ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ದೀಪಾ ತಟ್ಟಿಮನಿ ಅವರು ಸಲ್ಲಿಸಿದ್ದ “ಇಂಪಾಕ್ಟ್ ಆಫ್ ಡಿಜಿಟಲ್ ಇಂಡಿಯಾ ಆನ್ ವುಮೆನ್: ಎ ಕೇಸ್ ಸ್ಟಡಿ ಆಫ್ ಕರ್ನಾಟಕ ಸ್ಟೇಟ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.
ದೀಪಾ ತಟ್ಟಿಮನಿ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರೊ. ಓಂಕಾರಗೌಡ ಕಾಕಡೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ದೀಪಾ ತಟ್ಟಿಮನಿ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ.ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಕರ ಅಭಿನಂದಿಸಿದ್ದಾರೆ.

