ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದ ವತಿಯಿಂದ ವಿದ್ಯಾ ಸಂಸ್ಥೆಯ ಸ್ಥಾಪನೆಗೆ ಕಾರಣೀಕರ್ತರಾದ ಹಿಂದೂ ಸೇವಾ ಪ್ರತಿಷ್ಠಾನದ ಪ್ರಥಮ ನಿರ್ದೇಶಕ ದಿ.ಅಜಿತಕುಮಾರ ಅವರ ಸ್ಮೃತಿ ದಿನದ ನಿಮಿತ್ಯ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಹಣ್ಣು-ಹಂಫಲಗಳನ್ನು ವಿತರಿಸಿದರು.
ಈ ವೇಳೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಅನಿಲಕುಮಾರ ಶೇಗುಣಸಿ, ನರ್ಸಿಂಗ ಅಧಿಕಾರಿ ಸಂಜಯ ಬೊಸ್ಲೆ, ಪುರಸಭೆ ನಾಮ ನಿರ್ದೇಶಕ ಸದಸ್ಯ ಅಶೋಕ ಪಾದಗಟ್ಟಿ, ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ, ನಿವೃತ್ತ ಮುಖ್ಯಗುರು ಜಿ.ಜೆ.ಪಾದಗಟ್ಟಿ, ಶಿಕ್ಷಕರಾದ ಎಸ್.ಎಸ್.ಹಂಜಗಿ, ಸರಸ್ವತಿ ಮಡಿವಾಳರ, ಶಿವಶಂಕರಯ್ಯ ಮಠ, ರೇಖಾ ಕೋಲಕಾರ, ಇಂದು ನಾಯಕ, ವರ್ಷಾ ಹುನಗುಂದ, ಮೀನಾಕ್ಷಿ ಗಣಾಚಾರಿ, ಚಾಲಕ ಸಿದ್ದಣ ಮೇಟಿ, ಸಹಾಯಕಿ ಸುಮಂಗಲಾ ಪಾತ್ರೋಟ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

