Author: editor.udayarashmi@gmail.com

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಕ್ಕಳ ಸಮಸ್ಯೆಗಳನ್ನು ಅರಿತುಕೊಂಡು ಅಧಿಕಾರಿಗಳು ಸಕಾಲದಲ್ಲಿ ಪರಿಹಾರ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಅವರು ತಿಳಿಸಿದರು.ವಿಜಯಪುರ ನಗರದ ಗಾಂಧಿ ವೃತ್ತದಲ್ಲಿನ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಹಕ್ಕುಗಳ ಕುರಿತು ಮಕ್ಕಳೊಂದಿಗೆ ಸಂವಾದ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸಿಕೊಟ್ಟು ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಮಕ್ಕಳಿಗೆ ಸಾಮಾಜಿಕ ನ್ಯಾಯ, ಸಹೋದರತ್ವ, ಭ್ರಾತೃತ್ವ ಭಾವನೆಗಳಿಂದ ಕೂಡಿದ ಮೌಲ್ಯಯುತ ಶಿಕ್ಷಣ…

Read More

ವಿಜಯಪುರದ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಟಕ್ಕೆ ರಸ್ತೆಯಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಬುಧವಾರ ರಂದು ನಡೆದ ಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಚಾಲನೆ ನೀಡಿ ಅವರು ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಕ್ರೀಡಾ ಚಟುವಟಿಕೆಗಳ ಅತಿ ಮಹತ್ವವಾಗಿದೆ. ಶಾರೀರಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವುದು ಅತೀ ಅವಶ್ಯವಾಗಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಸಾಮೂಹಿಕ ಕವಾಯತನ್ನು ವೀಕ್ಷಿಸಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ಹಾಗೂ ಪಾಲಕರು ಭಾಗವಹಿಸಿ ಶಾಲಾ ಕ್ರೀಡಾಂಗಣದಲ್ಲಿ ಕ್ರೀಡಾ ಹಬ್ಬವನ್ನು ಆಚರಿಸಿದರು.ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತ ಮಕ್ಕಳಿಗೆ ಜಿಲ್ಲಾಧಿಕಾರಿಗಳು ಬಹುಮಾನ ವಿತರಿಸಿದರು.ಶಾಲೆಯ ಇಂಗ್ಲೀಷ್ ವಿಷಯ ಶಿಕ್ಷಕರಾದ ಅನಿತಾ ಜೋಸೆಫ್ ನಿರೂಪಿಸಿದರು. ಹಿರಿಯ ಉಪನ್ಯಾ¸ಕರಾದ ಶ್ರೀಮತಿ ಅನಾಮಿಕ ಕುಮಾರಿ ವಂದಿಸಿದರು. ಸಿಮ್ರಾನ್ ಕ್ರೀಡಾ ವರದಿ ವಾಚನ ಮಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲೆಯ ಅಂಚೆ ಇಲಾಖೆಯ ಜಿಲ್ಲಾ ಅಧೀಕ್ಷಕರಾದ ಕುಮಾರಸ್ವಾಮಿ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಮಂಗಳವಾರ ವಿಜಯಪುರ-ಬಾಗಲಕೋಟ ಕರ್ನಾಟಕ ಹಾಲು ಒಕ್ಕೂಟ ಮಂಡಳಿ ವಿಜಯಪುರ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹಾಲಿನ ಪೌಡರ್ ಸರಬರಾಜು ಮಾಡುವ ವಾಹನಗಳ ವಿವರ, ಪ್ರಸ್ತುತ ಸಾಲಿನ ಅಗಸ್ಟ್ ೨೦೨೪ರಿಂದ ಅಕ್ಟೋಬರ ೨೦೨೪ರವರೆಗೆ ಒಟ್ಟು ೫೧ ದಿನಗಳಿಗೆ ಹಾಲಿನ ಪೌಡರ್ ಬೇಡಿಕೆ ಹಾಗೂ ಪೂರೈಕೆ ಮಾಡಿದ ಪ್ರಮಾಣ ಕುರಿತು ಪರಿಶೀಲನೆ ನಡೆಸಿದ ಹಾಲಿನ ಪೌಡರ್ ಪೂರೈಕೆಯಾಗಿರುವ ದಾಖಲೆಗಳ ಮೂಲಕ ಮಾಹಿತಿ ಪಡೆದುಕೊಂಡರು.ಹಾಲಿನ ಪೌಡರ್ ಪೂರೈಸುವ ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ವ್ಯಾಪ್ತಿಯಲ್ಲಿರುವ ಡೆಂಪೋ ಡೈರಿಯಿಂದ ಪೂರೈಕೆಯಾಗುವ ವಾಹನದ ಮಾಹಿತಿ, ಹಾಲಿನ ಪುಡಿಯ ಪ್ರಮಾಣವನ್ನು ಮತ್ತು ಕರ್ನಾಟಕ ಹಾಲು ಒಕ್ಕೂಟ ಮಂಡಳಿ(ಕೆ.ಎಮ್.ಎಫ್ ಘಟಕ)ಯಿಂದ ಸಲ್ಲಿಸಿರುವ ಬೇಡಿಕೆಯ ಪ್ರಮಾಣವನ್ನು ತಾಳೆ ಮಾಡಿದರು. ಹಾಲಿನ ಪುಡಿ ಶಾಲೆಗಳಿಗೆ ಪೂರೈಸಲು ಗಣಕಯಂತ್ರದಲ್ಲಿ ಮಾರ್ಗ ನಕ್ಷೆ ಹಾಗೂ ಬೇಡಿಕೆಯ ವಿವರಗಳನ್ನು ಖುದ್ದಾಗಿ ವೀಕ್ಷಿಸಿದರು. ಶಾಲೆಗಳಿಂದ ಹಾಲಿನ ಪೌಡರ್ ಬೇಡಿಕೆ ಪಡೆಯುವಾಗ ಅನುಸರಿಸುವ ಕ್ರಮಗಳನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡ್ರೋನ್ ಆಧಾರಿತ ಪೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿಗಾಗಿ ಪರಿಶಿಷ್ಟ ಪಂಗಡದ ಅರ್ಹ ಯುವಕ-ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ೧೮ ರಿಂದ ೪೦ ವರ್ಷ ವಯೋಮಾನದವರು ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ ಸೂಕ್ತ ದಾಖಲಾತಿಗಳೊಂದಿಗೆ ಡಿಸೆಂಬರ್ ೨೩ ರೊಳಗಾಗಿ ಜಿಲ್ಲಾ ಹಾಗೂ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಾಗೂ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಥಣಿ ತಾಲೂಕಿನ ಕೊಕಟನೂರಿನಲ್ಲಿ ಡಿಸೆಂಬರ್ ೨೫ ರಿಂದ ಡಿ.೩೧ರವರೆಗೆ ನಡೆಯುವ ಶ್ರೀ ಯಲ್ಲಮ್ಮದೇವಿ ಜಾತ್ರೆಯ ನಿಮಿತ್ತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಯಾತ್ರಾರ್ಥಿಗಳಿಗೆ ವಿಶೇಷ ಬಸ್ ಸೌಕರ್ಯ ವ್ಯವಸ್ಥೆ ಕಲ್ಪಿಸಿದೆ.ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟಿ ಹಾಗೂ ಬ.