆಗಳಲ್ಲಿ ಒಂದಾದ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಆರಾಧ್ಯ ಧೈವವಾದ ಶ್ರೀಗುರು ವೀರಘಂಟೈ ಮಡಿವಾಳೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ರವಿವಾರ ನಸುಕಿನ ಜಾವ ೫ ಗಂಟೆಗೆ ಅಗ್ಗಿ ಉತ್ಸವ ಹಾಗೂ ಸಂಜೆ ೫ ಘಂಟೆಗೆ ಮೃಘಶಿರ ನಕ್ಷತ್ರದಲ್ಲಿ ಭಾರಿ ಜನಸ್ತೋಮದ ಜಯಘೋಷಗಳೊಂದಿಗೆ ವಿಜೃಂಭಣೆಯಿಂದ ಅದ್ದೂರಿಯಾಗಿ ಶ್ರೀಗುರು ವೀರಘಂಟೈ ಮಡಿವಾಳೇಶ್ವರರ ಜೋಡು ರಥೋತ್ಸವವು ನಡೆಯಿತು.ರವಿವಾರ ನಸುಕಿನ ಜಾವ ವೇ.ಮೂ.ಮಲ್ಲಯ್ಯಮುತ್ಯಾ ಗದ್ದಿಗೆಮಠ ಅವರ ನೇತೃತ್ವದಲ್ಲಿ ದೇವಸ್ಥಾನದ ಸಂಪ್ರದಾಯದಂತೆ ಅಗ್ನಿಕುಂಡಕ್ಕೆ ವಿವಿಧ ವಾಧ್ಯಮೇಳ ಕಳಸಾರತಿಯೊಂದಿಗೆ ಐದು ಸುತ್ತು ಪೂಜಾ ಕೈಂಕರ್ಯವನ್ನು ನಡೆಸಿ ನಂತರ ಅಗ್ಗಿಯನ್ನು ಹಾಯಲಾಯಿತು. ನಂತರ ಉಚ್ಚಾಯಿ ಉತ್ಸವ, ವೀರಂಘಂಟೈ ಮಡಿವಾಳೇಶ್ವರರ ಕರ್ತೃ ಗದ್ದಿಗೆಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು, ಬೆಳ್ಳಿಗ್ಗೆ ೯ ಗಂಟೆಯಿಂದ ಗ್ರಾಮದ ಸಾವಿರಾರು ಯುವಪಡೆಯ ಭಕ್ತ ಸಮೂಹ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ದೀಪಾ ತಟ್ಟಿಮನಿ ಅವರು ಸಲ್ಲಿಸಿದ್ದ “ಇಂಪಾಕ್ಟ್ ಆಫ್ ಡಿಜಿಟಲ್ ಇಂಡಿಯಾ ಆನ್ ವುಮೆನ್: ಎ ಕೇಸ್ ಸ್ಟಡಿ ಆಫ್ ಕರ್ನಾಟಕ ಸ್ಟೇಟ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ದೀಪಾ ತಟ್ಟಿಮನಿ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರೊ. ಓಂಕಾರಗೌಡ ಕಾಕಡೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ದೀಪಾ ತಟ್ಟಿಮನಿ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ.ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಕರ ಅಭಿನಂದಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಸುಷ್ಮಾ ನಾಯಕ ಅವರು ಸಲ್ಲಿಸಿದ್ದ “ದಿ ರೋಲ್ ಆಫ್ ಮೀಡಿಯಾ ಇನ್ ಕ್ಯಾಪಾಸಿಟಿ ಬಿಲ್ಡಿಂಗ್ ಆಫ್ ವುಮೆನ್ ಗ್ರಾಮ ಪಂಚಾಯತ್ ಮೆಂಬರ್ಸ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಸುಷ್ಮಾ ನಾಯಕ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರೊ. ಓಂಕಾರಗೌಡ ಕಾಕಡೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.ಡಾಕ್ಟರೇಟ್ ಪದವಿ ಪಡೆದಿರುವ ಸುಷ್ಮಾ ನಾಯಕ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ.ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಕರ ಅಭಿನಂದಿಸಿದ್ದಾರೆ.
ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ‘ಮಹಾತ್ಮಾ ಗಾಂಧಿ ಮತ್ತು ಭಾರತೀಯ ಮಹಿಳೆ’ ದತ್ತಿ ಉಪನ್ಯಾಸ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂದಿನ ಕಾಲದಲ್ಲಿ ಮಹಿಳೆಯರ ಸ್ಥಿತಿ ಬಹಳ ಕಷ್ಟಕರವಾಗಿತ್ತು, ಮಹಿಳೆಯರ ಸ್ಥಿತಿಗತಿ ಬದಲಾಯಿಸಲು ಮಹಾತ್ಮಾ ಗಾಂಧಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಹಲವಾರು ನಾಯಕರು ಶ್ರಮಿಸಿದ್ದಾರೆ ಎಂದು ಬೆಳಗಾವಿಯ ಜಿ.ಎಸ್.ಎಸ್ ಕಾಲೇಜಿನ ಸೇವಾನಿವೃತ್ತ ಪ್ರಾಂಶುಪಾಲ ಆನಂದ ಕೃಷ್ಣಾ ಮೆಣಸೆ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರ ಮತ್ತು ಆಗಸ್ಟ್ ಕ್ರಾಂತಿ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಮಹಾತ್ಮಾ ಗಾಂಧಿ ಮತ್ತು ಭಾರತೀಯ ಮಹಿಳೆ’ ಎಂಬ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಾವಿತ್ರಿಬಾಯಿ ಪುಲೆ, ಗಂಗೂಬಾಯಿ ಹಾನಗಲ್ಲ ಸೇರಿದಂತೆ ಹಲವಾರು ಮಹಾನ್ ಮಹಿಳೆಯರು ಇತಿಹಾಸದಲ್ಲಿ ತಮ್ಮದೆಯಾದ ಚಾಪು ಮೂಡಿಸಿದ್ದಾರೆ. ಹಿಂದಿನ ಕಾಲಕ್ಕೂ ಮತ್ತು ಪ್ರಸ್ತುತ ದಿನಗಳಲ್ಲಿ ಮಹಿಳೆಯರ ಸ್ಥಿತಿಗತಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದಿವೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ಗಾಂಧೀಜಿಯವರ ಮೌಲ್ಯಗಳು, ತತ್ವಗಳು…
