ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಥಣಿ ತಾಲೂಕಿನ ಕೊಕಟನೂರಿನಲ್ಲಿ ಡಿಸೆಂಬರ್ ೨೫ ರಿಂದ ಡಿ.೩೧ರವರೆಗೆ ನಡೆಯುವ ಶ್ರೀ ಯಲ್ಲಮ್ಮದೇವಿ ಜಾತ್ರೆಯ ನಿಮಿತ್ತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಯಾತ್ರಾರ್ಥಿಗಳಿಗೆ ವಿಶೇಷ ಬಸ್ ಸೌಕರ್ಯ ವ್ಯವಸ್ಥೆ ಕಲ್ಪಿಸಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟಿ ಹಾಗೂ ಬ.ಬಾಗೇವಾಡಿ ಘಟಕದ ಕೇಂದ್ರ ಬಸ್ ನಿಲ್ದಾಣಗಳಿಂದ ಕೊಕಟನೂರಿಗೆ ಬಸ್ ಕಾರ್ಯಾಚರಣೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿ ವಿಜಯಪುರ ಘಟಕ-೧ರ ವ್ಯವಸ್ಥಾಪಕರ ಮೊ:೭೭೬೦೯೯೨೨೫೮. ವಿಜಯಪುರ ಘಟಕ-೨ರ ವ್ಯವಸ್ಥಾಪಕರ ಮೊ:೭೭೬೦೯೯೨೨೬೪,ಇಂಡಿ ಘಟಕ ವ್ಯವಸ್ಥಾಪಕರ ಮೊ:೭೭೬೦೯೯೨೨೬೫,ಸಿಂದಗಿ ಘಟಕ ವ್ಯವಸ್ಥಾಪಕರ ಮೊ:೭೭೬೦೯೯೨೨೬೬, ಮುದ್ದೇಬಿಹಾಳ ಘಟಕ ಮೊ:೭೭೬೦೯೯೨೨೬೭, ತಾಳಿಕೋಟಿ ಘಟಕ ಮೊ:೭೭೬೦೯೯೨೨೬೮ ಬ.ಬಾಗೇವಾಡಿ ಘಟಕ ವ್ಯವಸ್ಥಾಪಕರ ಮೊ:೭೭೬೦೯೯೨೨೬೯ ಹಾಗೂ ವಿಜಯಪುರ ಕೇಂದ್ರ ಬಸ್ ನಿಲ್ದಾಣ ಸಂಪರ್ಕ ಸಂಖ್ಯೆ ೦೮೩೫೨-೨೫೧೩೪೪ ಅಥವಾ ಮೊಬೈಲ್ ನಂ.೭೭೬೦೯೯೨೨೫೮ ಸಂಪರ್ಕಿಸಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