ಬಾಗೇವಾಡಿ ಘಟಕದ ಕೇಂದ್ರ ಬಸ್ ನಿಲ್ದಾಣಗಳಿಂದ ಕೊಕಟನೂರಿಗೆ ಬಸ್ ಕಾರ್ಯಾಚರಣೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿ ವಿಜಯಪುರ ಘಟಕ-೧ರ ವ್ಯವಸ್ಥಾಪಕರ ಮೊ:೭೭೬೦೯೯೨೨೫೮. ವಿಜಯಪುರ ಘಟಕ-೨ರ ವ್ಯವಸ್ಥಾಪಕರ ಮೊ:೭೭೬೦೯೯೨೨೬೪,ಇಂಡಿ ಘಟಕ ವ್ಯವಸ್ಥಾಪಕರ ಮೊ:೭೭೬೦೯೯೨೨೬೫,ಸಿಂದಗಿ ಘಟಕ ವ್ಯವಸ್ಥಾಪಕರ ಮೊ:೭೭೬೦೯೯೨೨೬೬, ಮುದ್ದೇಬಿಹಾಳ ಘಟಕ ಮೊ:೭೭೬೦೯೯೨೨೬೭, ತಾಳಿಕೋಟಿ ಘಟಕ ಮೊ:೭೭೬೦೯೯೨೨೬೮ ಬ.ಬಾಗೇವಾಡಿ ಘಟಕ ವ್ಯವಸ್ಥಾಪಕರ ಮೊ:೭೭೬೦೯೯೨೨೬೯ ಹಾಗೂ ವಿಜಯಪುರ ಕೇಂದ್ರ ಬಸ್ ನಿಲ್ದಾಣ ಸಂಪರ್ಕ ಸಂಖ್ಯೆ ೦೮೩೫೨-೨೫೧೩೪೪ ಅಥವಾ ಮೊಬೈಲ್ ನಂ.೭೭೬೦೯೯೨೨೫೮ ಸಂಪರ್ಕಿಸಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Read More

ಕೆಬಿಜೆಎನ್ ಎಲ್ ಆಲಮಟ್ಟಿ ಡಿ ಗ್ರುಪ್ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದಿಂದ ಧರಣಿ ಸತ್ಯಾಗ್ರಹ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಸಂಯುಕ್ತ ಕೆಬಿಜೆಎನ್ ಎಲ್ ಆಲಮಟ್ಟಿ ಡಿ ಗ್ರುಪ್ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ ಪ್ರತ್ಯೇಕವಾಗಿ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಬುಧವಾರ ಮೂರು ದಿನ ಪೂರ್ಣಗೊಳಿಸಿತು.ಆರ್.ಎಫ್.ಓ. ಮಹೇಶ ಪಾಟೀಲ ಹಾಗೂ ಉಪಮುಖ್ಯ ಎಂಜಿನಿಯರ್ ಐ.ಎಲ್. ಕಳಸಾ ಧರಣಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು. ಹೊರಗುತ್ತಿಗೆ ಏಜೆನ್ಸಿ ಮೂಲಕ ದಿನಗೂಲಿ ಕಾರ್ಮಿಕರ ನೇಮಕ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಮುಖಂಡರು ತಿಳಿಸಿದರು.ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ತಿಪ್ಪಣ್ಣ ಮಾದರ ಮಾತನಾಡಿ, ಉದ್ಯಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ದಿನಗೂಲಿ ಕಾರ್ಮಿಕರು ಆಲಮಟ್ಟಿ ಜಲಾಶಯದ ಹಿನ್ನೀರಿನ ಮುಳುಗಡೆ…

Read More

’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಲೇಖನ ಮಾಲೆ) ಲೇಖನ – ಜಯಶ್ರೀ. ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಈಸೋಪನ ನೀತಿಕಥೆಗಳನ್ನು ಕೇಳದವರು ಕಡಿಮೆ. ಅದರಲ್ಲೊಂದು ಕತ್ತೆಯ ಕಥೆ ಬರುತ್ತದೆ. ಅದು ಹೀಗಿದೆ: ಕಾಡಿನಲ್ಲಿದ್ದ ಕತ್ತೆಯೊಂದು ಸಿಂಹದ ಚರ್ಮ ತೊಟ್ಟು ಸಿಂಹ ಅಂತ ನಟಿಸಿ ಸಿಂಹಕ್ಕೆ ಸಿಗುತ್ತಿದ್ದ ಮರ್ಯಾದೆಯನ್ನು ಪಡೆದ ಕಥೆಯದು. ಈಸೋಪನ ಪ್ರಕಾರ ಅದರ ನೀತಿ ಏನೇ ಆಗಿರಲಿ, ಆದರೆ ಆ ಕತ್ತೆಗೆ ಕಾಡಿನ ರಾಜ ಸಿಂಹ ಆಗಬೇಕೆನ್ನುವ ಮಹದಾಸೆ ಇತ್ತಲ್ಲ ಅದನ್ನು ಮೆಚ್ಚಲೇಬೇಕು. ಮತ್ತು ನಾವೆಲ್ಲ ಅಂತಹ ಮಹದಾಸೆಯನ್ನು (ಗುರಿಯನ್ನು) ಹೊಂದಬೇಕೆನ್ನುವ ಸಂದೇಶವನ್ನು ಸಹ ಅದು ನೀಡುತ್ತದೆ.ಸ್ಮಾರ್ಟ್ ಗೋಲ್ ಇರಲಿಮುಂದೆ ಗುರಿಯಿರಬೇಕು ಹಿಂದೆ ಗುರು ಇರಬೇಕೆನ್ನುವ ಮಾತು ನಮಗೆಲ್ಲರಿಗೂ ಗೊತ್ತೇ ಇದೆ. ಗುರಿಯೆಂದರೇನು ಎಂಬ ಪ್ರಶ್ನೆ ಮೂಡುತ್ತದೆ. ‘ಗುರಿಯು ಭವಿಷ್ಯದ ಕಲ್ಪನೆ ಅಥವಾ ವ್ಯಕ್ತಿಯು ಸಾಧಿಸಲು ಯೋಜಿಸುವ, ನಿರ್ಧರಿಸಿರುವ ಸಂಗತಿಗೆ ಬದ್ಧವಾಗಿರುವ ಸಂಗತಿಯಾಗಿದೆ.’ ಸೀಮಿತ ಸಮಯದಲ್ಲಿ ಅದನ್ನು ತಲುಪಲು ಪ್ರಯತ್ನವೂ ಮುಖ್ಯ. ಸ್ಥೂಲವಾಗಿ ಚಿತ್ರಣ ನೀಡುವುದಾದರೆ ಗುರಿಯು…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದ ವತಿಯಿಂದ ವಿದ್ಯಾ ಸಂಸ್ಥೆಯ ಸ್ಥಾಪನೆಗೆ ಕಾರಣೀಕರ್ತರಾದ ಹಿಂದೂ ಸೇವಾ ಪ್ರತಿಷ್ಠಾನದ ಪ್ರಥಮ ನಿರ್ದೇಶಕ ದಿ.ಅಜಿತಕುಮಾರ ಅವರ ಸ್ಮೃತಿ ದಿನದ ನಿಮಿತ್ಯ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಹಣ್ಣು-ಹಂಫಲಗಳನ್ನು ವಿತರಿಸಿದರು.ಈ ವೇಳೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಅನಿಲಕುಮಾರ ಶೇಗುಣಸಿ, ನರ್ಸಿಂಗ ಅಧಿಕಾರಿ ಸಂಜಯ ಬೊಸ್ಲೆ, ಪುರಸಭೆ ನಾಮ ನಿರ್ದೇಶಕ ಸದಸ್ಯ ಅಶೋಕ ಪಾದಗಟ್ಟಿ, ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ, ನಿವೃತ್ತ ಮುಖ್ಯಗುರು ಜಿ.ಜೆ.ಪಾದಗಟ್ಟಿ, ಶಿಕ್ಷಕರಾದ ಎಸ್.ಎಸ್.ಹಂಜಗಿ, ಸರಸ್ವತಿ ಮಡಿವಾಳರ, ಶಿವಶಂಕರಯ್ಯ ಮಠ, ರೇಖಾ ಕೋಲಕಾರ, ಇಂದು ನಾಯಕ, ವರ್ಷಾ ಹುನಗುಂದ, ಮೀನಾಕ್ಷಿ ಗಣಾಚಾರಿ, ಚಾಲಕ ಸಿದ್ದಣ ಮೇಟಿ, ಸಹಾಯಕಿ ಸುಮಂಗಲಾ ಪಾತ್ರೋಟ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಳ ಅಪಾರ್ ಐಡಿ ಜನರೇಟ್ ಮಾಡಲು ಇಲಾಖೆಯಿಂದ ಸೂಚಿಸಿದ್ದಾರೆ. ಆದರೆ ಅದರ ಕುರಿತು ಶಿಕ್ಷಕರಿಗೆ ಸಮರ್ಪಕ ತರಬೇತಿ ಇಲ್ಲದ ಕಾರಣ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಾಗೂ ಮುಖ್ಯ ಶಿಕ್ಷಕರಿಗೆ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಬಳಕೆ ಸೌಲಭ್ಯ ಶಾಲೆಗಳಲ್ಲಿ ಇಲ್ಲದಿರುವ ಪ್ರಯುಕ್ತ ಅಪಾರ ಐಡಿ ಜನರೇಟ್ ಮಾಡಲು ತುಂಬಾ ತೊಂದರೆ ಆಗುತ್ತಿದೆ ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ ಶಡಶ್ಯಾಳ ನೇತೃತ್ವದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಸುಮಾರು ಶೇ.90 ಮಕ್ಕಳ ಆಧಾರ್ ಕಾರ್ಡ್ನಲ್ಲಿ ಅಕ್ಷರಗಳು ಲೋಪದೋಷಗಳಿಂದ ಕೂಡಿದ್ದು ಜನರೇಟ್ ಆಗಲು ತುಂಬಾ ಸಮಸ್ಯೆಯಾಗುತ್ತಿದೆ. ಕಾರಣ ಅಪಾರ ಐಡಿ ಕ್ರಿಯೇಟ್ ಮಾಡುವುದನ್ನು ತಡೆಹಿಡಿಯಲು ವಿನಂತಿಸಿದರು. ಅಲ್ಲದೆ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಿಗೆ ಬಿಸಿ ಊಟದ ಕೆಲಸ, ಮೊಟ್ಟೆ, ಶೇಂಗಾ ಚಿಕ್ಕಿ ಬಾಳೆಹಣ್ಣು ವಿತರಣೆ ಹಾಗೂ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಶರಣರ, ಮಹಾತ್ಮರ ಪುರಾಣ ಪ್ರವಚನಗಳು ಮನುಷ್ಯನ ಜೀವನ ಪಾವನಗೊಳ್ಳಲು ಕಾರಣವಾದ ಭಕ್ತಿಮಾರ್ಗಗಳೇನಿಸಿವೆ ಎಂದು ಬಸವನ ಬಾಗೇವಾಡಿ ಒಡೆಯರ ಹಿರೇಮಠದ ಶಿವಪ್ರಕಾಶಶ್ರೀಗಳು ಹೇಳಿದರುಪಟ್ಟಣದ ಶ್ರೀವೀರಭದ್ರೇಶ್ವರ ಕಾರ್ತಿಕೋತ್ಸವ ಸಮಿತಿಯಿಂದ ಸೋಮವಾರ ಜರುಗಿದ ಧರ್ಮಸಭೆ ಹಾಗೂ ಮಹಾದಾಸೋಹಿ ಕಲಬುರ್ಗಿ ಶ್ರೀಶರಣ ಬಸವೇಶ್ವರ ಮಹಾಪುರಾಣ ಸಂಪನ್ನಗೊಳಿಸಿ ಮಾತನಾಡಿದರು, ಶರಣ ಮಡಿವಾಳ ಮಾಚಿದೇವರ ತವರೂರಾದ ದೇವರಹಿಪ್ಪರಗಿಯಲ್ಲಿ ಇಂದಿಗೂ ಪುರಾಣ, ಪ್ರವಚನ ಸಾಂಗವಾಗಿ ಜರುಗುತ್ತಿರುವುದು ಭಕ್ತಿಯ ಪ್ರತೀಕವಾಗಿದೆ. ಪ್ರತಿಯೊಬ್ಬರು ಶರಣರ, ಮಹಾತ್ಮರ ಪವಾಡಪುರುಷರ ನಡೆ ನುಡಿಗಳನ್ನು ತಮ್ಮ ಜೀವನದಲ್ಲಿ ಅನುಸರಿಸಿ ಕ್ಷೇತ್ರದ ಘನತೆ ಹೆಚ್ಚಿಸಬೇಕೆಂದು ಹೇಳಿದರು.ಆಲಮೇಲ ಹಿರೇಮಠದ ಚಂದ್ರಶೇಖರಶ್ರೀ ಸದಯ್ಯನಮಠದ ವೀರಗಂಗಾಧರಶ್ರೀ ಆಶೀರ್ವಚನ ನೀಡಿ,ಇಲ್ಲಿನ ಭಕ್ತ ಜನರಲ್ಲಿ ಹಣದ ಶ್ರೀಮಂತಿಕೆಗಿಂತ ಭಕ್ತಿ, ಆಧ್ಯಾತ್ಮಿಕ ಚಿಂತನೆಯ ಶ್ರೀಮಂತಿಕೆ ತುಂಬಿತುಳುಕುತ್ತಿರುವದು ಹರ್ಷದಾಯಕವೆಂದು ಆಶೀರ್ವದಿಸಿದರು.ಗುಳೇದಗುಡ್ಡದ ರೇವಣಸಿದ್ಧೇಶ್ವರಶ್ರೀ ಹಾಗೂ ಆವೋಗೇಶ್ವರ ತಪೋಧಾಮದಶ್ರೀ ೧೨ ವರ್ಷದಲ್ಲಿ ಸಾಂಗವಾಗಿ ಜರುಗುತ್ತಿರುವ ಧಾರ್ಮಿಕ ಕಾರ್ಯಕ್ರಮದ ಕುರಿತು ಮಾತನಾಡಿದರು. ಗಾಯಕ ಶರಣಕುಮಾರ ಯಾಳಗಿ ಹಾಗೂ ತಬಲಾವಾದಕ ನಾಗರಾಜ ಹುಣಸಿಗಿಡದ ಸಂಗೀತ ಕಾರ್ಯಕ್ರಮ ನೀಡಿದರು.ಇದೇ ಸಂದರ್ಭದಲ್ಲಿ ಕಲ್ಯಾಣೋತ್ಸವ ಹಾಗೂ…

Read More