ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ಹಲಸಂಗಿ ಗೆಳೆಯರ ಟ್ರಸ್ಟ್ ನ ಸದಸ್ಯರಾಗಿ ಪಟ್ಟಣದ ಸಾಹಿತಿ ಡಾ.ರಮೇಶ ಕತ್ತಿ ನೇಮಕರಾಗಿದ್ದಾರೆ.
ಈ ಟ್ರಸ್ಟ್ ನಲ್ಲಿ ಅಧ್ಯಕ್ಷರಾಗಿ
ವಿಜಯಪುರ ಜಿಲ್ಲಾಧಿಕಾರಿ, ಸದಸ್ಯರಾಗಿ ಪುಲಿಕೇಶಿ ಪುರುಷೋತ್ತಮ ಗಲಗಲಿ, ಡಾ.ವಿ.ಡಿ.ಐಹೋಳ್ಳಿ, ಬಿ.ಆರ್.ಬನಸೋಡೆ, ಶ್ರೀಮತಿ ದ್ರಾಕ್ಷಾಯಣಿ ರಮೇಶ ಬಿರಾದಾರ, ಡಾ.ರಮೇಶ ಕತ್ತಿ ಮತ್ತು ಸದಸ್ಯ ಕಾರ್ಯದರ್ಶಿಯಾಗಿ ವಿಜಯಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ನೇಮಕರಾಗಿದ್ದಾರೆ.

